ಅನುವಾದ ಸಂಗಾತಿ

Image result for photos widows in varanasi

ಮೂಲ-ಜಯಂತ ಮಹಾಪಾತ್ರ

ಒರಿಸ್ಸಾದ ಭಾರತೀಯ ಆಂಗ್ಲ ಕವಿ

Image may contain: 1 person, glasses

ಅನುವಾದಕಮಲಾಕರ ಕಡವೆ

“ಪುರಿಯಲ್ಲಿ ಬೆಳಗು”

ಕೊನೆಯಿರದ ಕಾಗೆಗಲಭೆ
ಪವಿತ್ರ ಮರಳಲ್ಲಿ ತಲೆಬುರುಡೆಯೊಂದು
ಹಸಿವಿನೆಡೆಗೆ ವಾಲಿಸುತ್ತದೆ ಖಾಲಿ ದೇಶವನ್ನು.

ಬಿಳಿತಳೆದ ವಿಧವೆಯರು
ತಮ್ಮ ಬಾಳಿನ ಮಧ್ಯದಾಚೆ
ಮಹಾಮಂದಿರದೊಳಗೆ ಹೊಗಲು ಕಾದಿದ್ದಾರೆ.

ಅವರ ವಿರಕ್ತ ಕಣ್ಣುಗಳು
ಬಲೆಯಲ್ಲಿ ಸಿಕ್ಕಿಬಿದ್ದವರಂತೆ ದಿಟ್ಟಿಸುತ್ತವೆ,
ಬೆಳಬೆಳಗ್ಗೆ ಶ್ರದ್ಧೆಯ ಬೆಳಗಿನೆಳೆಗೆ ಜೋತುಬಿದ್ದು.

ನಿತ್ರಾಣ ಮುಂಜಾನೆ ಬೆಳಕಿಗೆ ಬಿದ್ದಿವೆ
ಒಂದನಿನ್ನೊಂದು ಆತಿರುವ ಪಾಳು ತೊನ್ನುಭರಿತ ಚಿಪ್ಪುಗಳು,
ಹೆಸರಿರದೆ ಕುಗ್ಗಿಹೋದ ಮುಖಗಳ ಮುಂದೆ,

ತಟ್ಟನೆ ನನ್ನ ತೊಗಲೊಳಗಿಂದ ಹೊರಬೀಳುವ ಬಿಕ್ಕು
ಸೇರುತ್ತದೆ ಏಕಾಕಿ ಮಂಕು ಚಿತೆಯೊಂದರ ಹೊಗೆಯ
ನನ್ನ ಮುದಿ ಅಮ್ಮನ ಕವಿಯುವ ಧಗೆಯ:

ತನ್ನನಿಲ್ಲಿ ಸುಡಬೇಕೆಂಬ ಅವಳ ಕೊನೆಯಾಸೆ
ನೆಲೆಬದಲುವ ಮರಳದಿಣ್ಣೆಯ ಮೇಲೆ
ಬೆಳಕಂತೆ ಸಂದಿಗ್ಧವಾಗಿ ತಿರುಚಿ.


ಮೂಲ ಕವಿತೆ:

Endless crow noises
A skull in the holy sands
tilts its empty country towards hunger.

White-clad widowed Women
past the centers of their lives
are waiting to enter the Great Temple

Their austere eyes
stare like those caught in a net
hanging by the dawn’s shining strands of faith.

The fail early light catches
ruined, leprous shells leaning against one another,
a mass of crouched faces without names,

and suddenly breaks out of my hide
into the smoky blaze of a sullen solitary pyre
that fills my aging mother:

her last wish to be cremated here
twisting uncertainly like light
on the shifting sands

Leave a Reply

Back To Top