ಮಾನವೀಯತೆ ಮರೆಸುತ್ತಿದೆ ಕೊರೊನ
ಲೇಖನ ಮಾನವೀಯತೆ ಮರೆಸುತ್ತಿದೆ ಕೊರೊನ ರಾಧಾ ಆರ್.ಡಿ. ತವರು ಮನೆಗೆ ಹದಿನೈದು ದಿನದ ಮಟ್ಟಿಗೆ ಹೋಗಿದ್ದ ನಾನು ಬಿಗಿ ಲಾಕ್ಡೌನ್ ಆಗುತ್ತೆ ಎಂದು ಒಂದೇ ವಾರಕ್ಕೆ ದಿಡೀರ್ ಅಂತ ವಾಪಸ್ ಹೊರಟೆ.ಊರಿಂದ ಶಿರದ ವರೆಗೂ ನನ್ನ ಮತ್ತು ಪಾಪುನ ಅಪ್ಪಾಜಿ ಅಣ್ಣ ಬಿಡಬೇಕು ಅಂತ ಹಾಗೆ ಅಲ್ಲಿಂದ ನಮ್ಮನೆಯವರು ಕರೆದುಕೊಂಡು ಹೋಗಬೇಕು ಅಂತ ಹೊರಡುವ ಮುನ್ನ ತೀರ್ಮಾನ ಆಗಿತ್ತು, ಬೆಳಗ್ಗೆ ಸುಮಾರು ಆರು ಗಂಟೆಗೆ ನಮ್ಮ ಊರಿಂದ ಹೊರಟೆವು, ಮೂರು ತಾಸಿನ ಪ್ರಯಾಣದ ನಂತರ ಅಂದರೆ ಒಂಬತ್ತು […]
ದಾರಾವಾಹಿ ಆವರ್ತನ ಅದ್ಯಾಯ-18 ಶಂಕರನ ಭಾಗೀವನದಲ್ಲಿ ಗೋಪಾಲನ ಮನೆಯನ್ನು ಸೇರಿಸಿ ಒಟ್ಟು ಮೂವತ್ತೊಂದು ಮನೆಗಳಿವೆ. ಮುಸ್ಲೀಮರು ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದ ಬಹುತೇಕ ಜಾತಿಯವರು ಭಾಗಿವನದಲ್ಲಿ ಐದು, ಆರು, ಏಳು, ಹತ್ತು ಮತ್ತು ಇಪ್ಪತ್ತು ಸೆಂಟ್ಸ್ಗಳ ಜಾಗದ ಮಾಲಕರಾಗಿ ಹೊಸ ಮನೆಗಳ ಒಡೆಯರಾಗಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಗೋಪಾಲನ ಮನೆಯ ಪಕ್ಕದ ಮನೆ ಬ್ಯಾಂಕರ್ ನಾರಾಯಣರದ್ದು. ಅವರ ಒತ್ತಿನಲ್ಲಿ ಮರದ ವ್ಯಾಪಾರಿ ಸುಂದರಯ್ಯನವರಿದ್ದಾರೆ. ಅವರಾಚೆಗಿನದ್ದು ಜೀವವಿಮಾ ಕಂಪನಿಯ ನಿವೃತ್ತ ಉದ್ಯೋಗಿ ಲಕ್ಷ್ಮಣಯ್ಯ, ಸುಮಿತ್ರಮ್ಮ ದಂಪತಿಯದ್ದು. ಅವರ ಬಳಿಕದ್ದು ಉಮೇಶಯ್ಯನದ್ದು […]
ಪ್ರಜಾಪ್ರಭುತ್ವವಾದಿ ಬಸವಣ್ಣ
ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ದೇಶದ ಏಕತೆ ಈಎಲ್ಲ ಅಂಶಗಳೂ ಶರಣರ , ಅವರ ನಡೆಹಾಗೂ ನುಡಿಗಳಲ್ಲಿ ಹಾಸು ಹೊಕ್ಕಾಗಿದ್ದುದನ್ನು ವಚನಗಳಲ್ಲಿ ಕಾಣುತ್ತೇವೆ.
ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ
ಲೇಖನ ಕನ್ನಡದ ಸಾಕ್ಷೀಪ್ರಜ್ಞೆ, ಗಾಂಧಿವಾದಿ ದೊರೆಸ್ವಾಮಿ ಆರ್.ಜಿ.ಹಳ್ಳಿ ನಾಗರಾಜ ಕನ್ನಡದ ಸಾಕ್ಷೀಪ್ರಜ್ಞೆಯಂತಿದ್ದು ನಮ್ಮನ್ನಗಲಿದ ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಅವರ ಜನಪರ ಕಾಳಜಿ ಬಗ್ಗೆ ಹತ್ತಾರು ನಿದರ್ಶನ ಕೊಡಬಹುದು. ತಕ್ಷಣ ನಾನಿದ್ದ ಕಚೇರಿಯ ಒಂದು ಘಟನೆಯಿಂದ ಅವರನ್ನಿಲ್ಲಿ ನೆನೆಯುತ್ತೇನೆ: ಅವರಿಗೆ 102 ವರ್ಷವಾಗಿತ್ತು. ಒಂದುದಿನ ಬೆಂಗಳೂರು ಕೆರೆಗಳ ಮಾಲಿನ್ಯದ ಬಗ್ಗೆ ಲಿಖಿತ ದೂರು ಕೊಡಲು 3ನೇ ಮಹಡಿಗೆ ಬಂದರು! ಕಚೇರಿಯಲ್ಲಿ ಇದ್ದವರಿಗೆಲ್ಲ ಆಶ್ಚರ್ಯ ಹಾಗೂ ದಿಗಿಲು. ಅಧ್ಯಕ್ಷರನ್ನು ಕಾಣಬೇಕು, ಇದ್ದಾರಾ? ಎಂದರು. ಹೊರಗೆ ಸಾಕಷ್ಟು ಜನ ಕಾಯುತ್ತಿದ್ದರು […]
ಭಾವ ಪುಷ್ಪಗಳು
ಭಾವದ ಅನುಭಾವದ ಎತ್ತರ ಬಿತ್ತರಗಳನ್ನು ವರ್ಣಿಸಲು ಅಸಾಧ್ಯ. ಆಲದ ಮರದಂತೆ ನೂರಾರು ಸಾವಿರಾರು ವರುಷಗಳಿಂದ ಬಾಳಿ ಬಂದ ಭಾವ ಸಂಸ್ಕøತಿಯನ್ನು ಹೆಮ್ಮೆಯಿಂದ ಬೆಳೆಸೋಣ ಬೆಳೆಯೋಣ ಭಾವ ಪುಷ್ಪಗಳು ನಮ್ಮ ಎದೆಯ ಅಂಗಳದಲ್ಲಿ ನಿತ್ಯ ಅರಳಲಿ ಬದುಕು ಇನ್ನಷ್ಟು ಮತ್ತಷ್ಟು ಸುಂದರವಾಗಲಿ.
ಬುದ್ಧ ಪೂರ್ಣಿಮೆ
ತನ್ನ 29ನೇ ವಯಸ್ಸಿನಲ್ಲಿಯೇ ಸತ್ಯವನ್ನು ಹುಡುಕುತ್ತಾ ಪ್ರಪಂಚ ಪರ್ಯಟನೆ ಕೈಗೊಂಡ ಮಹಾನ್ ವ್ಯಕ್ತಿ ಬುದ್ಧ. ಬಡವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ಮೋಕ್ಷ ಸಾಧಿಸಲು ಕರುಣೆ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಲೋಕಕ್ಕೆ ಸಾರಿದಾತ.
ಪರಿಸರ ಯೋಧ ಸುಂದರಲಾಲ್ ಬಹುಗುಣ..!
ಕೊರೋನ ಅಬ್ಬರದಲ್ಲಿ ಇಂತಹ ಮಹಾನ್ ಚೇತನವನ್ನು ಕಳೆದುಕೊಂಡಿರುವುದು ನಮ್ಮ ದೌರ್ಭಾಗ್ಯವೇ ಸರಿ. ಅವರ ದೇಹಕ್ಕೆ ಸಾವಾಗಿರಬಹುದು. ಆದರೆ ಅವರು ಹಾಕಿಕೊಟ್ಟ ಪರಿಸರ ಚಳವಳಿಯ ಕಾವು ನಿರಂತರವಾಗಿರುತ್ತದೆ.
ಶಾಹು ಮಹಾರಾಜ್ ಎಂಬ ಜೀವಪರ ರಾಜ
ಲೇಖನ ಶಾಹು ಮಹಾರಾಜ್ ಎಂಬ ಜೀವಪರ ರಾಜ ಆಶಾ. ಎಸ್ ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು. ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್. ಸಾಕುತಾಯಿ […]
ಶಾಲಾ journey
ಅಂದು ಹೊಡೆದು, ಬೈದು ನನ್ನನ್ನು ಶಾಲೆಗೆ ಸೇರಿಸಲು ಜೊತೆಗಿದ್ದ ಏಳರಲ್ಲಿ ಐದು ಜನ ಈಗಿಲ್ಲ. ಆದರೆ ಒದೆ ತಿಂದ ಪುಣ್ಯವಂತೆ ನಾನು, ನನಗೆ ಪ್ರತಿಯೊಬ್ಬರ ಬಗ್ಗೆಯೂ ಗೌರವ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ.
ದಾರಾವಾಹಿ ಆವರ್ತನ ಅಧ್ಯಾಯ: 17 ಏಕನಾಥರು, ಶಂಕರನ ಜಮೀನು ನೋಡಲು ಅವನೊಂದಿಗೆ ಹೊರಟಿದ್ದರು. ಶಂಕರ ತನ್ನ ಜಾಗದಲ್ಲಿ ಉದ್ಭವಿಸಿದ ನಾಗನ ಸಮಸ್ಯೆಗೆ ಪರಿಹಾರ ಮಾರ್ಗೋಪಾಯದ ಕುರಿತು ದಾರಿಯುದ್ದಕ್ಕೂ ಏಕನಾಥರೊಡನೆ ಕೆದಕಿ ಕೆದಕಿ ಪ್ರಶ್ನಿಸುತ್ತ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೆಣಗುತ್ತ ಕಾರು ಚಲಾಯಿಸುತ್ತಿದ್ದ. ಆದರೆ ಏಕನಾಥರು ಅತೀವ ಚಾಣಾಕ್ಷರು. ಅವರು, ಅವನ ಒಂದೊಂದು ಪ್ರಶ್ನೆಗೂ ಬಹಳವೇ ಯೋಚಿಸಿ ಪರಿಹಾರ ಸೂತ್ರವನ್ನು ಮರೆಮಾಚಿಯೇ ಉತ್ತರಿಸುತ್ತ, ಏನನ್ನೋ ಗಂಭೀರವಾಗಿ ಯೋಚಿಸುತ್ತ ಸಾಗುತ್ತಿದ್ದರು. ಕಾರಣ, ಅವರ ತಲೆಯೊಳಗೆ ಹೊಸ ಯೋಜನೆಯೊಂದು ರೂಪಗೊಳ್ಳುತ್ತಿತ್ತು. […]