ಕಾವ್ಯಯಾನ
ಭಾವನೆಗಳು ತೇಜಾವತಿ ಹೆಚ್.ಡಿ. ಭಾವನೆಗಳೇ ಹಾಗೆತುಸು ಆಸರೆ ಸಿಕ್ಕರೆ ಸಾಕುಲತೆಯಾಗಿ ಹಬ್ಬಲುಚೂರು ಸ್ಫೂರ್ತಿ ಸಾಕುವಾಹಿನಿಯಾಗಿ ಶರಧಿಯ ಸೇರಲುಹನಿಜಲದ ಸೆಲೆ ಸಾಕುಬೀಜ ಮೊಳೆತು ಅಂಕುರಿಸಲು ನಿಖರ ಸ್ಥಳ ವೇಳೆಯ ಹಂಗಿಲ್ಲಆದಿ ಅಂತ್ಯಗಳಿಲ್ಲಬಣ್ಣ ರೂಪಗಳಿಲ್ಲಲಿಂಗ ಭೇದಗಳಿಲ್ಲ… ಮನಸು ಭಾವಗಡಲುಹೃದಯ ಮಿಡಿತದೊಡಲುಒರತೆ ಉಕ್ಕೇರಲುಹೊಂಗನಸ ಸಿಹಿಹೊನಲು.. ನಿಗ್ರಹಿಸಿದರೆ ಸತ್ತೇ ಹೋಗುವವುರೆಕ್ಕೆಬಂದರೆ ಹಾರಿ ಹೋಗುವವುಬಂದಷ್ಟು ಸಲೀಸಲ್ಲ ಹೋಗಲುಜನಿಸಿ ಮರಣಿಸುವವು ನಗಲು ಅಳಲು ************
ಕಾವ್ಯಯಾನ
ಸ್ವಯಂ ದೀಪ ವಿದ್ಯಾ ಶ್ರೀ ಎಸ್ ಅಡೂರ್ ಏನಾದರೂ ಬರೆಯಬೇಕೆಂಬ ಅಮಲು,ಮತ್ತುಸ್ವಂತಕ್ಕೆ ಸಮಯವೇ ಉಳಿಯದ ಗೃಹಸ್ತಿಕೆಯ ಭಾರ ಹೊತ್ತು,ಇತ್ತ ಪೂರ್ಣ ಗೃಹಿಣಿಯಾಗಿಯೂ ಉಳಿಯದೆ…ಅತ್ತ ಕವಿಯಾಗುವ ಆಸೆಯೂ ಅಳಿಯದೆ…. ಸಾಗಿದೆ ಜೀವನ ರಥ..ಹಲವಾರು ಸವಾಲುಗಳೆಂಬಕುದುರೆಗಳ ಲಗಾಮು ಹಿಡಿದು ….. ಪಳ್ಳನೆ ಮಿಂಚಿ ಮರೆಯಾಗುವ ಕೋಲ್ಮಿಂಚಿನಂತೆಸ್ಪುರಿಸುವ ಒಂದೆರಡು ಸಾಲು ಕವನ ,ಮರೆಯಾಗುವುದು,ಹಿಡಿಯಲಾಗದ ಚಿಟ್ಟೆಯಂತೆಬೆನ್ನಟ್ಟಲಾಗದೆ….ಆ ಕ್ಷಣ ನಿತ್ಯವೂ ಇದೇ ಕಥೆ…ಸಾಗಿದೆ ಗರ್ಭಪಾತನನ್ನ ಭಾವಗಳ ಬಸಿರು ಹರಿದು…… ಹನಿ ಸೇರಿ ಹಳ್ಳ,ಆವಿ ಘನೀಕರಿಸಿ ಮೋಡ ಆದಂತೆಬದುಕು ಉಣಿಸಿದ ಹದವಾದ ಭಾವಗಳ ಪಾಕಕಟ್ಟಿತ್ತುಬಿಸಿಯುಂಡ ಹಾಲಿನ […]
ಕಾವ್ಯಯಾನ
ಬರಿ ಮಣ್ಣಲ್ಲ ನಾನು….! ಶಿವಲೀಲಾ ಹುಣಸಗಿ ಬಯಕೆಯೊಂದು ಮನದಲವಿತು ಕಾಡುತ್ತಿತ್ತು…ಮದ ತುಂಬಿದೆದೆಯಲಿ ಹದವಾಗಿ ನಾಟಿ ಮೀಟುತ್ತಿತ್ತುಹೃದಯ ಬಡಿತದ ಗೀಳೊಂದು ಸಂಕೋಲೆಯತೊಡರಾಗಿ,ನಿನ್ನರಸುವ ಗಾಳಿಗುಂಟ ದಿಕ್ಕಾಪಾಲುನುಸುಳಿದಾಗೆಗಲೆಲ್ಲ ಸದ್ದಿಲ್ಲದೆ ಮುಳ್ಳುಗಳು ಚುಚ್ಚಿಪರಚಿದ ಗಾಯಕ್ಕೊಂದು ಮುಲಾಮುಹಿತವಾಗಿ ಅಪ್ಪಿದ ಗಳಿಗೆಗಳು,ತೀವ್ರತೆಗೆ ಸಾಣೆ ಹಿಡಿದು ತನುವಿನೊಳಗೆ ಭಾವೋದ್ರೇಕದ ಸುಳಿಗಾಳಿಮುತ್ತಿನ ಹನಿಗಳಿಗೆ,ಬಯಲಾಗಿ ಮೈದೆಳೆದಿದೆಹೊನಲು ಬೆಳಕಿನಾರ್ಭಟದಲಿ ಪ್ರೇಮೋತ್ಸವವಿದೆಸಂಭ್ರಮಕ್ಕೊಂದು ಮಿತಿಯಿದೆ ನಿಧಾನಿಸು,ಬಿಕರಿಯಾಗದಿರಲಿ ಸೆಳೆತದಾ ಬಿಗಿ ನಂಟುಬರೀ ಮಣ್ಣಲ್ಲ ನಾನು,ನೀ ಬಿತ್ತುವ ಬೀಜಕೆಕಾಪಿಡುವ ಜೀವದುಸಿರಿನ ಆಸರೆಒಡಲೊಳು ಬಂಧಿಸಿ ನಿನ್ನ ಮರುಸೃಷ್ಟಿಗೆಎನ್ನೆದೆಯು ಯುಗಗಳಿಗೆ ಸಾಕ್ಷಿಯಾಗಿದೆನಿನಗಾಗಿ ಹಂಬಲಿಸದ ದಿನಗಳಿಲ್ಲನೀನಿಲ್ಲದೆ ಹೂ ಅರಳಿಲ್ಲ,ಗುಬ್ಬಿ ಗೂಡು ಕಟ್ಟಿಲ್ಲ,ಜಗವೆಲ್ಲ […]
ಕಾವ್ಯಯಾನ
ನಿರ್ವಾಣದೆಡೆಗೆ ಎಮ್.ಟಿ. ನಾಯ್ಕ. ಹೆಗಡೆ ಹೋಗಿ ಬಂದವನು ನಾನುನಿರ್ವಾಣದೆಡೆಗೆಸರ್ವ ಚೈತನ್ಯ ಶೂನ್ಯದಂಚಿಗೆ ಕೋಟೆ, ಕಿರೀಟ, ಕೀರ್ತಿಗಳನೆಲ್ಲಾತೊರೆದು ಸಾಗುವ ದಾರಿಅರಸು ಆಳುಗಳನೆಲ್ಲಾ ಕೊನೆಗೆಕೂಡಿಸುವ ಕೂಡುದಾರಿ ….! ನಡೆದ ಬಸವಣ್ಣಕಲ್ಯಾಣ ಕ್ರಾಂತಿಯ ನಡುವೆ ,ತನ್ನ ಶಿಲುಬೆ ತಾ —ಹೊತ್ತು ನಡೆದ ಯೇಸುನಿರ್ವಾಣದೆಡೆಗೆ . ಕಾಲಪುರುಷನಾಣತಿಯಂತೆಲ್ಲಾತೊರೆದು ಹೊರಟಲೋಕದ ‘ ಶ್ರೀ ರಾಮ ‘ ,ಜಗನ್ನಾಟಕ ಸೂತ್ರಧಾರಿಯಗರಿಮೆ ಹೊತ್ತವ —ಕಾನನದ ನಡುವೆ ವ್ಯಾಧನ‘ ಶರಕೆ ‘ ಹೊರಟನಲ್ಲಿಂದಲೇನಿರ್ವಾಣದೆಡೆಗೆ ಕ್ಷಣಭಂಗುರದ ಬದುಕಿನಕತೆಯ ತೆರೆದಿಡುವ ಗಳಿಗೆಜೀವ ಜಗದಗಡಿಯಾರದ ಗುರುತುನಿರ್ವಾಣದ ಗಳಿಗೆ ದಾಟಿ ಉಳಿದವರಿಲ್ಲ ಆ ಗಳಿಗೆ..! […]
ಕಾವ್ಯಯಾನ
ಶಾಲ್ಮಲೆ ಉಮೇಶ ಮುನವಳ್ಳಿ ನನ್ನ ಹಿತ್ತಲದಲ್ಲಿ ಹುಟ್ಟಿದ ಶಾಲ್ಮಲೆಕೋಟೆ ಕೊತ್ತಲಗಳ ದಾಟಿಕಾಡು ಮೇಡುಗಳ ಮೀಟಿಮಲೆನಾಡಿನಲ್ಲಿ ಮೈದಳೆದಿಲ್ಲವೇ? ಎತ್ತಣ ಬಯಲುಸೀಮೆ,ಎತ್ತಣ ಮಲೆನಾಡು?ಎಲ್ಲೆ ಮೇರೆಗಳ ಮೀರಿ? ಗುಪ್ತಗಾಮಿನಿ, ಗತಿ ಹಿಡಿದು ಸಾಗಿಮತಿಯನು ಪ್ರಜ್ಞೆಯಲಿ ನೀಗಿಮಂಜುಳ ಗಾನದಲಿ ತೇಲಿಸಾಗರ ಸೆರುವ ಕಾತರದಲಿ? ಸೊಕ್ಕಿದ ಸರ್ಪದ ಭರಾಟೆಯ ಹರಿವುಉಕ್ಕಿದ ಕಡಲು, ಮಿಕ್ಕಿದ ಉನ್ಮಾದಮಿಲನದ ಸಾವಧಾನದ ಸುಮೇರು? **************
ಗಝಲ್
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಯಾವ ಮಾತಿನ ನೆನಪು ಮರೆತಿಲ್ಲ ಸಾಕಿಎದೆಯಲಿ ತುಂಬಿದ ನೋವು ಕಳೆದಿಲ್ಲ ಸಾಕಿ ಮೌನ ಅನುಭವಿಸಿದ ಯಾತನೆ ಸಾಕಾಗಿದೆಕಾಲನ ಲೀಲೆ ಹೇಳಲು ಏನು ಉಳಿದಿಲ್ಲ ಸಾಕಿ ಕೀವು ತುಂಬಿಕೊಂಡಿದೆ ಹೃದಯದೊಳುಅದನು ಅನುಭವಿಸಲು ಜೀವ ಬೇಕಲ್ಲ ಸಾಕಿ ಹೇಗಾದರೂ ಆಗಲಿ ಸೈರೈಸಿಕೊಂಡು ನಡೆವೆಕೊನೆಗಾಲದ ದಿನಗಳಿಗೆ ಕಾದಿರುವೆನಲ್ಲ ಸಾಕಿ ಚುಚ್ಚು ಮಾತಿಗೆ ಬೆಚ್ಚಿಬೀಳದೆ ಉಳಿದಿರುವೆಮರುಳ ಬದುಕಿರುವ ತನಕ ಮಿಡಿಯಬಲ್ಲ ಸಾಕಿ *********
ಗಝಲ್
ಗಝಲ್ ಡಾ.ಗೋವಿಂದ ಹೆಗಡೆ ಮಾಸಿಹೋದ ನಗುವಿಗೇಕೆ ಬಣ್ಣ ಮೆತ್ತುವೆಕರಗಿಹೋದ ನಲಿವಿಗೇಕೆ ಬಣ್ಣ ಮೆತ್ತುವೆ ದಾರಿ ನಡೆ ನಡೆಯುತ್ತ ಸರಿಯಿತು ಕಾಲಕಂದಿಹೋದ ಕೆನ್ನೆಗೇಕೆ ಬಣ್ಣ ಮೆತ್ತುವೆ ಏರುವ ಖುಷಿ ಮುಗಿದು ಇಳಿಜಾರು ಈಗಕಾಂತಿ ಕಳೆದ ಕಣ್ಣಿಗೇಕೆ ಬಣ್ಣ ಮೆತ್ತುವೆ ಯಾವಾಗ ಅದು ಎದೆಯಲ್ಲಿ ಬೆಳಕಾಡಿದ್ದುಅರ್ಥ ಕಳೆದ ಮಾತಿಗೇಕೆ ಬಣ್ಣ ಮೆತ್ತುವೆ ಮಾತು ಮನಸು ಕೃತಿಗಳಲ್ಲಿ ಮೇಳವೆಲ್ಲಿದೆಋಜುತೆ ಮರೆತ ನಡತೆಗೇಕೆ ಬಣ್ಣ ಮೆತ್ತುವೆ ಹೆಳವ ಹೆಜ್ಜೆಗಳಲಿ ಈಗ ಸಾಗಿದೆ ಪಯಣರೆಕ್ಕೆ ಸವೆದ ಹಕ್ಕಿಗೇಕೆ ಬಣ್ಣ ಮೆತ್ತುವೆ ಯಾವ ರಂಗು ಬಳಿದರೇನು […]
ಕಾವ್ಯಯಾನ
ಮಳೆ ಒಲವು ವಸುಂಧರಾ ಕದಲೂರು ಸಂಜೆ ಮಳೆ, ಹನಿಗಳ ಜೊತೆನೆನಪುಗಳನು ಇಳಿಸಿತುತೋಯ್ದ ಮನದಲಿ ಬಚ್ಚಿಟ್ಟನೆನಪುಗಳ ಮೊಗ್ಗು ಅಂತೆಮಣ್ಣ ಘಮಲಿನಂತೆ ಹರಡಿತು ಇರುಳ ರಾಗ ಕದಪ ಮೇಲೆನವ ಯೌವನದ ಅಲೆಗಳಲಿರಂಜಿಸಿತು ಮನವು ಮಧುರರಾಗ ಗುನುಗುವಂತೆ ಅಂತೆಹೊಸೆದು ಹೊಸತು ಹಾಡಿತು ಮನವು ತೋಯ್ದ ಪರಿಗೆತನುವು ತಾನು ನಡುಗಿತುಬಳ್ಳಿ ಚಿಗುರು ಮರವನಪ್ಪಿಬೆಚ್ಚಗಾಗುವಂತೆ ಅಂತೆನೆಚ್ಚು ಹೆಚ್ಚಿ ಬಲವಾಯಿತು ಅಧರ ಬಿರಿದು ಮಧುರನುಡಿದು ಪಿಸು ಮಾತಿನಬಿಸಿ ಎದೆಗೆ ಇಳಿದಂತೆಅಂತೆ ಒಲವು ಆವರಿಸಿತು ಮಳೆಯೆಂದರೆ ಒಲವುಒಲವೆಂದರೆ ನೆನೆದ ನೆಲದಒದ್ದೆಯಂತೆ ಅಂತೆ ಎಂದುಮತ್ತೆ ಸಾರಿತು ಮನವುಮಧುರವಾಗಿ ನಡುಗಿತು […]
ಕಾವ್ಯಯಾನ
ಗೋಡೆಯ ಮೇಲಾಡುವ ಚಿತ್ರ ಬಿದಲೋಟಿ ರಂಗನಾಥ್ ಒಳಬರಲಾದ ಬಾಗಿಲಲ್ಲಿಕಾದು ಕುಳಿತು ನಿನ್ನ ಪ್ರೀತಿಗೊಸ್ಕರ ಹಸಿದೆಚಂದಿರನ ಅಷ್ಟೂ ಬೆಳಕು ನಿನ್ನ ಕಣ್ಣಲ್ಲಿತ್ತುನೀನು ಪಾದಗಳು ನೆಲ ಸೋಕುವುದು ಬೇಡವೆಂದುರಂಗೋಲಿ ಬರೆದು ಕೂತೆ ಮುಗುಳು ನಗೆ ಮೆತ್ತಿರಂಗೋಲಿಗೂ ಕಣ್ಣು ಕಿವಿ ಎಲ್ಲಾ ಮೂಡಿದವು ನೀನು ಮಾತ್ರ ಬರಲಿಲ್ಲ ಗೋಡೆ ನೋಡುತ್ತಾ ಕೂತವನಿಗೆಅದರ ಮೇಲಾಡುವ ಚಿತ್ರ ಕರೆದಂತಾಯಿತುಅರೆ ! ಅವಳೇ ಅಲ್ಲವೆ ?ನನ್ನ ಚಿತ್ತಾರದ ಗೊಂಬೆಇಲ್ಲಿಗೂ ಬಂದಳೇ ?ಇಲ್ಲ ನಾನೇ ಅಲ್ಲಿಗೆ ಹೋದೆನೆ ?ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ನೋಡಿದೆನವಿಲು ರೆಕ್ಕೆಬಿಚ್ಚಿ ನರ್ತಿಸುವಂತೆಗೋಡೆಯ ಮೇಲಿನ […]
ಕಾವ್ಯಯಾನ
ಮಾತಿನಲಿ ಮೌನೋತ್ಸವ ಡಾ. ಅಜಿತ್ ಹರೀಶಿ ಮಾತುಗಳ ಸಮ್ಮಿಲನಜನ್ಮಾಂತರದ ಗೆಳೆತನಸಮ್ಮತಿಸಿ ಧ್ಯಾನಿಸಿದ ಮೌನಸರಸದ ನಿನ್ನ ಮಾತಿನಲಿ ಜತನ ಮಾತಿನ ಮುಗ್ಧತೆ ನೀರಸಮನದ ಜ್ಞಾನ ಪಾದರಸನೀ ಮಾತೊಳು ತರುವಕಲೆಯ, ಮೌನದಿ ಪಡೆದವ ನಾ ಹತ್ತಿಕ್ಕಿ ಬಚ್ಚಿಟ್ಟ ಮಾತುಮೌನದ ಮಣಿ ಪೋಣಿಸದುಉಕ್ಕುಕ್ಕಿ ಹರಿವ ನನ್ನ ಮಾತುಚಂದದ ಹಾರವಾಗಿಸದು ನನ್ನ ಗತ್ತಿನ ಭಾವ ತಂದಿತ್ತುನನಗೆ ಗೊತ್ತು ಎಂಬ ಗಮ್ಮತ್ತುತಿಳಿಯದೆ ನಾ ಆಡಿದರೂಮೌನದಲೇ ದಂಡಿಸದಿರು ಧರಿಸಿ ಧರಿತ್ರಿಯಾದೆ ನೀನುಪಾದಕ್ಕೆರಗಿ ಸೇವೆಗೈವೆ ನಾನುಕ್ಷಮಿಸು ಭರಿಸು ನನ್ನ ಮಾತನುಶೇಖರಿಸಿ ನಿನ್ನ ಮೌನವನು ***********