ಬಣ್ಣಿಸಲು ಪದಗಳು ಬೇಕೇ?
ಚಂದ್ರು ಪಿ.ಹಾಸನ
ಮಮತೆಯ ಮಡಿಲಲ್ಲಿ ಮಿಡಿದ ಭಾವಗಳು ನೂರಾರು ಅಲ್ಲಿ ಕಳೆದ ಪ್ರತಿಕ್ಷಣಗಳು ಮಧುರ ಚಿರನೂತನ.ಮಾಂಸ ಮುದ್ದೆಯನ್ನು ನವಮಾಸ ತನ್ನ ಗರ್ಭದಲ್ಲಿ ಪೋಷಿಸಿ , ಈ ಜಗತ್ತನ್ನು ಪರಿಚಯಿಸಿ ಮಗುವಿನ ಬಾಳಿಗೆ ಆಸರೆಯಾಗುವವಳೇ ಅಮ್ಮ. ದೇವರಿಗೆ ದೇವರು ಅಮ್ಮ ಆಗಿರುವಾಗ ಮೂಲಕಥೆಗೆ ಪದವಿಲ್ಲ ಕೇವಲ ವಾತ್ಸಲ್ಯದ ಗುರುತುಗಳನ್ನು ಅಕ್ಷರವಾಗಿ ಸಿ ಮಮತೆಯ ಕ್ಷಣಗಳನ್ನು ಅವಳ ನೆನಪನ್ನು ಅವಳ ಮಡಿಲಲ್ಲಿ ಕಳೆದ ಕ್ಷಣಗಳನ್ನು ಪದವಾಗಿಸಿ ಒಂದೊಂದೇ ಈ ಲೇಖನದಲ್ಲಿ ತುಂಬಬಹುದಷ್ಟೇ.
ಇತಿಹಾಸ
ಅನ್ನಾ ಜಾರ್ವಿಸ್ ಅಮೆರಿಕದ ಶಾಲಾ ಶಿಕ್ಷಕಿ. ಅಪ್ಪನ ಸಾವಿನ ನಂತರ ಅವರು ಅಮ್ಮನ ನೆರಳಲ್ಲೇ ಬೆಳೆದರು. 1905 ಮೇ 9ರಂದು ಅಮ್ಮ ಕೂಡ ತೀರಿಕೊಂಡಾಗ ಅನ್ನಾ ಖಿನ್ನರಾದರು. ಬದುಕಿದ್ದಾಗ ಅಮ್ಮನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಎಂದು ಅವರ ಮನಸ್ಸು ಚುಚ್ಚತೊಡಗಿತು. ಹಾಗೆ ನೋಡಿದರೆ ಅವರು ಅಮ್ಮನನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ತಾಯಿಯ ಸಾವಿನ ನಂತರ ಅನ್ನಾ ಯಾರಿಗೇ ಮಾತೃವಿಯೋಗವಾದರೂ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ಭೋಗದ ಬದುಕಿನಲ್ಲಿ ಪ್ರೀತಿಯನ್ನೇ ಮರೆಯುವ ಎಷ್ಟೋ ಮಕ್ಕಳು ಅವರ ಕಣ್ಣಿಗೆ ಬಿದ್ದರು. ಎಲ್ಲರೂ ಅಮ್ಮನನ್ನು ಕನಿಷ್ಠ ವರ್ಷಕ್ಕೊಂದು ದಿನವಾದರೂ ಪ್ರೀತಿಯಿಂದ ಕಾಣಲಿ ಎಂಬ ಬಯಕೆ ಅನ್ನಾ ಮನಸ್ಸಿನಲ್ಲಿ ಚಿಗುರೊಡೆಯಿತು.ತಮ್ಮ ಯೋಚನೆಯನ್ನು ಪ್ರಚಾರಗೊಳಿಸಲು ಅವರು ಪತ್ರ ಬರೆಯುವ ಆಂದೋಲನ ಪ್ರಾರಂಭಿಸಿದರು. ಪತ್ರಿಕೆಗಳ ಸಂಪಾದಕರು, ಬರಹಗಾರರು, ಸೆನೆಟರ್‌ಗಳು, ಮೇಯರ್‌ಗಳು, ಗವರ್ನರ್‌ಗಳು ಹಾಗೂ ಅಸಂಖ್ಯಾತ ಚಿಂತಕರಿಗೆ ಅವರು ತಮ್ಮ ಯೋಚನೆಯನ್ನು ತಿಳಿಸಿ ಪತ್ರಗಳನ್ನು ಬರೆದರು. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ನಗರಗಳಿಂದ, ಹಳ್ಳಿಗಳಿಂದ ಅಸಂಖ್ಯ ಪತ್ರಗಳು ಬಂದವು.
ಪ್ರತಿಕ್ರಿಯಿಸಿದವರಲ್ಲಿ ಸಿಂಹಪಾಲು ಜನ ಅಮ್ಮನ ನೆನೆಯಲು ಒಂದು ದಿನ ಬೇಕು ಎಂಬ ಅನ್ನಾ ಯೋಚನೆಯನ್ನು ಬೆಂಬಲಿಸಿದ್ದರು. 1914, ಮೇ 8ರಂದು ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಅನ್ನಾ ಯೋಚನೆಗೆ ಅಧಿಕೃತತೆಯ ಮುದ್ರೆ ಒತ್ತಿದರು. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಅಮ್ಮನ ದಿನಾಚರಣೆ ಆಚರಿಸುವುದೆಂದು ತೀರ್ಮಾನವಾಯಿತು. ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಅಮೆರಿಕನ್ನರು ಅಮ್ಮನ ದಿನಾಚರಣೆಯ ದಿನ ತಮ್ಮ ತಾಯಂದಿರಿಗೆ ಹೂಗುಚ್ಛ ಕಳುಹಿಸಿ ಶುಭಾಶಯ ಕೋರತೊಡಗಿದರು. ಕೆಲವರು ಅಮ್ಮನ ಜೊತೆ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಊಟ ಮಾಡಿ ಸಂಭ್ರಮ ಆಚರಿಸಲಾರಂಭಿಸಿದರು. ಪ್ರತಿವರ್ಷ ಅಮೆರಿಕದಲ್ಲಿ ಈಗ 15 ಕೋಟಿ ಗ್ರೀಟಿಂಗ್ ಕಾರ್ಡ್‌ಗಳು ಅಮ್ಮನ ದಿನಾಚರಣೆಯ ದಿನ ವಿನಿಮಯವಾಗುತ್ತವೆ.
ಅಮ್ಮನ ದಿನಾಚರಣೆ ಶುರುವಾದ ಎರಡು ವರ್ಷದ ನಂತರ ಸೊನೋರಾ ಡಾಡ್ ಎಂಬ ಇನ್ನೊಬ್ಬ ಮಹಿಳೆ ಅಪ್ಪಂದಿನ ದಿನವೂ ಬೇಕೆಂದು ಪ್ರಚಾರ ಆಂದೋಲನ ಪ್ರಾರಂಭಿಸಿದರು. ಈ ಯೋಚನೆಯನ್ನು ವಿರೋಧಿಸಿದವರೇ ಹೆಚ್ಚು. ಹಾಗಾಗಿ 1972ರಲ್ಲಿ ಅಪ್ಪನ ದಿನಾಚರಣೆಗೆ ಅಧಿಕೃತತೆ ಪ್ರಾಪ್ತಿಯಾಯಿತು.
ಯಾವ ಶ್ರೇಷ್ಠತೆಯು ತಾಯಿಯ ಶ್ರೇಷ್ಠತೆಗೆ ಸಮನಾಗಿಲ್ಲ. ಕಾರಣ ಮೊದಲೇ ತಿಳಿಸಿದಂತೆ ನವಮಾಸಗಳು ಗರ್ಭದಲ್ಲಿ ಇರಿಸಿ ಪೋಷಿಸಿ ಜಗಕ್ಕೆ ಪರಿಚಯಿಸಿದ ಆಕೆ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಗುವಿನ ಆಸೆ-ಆಕಾಂಕ್ಷೆಗಳತ್ತ ಗಮನಹರಿಸಿ ಅದನ್ನು ಪೂರೈಸಲು ಮಾಡುವ ತ್ಯಾಗಗಳು ಅಜರಾಮರ. ಅಮ್ಮ ಎಂದರೆ ಅದು ಬರಿ ಪದವಲ್ಲ ಅದೊಂದು ಶಕ್ತಿ ಮಂತ್ರ ಕೇವಲ ಪ್ರೀತಿಯಿಂದ ಜಪಿಸಿದರೆ ಸಾಕು ಪ್ರತ್ಯಕ್ಷಳಾಗಿ ಪೂರೈಸಲು ಸಿದ್ಧರಿರುವಳು ಒಪ್ಪತ್ತು ಊಟ ತಿಂದು ಹೊಟ್ಟೆ ಕಟ್ಟಿ ಮಗುವನ್ನು ಒಪ್ಪಾಗಿ ಬೆಳೆಸುವಳು. ಮಗುವಿಗಾಗಿ ಎಂತಹ ತ್ಯಾಗ ಮಾಡಲು ಸಿದ್ಧರಿರುವಳು. ಅವಳು ಮಗುವಿಗಾಗಿ ಧರಿಸಿದ ವೇಷಗಳು ಎಷ್ಟೊ? ಕುಣಿದ ಕ್ಷಣ ಗಳು ಎಷ್ಟೊ. ಇಡೀ ಬದುಕನ್ನೇ ಮೀಸಲಿಡಲು ಬೇಕಾದರೂ ಚಿಂತಿಸುವುದಿಲ್ಲ. ಕಣ್ಣೀರಿಟ್ಟಾಗ ಮಗುವಿಗಾಗಿ ಕಣ್ಣಿರರಿಸಿ ಸಮಾಧಾನ ಪಡಿಸಿವಳು. ತಾನೊಂದರೂ ಅದರ ಅರಿವು ಮಗುವಿಗೆ ತಾಗದಂತೆ ನೋಡಿಕೊಳ್ಳುವಳು. ಹೆಜ್ಜೆ ಹೆಜ್ಜೆಗೂ ಬೆಂಗಾವಲಾಗಿ ನಿಂತು ದೈವದಂತೆ ಕಾಯುವಳು. ತಪ್ಪು ಮಾಡಿದರೆ ಕ್ಷಮೆ ನೀಡುವ ಏಕೈಕ ಜೀವ ಮಗುವಿನ ಪ್ರತಿ ಮಾತನ್ನು ಆಲಿಸುವ ಜೀವ ಇದು ಮಾತ್ರ ನೋವನ್ನು ನೋಯುತ್ತ ಕೇಳುವಳು ಕಣ್ಣೀರು ಇಡುವಳು ಗೆದ್ದಾಗ ಸಂತಸದಿ ಕುಪ್ಪಳಿಸಿ ಸಂತೋಷದ ಧಾರೆಯ ಹರಿಸುವಳು. ಇಂತಹ ಒಂದು ದಿವ್ಯ ಶಕ್ತಿಗೆ ಕೊನೆಯವರೆಗೂ ನೋವು ಬಾರದಂತೆ ನೋಡಿಕೊಂಡು ಅವಳ ಸಂತೋಷವನ್ನು ಕಾಯ್ದು ಪ್ರತಿದಿನ ನೋಡಿಕೊಂಡರೆ ಪ್ರತಿದಿನವೂ ಅಮ್ಮನ ದಿನಾಚರಣೆಯಾಗಿ ಕಾಣುವುದು.
*********
ಹೊಸ ವಿಷಯಗಳ ಪರಿಚಯ ಸೂಪರ್
ಧನ್ಯವಾದಗಳು ಮೇಡಂ
ಉದಯೋನ್ಮುಖ ಕವಿಗಳು ದಿನ ವಿಶೇಷದ ಇತಿಹಾಸದೊಂದಿಗೆ ಬಿತ್ತರಿಸಿದ ಯುವಸಾಹಿತಿಗಳ ಲೇಖನವು ಸೊಗಸಾಗಿದೆ
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
ತುಂಬಾ ಚೆನ್ನಾಗಿದೆ ಹೊಸ ವಿಷಯ ತಿಳಿದಂತಾಯಿತು
ಧನ್ಯವಾದಗಳು
ಹೆತ್ತು ಹೊತ್ತು ಸಾಕಿದ ಅಮ್ಮ ಭಾರ ಎನ್ನುವುದೆಕೆ ಅವಳನ್ನು ನಿಮ್ಮ ಮಕ್ಕಳ ಜೊತೆ ಸೇರಿಸಿ ಪ್ರೀತಿಸಿ ಅಷ್ಟೇ ಸಾಕು ಅನ್ನುವೆ
ನಿಮ್ಮ ಮಾತು ಅಕ್ಷರಸಹಃ ಸತ್ಯ