ಕಥೆ
ದುರಾಸೆ ಹಿಂದೆ ದುಃಖ
ಲಕ್ಷ್ಮೀದೇವಿ ಪತ್ತಾರ
ಮಂಗಲಾ, ಸುಮಾ ನೆರೆಹೊರೆಯವರು.ಸಾಯಂಕಾಲದ ಹೊತ್ತಾದರೆ ಸಾಕು ಎದುರು ಮನೆ ಸುಮಾ,ಮಂಗಲಾಳ ಮನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕೂಡುವುದು ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ.ಹೀಗೆ ಸಾಯಂಕಾಲ ಎಂದಿನಂತೆ ಬಂದ ಸುಮಾಳನ್ನು ಕುರಿತು “ಏನೇ ಸುಮಾ ನಿನ್ನೆ ಎಲ್ಲಿಗೋ ಹೋದಂಗಿತ್ತು ಎಲ್ಲಿಗೆ ಹೋಗಿದ್ದೆ” ಕೇಳಿದಳು ಮಂಗಲಾ. “ಏನು ಕೇಳ್ತೀಯಾ ಮಂಗಲಾ ಹಂಪೆ ಉತ್ಸವದ ಅಂದ-ಚಂದ. ನೋಡಲು ಎರಡು ಕಣ್ಣು ಸಾಲೋದಿಲ್ಲ. ಅಬ್ಬಾ ಒಂದೊಂದು ಕಡೆ ಒಂದೊಂದು ಕಾರ್ಯಕ್ರಮ. ಬಗೆ ಬಗೆ ಸಾಮಾನು. ಮಸ್ತ ಊಟದ ವ್ಯವಸ್ಥೆ. ಕೈಯಾಗ ದುಡ್ಡಿದ್ದರ ಸಾಕು. ಏನು ಬೇಕು ಅದನ್ನು ತಗೋಬಹುದು. ಅಲ್ಲದೆ ಫ್ರೀ ಬಸ್ ಬಿಟ್ಟಾರ. ಫ್ರೀ ಊಟ, ಫ್ರೀ ಬಸ್ ನೀನು ಹೋಗಿ ಬಾರಲ್ಲ “ಎಂದಳು ಸುಮಾ. ನನ್ನ ಗಂಡಂದು ಬರೇ ದುಡ್ಡೇ ಹುಚ್ಚು. ಮುಂಜಾಲೆ ಹೋದರೆ ಒಮ್ಮೆಲೆ ಕತ್ತಲಾದ ಮೇಲೆ ಮನೆ ಕಾಣೋದು. ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ಮಂಗಲಾ ತನ್ನ ದುಃಖ ತೋಡಿಕೊಂಡಳು. ಅದಕ್ಕೆ ಸುಮಾ ಒಳ್ಳೆಯ ಉಪಾಯವನ್ನೇ ಸೂಚಿಸಿದಳು. ಹೇಗೂ ನಿನ್ನ ಗಂಡ ದುಡೀಲಿಕ್ಕೆ ಹೋದಾಗ ನೀನು, ನಿನ್ನ ಮಗನೊಂದಿಗೆ ಹೋಗಿ ಬಾ. ನಮ್ಮ ಊರು ಜನ ಬೇಕಾದಷ್ಟು ಮಂದಿ ಹೊಂಟಾರ. ನೀನು ಹೋಗಿ ಸಾಯಂಕಾಲದೊಳಗೆ ಬಂದು ಬಿಡು” ಎಂದಳು. ಇಷ್ಟು ಹೇಳೋದು ಒಂದೇ ತಡ ಮೊದಲೇ ಗಯ್ಯಾಳಿ, ಎಲ್ಲದರ ಹಪಾಹಪಿ ಇರುವ ಮಂಗಲಾ ತನ್ನ ಮಗನನ್ನು ಕರೆದುಕೊಂಡು ಫ್ರೀ ಬಸ್ ಹತ್ತಿ ಹೊರಟೇ ಬಿಟ್ಟಳು. ಹಾಗೆ 4-5 ವರ್ಷದ ಮಗನಿಗೆ, ಮಂಗಲಾಗೆ ಹಂಪಿಯ ಸೋಬುಗು ಮೆರಗು, ಜನದಟ್ಟಣೆ ಕಂಡು ಬೆರಗಾಗಿ ನಾವು ಎಲ್ಲಿಗೆ ಬಂದಿದ್ದೇವೆ ಎಂದು ಹೌಹಾರುವಂತಾಯಿತು. ಗಟ್ಟಿಗಿತ್ತಿ ಮಂಗಲಾ ಓಡ್ಯಾಡಿ ತನ್ನ ಮಗನಿಗೆ ಆಟಿಗೆ ಸಾಮಾನು ತನಗೆ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಂಡು ಊಟದ ವ್ಯವಸ್ಥೆ ಮಾಡಿದ್ದಲ್ಲಿಗೆ ಬಂದಳು. ಅಲ್ಲೆ ಇದ್ದ ಪರಿಚಿತೆ ಮಹಿಳೆ ಜೊತೆ ಮಾತಾಡಿದಳು. ನಂತರ ಬಹಳ ನುಕೂ-ನುಗ್ಗಲು ಇದ್ದ ಕಾರಣ ಮಗುವನ್ನು ಪರಿಚಿತಳಿಗೆ ಕೊಟ್ಟು “ನಿನಗೂ ಒಳಗ್ಹೋಗಿ ಊಟ ತರುವೆ. ಇಲ್ಲೆ ನನ್ನ ಮಗು ನೋಡಿಕೊಂಡಿರಿ” ಎಂದು ಹೇಳಿ ಒಳಗ್ಹೋದಳು. ಅಲ್ಲೆಗೆ ಆಕಸ್ಮಿಕವಾಗಿ VIP ಆಗಮನವಾಗಿ ಅವನ ಗುಂಪಿನ ಹಿಂದೆ ಮಂಗಳಾ ವಿಶೇಷ ಊಟವಿದ್ಹೆಡೆಗೆ ಹೋದಳು. ನೋಡಿದರೆ ಬಗೆ ಬಗೆ ಅಡುಗೆ ಮೊದಲೇ ಅತಿ ಆಶೆಯ ತಿನಿಸು ಬಡಕಿ ಮಂಗಳ ಒಂದೊಂದೆ ಅಡುಗೆ ತಿನ್ನುತ್ತಾ ಹೋದಳು. ಒಂದೊಂದು ವಿಶೇಷ ರುಚಿ ಹೊಂದಿರುವ ಅಪರೂಪದ ಅಡುಗೆ. ಈ ತರದ ಊಟ ಒಮ್ಮೆಯೂ ಮಾಡಿರದ ಮಂಗಳ ಉಣ್ಣುತ್ತಾ ಉಣ್ಣುತ್ತಾ ತನ್ನ ಮಗುವನ್ನು, ಮಗುವನ್ನು ಕರೆದುಕೊಂಡು ಕುಳಿತಿರುವ ಪರಿಚಯದವಳನ್ನು ಮರೆತಳು. ಆಕೆಗೆ ಊಟ ಒಯ್ಯಬೇಕೆಂಬುದ ಮರೆತು ಹಾಗೆ ಗದ್ದಲದ ನಡುವೆ ಹೊರಬಂದಳು. VIP ನೋಡಲು ನೂಕು ನುಗ್ಗಲು. ಈ ಗದ್ದಲದಲ್ಲೆ ಪ್ಲಾಸ್ಟಿಕ ಡಬ್ಬಿಗಳನ್ನು ಹೊತ್ತು ಮಾರುವನು ಗದ್ದಲದಲ್ಲೆ ಸಿಕ್ಕೂ ಅವನ ಸಾಮಾನುಗಳು ಚೆಲ್ಲಾಪಿಲ್ಲಿಯಾದವು. ಅವನ್ನು ಕೆಲವರು ಎತ್ತಿಕೊಂಡು ಹೋದರು. ಈಕೆಗೂ ತೆಗೆದುಕೊಂಡು ಒಯ್ಯಬೇಕೆಂದು ಯೋಚಿಸುವಷ್ಟರಲ್ಲೆ ಮಗುವಿನ ನೆನಪಾಯಿತು. ಓಡಿ ಹೋಗಿ ನೋಡುತ್ತಾಳೆ. ಮಗುವು ಇಲ್ಲ. ಅಪರಿಚಿತ ಹೆಂಗಸು ಇಲ್ಲ. ಹುಚ್ಚಿಯಂತೆ ಹುಡುಕುತ್ತಾ ಹೋದಳು. ಗದ್ದಲಿನಲ್ಲೆ ಕಂಡಕಂಡವರಿಗೆ ತನ್ನ ಮಗು ಹೀಗೆ ಇತ್ತು. ನೋಡಿದಿರಾ ಎಂದು ಕೇಳಿದಳು. ಎಲ್ಲಿ ನೋಡಿದರೆ ಸುಳಿವಿಲ್ಲ. ಹೀಗೆ ಹುಡುಕುವಾಗ ಮಗುವನ್ನು ನೋಡಿಕೊಂಡಿರಲು ಹೇಳಿದ ಹೆಂಗಸು ಸಿಕ್ಕಳು.ಮಂಗಲಾ “ನನ್ನ ಮಗು ಎಲ್ಲಿ” ಎಂದರೆ, “ಎಷ್ಟು ಹೊತ್ತು ಅಂತ ಕಾಯೋದು. ನನ್ನ ಹೊಟ್ಟೆಯೂ ಚುರುಗುಟ್ಟಿತು. ನಾನು ಮೊದಲೇ ಒಂತರಾ ಮನುಷ್ಯಳು. ಯಾವಾಗ ಹೇಗೆ ಇರುತ್ತೇನೂ ನನಗೆ ಗೊತ್ತಿರುವುದಿಲ್ಲ. ನನಗೂ ನೀನು ಬೇಗ ಬರದೇ ಇರುವುದು ಬೇಸರವಾಗಿ ನಿನ್ನ ಮಗುವನ್ನು ಅಲ್ಲೆ ಬಿಟ್ಟು ಬಂದೆ “ಎಂದಳು. ಮಂಗಲಾಗೆ ಆಕಾಶವೇ ಕಳಚಿ ಬಿದ್ದಾಂತಾಯಿತು. ನಿಂತ ನೆಲವೇ ಕುಸಿದಂತಾಯಿತು. ತರ ತರ ನಡುಗಿ ಹೋದಳು. ತನ್ನ ಒಂದು ಕ್ಷಣದ ಬಾಯಿ ರುಚಿ ಆಶೆಗೆ (ದುರಾಶೆಗೆ) ಮುಂದಿನ ಪರಿಣಾಮ ಯೋಚಿಸಲಿಲ್ಲವಲ್ಲ. ನನ್ನ ಮಗು ಏಲ್ಲಿ ಹೋಯಿತು. ಯಾರು ಎತ್ತಿಕೊಂಡು ಹೋದರು. ನನ್ನ ಮಗುವನ್ನು ಏನೂ ಮಾಡುವರೊ. ಎಂತಹ ಮುದ್ದಾದ ಸುಂದರ ಮಗು ನನ್ನದು. ದೇವರು ನನಗೇಕೆ ಇಂತಹ ಬುದ್ಧಿ ಕೊಟ್ಟೆ ಎಂದು ಒಂದೇ ಸಮನೆ ಹಲುಬುತ್ತಾ, ಕಣ್ಣೀರಿಡುತ್ತಅ ಕಂಡ ಕಂಡವರನ್ನೂ ತನ್ನ ಮಗು ಕುರಿತು ಕೇಳುತ್ತಾ ಹುಚ್ಚಿಯಂತೆ ಹುಡುಕುತ್ತಾ ಹೊರಟಳು.
************************