ಅನುವಾದ ಸಂಗಾತಿ
ವಾಷಿಂಗ್ಟನ್ ಕುಕುರ್ಟೋ ಅರ್ಜೆಂಟೀನಾದ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ […]
ಹಳೆಯ ವರ್ಷಕ್ಕೊಂದುವಿದಾಯ
2019ಮುಗಿಯುತ್ತಿದೆ… ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಳೆಯ ವರ್ಷಕ್ಕೊಂದು ವಿದಾಯ ಹೇಳಬೇಕಾಗಿದೆ ಖ್ಯಾತ ಕವಿ ಗುಲ್ಜಾರರ ಕವಿತೆ ಹೇಳಿರುವ ವಿದಾಯದ ಸಾಲುಗಳು ನಿಮಗಾಗಿ ಮೆಲ್ಲ ಮೆಲ್ಲನೆ ನಡೆ ಜೀವನವೆ ತೀರಿಸಬೇಕಾದ ಋಣವಿನ್ನು ಉಳಿದಿದೆ ! ಇನ್ನಷ್ಟು ನೋವುಗಳ ನಿವಾರಿಸಬೇಕಿದೆ, ನಿಭಾಯಿಸುವ ಕರ್ತವ್ಯ ಇನ್ನಷ್ಟಿದೆ. ಹೊರಳಿ ನಡೆಯುವ ನಿನ್ನ ವೇಗಕೆ, ಕೆಲವು ಕೈ ಜಾರಿದವು ಕೆಲವು ಮುನಿದವು ಮುನಿದವರ ಮನವೊಲಿಸಬೇಕಿದೆ, ಅಳುವವರ ಮತ್ತೆ ನಗಿಸಬೇಕಿದೆ. ಮನದ ಬಯಕೆಗಳದೆಷ್ಟೋ ಅಪೂರ್ಣವಾಗಿವೆ, ಕೆಲ ಅಗತ್ಯ ಕರ್ಮಗಳ ಮುಗಿಸಬೇಕಿದೆ. ಈಡೇರಿಸಲಾಗದ ಎದೆಯ ಬಯಕೆಗಳ […]
ಅನುವಾದ ಸಂಗಾತಿ
ನಿಕ್ಕಿ ಗಿಯೊವಿನ್ನಿ ಅಮೇರಿಕಾದ ಕವಿಯಿತ್ರಿ ಕನ್ನಡಕ್ಕೆ: ಕಮಲಾಕರ ಕಡವೆ “ನೀನೂ ಸಹ ಬಂದೆ” ನಾನು ಬಂದೆ ಸರ್ವರ ಸಮ್ಮುಖ ಸ್ನೇಹಿತರ ಅರಸಿನಾನು ಬಂದೆ ಸರ್ವರ ಸಮ್ಮುಖ ಒಲವ ಅರಸಿನಾನು ಬಂದೆ ಸರ್ವರ ಸಮ್ಮುಖ ಸಹಾನುಭೂತಿಗಾಗಿ ನಿನ್ನ ಕಂಡುಕೊಂಡೆನಾನು ಬಂದೆ ಸರ್ವರ ಸಮ್ಮುಖ ಅಳಲುನಾನು ಬಂದೆ ಸರ್ವರ ಸಮ್ಮುಖ ನಗಲು ನೀನು ನನ್ನ ಕಣ್ಣೊರೆಸಿದೆನೀನು ನನ್ನ ಸಂತೋಷವ ಹಂಚಿಕೊಂಡೆನಾನು ಸರ್ವರ ಸಮ್ಮುಖ ತೊರೆದು ನಿನ್ನ ಅರಸಿ ಹೊರಟೆ ನಾನು ಸರ್ವರ ಸಮ್ಮುಖ ತೊರೆದು ಹೋದೆ ನನ್ನನೇ ಅರಸಿನಾನು ಸದಾಕಾಲಕ್ಕೆ […]
ಅನುವಾದ ಸಂಗಾತಿ
ಓಂಪ್ರಕಾಶ್ ವಾಲ್ಮೀಕಿ ಉತ್ತರಭಾರತದ ದಲಿತ ಕಾವ್ಯ ಕನ್ನಡಕ್ಕೆ-ಕಮಲಾಕರ ಕಡವೆ ಠಾಕೂರನ ಬಾವಿ ಒಲೆ ಮಣ್ಣಿಂದುಮಣ್ಣು ಕೊಳದ್ದುಕೊಳ ಠಾಕೂರಂದು ಹಸಿವು ರೋಟೀದುರೋಟಿ ರಾಗಿಯದುರಾಗಿ ಗದ್ದೇದುಗದ್ದೆ ಠಾಕೂರಂದು ಎತ್ತು ಠಾಕೂರಂದುನೇಗಿಲು ಠಾಕೂರಂದುನೇಗಿಲ ಮೇಲಿನ ಕೈ ನಮ್ದುಫಸಲು ಠಾಕೂರಂದು ಬಾವಿ ಠಾಕೂರಂದುನೀರು ಠಾಕೂರಂದುಗದ್ದೆ-ಕಣಜ ಠಾಕೂರಂದುರಸ್ತೆಬೀದಿ ಠಾಕೂರಂದುಮತ್ತೆ ನಮ್ದೇನುಂಟು?ಹಳ್ಳಿ?ಪೇಟೆ?ದೇಶ? ********************************* ಮೂಲಕವಿತೆ ठाकुर का कुआँ / ओमप्रकाश वाल्मीकि चूल्हा मिट्टी कामिट्टी तालाब कीतालाब ठाकुर का । भूख रोटी कीरोटी बाजरे कीबाजरा खेत काखेत ठाकुर […]
ಅನುವಾದ ಸಂಗಾತಿ
ನನ್ನ ಕುದುರೆಗೆ ಅನಿಸಿದೆ ಇದೆಂಥ ಸೋಜುಗ
ಮನೆಮಾರು ಇರದ ಕಡೆ ನಿಲ್ಲುವುದು ಹೀಗೆ
ಅನುವಾದ ಸಂಗಾತಿ
ಮೂಲ: ಜಾವಿದ್ ಆಖ್ತರ್.. ಅನುವಾದ ಸಂಗೀತ ಶ್ರೀಕಾಂತ ಯಾವಗಲೆಲ್ಲ ನೋವಿನ ಮೋಡ ಹರಡುತ್ತದೆಯೊ, ಯಾವಗಲೆಲ್ಲ ಬೇಸರದ, ನೆರಳು ಹರಡುತ್ತದೆಯೋ, ಯಾವಗಲೆಲ್ಲಾ ಕಣ್ಣಿಂದ ಹನಿ ರೆಪ್ಪೆಯ ಬಳಿ ಬರುತ್ತದೆಯೋ, ಯಾವಗಲೆಲ್ಲಾ ಏಕಾಂತದಿಂದ ಹೃದಯ ಹೆದರುತ್ತದೆಯೋ, ಆಗೆಲ್ಲ ನಾನು ನನ್ನ ಹೃದಯವನ್ನು ಸಂತೈಸಿದ್ದೆನೆ ಏ ಹೃದಯವೇ ನೀನೆಕೆ ಹೀಗೆ ಆಳುತ್ತಿದ್ದಿಯಾ ಜಗತ್ತಿನಲ್ಲಿ ಎಲ್ಲರಿಗೂ ಹೀಗೆ ಆಗುತ್ತದೆ. =======
ಅನುವಾದ ಸಂಗಾತಿ
ಮೂಲ: ಅರುಣ್ ಕೊಲ್ಜಾಟ್ಕರ್ ಮಹಾರಾಷ್ಟ್ರದ ದ್ವಿಭಾಷಾ ಕವಿ ಅನುವಾದ:ಕಮಲಾಕರ ಕಡವೆ ಮುದುಕಿ ಮುದುಕಿಅಂಗಿ ಅಂಚನು ಹಿಡಿದುಬೆನ್ನು ಬೀಳುತ್ತಾಳೆ. ಅವಳು ಬೇಡುತ್ತಾಳೆ ಎಂಟಾಣೆಕುದುರೆ ಲಾಳದ ಮಂದಿರ ನಿಮಗೆತೋರಿಸುವಳಂತೆ ನೀವದನ್ನು ಅದಾಗಲೇ ನೋಡಿದ್ದೀರಿಅಂದರೂ ಕುಂಟುತ್ತ ಬರ್ತಾಳೆ ಹಿಂದೆಬಿಗಿಯಾಗಿ ಹಿಡಿದು ಅಂಗಿ ಅಂಚನು ನಿಮಗೆ ಹೋಗಗೊಡುವುದಿಲ್ಲ ಅವಳುಗೊತ್ತಲ್ಲ, ಮುದುಕಿಯರ ಪರಿಹತ್ತಿ ಹೂವಂತೆ ಅಂಟಿಕೊಳ್ಳುವರು ತಿರುಗಿ ಎದುರಿಸುವಿರಿ ನೀವುಅವಳನ್ನು, ಈ ಆಟ ಮುಗಿಸುವಖಡಾಖಂಡಿತ ನಿಲುವಲ್ಲಿ ಅವಳಾಗ ಅನ್ನುತ್ತಾಳೆ: “ಇನ್ನೇನುಮಾಡಿಯಾಳು ಮುದುಕಿಯೊಂಟಿಇಂಥ ದರಿದ್ರ ಕಲ್ಲುಗುಡ್ಡಗಳಲ್ಲಿ?” ನೀವು ನೋಡುತ್ತೀರಿ. ನಿರಾಳ ಆಕಾಶಅವಳ ಗುಂಡು ಕೊರೆದ ತೂತಿನಂತಹಕಣ್ಣುಗಳ […]
ಅನುವಾದ ಸಂಗಾತಿ
ಮೂಲ-ಜಯಂತ ಮಹಾಪಾತ್ರ ಒರಿಸ್ಸಾದ ಭಾರತೀಯ ಆಂಗ್ಲ ಕವಿ ಅನುವಾದ–ಕಮಲಾಕರ ಕಡವೆ “ಪುರಿಯಲ್ಲಿ ಬೆಳಗು” ಕೊನೆಯಿರದ ಕಾಗೆಗಲಭೆಪವಿತ್ರ ಮರಳಲ್ಲಿ ತಲೆಬುರುಡೆಯೊಂದುಹಸಿವಿನೆಡೆಗೆ ವಾಲಿಸುತ್ತದೆ ಖಾಲಿ ದೇಶವನ್ನು. ಬಿಳಿತಳೆದ ವಿಧವೆಯರುತಮ್ಮ ಬಾಳಿನ ಮಧ್ಯದಾಚೆಮಹಾಮಂದಿರದೊಳಗೆ ಹೊಗಲು ಕಾದಿದ್ದಾರೆ. ಅವರ ವಿರಕ್ತ ಕಣ್ಣುಗಳುಬಲೆಯಲ್ಲಿ ಸಿಕ್ಕಿಬಿದ್ದವರಂತೆ ದಿಟ್ಟಿಸುತ್ತವೆ,ಬೆಳಬೆಳಗ್ಗೆ ಶ್ರದ್ಧೆಯ ಬೆಳಗಿನೆಳೆಗೆ ಜೋತುಬಿದ್ದು. ನಿತ್ರಾಣ ಮುಂಜಾನೆ ಬೆಳಕಿಗೆ ಬಿದ್ದಿವೆಒಂದನಿನ್ನೊಂದು ಆತಿರುವ ಪಾಳು ತೊನ್ನುಭರಿತ ಚಿಪ್ಪುಗಳು,ಹೆಸರಿರದೆ ಕುಗ್ಗಿಹೋದ ಮುಖಗಳ ಮುಂದೆ, ತಟ್ಟನೆ ನನ್ನ ತೊಗಲೊಳಗಿಂದ ಹೊರಬೀಳುವ ಬಿಕ್ಕುಸೇರುತ್ತದೆ ಏಕಾಕಿ ಮಂಕು ಚಿತೆಯೊಂದರ ಹೊಗೆಯನನ್ನ ಮುದಿ ಅಮ್ಮನ ಕವಿಯುವ ಧಗೆಯ: […]
ಅನುವಾದ ಸಂಗಾತಿ
ಲೋರ್ನ್ ಗುಡಿಸನ್(1947
ಜಮೈಕಾ ದೇಶದ ಕವಿಯಿತ್ರಿ
ಕೆರಿಬಿಯನ್ ಕಾವ್ಯ
ಅನುವಾದ-ಕಮಲಾಕರ ಕಡವೆ
ಅನುವಾದ ಸಂಗಾತಿ
Solitary! ತೆಲುಗು ಮೂಲ : ರವಿ ವೀರೆಲ್ಲಿ ಅನುವಾದ : ರೋಹಿಣಿಸತ್ಯ ಒಂಟಿ ಮೇಘದಂತೆ ಅಲ್ಲಿ ಇಲ್ಲಿ ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?! ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ ಯುದ್ಧ ಮುಗಿದಮೇಲೆ ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ ಒಂಟಿಯಾಗಿ ಬಾಳಲಾಗದಿರುವುದಕ್ಕೆ ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು […]