ಪಾರಿವಾಳ ರಾಣಿ
ಕಥೆ ಪಾರಿವಾಳ ರಾಣಿ ಹರೀಶ್ ಗೌಡ ಒಂದು ಪ್ರೇಮ ಕಥೆ ಕ್ರಿ ಶ ಮತ್ತು ಕ್ರಿ ಪೂ ದಲ್ಲಿ ಹಿಂದೆ ಜಗತ್ತು ಹೇಗಿತ್ತು? ಸ್ವಚ್ಚಂದ ಜಗತ್ತು ಪ್ರಕೃತಿಯ ಮಡಿಲಿನಲ್ಲಿ ಸರ್ವರು ಸಮಾನರೆಂಬ ಭಾವನೆ ಇದ್ದಂತ ಕಾಲ. ಮತ್ತು ಜಾತಿ ವರ್ಣ ಇದರ ತಕರಾರು ಇಂದಿನದಲ್ಲ ಹಿಂದಿನಿಂದಲೂ ಇದೆ ಅದೆಲ್ಲ ಬಿಡಿ ನಮ್ಮ ಕಥೆ ಶುರು ಮಾಡೊಣ ಓದೊಕೆ ನೀವ್ ರೇಡಿ ಅಲ್ವ ಮತ್ತೆ ಬನ್ನಿ ಯಾಕ್ ತಡ. ಸುತ್ತಲೂ ಬೆಟ್ಟ ಗುಡ್ಡಗಳು ಕಾಡು ನದಿಗಳ ಮಧ್ಯೆ ನೂರಾರು […]
ಬಣ್ಣದ ಚಿಟ್ಟೆಗಳು
ಕಥೆ ಬಣ್ಣದ ಚಿಟ್ಟೆಗಳು ವಾಣಿ ಅಂಬರೀಶ ಈ ಊರಿನ ಕುವರ ಆ ಊರಿನ ಕುವರಿ ಅವಳೆಲ್ಲೋ ಇವನ್ನೇಲ್ಲೋ,, ಇನ್ನೂ ಇವರಿಬ್ಬರ ಪ್ರೀತಿ ಇನ್ನೇಲ್ಲೋ.. ಅದೇ ನಾ ಹೇಳ ಬಯಸುವ ಇವರಿಬ್ಬರ ನಡುವೆ ಪ್ರೀತಿ ಬೆಸೆಯುವ ಪ್ರೇಮದ ಕಥೆ.. ಮಲ್ನಾಡಿನ ಮುದ್ದು ಮನಸ್ಸಿನ ಬೆಡಗಿ, ಕೊಡಗಿನ ಕುವರಿ ಈ ಸ್ವಪ್ನ ಸುಂದರಿ, ಇವಳೇ ಈ ಕಥೆಯ ಕಥಾನಾಯಕಿ “ನಯನಶ್ರೀ “ ಈ ಭೂಮಿಯ ಮೇಲಿರುವ ಅದ್ಭುತಗಳಲ್ಲೊಂದಾದ ಆ ಮಲೆನಾಡಿನ ಹಸಿರ ಸಿರಿಯ ಸೊಬಗಿನಲ್ಲಿ ಚಂದದಿ ನಲಿದಾಡುತ ಬೆಳೆದಿರುವಳು ಈ […]
ಶ್ರೀಗಂಧದ ಕೊರಡು
ಕಥೆ ಶ್ರೀಗಂಧದ ಕೊರಡು ಸುಧಾ ಭಂಡಾರಿ ಪಾರು ಎಂದಿನಂತೆ ಊಟದ ನಂತರ ಒಬ್ಬಳೆ ಟಿವಿ ಹಚ್ಗಂಡು ಕೂತಿದ್ಲು.ತುಂಬಾ ದಿನಗಳ ನಂತ್ರ ರಾಜ್ ಕುಮಾರ ನ ‘ ಜೀವನ ಚೈತ್ರ’ ತಾಗಿತ್ತು.ಪಾರುಗೆ ರಾಜ್ ಕುಮಾರ ಸಿನಿಮಾ ಅಂದ್ರೆ ಪಂಚಪ್ರಾಣ. ಸಿನಿಮಾದಲ್ಲಿ ರಾಜ್‍ಕುಮಾರ್ ಹೆಂಡತಿ ಬಸುರಿ ಎಂದು ಗೊತ್ತಾದಾಗ ಅವಳನ್ನ ಎತ್ಗಂಡು ‘ ಲೇ ನೀನು ನನ್ ಮಗೂನ ತಾಯಿ ಆಗ್ತಿದ್ದೀಯಾ’ ಅಂತ ಮುದ್ದಾಡಿ ಒಂದು ಹಾಡು ಇರೋ ಸೀನ್ ಬರ್ತದೆ..ನೋಡ್ತಾ ನೋಡ್ತಾ ಪಾರೂನ ಅಂತರಂಗದ ಆಸೆ ಮತ್ತೆ ಧುಸ್ಸೆಂದು […]
ಕಥೆ ಋಣ ಎಂ. ಆರ್. ಅನಸೂಯ ಗಿರಿಜಮ್ಮ ತೋಟದಲ್ಲಿ ಮಾವಿನ ಫಸಲನ್ನು ನೋಡುತ್ತಾ “ಈ ಸತಿ ಮಾವಿನ ಫಸಲು ಚೆನ್ನಾಗಿ ಬಂದೈತೆ ಅಲ್ವೇನೋ ನಾಗ” “ಹೂನ್ರಮ್ಮ, ಈ ಸತಿ ಕಾಯಿ ಜಗ್ಗಿ ಹಿಡಿದೈತೆ. ಹಂಗೇನೆ ಹಲಸಿನ ಗಿಡಗಳು, ಹುಣಸೇಗಿಡ ಎಲ್ಲಾದ್ರೂಗನೂ ಚೆನ್ನಾಗಿ ಕಾಯಿ ಹಿಡಿದೈತೆ “ ತೋಟದ ಗೇಟ್ ಬಳಿ ಮೋಟರ್ ಬೈಕ್ ನ ಹಾರ್ನ್ ಸೌಂಡ್ ಕೇಳಿದ ಇಬ್ಬರೂ ಆ ಕಡೆ ನೋಡಿದರೆ ರಾಜಣ್ಣ ಕೈಯಲ್ಲಿ ಕಾಫಿ ಪ್ಲಾಸ್ಕ್ ಹಾಗೂ ಒಂದು ಸಣ್ಣ ಬ್ಯಾಗ್ ನ್ನು […]
ದುರಾಸೆ ಹಿಂದೆ ದುಃಖ
ಕಥೆ ದುರಾಸೆ ಹಿಂದೆ ದುಃಖ ಲಕ್ಷ್ಮೀದೇವಿ ಪತ್ತಾರ ಮಂಗಲಾ, ಸುಮಾ ನೆರೆಹೊರೆಯವರು.ಸಾಯಂಕಾಲದ ಹೊತ್ತಾದರೆ ಸಾಕು ಎದುರು ಮನೆ ಸುಮಾ,ಮಂಗಲಾಳ ಮನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕೂಡುವುದು ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ.ಹೀಗೆ ಸಾಯಂಕಾಲ ಎಂದಿನಂತೆ ಬಂದ ಸುಮಾಳನ್ನು ಕುರಿತು “ಏನೇ ಸುಮಾ ನಿನ್ನೆ ಎಲ್ಲಿಗೋ ಹೋದಂಗಿತ್ತು ಎಲ್ಲಿಗೆ ಹೋಗಿದ್ದೆ” ಕೇಳಿದಳು ಮಂಗಲಾ. “ಏನು ಕೇಳ್ತೀಯಾ ಮಂಗಲಾ ಹಂಪೆ ಉತ್ಸವದ ಅಂದ-ಚಂದ. ನೋಡಲು ಎರಡು ಕಣ್ಣು ಸಾಲೋದಿಲ್ಲ. ಅಬ್ಬಾ ಒಂದೊಂದು ಕಡೆ ಒಂದೊಂದು ಕಾರ್ಯಕ್ರಮ. […]
ಸಂದಣಿ
ವಿಶೇಷ ಕಥೆ ಸಂದಣಿ ಅಶ್ವಥ್ ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ […]
ಯಾರು ಹೊಣೆ ?
ಕಥೆ ಯಾರು ಹೊಣೆ ? ಎಂ.ಆರ್.ಅನಸೂಯ ಅಮ್ಮಾ ,ಅಮ್ಮಾ’ ಎಂದು ಚಂದ್ರಮ್ಮ ಬಾಗಿಲು ತಟ್ಟುತ್ತಾ ಕೂಗಿದಂತಾಯಿತು . ಟಿ.ವಿ ನೋಡುತ್ತ ಕೂತಿದ್ದ ಸುಮಿತ್ರ ಗಡಿಯಾರದ ಕಡೆ ನೋಡಿದಳು. ಆಗಲೇ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಈಗ್ಯಾಕೆ ಬಂದಳಪ್ಪಾ ಎಂದುಕೊಳ್ಳುತ್ತಾ ಸುಮಿತ್ರ ಬಾಗಿಲು ತೆಗೆದು “ಏನು ಚಂದ್ರಮ್ಮ ಇಷ್ಟೊತ್ನಲ್ಲಿ ಯಾಕೆ ಬಂದೆ’ ಎಂದು ಬಾಗಿಲತ್ರನೇ ನಿಂತು ಕೇಳಿದಳು. “ಅಮ್ಮಾ, ನಡಿರಮ್ಮ ಒಳಗೆ ಸ್ವಲ್ಪ ಮಾತಾಡ್ಬೇಕು”ಎನ್ನುತ್ತ ಚಂದ್ರಮ್ಮ ಒಳಗೆ ಬಂದು ಕುಳಿತಳು. ಸುಮಿತ್ರ ಸೋಫದ ಮೇಲೆ ಕುಳಿತು”ಏನ್ಸಮಾಚಾರ ಚಂದ್ರಮ್ಮ” ಎಂದರು “ನೋಡ್ರಮ್ಮ […]
ಹೆಣ್ಣು
ಕಥೆ ಹೆಣ್ಣು ಸಹನಾ ಪ್ರಸಾದ್ ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. “ ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು […]
ಹೇಮಾ
ಕಥೆ ಹೇಮಾ ಎಂ.ಆರ್.ಅನಸೂಯ ವಿಜಯಾ ಸಂಜೆ ಕಾಫಿ ಕುಡಿದು ಕೂತಿದ್ದಾಗ ಪಕ್ಕದಲ್ಲೇ ಇದ್ದ ಮೊಬೈಲ್ ರಿಂಗಣಿಸಿತು. ನೋಡಿದರೆ ಹೇಮಾ ! ” ನಮಸ್ತೆ ಮೇಡಂ “ ಹೇಮಾ, ಆರಾಮಾಗಿದೀಯಾ , ಹೇಗಿದಾನಮ್ಮ ನಿನ್ನ ಮಗ ? ಚೆನ್ನಾಗಿದ್ದಾನೆ ಮಿಸ್. ಮಿಸ್ ಮುಂದಿನ ಭಾನುವಾರ ನಾಮಕರಣ ಶಾಸ್ತ್ರವಿದೆ ಖಂಡಿತ ಬರಬೇಕು ಮೇಡಂ ಹೌದಾ ಎಷ್ಟು ತಿಂಗಳು ಮಗುವಿಗೆ ಐದು ತಿಂಗಳು ಮಿಸ್ ಹೇಮಾ , ನೀನು ಊರಿಗೆ ಬಂದಾಗ ತಿಳಿಸು. ಪಾಪುನ ನೋಡಲು ಬರುತ್ತೇನೆ. ಪಾಪುಗೆ ಏಳು ತಿಂಗಳಾದಾಗ […]
ಸಹನಾರವರ ನ್ಯಾನೊ ಕಥೆಗಳು
ಸಹನಾರವರ ನ್ಯಾನೊ ಕಥೆಗಳು ಸಹನಾ ಪ್ರಸಾದ್ ಆಡಲಾಗದ ಮಾತು “ಅಲ್ಲಕಣೆ, ಏನಾಗಿದೆ ನಿನಗೆ? ಮಾತಿಲ್ಲ, ಮೆಸೇಜು ಇಲ್ಲ. ಎಲ್ಲಿ ಅಡಗಿದ್ಯಾ?”ಅವಳಿಂದ ಬಂದ ೫ನೆ ಸಂದೇಶಕ್ಕೆ ಇಷ್ಟವಿಲ್ಲದೆ ಇದ್ರೂಪ್ರತಿಕ್ರಿಯಿಸಿದೆ. “ಏನಿಲ್ಲ, ಸ್ವಲ್ಪ ಹುಷಾರಿಲ್ಲ, ಸ್ವಲ್ಪ ದಿನ ಬಿಟ್ಟುಸಿಗ್ತೀನಿ” ಟೈಪಿಸಿದವಳಿಗೆ “ಹೋದ ತಿಂಗಳು ನೀ ಮಾಡಿದ ಮಿತ್ರದ್ರೋಹ ಮನಸ್ಸನ್ನು ಕೊರೆಯುತ್ತ ಇದೆ. ಅದರ ಹಿಂಸೆಯಿಂದ ಇನ್ನೂ ಹೊರಬಂದಿಲ್ಲ. ಯಾಕೆ ಹೀಗೆ ಮಾಡಿದೆ? ಮೊದಲು ಹೇಳು!” ಎನ್ನುವ ಮಾತುಗಳು ಮನದಲ್ಲೇ ಉಳಿದವು. ಸೊಪ್ಪಿನವಳು “ಅವಳು ಯಾವಾಗ್ಲೂ ಜಾಸ್ತಿನೇ ಹೇಳೋದು. ನಿನ್ನ ಬುದ್ದಿ […]