ಕಾವ್ಯಯಾನ

ಶಾಲ್ಮಲೆ

Landscape, Canyon, Cliff, Sky, River, Uvac, Snow, Winter, ...

ಉಮೇಶ ಮುನವಳ್ಳಿ

ನನ್ನ ಹಿತ್ತಲದಲ್ಲಿ ಹುಟ್ಟಿದ ಶಾಲ್ಮಲೆ
ಕೋಟೆ ಕೊತ್ತಲಗಳ ದಾಟಿ
ಕಾಡು ಮೇಡುಗಳ ಮೀಟಿ
ಮಲೆನಾಡಿನಲ್ಲಿ ಮೈದಳೆದಿಲ್ಲವೇ?

ಎತ್ತಣ ಬಯಲುಸೀಮೆ,
ಎತ್ತಣ ಮಲೆನಾಡು?
ಎಲ್ಲೆ ಮೇರೆಗಳ ಮೀರಿ?

ಗುಪ್ತಗಾಮಿನಿ, ಗತಿ ಹಿಡಿದು ಸಾಗಿ
ಮತಿಯನು ಪ್ರಜ್ಞೆಯಲಿ ನೀಗಿ
ಮಂಜುಳ ಗಾನದಲಿ ತೇಲಿ
ಸಾಗರ ಸೆರುವ ಕಾತರದಲಿ?

ಸೊಕ್ಕಿದ ಸರ್ಪದ ಭರಾಟೆಯ ಹರಿವು
ಉಕ್ಕಿದ ಕಡಲು, ಮಿಕ್ಕಿದ ಉನ್ಮಾದ
ಮಿಲನದ ಸಾವಧಾನದ ಸುಮೇರು?

**************

Leave a Reply