ಕಥೆ
ಪಾರಿವಾಳ ರಾಣಿ
ಹರೀಶ್ ಗೌಡ
ಒಂದು ಪ್ರೇಮ ಕಥೆ
ಕ್ರಿ ಶ ಮತ್ತು ಕ್ರಿ ಪೂ ದಲ್ಲಿ ಹಿಂದೆ ಜಗತ್ತು ಹೇಗಿತ್ತು? ಸ್ವಚ್ಚಂದ ಜಗತ್ತು ಪ್ರಕೃತಿಯ ಮಡಿಲಿನಲ್ಲಿ ಸರ್ವರು ಸಮಾನರೆಂಬ ಭಾವನೆ ಇದ್ದಂತ ಕಾಲ. ಮತ್ತು ಜಾತಿ ವರ್ಣ ಇದರ ತಕರಾರು ಇಂದಿನದಲ್ಲ ಹಿಂದಿನಿಂದಲೂ ಇದೆ ಅದೆಲ್ಲ ಬಿಡಿ ನಮ್ಮ ಕಥೆ ಶುರು ಮಾಡೊಣ ಓದೊಕೆ ನೀವ್ ರೇಡಿ ಅಲ್ವ ಮತ್ತೆ ಬನ್ನಿ ಯಾಕ್ ತಡ.
ಸುತ್ತಲೂ ಬೆಟ್ಟ ಗುಡ್ಡಗಳು ಕಾಡು ನದಿಗಳ ಮಧ್ಯೆ ನೂರಾರು ಹಳ್ಳಿ ಸೇರಿದ ದೀನದತ್ತ ಎಂಬ ಮಹಾನ್ ಸಾಮ್ರಾಜ್ಯ ಸಕಲವೂ ಸರ್ವವೂ ಸಕಾಲಕ್ಕೆ ಸಿಗುವ ರಾಜ್ಯ ಅದು. ಅಲ್ಲಿ ದೀನದತ್ತ ಅರಳಿ ಮಹಾರಾಜ ಎಂಬ ದೊರೆ ಆಳುತ್ತಿದ್ದ ಮೊದಲ ಹೆಂಡತಿ ಮದುವೆಯ ಹೊಸದರಲ್ಲಿ ಅಕಾಲಿಕ ಮರಣದಿಂದ ರಾಜ ಎರಡನೆ ಮದುವೆ ಆದ ನಂತರ ಬಹುಕಾಲ ಕಾದರು ಮಕ್ಕಳಾಗಲಿಲ್ಲ ನಂತರ ಮೂರನೆಯ ಮದುವೆಯ ತೀರ್ಮಾನ ಮಾಡಿದ ಪಕ್ಕದ ರಾಜ್ಯದ ರಾಜಕುಮಾರಿ ಸುಗಂದಿಯನ್ನ ಅಪಹರಿಸಿ ಮದುವೆ ಆದ ಮಹಾನ್ ಪರಾಕ್ರಮಿಯಾಗಿದ್ದ ಅರಳಿರಾಜನನ್ನ ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಇದನ್ನು ತಿಳಿದಿದ್ದ ಪಕ್ಕದ ರಾಜ ತನ್ನ ಮಗಳ ಅಪಹರಣವನ್ನ ವಿರೋದಿಸದೆ ಚಾಣಕ್ಷತನದಿಂದ ಬಂಧವನ್ನ ಬೆಳಿಸಿದ
ವರ್ಷ ತುಂಬುವುದರೊಳಗೆ ದೀನದತ್ತ ಸಾಮ್ರಾಜ್ಯದಲ್ಲಿ ಒಂದು ಕಳೆ ಬಂದಂತ್ತಾಗಿತ್ತು ಮಹಾರಾಣಿ ಸುಗಂದಿ ಗರ್ಭವತಿಯಾದ ಸುದ್ದಿ ನಗರದೆಲ್ಲೆಡೆ ಹಬ್ಬಿತ್ತು. ಮಹಾರಾಜ ಅರಳಿರಾಜನಿಗಂತು ಬಹುಕಾಲದ ಕನಸು ನೆರವೇರುವ ಕಾಲ ಕಣ್ಮುಂದೆ ಬಂದು ನಿಂತಂತೆ ಭಾಸವಾಗುತ್ತಿತ್ತು.
ನವಮಾಸ ತುಂಬಿ ಪ್ರಸವದ ದಿನ ಬಂದೆ ಬಿಟ್ತು ಇಡಿ ರಾಜ್ಯದಲ್ಲಿ ಕೂತುಹಲ ಆತಂಕ ಅಹಮನೆಯ ತುಂಬ ವೈದಿಕ ಮಂದಿಗಳು ಸೂಲಗಿತ್ತಿಯರು ಮಹಾರಾಣಿಯ ಹೆರಿಗೆಯ ಜವಬ್ದಾರಿ ವಹಿಸಿಕೊಂಡಿದ್ದರೂ. ಸಕಲ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರತೊಡಗಿದವು. ಮಹಾರಾಜನಿಗೊಂದು ವರದಿ ತಲುಪಿತ್ತು ಗರ್ಭದಲ್ಲಿ ಮಗು ಅಡ್ಡಲಾಗಿದೆ ಹೆರಿಗೆ ಕಷ್ಠವಾಗುತ್ತಿದೆ ಎಂಬುದು. ಸುದ್ದಿ ಕೇಳಿ ಅರಳಿರಾಜನಿಗೆ ಭಯ ಮತ್ತು ಆತಂಕ ಕಳೆಗಟ್ಟಿತ್ತು. ಸಮಯಕಳೆದಂತೆ ಕೊಠಡಿಯ ಒಳಗಿಂದ ಮಗು ಅಳುವ ನಾದ ಕೇಳಿದೊಡನೆ ರಾಜನ ಮನದಲ್ಲಿ ಆನಂದ ಇಡೀ ರಾಜ್ಯವೇ ಕುಣಿದು ಕುಪ್ಪಳಿಸಿತ್ತು
ರಾಜ ಬಲು ಆನಂದದಿಂದ ರಾಣಿಯ ಬಳಿ ಓಡಿ ಬಂದು ನೋಡ್ತಾನೆ ಮಗು ಕೈಕಾಲು ಆಡಿಸುತ್ತಾ ಮಲಗಿಸಿದ್ದಾರೆ ಸೂಲಗಿತ್ತಿಯರು ಮಹಾರಾಜ ನಿಮಗೆ ಹೆಣ್ಣುಮಗು ಜನನವಾಗಿದೆ ರಾಜನಿಗೆ ಬಹುಕಾಲ ಮಕ್ಕಳಿಲ್ಲದ ನೋವಿನಲ್ಲಿದ್ದವನಿಗೆ ಗಂಡು ಮಗುವಾದರೇನು ಹೆಣ್ಣಾದರೇನು ಒಟ್ಟಿನಲ್ಲಿ ಆನಂದವಾಗಿತ್ತು ಜೊತೆಗೆ ಮತ್ತೊಂದು ಸುದ್ದಿ ಹೃದಯ ಚೂರು ಮಾಡಿತ್ತು ಪ್ರಸವದ ಸಮದಲ್ಲಿ ಆದ ಅತಿಯಾದ ವೇದನೆ ಮತ್ತು ಅಧಿಕ ರಕ್ತಸ್ರಾವದಿಂದ ಮಹಾರಾಣಿ ಸುಂಗಧಿ ಇಹಲೋಕ ತೊರೆದಿದ್ದಳು. ಅಕ್ಷರಃಸಹಾ ರಾಜ ಕುಸಿದು ಹೋಗಿದ್ದ ಆಸೆಯಂತೆ ಮಗು ದೊರೆತ್ತಿತ್ತು ಆದರೆ ಮಡದಿ ದೂರವಾಗಿದ್ದಳು ನೋವಿನ ನಡುವೆ ರಾಜನ ಮುಂದಿನ ದಾರಿ ಎರಡನೇ ಹೆಂಡತಿಯ ಆಶ್ರಯದಲ್ಲಿ ಈ ಮಗಳನ್ನ ಬೆಳೆಸಬೇಕಾಗಿತ್ತು.
ಮಲತಾಯಿಯಾದರೂ ಮಕ್ಕಳಿಲ್ಲದೆ ಬಂಜೆಯಾಗಿದ್ದ ಮಹಾರಾಜನ ಎರಡನೇ ಹೆಂಡತಿ ಆ ಮುದ್ದು ಮಗಳನ್ನ ಸಾಕಿ ಬೆಳೆಸಿ ತಾಯಿಯ ಸ್ಥಾನ ತುಂಬಿದಳು ಮಗಳು ಸುಂದರಳೂ ದೃಢಕಾಯಳೂ ಆಗಿ ಬೆಳೆಯತೊಡಗಿದಳು. ತನ್ನ ಮಗಳಿಗೆ ಯಾವ ಕುಂದು ಕೊರತೆಗಳು ಬರದಂತೆ ಅರಳಿ ಮಹಾರಾಜ ಸರ್ವವೂ ಅರಮನೆಯಲ್ಲಿ ಮಗಳಿಗೆ ಸಿಗುವಂತೆ ಆದೇಶ ಹೊರಡಿಸಿದ. ಆಡುವ ಆಟಿಕೆ ಇಂದ ಹಿಡಿದು ಗೆಳತಿಯರು ಶಿಕ್ಷಣವೂ ಎಲ್ಲ ಅರಮನೆಯಲ್ಲಿ ಸಿಗತೊಡಗಿತು ಮುದ್ದಾದ ಮಗಳಿಗೆ ಶುಭ ದಿನವನ್ನ ರಾಜ್ಯ ಜೋತಿಷಿಗಳ ಸಮಾಗಮದಲ್ಲಿ ನಾಮಕರಣ ಸಮಾರಂಭ ನೇರವೇರಿಸಿ ಯುವರಾಣಿ ವಸುಂದರಾ ಎಂಬ ಹೆಸರಿಟ್ಟರು.
ಹೆಸರಿಗೆ ತಕ್ಕಂತೆ ಹರ್ಷಚಿತ್ತಳು ,ಗಮನ ಸೆಳೆಯ ಮೊಗವು,ಉದಾರತೆಯು ಆಕೆಯಲ್ಲಿ ತುಂಬಿತ್ತು. ಗಂಡು ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣವೂ ಸೇರಿದಂತೆ ಸಕಲ ವಿಧ್ಯೆಗಳನ್ನ ಅರಳಿರಾಜ ತನ್ನ ಮಗಳಿಗೆ ಕಲಿಸತೊಡಗಿದ ಬಾಲ್ಯದಲ್ಲಿಯೇ ವಸುಂದರಾ ಗಂಭೀರವಾಗಿ ಸಮರ್ಥವಾಗಿ ವಿಧ್ಯೆಗಳನ್ನ ಕಲಿಯತೊಡಗಿದಳು. ಮಹಾ ಬುದ್ದಿವಂತೆಯಾದ ರಾಜಕುಮಾರಿ ವಸುಂದರಾ ಬಾಲ್ಯದಿಂದಲೇ ರಾಜ್ಯದ ನಾಗರೀಕರ ಕಷ್ಠಗಳನ್ನ ಅರಿಯತೊಡಗಿದಳು ಜಾತಿ ಬೇದವನ್ನ ಮಾಡಬಾರದು ಸರ್ವರೂ ಸಮಾನರು ನಾವೆಲ್ಲ ಮಾನವರೂ ಎಂಬ ಚಿತ್ತದಿಂದ ಆಡುತ್ತಾ ಕಲಿಯುತ್ತಾ ಬೆಳೆಯತೊಡಗಿದಳು. ಆದರೆ ಇಲ್ಲಿ ಇನ್ನೊಂದು ವಿಚಾರ ಹೇಳಲು ಮರೆತಿದ್ದೆ ಅರಳಿ ರಾಜ ತುಂಬಾ ಶಕ್ತಿಶಾಲಿ ರಾಜನೂ ಹೌದು ಅದರಂತೆ ಆತನಲ್ಲಿ ಜಾತಿಯತೇ ಮತ್ತು ಮೇಲು ಕೀಳು ಭಾವನೆ ಇತ್ತು ಅವರವರ ಜಾತಿ ಧರ್ಮಕ್ಕೆ ಅನುಸಾರವಾಗಿ ಬಾಳಬೇಕು,ದುಡಿಯಬೇಕು ಸದಾ ಉಳ್ಳವರ ಮುಂದೆ ತಲೆಬಾಗಿ ನಿಲ್ಲಬೇಕು ಇಂತಹ ಮನಸು ಅವನದಾಗಿತ್ತು ಆದರೂ ಪ್ರಜೆಗಳಿಗೆ ಸಲ್ಲಬೇಕಾದ ಸವಲತ್ತುಗಳನ್ನ ನೀಡಿ ಸಲಹುತ್ತಿದ್ದ.
ವಸುಂದರಾ ಒಂದು ತರಹದಲಿ ಎಲ್ಲವೂ ದೊರೆತರೂ ಒಂಟಿತನ ಕಾಡತೊಡಗಿತು ಕಾರಣ ತಂದೆ ಅರಳಿರಾಜನ ಅತಿಯಾದ ಪ್ರೀತಿ ಅವಳನ್ನ ಅರಮನೆಯ ಪಂಜರದ ಗಿಳಿಯಂತೆ ಮಾಡಿತ್ತು. ಬೇಕಿದ್ದು ಬೇಡದ್ದು ಎಲ್ಲವನ್ನ ದೊರಕುವಂತೆ ಮಾಡಿದ್ದ ರಾಜ ತನ್ನ ಮಗಳನ್ನ ಅರಮನೆ ಇಂದ ಆಚೆ ಕಳಿಸುತ್ತಿರಲಿಲ್ಲ ಮಗಳ ಮೇಲಿನ ಅತಿಯಾದ ಕಾಳಜಿ ಸಹಾ ಇದಾಗಿತ್ತು ಮಗಳಿಗೆ ಯಾವ ತೊಂದರೆಯೂ ಬಾರದಿರಲಿ ಅವಳಿಗೆ ಯಾರಿಂದಲೂ ಯಾವ ಸನ್ನಿವೇಶದಲ್ಲಿಯೂ ಕೆಡುಕು ಬರದಿರಲಿ ಎಂಬ ಅತಿಯಾದ ಕಾಳಜಿ ವಸುಂದರಾ ಬಾಳಲ್ಲಿ ಒಂಟಿತನ ಮೂಡಿಸಿತ್ತು.
ಬೆಳೆದು ದೊಡ್ಡವಳಾದ ವಸುಂದರಾ ಪ್ರತಿ ನಿತ್ಯ ಅರಮನೆ ಮೊಗಸಾಲೆಯ ಕಿಟಕಿಯಲಿ ಕುಳಿತು ಹೊರಜಗತ್ತನ್ನ ನೋಡುತ್ತ ಕುಳಿತುಕೊಳ್ಳುತ್ತಾಳೆ ದಿನ ಕಳೆದಂತೆ ಅರಮನೆಯ ಸಖಿಯರು ಪರಿಚಾಲಕರು ಅಂಗರಕ್ಷಕರು ಬೆಸರ ಅನಿಸತೊಡಗಿದೆ ದಿನ ನೋಡಿದ ಮುಖಗಳೆ ಇವೆಲ್ಲ ಹೊಸ ಜಗತ್ತು ಬೇಕು ಹೊರಗೆ ಸುತ್ತಾಡಬೇಕು ಎಂಬ ಆಸೆ ಮನಸಿನಲ್ಲಿ ಕಾಡತೊಡಗಿದೆ ತಂದೆಯ ಬಳಿ ಹಲವು ಸಲ ತಿಳಿಸಿದರೂ ಅರಳಿರಾಜ ನಿರಾಕರಿಸಿಬಿಟ್ಟಿದ್ದ.
ಮೊಗಸಾಲೆಯ ಕಿಟಕಿಯಲ್ಲಿ ಏನನ್ನೊ ನೋಡುತ್ತಾ ಕುಳಿತಿದ್ದ ವಸುಂದರಾ ಹತ್ತಿರ ಜೊರಾಗಿ ಬಂದ ಪಾರಿವಾಳ ಕಿಟಕಿಗೆ ಬಡಿದು ಕೆಳಗೆ ಬಿದ್ದು ಬಿಟ್ಟಿತು ತಕ್ಷಣ ಗಮನಿಸಿದ ವಸುಂದರಾ ಭಟರಿಗೆ ಅದನ್ನು ಹಿಡಿದು ತರಲು ಹೇಳಿದರು ಅವಳ ಆಜ್ಞೆಯಂತೆ ತಂದು ಅವಳ ಕೈಗೆ ಇರಿಸಿದಳು ಹದ್ದಿನಿಂದ ತಪ್ಪಿಸಿಕೊಳ್ಳಲು ವೇಗವಾಗಿ ಹಾರಿಬಂದು ಅಚಾನಕ್ಕಾಗಿ ಕಿಟಕಿಗೆ ಬಡಿದಿದ್ದ ಪಾರಿವಾಳ ರೆಕ್ಕೆ ಮತ್ತು ಕಾಲಿಗೆ ಪೆಟ್ಟು ತಿಂದು ಹಾರದ ಸ್ತಿತಿಯಲ್ಲಿ ಇದ್ದದ್ದು ನೋಡಿ ರಾಜಕುಮಾರಿಗೆ ಮರುಕ ಹುಟ್ಟಿ ಬಂದಿತ್ತು ತಕ್ಷಣ ಅದರ ಉಪಚಾರವನ್ನ ಮಾಡಿ ಅದಕ್ಕೆ ಔಷದಿಗಳನ್ನ ಸಖಿಯರ ಮುಖಾಂತರ ತರಿಸಿ ಸಂತೈಸಿದಳು. ನೋವಿಗೆ ಮುಲಾಮು ತಾಗುತ್ತಿದ್ದಂತ್ತೆ ಪಾರಿವಾಳಕ್ಕೆ ಯಾರೋ ನನ್ನ ರಕ್ಷಿಸುತ್ತಿದ್ದಾರೆ ಎಂದು ಮನಸಿನಲ್ಲಿ ಅಂದುಕೊಳ್ಳುತ್ತಾ ಸುಮ್ಮನೆ ರಾಜಕುಮಾರಿಯ ಮಡಿಲಲ್ಲಿ ಕುಳಿತು ಬಿಟ್ಟಿತು.
ಹೀಗೆ ಸುಮಾರು ಐದಾರು ದಿನಗಳ ತನಕ ಅರಮನೆಯಲ್ಲಿ ವಸುಂದರಾ ಚಿಕಿತ್ಸೆ ನೀಡಿ ಪಾರಿವಾಳವನ್ನ ರಕ್ಷಿಸತೊಡಗಿದಳು. ಇನ್ನೆರಡು ದಿನ ಕಳೆವ ಒತ್ತಿಗೆ ನಿಧಾನವಾಗಿ ಹಾರಲು ಶುರುಮಾಡಿದ ಪಾರಿವಾಳವ ಕಂಡ ರಾಜಕುಮಾರಿಗೆ ಏನೋ ಒಂದು ಸಂತಸ ಹಾರುತ್ತಾ ಹಾರುತ್ತಾ ಅವಳಿಗೆ ಸಂತೋಷವ ನೀಡುವ ಪಾರಿವಾಳ ಅವಳಿಗೆ ಅರಿವಿಲ್ಲದೆ ಹೊಸ ಜೊತೆಗಾರ ಸ್ನೇಹಿತನಾಗಿ ಹಿಡಿಸಿತ್ತು. ನಂತರದ ದಿನಗಳಲ್ಲಿ ರಾಜಕುಮಾರಿಯ ಜೊತೆ ಅರಮನೆಯಲ್ಲಿಯೇ ಕಾಯಂ ನೆಲೆಸಿತು ಅಲ್ಲಿಯೇ ಹಾರುತ್ತ ಅವಳ ಬಳಿಯೇ ಕುಳಿತುಕೊಂಡು ಕಾಳುಗಳ ತಿನ್ನುತ್ತಾ ಹೊರಗೆ ಹಾರಿ ಮರಳಿ ಮತ್ತೆ ಇವಳ ಬಳಿಯೇ ಬರತೊಡಗಿತು ಪಾರಿವಾಳವು ಇವಳನ್ನ ತುಂಬಾ ಹಚ್ಚಿಕೊಂಡು ಬಿಟ್ಟಿತು.
ಅರಮನೆಯಲ್ಲಿ ಅಂದು ಬಣ್ಣಗಳ ಹಬ್ಬ ಸಖಿಯರ ಜೊತೆ ವಸುಂದರಾ ಬಣ್ಣಗಳಲ್ಲಿ ಬಣ್ಣವಾಗಿ ಪಾರಿವಾಳವನ್ನು ಬಣ್ಣಮಯವಾಗಿಸಿದ್ದಳು. ಸ್ವಲ್ಪ ಸಮಯದ ಬಳಿಕ ಪುರ್ ಎಂದು ಹೊರಗೆ ಹಾರಿದ ಪಾರಿವಾಳ ದೂರದ ಹೊಳೆಯ ದಡಕ್ಕೆ ಬಂದಿತ್ತು. ಬಟ್ಟೆ ತೊಳೆಯುತ್ತಾ ಎಂದಿನಂತೆ ಕೆಲಸದಲ್ಲಿ ನಿರತನಾಗಿದ್ದ ವಿಜಯರಾಮನಿಗೆ ಆ ಬಣ್ಣ ಬಳಿದ ಪಾರಿವಾಳವ ಕಂಡು ಮರುಕ ಬಂದಿತ್ತು ಯಾರೋ ಇದರ ಮೈಗೆಲ್ಲ ಹೀಗೆ ಹಿಂಸಿಸಿ ಬಣ್ಣ ಬಳಿದಿದ್ದಾರೆ ಎಂದು ಹಿಡಿದು ನಿಧಾನಕ್ಕೆ ಮೈಸವರಿ ನೀರಿನಿಂದ ತೊಳೆದು ಶ್ವೇತವರ್ಣಕ್ಕೆ ಬರಿಸಿದ್ದ. ಬಣ್ಣದ ಕಿರಿ ಕಿರಿ ಇಂದ ನೀರಿನಲ್ಲಿ ಸ್ನಾನಮಾಡಲು ಬಂದಿದ್ದ ತನ್ನ ಮೈತೊಳೆದ ರೀತಿ ನೋಡಿ ಪಾರಿವಾಳಕ್ಕೂ ಒಂದು ಬಗೆಯ ಹಿತವನಿಸಿತ್ತು. ಕೈಯಿಂದ ಹಠಾತ್ತಾನೆ ಹಾರಿ ಮತ್ತೆ ಅರಮನೆಗೆ ಮರಳಿ ಬಂದು ರಾಜಕುಮಾರಿಯ ಕೊಠಡಿ ಸೇರಿ ಕುಳಿತುಬಿಟ್ಟಿತು. ಮಜ್ಜನ ಮಗಿಸಿ ಬಂದ ವಸುಂದರಾ ಪಾರಿವಾಳವ ಕಂಡು ಆಶ್ಚರವಾಯಿತು ಅರೇ ಯಾರಿದರ ಮೈ ತೊಳೆದವರು ತಕ್ಷಣವೇ ಸಖಿಯರ ಕೂಗಿದಳು ಯಾರಲ್ಲು ಉತ್ತರವಿಲ್ಲ ಎಲ್ಲರದೂ ಒಂದೆ ಮಾತು ಗೊತ್ತಿಲ್ಲ ರಾಜಕುಮಾರಿ ನಾವು ನಿಮ್ಮೊಡನೆ ಇದ್ದೆವಲ್ಲ. ಅವಳಲ್ಲಿ ಉತ್ತರ ಸಿಗದಂತೆ ಈ ಪ್ರೆಶ್ನೆ ಉಳಿದು ಬಿಟ್ಟಿತು.
ಜನರ ಬಾಯಿಂದ ಬಾಯಿಗೆ ರಾಜಕುಮಾರಿ ಮತ್ತು ಪಾರಿವಾಳದ ಗೆಳೆತನ ಅಬ್ಬತೊಡಗಿತು. ವಸುಂದರಾಳಷ್ಟೆ ಅರಮನೆಯಲ್ಲಿ ಪಾರಿವಾಳಕ್ಕೂ ಗೌರವ ಸಿಗತೊಡಗಿತು ಅವಳ ಅನುಮತಿ ಇಲ್ಲದೆ ಯಾರು ಅದನ್ನ ಮುಟ್ಟುವಂತೆ ಇರಲಿಲ್ಲ ಅದಕ್ಕೂ ಅಷ್ಟೆ ರಾಜಕುಮಾರಿಯ ಬಿಟ್ಟು ಮತ್ತೊಬ್ಬರ ಬಳಿ ಇರಲು ಇಷ್ಟವಿರಲಿಲ್ಲ. ವಸುಂದರಾ ಕೇಶ ಕಟ್ಟುವಾಗ ಪಕ್ಕದಲ್ಲೆ ಇದ್ದ ಪಾರಿವಾಳದ ಹಣೆಗೆ ಬೊಟ್ಟನ್ನ ಇಟ್ಟು ಕ್ಷಣಕಾಲ ಮುದ್ದಾಡಿದಳು ನಂತರ ಹೊರಗೆ ಹಾರಿದ ಆ ಹಕ್ಕಿ ನೇರವಾಗಿ ನದಿಯ ದಡದಲ್ಲಿ ಇಳಿಯಿತು ನೀರು ಕುಡಿದು ದಡದಲ್ಲಿ ಏನನ್ನೋ ತಿನ್ನುತ್ತಿದ್ದದ್ದನ್ನು ಗಮನಿಸಿದ ವಿಜಯರಾಮ ಇದು ಅಂದು ಬಂದ ಬಣ್ಣ ಬಳಿದ ಪಾರಿವಾಳ ಮತ್ತೆ ಯಾರೋ ಇದಕ್ಕೆ ಬೊಟ್ಟು ಇಟ್ಟಿದ್ದಾರೆ ಅನ್ನುತ್ತಾ ನೇರವಾಗಿ ಅದರ ಬಳಿಗೆ ಬಂದು ಕೈಯಲ್ಲಿ ಹಿಡಿದು ತೊಳೆದು ಬಿಟ್ಟ ಅಂದು ನನ್ನ ಮೈತೊಳೆದವನು ಇವನೆ ಎಂದು ಅರಿತಿದ್ದ ಪಾರಿವಾಳ ಭಯವಿಲ್ಲದೆ ಆತನ ಕೈ ಸೇರಿತ್ತು. ಈತನೂ ರಾಜಕುಮಾರಿ ತರಹ ಒಳ್ಳೆಯವನೆ ತೊಂದರೆ ಕೊಡದವನೆಂದು ಅದಕ್ಕೆ ನಂಬಿಕೆ ಬರಲಾರಂಭಿಸಿತು ಮತ್ತೆ ಅಂದಿನಂತೆ ಕಾ ಕೊಸರಿಕೊಂಡು ಅರಮನೆಗೆ ಹಾರಿ ಬಂದು ಬಿಟ್ಟಿತು.
ಗೆಳೆಯ ಪಾರಿವಾಳ ಬಂದದ್ದು ಗಮನಿಸಿದ ವಸುಂದರಾ ಹಿಡಿದು ಮುದ್ದಾಡಲು ನೋಡಿದಾಗ ಹಣೆಯಲ್ಲಿ ಅವಳು ಇಟ್ಟ ಬೊಟ್ಟಿಲ್ಲ ಮತ್ತೆ ಆಶ್ಚರ್ಯ ಯಾರು ಇದರ ಹಣೆಯನ್ನು ತೊಳೆದು ಕಳಿಸಿದ್ದಾರೆ? ಕೂತುಹಲವೂ ಬರತೊಡಗಿತು ಮರುದಿನ ಮತ್ತೆ ಹಣೆಗೆ ಬೊಟ್ಟು ಇಟ್ಟು ಬಿಟ್ಟಳು ಕೆಲ ಸಮಯದ ಬಳಿದ ಹೊರಗೆ ಹಾರಿಹೋಯ್ತು ಮರಳಿ ಬಂದಾಗ ಶುಭ್ರವಾಗಿತ್ತು ಅವಳಿಗೆ ಇನ್ನಷ್ಟು ಕೂತುಹಲ ಬರಲಾರಂಭಿಸಿತು ಮತ್ತೆ ಮತ್ತೆ ಬಣ್ಣ ಬಳಿದಂತೆ ಹಾರಿ ಹೋಗುತ್ತಿತ್ತು ಮರಳಿ ಬಂದಾಗ ಮೈ ತೊಳೆದು ಕಳಿಸಿರುವುದು ಕಾಣುತ್ತಿತ್ತು. ಅರಮನೆಯ ಪಾಲಕರನ್ನ ಕರೆಸಿ ಇದರ ಗುಟ್ಟು ತಿಳಿಯಬೇಕು ಈ ಪಾರಿವಾಳ ಎಲ್ಲಿ ಹೋಗಿಬರುತ್ತದೆ ಎಂಬುದನ್ನು ಪತ್ತೆ ಮಾಡಲು ಹೇಳಿದಳು ವಸುಂದರಾಳ ಆಜ್ಞೆಯಂತೆ ಪಾರಿವಾಳದ ಜಾಡು ಹಿಡಿದ ಅರಮನೆ ಪಾಲಕರು ನದಿಯ ದಂಡೆಯಲ್ಲಿ ವಿಜಯರಾಮನ ಕಾಯಲ್ಲಿ ಪಾರಿವಾಳ ಇದ್ದದ್ದು ಗಮನಿಸಿದರು. ಅಲ್ಲಿಂದ ಅರಮನೆಗೆ ಬಂದ ಪಾಲಕರು ರಾಜಕುಮಾರಿಯ ಮುಂದೆ ನೆಡೆದ ಪ್ರಸಂಗವನ್ನ ತಿಳಿಸಿದರು ಕೂಡಲೆ ಆ ವ್ಯಕ್ತಿಯನ್ನ ನನ್ನೆದುರು ಕರೆತನ್ನಿ ಊ ಹೊರಡಿ ಎಂದ ವಸುಂದರಾ ಮಾತಿಗೆ ವಿಜಯರಾಮನ ಬಳಿ ಬಂದು ಅಯ್ಯ ಅಗಸನೇ ನೀನು ಕೂಡಲೆ ರಾಜಕುಮಾರಿಯನ್ನ ಕಾಣಬೇಕಿದೆ ಇದು ಅವರ ಆದೇಶ ಎಂದರೂ
ನಾನು ಅರಮನೆಯ ರಾಜಕುಮಾರಿಯನ್ನ ಕಾಣಬೇಕೆ? ಯಾಕೆ ರಾಜಭಟರೇ ಎಂದಾಗ ಪಾರಿವಾಳದ ವಿಷಯ ತಿಳಿಸಿದರೂ ಕೂಡಲೆ ವಿಜಯರಾಮ ಅರಮನೆ ಪಾಲಕರ ಜೊತೆ ವಸುಂದರಾ ಮುಂದೆ ಬಂತು ನಿಂತ. ಪ್ರತಿ ನಿತ್ಯ ಬಿಸಿಲು ಮಳೆ ಎನ್ನದೆ ಬಟ್ಟೆಗಳನ್ನ ಒಗೆದು ಒಗೆದು ಮೈ ಬೆವರು ಕಾಲಿಯಾಗಿ ಮೈ ಕೈ ಕುಸ್ತಿಪಟುವಿನಂತೆ ದೃಢಕಾಯನಾಗಿದ್ದ ಇವನನ್ನ ಕಂಡ ವಸುಂದರಾ ಮನದಲ್ಲೆ ಆಹಾ ಅದೆಂತ ಯುವಕನೀತ ಸುಂದರನೂ ಮನಸೆಳೆವ ಮೈಕಟ್ಟು ಬೆಳೆಸಿರುವ ಯಾರು ಈತ ನನ್ನ ಪಾರಿವಾಳವನ್ನು ಏಕೆ ಪ್ರತಿ ನಿತ್ಯ ಮಜ್ಜನ ಮಾಡಿಸಿ ಕಳಿಸುತ್ತಾನೆ ಎನ್ನುತ್ತಾ ಆತನನ್ನ ಪ್ರೆಶ್ನಿಸಲು ಶುರುಮಾಡಿದಳು. ಯಾರು ನೀವು ಏಕೆ ಪಾರಿವಾಳಕ್ಕೆ ನಾನಿಟ್ಟ ಬೊಟ್ಟು ಬಣ್ಣವನ್ನ ತೊಳೆದು ಕಳಿಸುತ್ತಿರುವಿರಿ ಎಂದಳು ಅದಕ್ಕುತ್ತರಿಸಿದ ವಿಜಯರಾಮ ಯುವರಾಣಿ ನಮ್ಮಂತೆ ಅವುಗಳಿಗೂ ನೋವು ನಲಿವುಗಳಿರುತ್ತವೆ ಕೇವಲ ನಮ್ಮ ಸುಖಕ್ಕಾಗಿ ಸಂತೋಷಕ್ಕಾಗಿ ಅವುಗಳಿಗೆ ತೊಂದರೆ ಕೊಡುವುದು ತರವಲ್ಲ ಆದ ಕಾರಣ ಅದರ ಮೈಮೇಲಿದ್ದ ಬಣ್ಣವನ್ನು ತೊಳೆದೆ. ಇವನ ಮೂಖ ಜೀವಿಯ ಪ್ರೀತಿ ನೋಡಿ ವಸುಂದರಾಳಿಗೂ ಇವನು ನನ್ನಂತೆ ಜಗತ್ತಿನ ಎಲ್ಲರಲ್ಲೂ ಕಾಳಜಿಯ ಇರುವವಂತೆ ಕಾಣುತ್ತಿದ್ದಾನೆ ಅನ್ನಿಸಿತು. ನಿನ್ನ ಹೆಸರೇನು ಎಂದು ಕೇಳಲಾಗಿ ರಾಜಕುಮಾರಿ ನಾನು ವಿಜಯರಾಮನೆಂದು ನನ್ನ ವೃತ್ತಿ ರಾಜ್ಯದ ಜನರ ಕೊಳಕು ಬಟ್ಟೆ ತೊಳೆವ ಅಗಸ ಹಿಂದೆ ನಮ್ಮ ತಂದೆ ಅರಮನೆಯ ಬಟ್ಟೆಗಳನ್ನು ತೊಳೆಯುತ್ತಿದ್ದರೂ ಅವರ ಅಕಾಲಿಕ ಮರಣದಿಂದ ಆ ಕೆಲಸ ಈಗ ಮತ್ತೊಬ್ಬರೂ ಮಾಡುತ್ತಿದ್ದಾರೆ ನಾನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕೈ ಮುಗಿದು ನಿಂತ. ಇಲ್ಲ ವಿಜಯರಾಮ ನಿನ್ನಿಂದ ನಾನು ಮಾಡುತ್ತಿದ್ದ ಸಣ್ಣ ತಪ್ಪುಗಳು ನನಗೆ ಅರಿವಾಯಿತು ಎಂದು ಆತನನ್ನು ಈ ಕ್ಷಣದಿಂದ ನೀನು ನಿನ್ನ ತಂದೆಯಂತೆ ಅರಮನೆಯ ಬಟ್ಟೆಗಳ ತೊಳೆಯುವ ಕೆಲಸ ಮುಂದುವರೆಸು ತಂದೆಯ ಬಳಿ ನಾನು ಮಾತನಾಡುತ್ತೇನೆ ಎಂದು ಆತನನ್ನು ಕಳಿಸಿಬಿಟ್ಟಳು.
ಮಹಾರಾಜರು ಮಗಳ ಆಸೆಯಂತೆ ವಿಜಯರಾಮನನ್ನು ಅರಮನೆಯ ಬಟ್ಟೆ ತೊಳೆವ ಕೆಲಸಕ್ಕೆ ನೇಮಿಸಿದರು. ಪಾರಿವಾಳದ ಜೊತೆ ಸದಾಕಾಲ ಸಮಯ ಕಳೆಯುತ್ತಿದ್ದ ವಸುಂದರಾ ಜನಗಳ ಮಾತಿನಲ್ಲಿ ಪಾರಿವಾಳ ರಾಣಿ ಎಂದೆ ಹೆಸರುವಾಸಿಯಾದಳು. ಪ್ರತಿದಿನ ವಿಜಯರಾಮ ಅರಮನೆಗೆ ಬರುವುದು ಹೋಗುವುದು ಮಾಮೂಲಿಯಾಯಿತು ವಸುಂದರಾ ಗಮನಿಸುತ್ತಾ ಅವನ ಕೆಲಸದ ನಿಷ್ಠೆ ಅವಳಿಗೆ ಹಿಡಿಸಿತು.
ಅದೇನೋ ವಿಜಯರಾಮನ ಮೇಲೆ ಅವಳಿಗೆ ಅಪಾರ ಆಸಕ್ತಿ ತೊರತೊಡಗಿತು ಅವನ ಆ ಮೈಕಟ್ಟು ,ನಿಷ್ಠೆ ,ಪರಿಶ್ರಮ, ಕಾಳಜಿ ಅವಳನ್ನು ಕಾಡತೊಡಗಿತು. ಅರಮನೆಯಲ್ಲಿ ಅವನ ಓಡಾಟ ಕಂಡು ಪ್ರತಿ ದಿನ ಅವನ ಮೇಲೆ ಪ್ರೇಮ ಭಾವನೆ ಮೂಡತೊಡಗಿತು. ಆದರೆ ರಾಜಕುಮಾರಿ ಬಟ್ಟೆ ತೊಳೆವ ಅಗಸನನ್ನು ಪ್ರೇಮಿಸುವುದು ಅರಮನೆಯ ಸಂಪ್ರದಾಯಕ್ಕೆ ವಿರುದ್ದ ಕೆಲಸದವನಾಗಿರುವ ವಿಜಯರಾಮ ನನ್ನನ್ನು ಒಪ್ಪುವುದು ಸುಲಭದ ಮಾತುಕೂಡ ಅಲ್ಲ ಅನ್ನುವುದು ಅವಳಿಗೆ ತಿಳಿದಿತ್ತು ಆದರೂ ಅವನನ್ನು ನನ್ನವನನ್ನಾಗಿಸಿಕೊಳ್ಳಬೇಕು ಇವನ ಜೊತೆ ಬದುಕ ಬೇಕು ಸರ್ವರೂ ಸಮ ಎಂದು ತಿಳಿದಿರುವ ನನಗೆ ನನ್ನಂತೆ ಆತನೂ ಕೂಡ ಆದ್ದರಿಂದ ಈವನನ್ನು ನಾನು ಪಡೆಯಬೇಕೆಂಬ ಆಸೆ ಆದರೆ ಹೇಗೆ ಎಂಬುದು ತಿಳಿಯದಂತೆ ಆಗಿದೆ. ಕೊನೆಗೆ ಇವಳಿಗೆ ತಿಳಿದ ಉಪಾಯವೆಂದರೆ ಅವಳ ಬಳಿ ಇದ್ದ ಆ ಪಾರಿವಾಳ ಆದರೆ ಅದಕ್ಕೆ ಮಾತು ಬಾರದು ಹೇಳಿದ್ದು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲ ಏನು ಮಾಡಲಿ ಅನ್ನುತ್ತ ಒಂದು ಪ್ರೇಮ ನೀವೇದನೆ ಪತ್ರ ಬರೆದು ಪಾರಿವಾಳದ ಕಾಲಿಗೆ ಕಟ್ಟಿ ಮೈಗೆ ಬಣ್ಣ ಬಳಿದು ಬಿಟ್ಟಳು ಬಣ್ಣ ಬಳಿದರೆ ಅದು ನದಿಯ ಬಳಿಗೆ ಹೊಗುತ್ತದೆ ಅನ್ನುವುದು ಗೊತ್ತಿತ್ತು.
ಬಣ್ಣ ಬಳಿದ ಬಳಿಕ ನದಿಯ ದಂಡೆಗೆ ಹಾರಿಬಂದಿತ್ತು ವಿಜಯರಾಮನಿಗೆ ಆಶ್ಚರ್ಯವಾಗಿತ್ತು ಅರೇ ರಾಜಕುಮಾರಿ ಈ ರೀತಿಯ ತಪ್ಪು ಮಾಡುವುದಿಲ್ಲ ಎಂದೇಳಿ ಮತ್ತೇಕೆ ಬಣ್ಣ ಬಳಿದಿದ್ದಾರೆ ಎಂದು ಅದನ್ನ ಇಡಿದು ನೋಡಿದಾಗ ಕಾಲಿನಲ್ಲಿದ್ದ ಪತ್ರ ಕಾಣಿಸಿತ್ತು ತೆರೆದು ಓದುತ್ತಾನೆ.
ಪ್ರೀತಿಯ ವಿಜಯರಾಮ ನಾನು ವಸುಂದರಾ ನಿನಗಾಗಿ ಈ ಪತ್ರ ಬರೆಯುತ್ತಿದ್ದೇನೆ. ಮೊದಲ ಸಲ ನಿಮ್ಮನ್ನು ಕಂಡಾಗ ಅದೇನೋ ಒಂದು ಪ್ರೇಮ ಭಾವನೆ ಮೂಡಿತ್ತು ಆದರೆ ಅದು ಪ್ರೇಮವೇ ,ಸ್ನೇಹವೇ,ಕರುಣೆಯೇ,ಕನಿಕರವೇ ಎಂದು ತಿಳಿಯುವ ಹೊತ್ತಿಗೆ ನಾನು ನನ್ನ ಮನಸನ್ನು ನಿನಗೆ ಕೊಟ್ಟುಬಿಟ್ಟಿದ್ದೇನೆ. ನಿನ್ನ ಜಾತಿ,ಧರ್ಮ,ಸ್ಥಾನ ನನಗೆ ಮುಖ್ಯವಲ್ಲ ನಿನ್ನ ಮನಸು ನಿನ್ನ ನಡವಳಿಕೆ,ನಿನ್ನ ನಿಷ್ಠೆ ನನ್ನನ್ನು ಮತ್ತಷ್ಟು ಮೊಗದಷ್ಟು ಆಕರ್ಷಿಸಿದೆ. ಸದಾಕಾಲ ಒಂಟಿಯಾಗಿದ್ದ ನನಗೆ ಪಾರಿವಾಳ ಗೆಳೆಯನಾದ ಅದರಂತೆ ನೀನು ಒಂದು ರೀತಿ ಮಾನಸಿಕವಾಗಿ ಹತ್ತಿರವಾಗಿರುವೆ ನಿರಾಕರಿಸದೆ ಸಮ್ಮತಿಸು ಜೊತೆಬಾಳುವ ಘಳಿಗೆಗೆ ಮುನ್ನುಡಿಯಾಗು ನಿನ್ನ ಉತ್ತಕ್ಕಾಗಿ ನಿನ್ನ ಪತ್ರದ ನೀರಿಕ್ಷೆಯಲ್ಲಿ ನಿನ್ನ ವಸುಂದರಾ.
ಪತ್ರ ಓದಿದ ವಿಜಯರಾಮನ ಹೃದಯ ಒಂದೆ ಸಮನೆ ಬಡಿಯಲಾರಂಭಿಸಿತು ಇದೆಂತ ಪತ್ರ ರಾಜಕುಮಾರಿ ನನ್ನನ್ನು ಪ್ರೇಮಿಸುವುದು ಯಾರಾದರೂ ಈ ಪ್ರೀತಿಯನ್ನು ಒಪ್ಪುವರೆ ಸಮಾಜ ನಮ್ಮನ್ನು ಒಪ್ಪುವುದೆ ಖಂಡಿತ ಇಲ್ಲ ಮಹಾರಾಜರಿಗೆ ವಿಷಯ ತಿಳಿದರೆ ಅವರೆಂದಿಗೂ ಇಂತಹ ಅರಮನೆ ಸಂಪ್ರದಾಯ ವಿರೋದಿ ಕೆಲಸಗಳನ್ನು ಒಪ್ಪುವುದಿಲ್ಲ ಇದೆಂತ ಪಿಕಲಾಟ ಬಂತು ಎಂದುಕೊಂಡು ಸುಮ್ಮನಾದ. ಪ್ರತ್ಯುತ್ತರದ ನೀರಿಕ್ಷೆಯಲ್ಲಿದ್ದ ವಸುಂದರಾಗೆ ಯಾವ ಉತ್ತರ ಸಿಗದೆ ಖಾಲಿ ಪಾರಿವಾಳಕಂಡು ಕೋಪವು ಬಂತು ಬೇಸರವು ಬಂತು ಪುನಃ ಮರುದಿನ ಮತ್ತೊಂದು ಪತ್ರ ಬರೆದು ಕೂಡಲೆ ನನ್ನನ್ನು ಕಾಣುವಂತೆ ಸಂದೇಶ ಕಳಿಸುತ್ತಾಳೆ ನೇರವಾಗಿ ಅರಮನೆಯಲ್ಲಿ ಮಾತನಾಡಲು ಅಸಾದ್ಯವಾಗಿತ್ತು. ಆದರೂ ಪತ್ರ ಕಂಡು ಬಟ್ಟೆ ಕೊಡಲು ಬಂದಾಗ ರಾಜಕುಮಾರಿಯನ್ನ ಬೇಟಿಯಾದ ಅವಳು ಮತ್ತೆ ಪತ್ರಕ್ಕೆ ಉತ್ತರ ಕೇಳಲಾಗಿ ವಿಜಯರಾಜ ಸ್ತಬ್ದನಾಗಿ ನಿಂತುಬಿಟ್ಟ ಸತಾಯಿಸಿ ವಸುಂದರಾ ಬೇಡಿಕೆ ಇಟ್ಟಳು. ಇಲ್ಲ ರಾಜಕುಮಾರಿ ಇದು ಅಸಾದ್ಯ ನಾನು ನಿಮ್ಮನ್ನು ಪ್ರೇಮಿಸುವುದು ಸುಲಭವಲ್ಲ ಈ ಸಮಾಜ ಅರಮನೆ ಇದನ್ನ ಒಪ್ಪುವುದಿಲ್ಲ ಮಹಾರಾಜರೂ ಸುದ್ದಿ ತಿಳಿದರೆ ನನ್ನ ಕೊಂದು ಬಿಡುತ್ತಾರೆ ಎಂದನು. ಇಲ್ಲ ವಿಜಯರಾಮ ನಾನು ತಂದೆಯವರ ಬಳಿ ಮಾತನಾಡುತ್ತೇನೆ ಏನು ಆಗುವುದಿಲ್ಲ ನನ್ನನ್ನು ಒಪ್ಪಿಕೊ ಅನ್ನುತ್ತಾಳೆ.
ಸುಂದರವತಿಯೂ,ಗುಣವಂತೆಯೂ ,ಸಂಸ್ಕಾರವಂತೆಯೂ ಆದ ರಾಜಕುಮಾರಿಯನ್ನು ಒಪ್ಪಿಕೊಳ್ಳದೆ ಇರಲಾರದವರೂ ಯಾರು ಇಲ್ಲ ಆದರೆ ಮಹಾರಾಜರ ಭಯದಿಂದ ವಿಜಯರಾಮ ನಿರಕರಿಸಿದ್ದ ಈಗ ವಸುಂದರಾ ಮಹಾರಾಜರನ್ನು ಒಪ್ಪಿಸುವ ಮಾತು ಕೊಟ್ಟಮೇಲೆ ಪ್ರೇಮಕ್ಕೆ ಸಮ್ಮತಿಸಿದ. ಆದರೆ ಅರಮನೆಯಲ್ಲಿ ಸದ್ಯಕ್ಕೆ ಈ ವಿಚಾರ ಯಾರಿಗೂ ತಿಳಿಯದಿರಲಿ ಅನ್ನುವ ಕಾರಣಕ್ಕೆ ಅವರ ಪ್ರೇಮದ ಮಾತುಗಳನ್ನು ಸ್ವಚ್ಚಂದವಾಗಿ ಮಾತನಾಡಲು ಪಾರಿವಾಳವೇ ಅವರಿಗೆ ದಾರಿಯಾಗಿತ್ತು ಪ್ರತಿನಿತ್ಯ ಪತ್ರ ಬರೆದು ಕಳಿಸೋದು ಅದಕ್ಕೆ ಪ್ರತಿ ಉತ್ತರ ಬರೆಯೋದು ಹೀಗೆ ಸಾಗತೊಡಗಿತು. ಇಬ್ಬರೂ ಪ್ರೀತಿಯ ಪಾಶದಲ್ಲಿ ಸಿಲುಕಿ ಪ್ರೇಮದ ಮತ್ತಲ್ಲಿ ತೇಲತೊಡಗಿದರೂ ಒಬ್ಬೊಬ್ಬರಲ್ಲೂ ನೂರಾರು ಕನಸು ನೂರಾರೂ ಆಸೆಗಳು ಮೊಳಕೆ ಒಡೆದವು ಹಲವು ಮಾಸಗಳ ನಂತರ ಈ ವಿಷಯವನ್ನ ತಂದೆಯ ಬಳಿ ಪ್ರಸ್ತಾಪಿಸುವ ನಿರ್ಧಾರಕ್ಕೆ ವಸುಂದರಾ ಬರುತ್ತಾಳೆ. ಆದರೆ ವಿಜಯರಾಮನಿಗೆ ಭಯ ಮಹಾರಾಜರು ನಿರಾಕರಿಸಿದರೆ ಅದರಿಂದ ಆಗಬಹುದಾದ ತೊಂದರೆಗಳನ್ನ ನೆನೆಸಿಕೊಂಡು ಹೆದರುತ್ತಾನೆ. ಎಂದಿಗೂ ಇವರಿಬ್ಬರೂ ಸ್ವಚ್ಚಂದವಾಗಿ ಪರಸ್ಪರ ಮುಖಾಮುಖಿ ಪ್ರೇಮವನ್ನ ಮಾಡಿಲ್ಲ ಮಾನಸಿಕವಾಗಿ ಮತ್ತು ಮಾತುಗಳನ್ನ ಪತ್ರಗಳಮೂಲಕ ರವಾನಿಸಿ ಪ್ರೀತಿಸುತ್ತಿದ್ದರು.
ವಸುಂದರಾ ತಂದೆಯ ಬಳಿ ಬಂದು ತನ್ನ ಪ್ರೇಮವನ್ನ ಯಾವ ಅಳುಕಿಲ್ಲದೆ ಧೈರ್ಯವಾಗಿ ಹೇಳಿಬಿಟ್ಚಳು. ಚಿಕ್ಕಂದಿನಿಂದ ಯಾವುದನ್ನು ನಿರಾಕರಿಸದೆ ತಂದೆ ಕೇಳಿದ್ದು ಇಲ್ಲ ಅನ್ನದೆ ಕೊಡುವ ತಂದೆ ಇದನ್ನು ವಿರೋಧಿಸುವುದಿಲ್ಲ ಅನ್ನುವ ನಂಬಿಕೆ ಅವಳಿಗಿತ್ತು. ಮಗಳ ಮಾತನ್ನ ಕೇಳಿದ ತಂದೆ ಅಕ್ಷರಸಹಃ ಕೋಪತಾಳಿ ನಿಂತಿದ್ದ ಆದರೆ ಮಗಳನ್ನು ಎಂದಿಗೂ ಸದಾ ಪ್ರೀತಿಸುವ ರಾಜ ಅವಳನ್ನು ಸಮಾದಾನದಿಂದ ಪುತ್ರಿ ವಸುಂದರಾ ನಾನು ಯೋಚಿಸಿ ತಿಳಿಸುತ್ತೇನೆ ಎಂದು ಕಳಿಸಿಬಿಟ್ಟ. ವಸುಂದರಾ ಅಲ್ಲಿಂದ ತನ್ನ ಕೊಠಡಿಗೆ ಹೊರಡುತಿದ್ದಂತೆ ರಾಜ ಭಟರನ್ನು ಕರೆಸಿದ ಅರಳಿ ರಾಜ ವಿಜಯರಾಜನ ಶಿರಸ್ಸನ್ನು ಕತ್ತರಿಸುವಂತೆ ಆದೇಶ ನೀಡುತ್ತಾನೆ. ಆದೇಶದಂತೆ ಬಟ್ಟೆ ತೊಳೆಯುತ್ತಿದ್ದ ವಿಜಯರಾಮನ ಮೇಲೆ ಮೃಗಗಳಂತೆ ದಾಳಿಮಾಡುತ್ತಾರೆ. ಏನು ನೆಡೆಯುತ್ತಿದೆ ಇವರೆಲ್ಲ ಯಾಕೆ ನನ್ನ ಮೇಲೆ ಆಕ್ರಮಣ ಮಾಡುತ್ತಿದ್ದಾರೆ ಎನ್ನವುದು ಅವನಿಗೆ ತಿಳಿಯುವ ಹೊತ್ತಿಗೆ ಕತ್ತಿ,ಭರ್ಜಿಗಳು ಅವನ ದೇಹದಲ್ಲಿ ಜಳಪಿಸಿಬಿಟ್ಟವು ಕೈಕಾಲು,ರುಂಡಮುಂಡಗಳು ಬೇರಾದವು ರಾಜನ ಆಜ್ಞೆಯನ್ನ ಪೂರೈಸಿ ಬಂದ ಭಟರಿಗೆ ರಾಜನಿಂದ ನಗ ನಾಣ್ಯಗಳ ಬಹುಮಾನವ ಕೊಟ್ಟ ರಾಜ ವಿಕೃತವಾಗಿ ಸಂಭ್ರಮಿಸಿದ್ದ.
ಅತ್ತ ಸಖಿಯರ ಮೂಲಕ ವಿಚಾರ ತಿಳಿದ ವಸುಂದರಾ ಕುಸಿದು ಹೊದಳು. ತಂದೆಯವರೂ ಇಂತಹ ಪಾಪದ ಕೆಲಸಕ್ಕೆ ಮುಂದಾದರೆ ಎಂದಿಗೂ ಬಯಸಿದ್ದೂ ಬಯಸದ್ದೂ ತಂದು ಕೊಡುತ್ತಿದ್ದವರು ವಿಜಯರಾಮನ ಕೊಲ್ಲಿಸಿದ್ದು ಅವಳನ್ನ ನೋವಿನಲ್ಲಿ ಮುಳುಗಿಸಿತ್ತು. ಜೋರಾಗಿ ಚೀರಾಡಿ ,ಕೂಗಾಡ ತೊಡಗಿದಳು ಸಖಿಯರನ್ನು ಕೊಠಡಿಯಿಂದ ಹೊರಗೆ ಹೋಗುವಂತೆ ಆಜ್ಞೆ ಇತ್ತಳು. ಕೋಣೆಯ ತುಂಬೆಲ್ಲ ಹುಚ್ಚಿಯಂತೆ ಆಡುತ್ತಾ ಅಲ್ಲಿದ್ದ ಎಲ್ಲ ವಸ್ತುಗಳನ್ನ ಎಳೆದೆಳೆದು ಬಿಸಾಡಿದಳು ಲೋಕವೆ ಬೆಡವೆನಿಸತೊಡಗಿತು ಸುಲಭವಾಗಿ ಸಿಕ್ಕ ಎಲ್ಲಕ್ಕಿಂತ ಈಗ ಸಿಗಲಾರದೆ ಹೋದ ಪ್ರೇಮನ್ನು ನೆನೆಸಿಕೊಂಡು ಗೊಳಿಡುತ್ತಾ ಅಂತಿಮ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡು ಬಿಟ್ಟಳು ಮಾತು ಬಾರದೆ ಪ್ರೇಮಕ್ಕೆ ದಾರಿಯಾಗಿದ್ದ ಪಾರಿವಾಳ ಎಲ್ಲವನ್ನು ನೋಡಿತ್ತು ಏನು ಮಾಡಲಾಗದ ಅಸಹಾಯಕ ಸ್ಥಿತಿ ಇಬ್ಬರು ಪ್ರೇಮಿಗಳು ಸತ್ತಿದ್ದಾರೆ ಉತ್ತಮ ನನ್ನ ಮಿತ್ರರೂ ನನ್ನಿಂದ ದೂರವಾಗಿದ್ದಾರೆ. ಅವರಿಲ್ಲದ ನಾನು ಈ ಲೋಕದಲ್ಲಿ ಬದುಕುವುದಾದರೂ ಹೇಗೆ ಎನ್ನುವ ಕೊರಗಲ್ಲೆ ವಸುಂದರಾ ಶವದ ಪಕ್ಕದಲ್ಲಿ ಜೀವ ಬಿಟ್ಟು ಚಿರನಿದ್ರೆಗೆ ಪಾರಿವಾಳ ಜಾರಿತ್ತು