ಕಾವ್ಯಯಾನ

ಗಝಲ್

Gray Asphalt Road Surrounded by Tall Trees

ಡಾ.ಗೋವಿಂದ ಹೆಗಡೆ

ನೋಡ ನೋಡುತ್ತಿದ್ದ ಹಾಗೆ ಬೆಳಗಾಗಿಬಿಟ್ಟಿತು
ಕನವರಿಸುತ್ತಿದ್ದಂತೇ ಕನಸು ಹರಿದುಬಿಟ್ಟಿತು

ಹಂಬಲಿಸಿದ್ದೆಷ್ಟು ತಯಾರಿಯ ಸಂಭ್ರಮವೆಷ್ಟು
ತಾಸೆರಡು ತಾಸಿನಲ್ಲಿ ‘ಆಟ’ ಮುಗಿದೇಬಿಟ್ಟಿತು

ಹೊಳೆ ಮೈಲು ದೂರವಿರುವಾಗಲೇ ಸಿದ್ಧನಿದ್ದೆ
ಪಾದವನ್ನೂ ನೆನೆಸದೆ ನೀರು ಸರಿದುಬಿಟ್ಟಿತು

ಭಾರವನ್ನು ಅವರೂ ಹೊರುವ ನಿರೀಕ್ಷೆಯಿತ್ತು
ನನ್ನ ತಲೆಗೇ ಎಲ್ಲ ಕಟ್ಟಿ ಮಂದಿ ಕೈಬಿಟ್ಟಿತು

ಬೆಳಗಾದರೆ ಪರಿಹಾರ ಸಿಗುವ ವಿಶ್ವಾಸವಿತ್ತು
ನಸೀಬು ಖೊಟ್ಟಿ, ರಾತ್ರಿಯೇ ಎಣ್ಣೆ ತೀರಿಬಿಟ್ಟಿತು

ಕೈಗೆ ಸಿಗದೇ ನಡೆಯುವ ‘ಜಂಗಮ’ನ ಕೇಳಬೇಕು
ಇರವು-ಅರಿವಿನ ನಡುವೇಕೆ ಬಿರುಕುಬಿಟ್ಟಿತು

******

3 thoughts on “ಕಾವ್ಯಯಾನ

  1. ಕವನ ತುಂಬಾ ಚೆನ್ನಾಗಿದೆ, ಇರವು-ಅರಿವಿನ ನಡುವೆ ಬಿರುಕು ಬಿಟ್ಟಿತ್ತು.ಇಷ್ಟವಾದ ಸಾಲುಗಳು,ಅಭಿನಂದನೆಗಳು.
    ಮಾಲತಿಶ್ರೀನಿವಾಸನ್

Leave a Reply

Back To Top