ಲಹರಿ
ಹೆತ್ತಮ್ಮನಲ್ಲದ ಅಮ್ಮ ಸಂಧ್ಯಾ ಶೆಣೈ [5:25 pm, 10/05/2020] SANDHYA. SHENOY: ನಮ್ಮ ಮಟ್ಟಿಗೆ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ಆದರೂ ಕೆಲವೊಂದು ದಿನಗಳ ಹೆಸರನ್ನು ಕೇಳುವಾಗ ಮೈ ಪುಳಕಗೊಂಡು ನಮಗೆ ತಾಯಿಯಂತಹ ಪ್ರೀತಿಯನ್ನು ಕೊಟ್ಟವರ ನೆನಪೆಲ್ಲವೂ ಆಗುತ್ತದೆ .ಹಾಗಾಗಿ ಈ ದಿನವನ್ನು ನಾನು ಹೆತ್ತಮ್ಮ ನಲ್ಲದಿದ್ದರೂ ಅಮ್ಮನಂತೆ ಪ್ರೀತಿಸುವ ನಮ್ಮೆಲ್ಲ ಅಮ್ಮಂದಿರ ದಿನ ಎಂದೇ ಕರೆಯಲು ಬಯಸುತ್ತೇನೆ. ಹಾಗೂ ಇವತ್ತಿನ ಈ ನನ್ನ ಲೇಖನವನ್ನು ನಮ್ಮ ಪ್ರೀತಿಯ ಸೋದರತ್ತೆಯ ತಾರಮಕ್ಕಳಿಗೆ ಅರ್ಪಿಸುತ್ತೇನೆ. ಈಗ ಅವಳು ಹೇಳಬಹುದು […]
ಮಮತೆಯ ಮಡಿಲು
ಬಣ್ಣಿಸಲು ಪದಗಳು ಬೇಕೇ? ಚಂದ್ರು ಪಿ.ಹಾಸನ ಮಮತೆಯ ಮಡಿಲಲ್ಲಿ ಮಿಡಿದ ಭಾವಗಳು ನೂರಾರು ಅಲ್ಲಿ ಕಳೆದ ಪ್ರತಿಕ್ಷಣಗಳು ಮಧುರ ಚಿರನೂತನ.ಮಾಂಸ ಮುದ್ದೆಯನ್ನು ನವಮಾಸ ತನ್ನ ಗರ್ಭದಲ್ಲಿ ಪೋಷಿಸಿ , ಈ ಜಗತ್ತನ್ನು ಪರಿಚಯಿಸಿ ಮಗುವಿನ ಬಾಳಿಗೆ ಆಸರೆಯಾಗುವವಳೇ ಅಮ್ಮ. ದೇವರಿಗೆ ದೇವರು ಅಮ್ಮ ಆಗಿರುವಾಗ ಮೂಲಕಥೆಗೆ ಪದವಿಲ್ಲ ಕೇವಲ ವಾತ್ಸಲ್ಯದ ಗುರುತುಗಳನ್ನು ಅಕ್ಷರವಾಗಿ ಸಿ ಮಮತೆಯ ಕ್ಷಣಗಳನ್ನು ಅವಳ ನೆನಪನ್ನು ಅವಳ ಮಡಿಲಲ್ಲಿ ಕಳೆದ ಕ್ಷಣಗಳನ್ನು ಪದವಾಗಿಸಿ ಒಂದೊಂದೇ ಈ ಲೇಖನದಲ್ಲಿ ತುಂಬಬಹುದಷ್ಟೇ. ಇತಿಹಾಸ ಅನ್ನಾ ಜಾರ್ವಿಸ್ […]
ಲಹರಿ
ಪ್ರೀತಿ ಗಂಧವನರಸುತ ಸಂಧ್ಯಾ ಶೆಣೈ ಫೋನ್ ರಿಂಗಾಯಿತು.. ಯಾರೆಂದು ನೋಡಿದರೆ ನಾನು ಆಗಾಗ ಊರಕಡೆಯ ತರಕಾರಿ ತೆಗೆದುಕೊಳ್ಳುತ್ತಿದ್ದ ತರಕಾರಿ ವ್ಯಾಪಾರದ ಹೆಂಗಸು. ” ಅಕ್ಕ ಒಳ್ಳೆ ಕಾಟು ಮಾವಿನ ಹಣ್ಣು ಬಂದಿದೆ ಸ್ವಲ್ಪ ತಗೊಂಡ್ ಹೋಗಿ “ಎಂದು ಹೇಳಿದಳು. ನಾನು ಹೇಳಿದೆ “ಬ್ಯಾಡ ಬ್ಯಾಡ ಮಾರಾಯ್ತಿ.. ಈ ಕೊರೋನಾ ಬಂದ ಮೇಲೆ ನಾನು ಮನೆಯಿಂದ ಹೊರಗೆ ಹೋಗಲೇ ಇಲ್ಲ. ಹೋಗುವುದೂ ಇಲ್ಲ. ಹಾಗಾಗಿ ಬೇಡ ನಂಗೆ ಬರಲಿಕ್ಕಿಲ್ಲ” ಎಂದೆ ಅದಕ್ಕವಳು” ಅಯ್ಯೋ ಅಷ್ಟೇಯಾ.. ಹೌದು ನೀವು ಹೇಳಿದಾಗೆ […]
ಅಮ್ಮಂದಿರ ದಿನದ ವಿಶೇಷ- ಬರಹ
ಅಮ್ಮನದಿನ ಎನ್.ಶೈಲಜಾ ಹಾಸನ ಕಳೆದ ವರ್ಷವಷ್ಟೆ ಅಮ್ಮನ ದಿನ ಆಚರಿಸಿದೆವು.ಈ ವರ್ಷವೂ ಅಮ್ಮಂದಿರ ದಿನ ಬಂದಿದೆ. ಅಮ್ಮನಿಗಾಗಿ ಒಂದು ದಿನವೇ ಎಂದು ಹುಬ್ಬೇರಿಸುವವರ ನಡುವೆಯೂ ಅಮ್ಮನನ್ನು ನೆನೆಸಿಕೊಂಡು ಅಮ್ಮನಿಗಾಗಿ ಉಡುಗರೆ ನೀಡಿ ಅಮ್ಮನ ಮೊಗದಲ್ಲಿ ಸಂತಸ ತುಂಬಿzವರು, ಅಮ್ಮನ ದಿನ ಮಾತ್ರವೇ ನೆನಸಿಕೊಂಡು ಅಮ್ಮನ ದಿನ ಆಚರಿಸಿದವರೂ, ತಮ್ಮ ಜಂಜಾಟದ ನಡುವೆ ಅಮ್ಮನನ್ನೆ ಮರೆತವರೂ, ಈ ಅಮ್ಮಂದಿರ ದಿನದ ಆಚರಣೆಗಳೆÉಲ್ಲ ನಮ್ಮ ಸಂಸ್ಕ್ರತಿ ಅಲ್ಲ, ನಾವೂ ದಿನವೂ ಅಮ್ಮನನ್ನು ಜೊತೆಯಲ್ಲಿಯೇ […]
ಅಮ್ಮಾ ಎಂಬ ಬೆಳದಿಂಗಳು
ಅಮ್ಮಾ ಎಂಬ ಬೆಳದಿಂಗಳು ನಾಗರೇಖಾ ಗಾಂವಕರ ಅಮ್ಮಾ! ಅಂದ ಕೂಡಲೇ ಅದೇನೋ ಮಧುರವಾದ ಭಾವ ಎದಗೂಡಲ್ಲಿ ಚಕ್ಕನೇ ಸುಳಿದಂತಾಗುತ್ತದೆ. ಆಪ್ತವಾದ ಹೃದಯವೊಂದರ ಬಡಿತ ದೂರದಲ್ಲಿದ್ದರೂ ನಮ್ಮ ಹತ್ತಿರವೇ ಸುಳಿದಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ಮಗಳಿಗೆ ಇಷ್ಟವೇನು? ಕಷ್ಟವೇನು ಎಂಬುದನ್ನು ನನ್ನಮ್ಮ ಅರಿತುಕೊಂಡಿದ್ದಳೇ? ಕೆಲವೊಮ್ಮೆ ಅನ್ನಿಸುತ್ತಿತ್ತು. ಅಮ್ಮನಾಗುವುದೆಂದರೆ ಆ ಪರಿಯ ಜವಾಬ್ದಾರಿಯೇ! ನನ್ನಮ್ಮನೇಕೆ ಸಣ್ಣದಕ್ಕೂ ರೇಗುತ್ತಾರೆ? ಯಾಕೆ ನನ್ನ ಹುಟ್ಟಿಸಿಕೊಳ್ಳಬೇಕಿತ್ತು. ಬೈಯುವುದಾದರೂ ಏಕೆ? ಅಮ್ಮ ಬೈದಾಗ ತಂದೆ ಬೆಂಬಲಿಸುತ್ತಿದ್ದರೂ ಅಮ್ಮ ಅದಕ್ಕೂ ಹುಸಿಮುನಿಸು ತೋರುತ್ತಿದ್ದಾಗ ಅಮ್ಮ ! ನಿನಗೆ ಹೊಟ್ಟೆ […]
ಲಹರಿ
ಮತ್ತೊಮ್ಮೆ ನಿನ್ನ ಭೇಟಿಯಾಗುವೆ. ಅಮೃತಾ ಪ್ರೀತಮ್ ಶೀಲಾ ಭಂಡಾರ್ಕರ್ मैं तैनू फ़िर मिलांगी. ಅಮೃತಾ ಪ್ರೀತಂ ತಾನು ಸಾಯುವ ಮೊದಲು ಇಮ್ರೋಜ್‍ನಿಗಾಗಿ ಪಂಜಾಬಿಯಲ್ಲೊಂದು ಕವಿತೆ ಬರೆದಳು. ಪ್ರತಿಯೊಂದು ಶಬ್ದವೂ ಪ್ರೀತಿಯನ್ನು ತುಂಬಿಸಿಕೊಂಡು ಕವಿತೆಯಾಗಿತ್ತು. ಅಮೃತಾ ಒಂದು ವಿಶಿಷ್ಟ ವ್ಯಕ್ತಿತ್ವ. ಹದಿನಾರನೆ ವಯಸ್ಸಿನಲ್ಲೇ ಮನೆಯವರು ನಿಶ್ಚಯಿಸಿ ಪ್ರೀತಮ್ ಸಿಂಗ್ ಜತೆ ಮದುವೆ ಮಾಡಿದ್ದರೂ ಆ ಮದುವೆ ಊರ್ಜಿತವಾಗಲಿಲ್ಲ. ನಂತರದ ದಿನಗಳಲ್ಲಿ ಬರವಣಿಗೆಯಲ್ಲಿ ತನ್ನನ್ನು ವಿಶೇಷವಾಗಿ ಈ ಜಗತ್ತಿಗೆ ಪರಿಚಯಿಸಿಕೊಂಡ ಅಮೃತಾ ಲಾಹೋರ್ ವಿಭಜನೆಯ ಸಮಯದಲ್ಲಿ ಆ ಕಾಲದ […]
ಪ್ರಸ್ತುತ
ಹೋಮ್ ಕೇರ್ ಹಗರಣ. ಮಾಲತಿಶ್ರೀನಿವಾಸನ್. ಇತ್ತೀಚೆಗೆ ನಗರಗಳಲ್ಲಿ ವೃದ್ಧರ,ರೋಗಿಗಳ,ಮತ್ತು ಮಕ್ಕಳ ಆರೈಕೆಗೆ ಮನೆಯಲ್ಲಿದ್ದು ಮನೆಯವರೊಡನೆ ಸಹಕರಿಸಿಸಹಾಯಮಾಡಲು ಜನರನ್ನುಒದಗಿಸುವ ಸಂಘಗಳುಹೆಚ್ಚಳವಾಗಿವೆ ,ಹಿಂದೆ, ಒಂದೋ ಎರಡೋ nightingale,Red cross,ನಂತಹ ಸಂಸ್ಥೆಗಳು ಈ ಜವಾಬ್ದಾರಿ ಹೊರುತ್ತಿದ್ದವು,ಈಗ ಪ್ರತಿ ಸರ್ಕಾರಿ/ಹಾಗೂಖಾಸಗಿ ಅಸ್ಪತ್ರೆಯಲ್ಲೂಇಂತಹ ಸಂಸ್ಥೆಗಳ ಸಂಚಾಲಕರು ಈ ಕೆಲಸ ಒಪ್ಪಿಕೊಂಡು, ನುರಿತ ಜನರನ್ನು ಒದಗಿಸುತ್ತಿರುವುದು ಶ್ಲಾಘನೀಯವಾದ ಸಮಾಜಸೇವ. ಅವರ ಶುಲ್ಕ ,ಮುಂಗಡ ಹಣ ದುಬಾರಿ ಅನಿಸಿದರೂತುರ್ತುಪರಿಸ್ಥಿತಿಯಲ್ಲಿ ಅವಶ್ಯಕತೆ ಇದ್ದಾಗ ಸಿಗುವ ನೆರವುಅಪ್ಯಾಯಮಾನ ಹಾಗೂ ಉಪಯುಕ್ತ. ಇಂತಹ ಸಂಸ್ಥೆಗಳು ಕಳುಹಿಸಿದ ಅಪರಿಚಿತ ಸಹಾಯಕರನ್ನುತಿಂಗಳುಗಳು ಒಮೊಮ್ಮೆವರುಷಗಳುಜೊತೆಯಲ್ಲಿಟ್ಟುಕೊಂಡು,ವೃದ್ಧರ ,ರೋಗಿಗಳ […]
ಹರಟೆ
ಇಲಿ ಪುರಾಣ ಶೀಲಾ ಭಂಡಾರ್ಕರ್ “ಇಲಿಗಳ ಸಂಸಾರದಲ್ಲೂ ಅಜ್ಜಿಯರು ಇರ್ತಾರಾ? ರಾತ್ರಿ ಮಲಗುವಾಗ ಒಳ್ಳೊಳ್ಳೆ ನೀತಿ ಕತೆಗಳನ್ನು ಹೇಳಿ ಮಲಗಿಸ್ತಾರಾ? ಹೇಗೆ ತಪ್ಪಿಸಿಕೊಳ್ಳುವುದು ಅನ್ನುವ ಟಿಪ್ಸ್ ಹೇಳಿ ಕೊಡ್ತಾರಾ?” ಗೊಣಗ್ತಾ ಇದ್ದೆ ನಾನು. ಮಕ್ಕಳಿಬ್ಬರೂ ಮುಖ ಮುಖ ನೋಡಿಕೊಂಡು “ಅಮ್ಮ ಶಶಿಕಪೂರ್” ಅಂತ ಮುಸಿ ಮುಸಿ ನಗ್ತಾ ಇದ್ರು. ನಮ್ಮನೇಲಿದ್ದ ಗೊಣಗುವ ಶೇಷಿಯ ಕತೆ ಹೇಳಿದ್ನಲ್ಲ. ಶೇಷಿಗೆ ದಿನ್ನು, ಶಶಿಕಪೂರ್ ಅಂತ ಹೆಸರಿಟ್ಟಿದ್ದನ್ನೂ ಹೇಳಿದ್ದೇನೆ. ನಿಮಗೆ ಮರೆತಿರಬಹುದು. ನನಗೆ ಕೋಪ ಬಂತು. “ನಿಮಗೇನು ಗೊತ್ತು? ನಗ್ತಿದಿರಲ್ಲ ನೀವು!” […]
ಬುದ್ಧ ಪೂರ್ಣಿಮಾ ವಿಶೇಷ
ಆಸೆಯೇ ದು:ಖಕ್ಕೆ ಮೂಲ ಚಂದ್ರು ಪಿ.ಹಾಸನ ಆಸೆಯೇ ದುಃಖಕ್ಕೆ ಮೂಲ ಎಂಬುದೇ ಜ್ಞಾನಯೋಗಿಯ ಪ್ರಸಿದ್ಧ ತತ್ವ ಏಕತೆಯು ನಿಸ್ವಾರ್ಥ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಆಗ ಸ್ವಾರ್ಥತೆ ಕಡಿಮೆಯಾಗಿ ಮಾನವೀಯ ಮೌಲ್ಯಗಳು ಹೊರಹೊಮ್ಮುತ್ತದೆ. ಒಟ್ಟಾರೆಯಾಗಿ ಮಾನವ ತನ್ನ ಜೀವನದಲ್ಲಿ ಸ್ವಾರ್ಥತೆಯ ಬಿಟ್ಟು ನಿಸ್ವಾರ್ಥ ಸೇವೆ ಮಾಡುವುದಲ್ಲಾ ಮಾನವೀಯ ಮೌಲ್ಯಗಳಾಗುತ್ತವೆ. ಅದಕ್ಕಾಗಿ ಮಾನವ ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳೇ ಮೌಲ್ಯಗಳು. ನಮ್ಮ ಸಮಾಜದಲ್ಲಿ ಅಂಧಕಾರ, ದಾರಿದ್ರ್ಯ, ಅನಾಚಾರಗಳು ತಾಂಡವ ಮಾಡುತ್ತಿದ್ದಾಗ ಈ ಮಾನವೀಯ ಮೌಲ್ಯಗಳು ತಲೆಎತ್ತಿದರೆ ಈ ಸಮಸ್ಯೆಗಳಿಗೆ ಭಹುಶಃ ಪರಿಹಾರ […]
ಬುದ್ಧ ಪೂರ್ಣಿಮಾ ವಿಶೇಷ
‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’ ವಸುಂಧರಾ ಕದಲೂರು ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’ ಈ ಸಾಲುಗಳು ಮಾಸ್ತಿಯವರ ‘ಯಶೋಧರ’ ನಾಟಕದಲ್ಲಿದೆ ಎಂಬ ನೆನಪು. ರಾಜಕುಮಾರನಾಗಿದ್ದ ಸಿದ್ಧಾರ್ಥನು ಬುದ್ಧನಾಗಿ, ಜೀವನದ ಪರಮಸತ್ಯವನ್ನು ಕಂಡು, ಅದನ್ನು ಜಗತ್ತಿಗೆ ಬೋಧಿಸಿದ. ತನ್ನ ಉಪದೇಶ ಮಾತ್ರದಿಂದಲೇ ಲೋಕದ ಕಣ್ತೆರೆಸಿದವನು, ಜನರ ದುಃಖ ಮರೆಸಿದವನು, ಕಣ್ಣೀರನು ಒರೆಸಿದವನು ಹೀಗೆಲ್ಲಾ ಹೇಳುತ್ತಾರೆೆ. ಬುದ್ಧನ ವಿಚಾರದಲ್ಲಿ ಇದೆಲ್ಲಾ ನಿಜವಿರಬಹುದು. […]