ಕಾವ್ಯಯಾನ
ಕರೆಯದೆ ಬರುವ ಅತಿಥಿ ಚೇತನಾ ಕುಂಬ್ಳೆ ಕರೆಯದೆ ಬರುವ ಅತಿಥಿ ನೀನು ಕರೆದರೂ ಕಿವಿ ಕೇಳಿಸದವನು ಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ ಯಾವಾಗ ಹೇಗೆ ಯಾಕೆ ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ ನೀನು ಬರುವೆಯೆಂದು ಗೊತ್ತಿಲ್ಲ ನನಗೆ ಮುನ್ಸೂಚನೆ ನೀಡದೆ ಬರುವೆ ನೀನು ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ ಒಡೆದು ನುಚ್ಚುನೂರು ಮಾಡುವೆ ಸಣ್ಣಪುಟ್ಟ ಸಂತೋಷಗಳನ್ನು ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಮನದ ತುಂಬ ವೇದನೆ ನೀಡಿ ಹಿರಿಯರೆಂದೋ ಕಿರಿಯರೆಂದೋ […]
ಕಾವ್ಯಯಾನ
ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ನೋಡ ನೋಡುತ್ತಿದ್ದ ಹಾಗೆ ಬೆಳಗಾಗಿಬಿಟ್ಟಿತು ಕನವರಿಸುತ್ತಿದ್ದಂತೇ ಕನಸು ಹರಿದುಬಿಟ್ಟಿತು ಹಂಬಲಿಸಿದ್ದೆಷ್ಟು ತಯಾರಿಯ ಸಂಭ್ರಮವೆಷ್ಟು ತಾಸೆರಡು ತಾಸಿನಲ್ಲಿ ‘ಆಟ’ ಮುಗಿದೇಬಿಟ್ಟಿತು ಹೊಳೆ ಮೈಲು ದೂರವಿರುವಾಗಲೇ ಸಿದ್ಧನಿದ್ದೆ ಪಾದವನ್ನೂ ನೆನೆಸದೆ ನೀರು ಸರಿದುಬಿಟ್ಟಿತು ಭಾರವನ್ನು ಅವರೂ ಹೊರುವ ನಿರೀಕ್ಷೆಯಿತ್ತು ನನ್ನ ತಲೆಗೇ ಎಲ್ಲ ಕಟ್ಟಿ ಮಂದಿ ಕೈಬಿಟ್ಟಿತು ಬೆಳಗಾದರೆ ಪರಿಹಾರ ಸಿಗುವ ವಿಶ್ವಾಸವಿತ್ತು ನಸೀಬು ಖೊಟ್ಟಿ, ರಾತ್ರಿಯೇ ಎಣ್ಣೆ ತೀರಿಬಿಟ್ಟಿತು ಕೈಗೆ ಸಿಗದೇ ನಡೆಯುವ ‘ಜಂಗಮ’ನ ಕೇಳಬೇಕು ಇರವು-ಅರಿವಿನ ನಡುವೇಕೆ ಬಿರುಕುಬಿಟ್ಟಿತು ******
ಕಾವ್ಯಯಾನ
ಜೇಡ ರಾಜೇಶ್ವರಿ ಭೋಗಯ್ಯ ಕಾವ್ಯಕ್ಕೆ ವಸ್ತುವಾಗಲೆಂದು ಜೇಡವನ್ನು ಆರಿಸಿಕೊಂಡಿದ್ದೆ ಕವಿಯೊಬ್ಬರು ಹೇಳಿದ್ದರು , ವಸ್ತು ಯಾವುದಾದರೂ ಆಗಬಹುದು ಕವನ ಕಟ್ಟುವುದಕ್ಕೆ, ಒಡೆದ ದೋಣಿ ,ಮುರಿದ ಏಣಿ ಹೀಗೆ… ಜೇಡ ಕಟ್ಟುತ್ತಲೇ ಇತ್ತು ಬಲೆಯನ್ನು ನಾ ಕೆಡವುತ್ತಲೇ ಇದ್ದೆ ಪದೇ ಪದೇ ಅದರ ಬದುಕನ್ನು ಕೂತು ನೋಡಿದ್ದೇ ಬಂತು, ಪದಗಳು ಬರಲಿಲ್ಲ ರಾಜ ಬಲೆ ಹೆಣವುದ ನೋಡಿಯೇ ಸ್ಪೂರ್ತಿಗೊಂಡನಲ್ಲ ಜೇಡ ಬಲೆಯನ್ನು ಹೆಣೆಹೆಣೆದು ಕಟ್ಟಿಯೇ ಬಿಟ್ಟಿತು ತನ್ನರಮನೆಯನ್ನು ದಿಕ್ಕೆಟ್ಟಿದ್ದವ ಅವ, ಜೇಡ ಮನೆಕಟ್ಟಿದ್ದ ನೋಡಿ ತಾನೂ ಕಟ್ಟಿದ ಪುನಃ […]
ಕಾವ್ಯಯಾನ
ಮತ್ತೆ ವಸಂತ ತೇಜಾವತಿ.ಹೆಚ್.ಡಿ ಮರಳ ಅಂಗಳದೊಳಗೆ ಬಾಳರಂಗೋಲಿ ಬಿಡಿಸುವುದು ಬೇಡ ಗೆಳೆಯ… ಶಿಲೆಗಳಲ್ಲಿ ಕೆತ್ತೋಣ ಶಾಶ್ವತವಾಗಿ… ! ಭುವಿಯಾಗಸ ಚಂದ್ರಾರ್ಕರ ಸಾಕ್ಷಿ ಸಾಕು.. ತೊಟ್ಟ ಬಟ್ಟೆ ಒಳಗಿನ ಕಾಯ ಕುಳಿತ ಜಾಗ ಕೊಚ್ಚಿಹೋಗುವ ಮುನ್ನ ಎದ್ದು ನಡೆಯೋಣ.. ಗತದ ಕಹಿನೆನಪುಗಳ ದೊರೆತಿರುವ ಒಲವಿನಲಿ ಮುಳುಗಿಸಿಬಿಡು! ಒಡಲ ದಹಿಸಿದ ವ್ಯರ್ಥ ಮಂದಾಗ್ನಿಯ ಉಗುಳಿಬಿಡು.. ಮತ್ತೆ ಸ್ವಚ್ಛಂದವಾಗಿ ನಾ ನಿನಗೆ, ನೀ ನನಗೆಂದು ಒಲವಸಾಗರದಲ್ಲಿ ಮತ್ಸ್ಯಗಳಾಗೋಣ.. ! ಬೇರೆಲ್ಲ ಬದಿಗಿರಲಿ ಮೊದಲು ನಮ್ಮ ತನವ ಮೆರೆಯೋಣ. . ಹಮ್ಮು ಬಿಮ್ಮುಗಳ […]
ಕಾವ್ಯಯಾನ
ಒಂದು ಕೊಂಕಣಿ ಬಾಷೆಯ ಕವಿತೆ ಜವಾಬ್ ಪಂಚ್ವೀಸ್ ವರ್ಸಾ ಉಪರಾಂತ ಪರತ ತಾಕ್ಕಾ ಭೇಟೂಚೊ ಅವಕಾಶ. ತಶಿ ಮಣೂನ ಆಯ್ಲಾ ತಾಗೆಲೆ ಸಂದೇಶ. ಮನ ಧಾಂವ್ಲೆ ಪಂಚ್ವೀಸ ವರಸಾ ಮಾಕ್ಷಿ. ಪತಂಗಾ ವರಿ ಉಬಲೆ ದೇವ ಸಾಕ್ಷಿ. ತಾಗೆಲೊ ಏಕ ಸವಾಲಾ ಚೊ ಝಾಪ್ ಮೆಗೆಲೆ ಭಿತ್ತರಿ ವರಲಾ. ತ್ಯಾ ವೇಳ ಉತ್ರಾಂನ ಮೆಗೆಲೆ ಸಾಥ್ ದಿಲಲೆ ನಾ. ಆಜ ಹಾಂವ ತಾಗೆಲೆ ಸಗ್ಳೇ ಸವಾಲಾಚೆ ಜವಾಬ ದಿತ್ತಲಿ ಮನಾಚೆ ಜಡಾವಣ ದೆವೊನು ಹಗೂರ ಜಾತ್ತಲಿ ಧಾಂವಲಿ […]
ಕಾವ್ಯಯಾನ
ನಾಲಿಗೆ ಕತ್ತರಿಸಿ ನಡೆದವರು ಜಹಾನ್ ಆರಾ ದೂರ ವಿಮಾನದಿಂದ ಹಾರಿ ಬಂದವರು ತಂದ ಆಧುನಿಕತೆಯ ಭಾರವನ್ನು ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ ಈಗ ಕಾಲುಗಳು ಸೋತಿವೆ ತಲುಪುವ ಊರು ಇನ್ನೂ ಬಹು ದೂರ ದುಡಿದು ತಿಂದ ದೇಹ ದಾರಿಯುದ್ಧಕ್ಕೂ ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು ಮೇಲೆ ಕುಳಿತವನು ಆಡಿಸಿದಂತೆ ದೀಪವು ಹಚ್ಚಿದ್ದೇವೆ ನಮ್ಮ ರಕುತ ಬಸೆದು ಜಾಗಟೆಯೂ ಬಾರಿಸಿದ್ದೇವೆ ಖಾಲಿ ಹೊಟ್ಟೆ ಬಡಿದು ಹಗಲು-ರಾತ್ರಿ ಬಿಸಿಲು ಹಸಿವು ಯಾರ ಮಾತು ಕಿವಿಗೆ ಬೀಳಲಿಲ್ಲ ನಿಮ್ಮ ಆಶಾದಾಯಕತೆಯ ಹೊರತು […]
ಕಾವ್ಯಯಾನ
ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ […]
ಕಾವ್ಯಯಾನ
ಗಝಲ್ ತೇಜಾವತಿ ಹೆಚ್.ಡಿ. ನಿನ್ನ ಬಿಟ್ಟು ನಾನು ಬಹುದೂರ ಬಂದಿರುವೆನು ಗೆಳೆಯ ನೀನು ಅತ್ತು ಕೂಗಿದರೂ ಕೇಳಿಸದಾಗಿದೆ ನನಗೀಗ ಗೆಳೆಯ ಇಷ್ಟು ದಿನ ಪ್ರೀತಿಯ ಭ್ರಮಿಸಿ ಕನವರಿಸಿ ನಿತ್ರಾಣವಾಗಿರುವೆನು ನಾನು ಮನವೀಗ ಅರಸಿಬಂದರು ಮರುನೋಡದೆ ಒಪ್ಪಿಕೊಳ್ಳದಾಗಿದೆ ಗೆಳೆಯ ಬಿಸಿಲ್ಗುದುರೆಯೇರಿ ಮೋಹದ ಓಣಿಯ ಜೀವಜಲಕ್ಕಾಗಿ ಓಡಿದೆ ನಾನು ಹೆಜ್ಜೆಗಳು ಬಸವಳಿದು ಕಣ್ಣರಳಿಸಲಾರದೆ ಕಳೆಗುಂದಿದೆ ಗೆಳೆಯ ಘಮಭರಿತ ಸುಮವೀಗ ನಿರ್ವಾತಕ್ಕೆ ಸಿಲುಕಿ ಕಠಿಣ ಶಿಲೆಯಾಗಿ ಬದಲಾಗಿದೆ ಕ್ರಿಯೆಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಸಂವೇದನೆಗಳ ಕಳೆದುಕೊಂಡಿದೆ ಗೆಳೆಯ ನೀನೀಗ ಒಲವ ಅಮೃತಧಾರೆಯನ್ನೇ ಸ್ಪುರಿಸಿದರೂ […]
ಕಾವ್ಯಯಾನ
ನಿರುಪದ್ರವಿ ವಸುಂಧರಾ ಕದಲೂರು ಗಿಡಗಂಟಿ ಬಳಿ ಹೂ ಕೊಯ್ಯಲು ಹೋದೆ; ಮೈ ಮೇಲೆ ಕಪ್ಪು ಇರುವೆ ಹತ್ತಿದೆ. ಅದು ಹಾದಿ ತಪ್ಪಿತೆ ಅಥವಾ ನಾನು ತಪ್ಪಿದೆನೆ ಬೆರಳ ಬೆಟ್ಟಗುಡ್ಡ ಏರಿಳಿದು, ಅಂಗೈ ರೇಖೆ ಅಳೆದು, ಸರಸರಾ ಸರಸರಾ ಸಂಚರಿಸಿತು ಸಾವಧಾನವೇ ಇಲ್ಲ ಸರಸರಾ ಸರಸರಾ.. ನೋಡುತಿದ್ದೆ ಕಂಗೆಟ್ಟದ್ದು ಯಾರು ಭುಜದ ಮೇಲೆ; ಹಣೆ, ಮೂಗು, ಕೆನ್ನೆ ಮೇಲೆಲ್ಲಾ ಹರಿದಾಡಿತು ಸರಸರಾ ಸರಾಸರಾ.. ಈ ಮೈ, ಈ ಜೀವವುಳ್ಳ ನನ್ನನ್ನು ಹೊತ್ತ ಮೈ ; ಬಲು ಬಂಜರೆನಿಸಿತೇನು ಎದೆಗಿಳಿಯಲಿಲ್ಲ; […]