Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಯಾತ್ರಿಕ ವಿಭಾ ಪುರೋಹಿತ್ ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ ಬತ್ತಲಾರದ ಜ್ವಾಲೆ. ಹಾದಿ ಮುಗಿಯುವುದಿಲ್ಲ ಮುಗಿದರದು ಹಾದಿಯಲ್ಲ ! ಯಾತ್ರೆ ಮುಂದುವರೆದಿದೆ ಹೊಸ ಹೊಸ ದೇಶ ಪ್ರದೇಶವನು ತೆಕ್ಕೆಯೊಳಗೆ ನುಂಗಿದೆ. ನೂರು,ಸಾವಿರ,ಲಕ್ಷಗಳ ದಾಟುತ್ತಲಿದೆ ರಕ್ತಬೀಜಾಸುರನ ನೆತ್ತರಿನ ಹನಿಗಳಿಗಿಂತ ವಿಷಾಣು ಹರಡುತ್ತ,ಹಬ್ಬುತ್ತ ರಕ್ಕಸನಂತೆ ಮೀರಿ ಬೆಳೆಯುತ್ತಲಿದೆ ಮನುಕುಲವ ಕಂಗೆಡಿಸುತ್ತಿದೆ. ಹೊರಗಿಂದ ಬಂದವರು ಸುಮ್ಮನೆ ಬರಲಿಲ್ಲ ಇಂದಿಗೂ ಹಂಚುತ್ತಲೇ ಇರುವರು ಬೆನ್ನು ಹಿಂದೆ ನಿಂತು ಚೂರಿ ಹಾಕಿದರು ಕಾಡುಪಾಪದ ರುಚಿಗೆ ಸೋತವರು ಸಂಜೆ ಹಕ್ಕಿಯ ದನಿಗೆ ಕಿವುಡರಾದವರು ನೋವು ಕೇಕೆ ಹಾಕುತ್ತಿದ್ದರೂ, ನಲಿವು ಮರೆಯಲ್ಲಿ ನಿಂತು ಹಣಿಕೆಹಾಕುತ್ತಿರುವಂತೆ ಮನಸಿನ ಯಾವುದೋ ಒಂದು ಮೂಲೆಯಲ್ಲಿ……. ಈಗೀಗ ಕಣ್ಮುಚ್ಚಿ ದರೆ ನಿದ್ದೆ ಸುಳಿಯುವುದಿಲ್ಲ ಸುಳಿದರೂ ಆ ಸುಳಿಯಲ್ಲಿ ಇರುಳೋ,ಬೆಳಕೋ, ಒಂದೂ ತಿಳಿಯುವುದಿಲ್ಲ ತಾನಿರುದಿಲ್ಲವೆಂಬ ಸಂಶಯ ಆ ಯಾತ್ರಿಕನಿಗೆ ಯಾವಾಗ ಬರುವುದೋ ? ದೇವರೇ ಬಲ್ಲ ! ನಕ್ಕ ನಿಮಿಷಗಳೀಗ ದಿಗ್ಬಂಧನದಲಿವೆ. ಸರಪಳಿ ಸಾಗುತ್ತಲಿದೆ ಕೊನೆಯಿರದ ದಾರಿಯಲಿ ಶಂಖನಾದ ಘಂಟೆ ಜಾಗಟೆಗಳಾದವು ಚಪ್ಪಾಳೆಗಳ ತಾಳದಲ್ಲಿ ಕಾಣದ ಮೂಲಮೂರ್ತಿಗೆ ಹರಿವಾಣ ಸೇವೆಯಾಯ್ತು ಹಚ್ಚಿಟ್ಟ ಹಣತೆಗಳು ಹೋರಾಡುತ್ತಿವೆ ಇಂದಿಗೂ ಕತ್ತಲಿನ ವಿರುದ್ಧ ಯುದ್ಧದ ಅಂತ್ಯ ಅರಿಯದೇ ! ಬೆಳಗುತ್ತಿವೆ ರಕ್ಷಕರಿಗೆ ದಾರಿ ದೀಪವಾಗತ್ತ….. ಇನ್ನೂ ಯಾಕೆ ಪೀಡಿಸುವೆ ? ಭಯಾನಕತೆ ತೋರದಿರು ಸಮಾಧಿಯಾಗಿಬಿಡು ಮುಗಿಸಿ “ಮಹಾಯಾತ್ರೆ” . **********

ಕಾವ್ಯಯಾನ

ಮಬ್ಯಾನ್ ಮಾತು! ರುದ್ರಸ್ವಾಮಿ ಹರ್ತಿಕೋಟೆ ಮಬ್ಯಾನ್ ಮಾತು! ೧) ಧ್ಯಾನಕ್ಕೆ ಕುಳಿತವರನ್ನು ಹೆಚ್ಚು ಕಾಡುವುದು ಅವಳು ಮತ್ತು ಅವಳು ಮಾತ್ರ! ೨) ಅವಳು ಪತಿವ್ರತೆ ಎಂದು ಮಾತಾನಾಡುವವರು ಅವಳ ಬೆತ್ತಲೆ ಕನಸ ಕಾಣದೆ ಇರರು! ೩) ಅವನು ಎಷ್ಟು ರಸಿಕನೆಂಬುದು ಅವನ ಹೆಂಡತಿಗಿಂತ ಅವನ ಸೆಕ್ರೆಟರಿಗೆ ಗೊತ್ತು! ೪) ಕವಿ ಬರೆದದ್ದನ್ನು ಕವಿಯೇ ಅರ್ಥೈಸಿದರೆ ರಸಭಂಗವಾಗುತ್ತದೆ! ೫) ಇಲ್ಲಿ ಹೆಚ್ಚು ಪ್ರೀತಿಸುವವರು ಹುಚ್ಚರಾಗುತ್ತಾರೆ ಇಲ್ಲವೇ ಹುತಾತ್ಮರಾಗುತ್ತಾರೆ! ೬) ಗಂಡಿಗಿಂತ ಹೆಣ್ಣು ಮೊದಲ ರಾತ್ರಿ ಏನೂ ಗೊತ್ತಿಲ್ಲದಂತೆ ನಟಿಸುತ್ತಾಳೆ! ೭) ಅವ್ವನ ಹರಿದ ಕುಪ್ಪಸ ನೋಡಿ ನಗುತ್ತಿದ್ದವರ ಕಂಡು, ಅಪ್ಪನ ಅಂಗಿಯೊಳಗಿನ ತೂತುಬಿದ್ದ ಬನಿಯನ್ ಅಳುತ್ತಿತ್ತು! ==========

ಕಾವ್ಯಯಾನ

ನಿವೇಧನ ಬಿ ಅರುಣ್ ಕುಮಾರ್ ಮಧುರ ಭಾವಗಳ ಸಂಕ್ರಮಣ ಪ್ರೇಮಾಮೃತದ ಹೊಂಗಿರಣ ಬಂಧು ಬಾಂಧವರ ತೋರಣ ಸಪ್ತಪದಿ ಮಾಂಗಲ್ಯಧಾರಣ ಓಲಗ ಅಕ್ಷತೆಯ ಸಂಗಮ ಭಾವ ಭಾವಮೈದುನ ಬಾಂಧವ್ಯ ಕುಟುಂಬಗಳೆರಡರ ಕಲ್ಯಾಣ ಗಟ್ಟಿಮೇಳದ ಪರಿಣಯ ರತಿ ಪತಿ ದಾಂಪತ್ಯ ಸ್ಫೂರ್ತಿ ಮಂದ ಪ್ರಕಾಶ ಅರುಂಧತಿ ದೇಹವೆರಡು ಸೀತಾರಾಮ ದಾರಿಯೊಂದು ಅರ್ಧನಾರೀಶ್ವರ ಅನುರಾಗದ ಮಧು ಚಂದ್ರ ಮಿಥುನ ಹಕ್ಕಿಗಳ ಸಮ್ಮಿಲನ ಹಸಿರುಮಲೆಗೆ ಗರ್ಭಧಾರಣ ಶುಭ ಕಾಮನೆಯ ಹೂರಣ ಸರಸ ವಿರಸಗಳ ಆಲಿಂಗನ ಸಹಬಾಳ್ವೆಯಲಿ ಸಂತಾನ ರಂಗಿನ ರಂಗೋಲಿ ಅಂಗಳ ಮನ ಮನೆಯೇ ಮಂದಿರ. ಅವಳಿಲ್ಲದ ಕ್ಷಣ ಕಳಾಹೀನ ತುಡಿತ ಮಿಡಿತಗಳ ರಿಂಗಣ ಕೋಪ ತಾಪಕೆ ಗಂಡಸುತನ ತಾಳ್ಮೆ ಹೊಂದಿಕೆ ನಿವೇದನ. ********

ಕಾವ್ಯಯಾನ

ಬದುಕು ಎನ್. ಆರ್. ರೂಪಶ್ರೀ ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ********

ಕಾವ್ಯಯಾನ

ಬದುಕು ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ******

ಕಾವ್ಯಯಾನ

ಕೊನೆಯ ಸತ್ಯ 6 ಶಾಲಿನಿ ಆರ್. ಮುಳ್ಳು ಗಿಡಗಂಟಿಗಳ ಜಾಡು ಮುಗಿಯದ ದಾರಿಯಿದು ಬರಿ ಕಾಡು, ಪಾಚಿ ಗಟ್ಟಿದ ನೆಲಕೆ ಆರದ ನೋವ ಜಾರುತಿರುವ ಸಂಬಂಧಗಳ  ಅವಯವ, ಅಂತರಂಗಕಿದು ಆಳದ ಅರಿವಿಲ್ಲ ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ, ಬೆಚ್ಚಗಿನ ನೆನಪಿಗು ಚಳಿಯ ಜಾಡು ಸದ್ದಿಲದೆ ಮುರಿಯುತಿದೆ ಮನದ ಎಲುಬಿನ ಗೂಡು, ತರ ತರದ ಪ್ರೀತಿಗು ಮುಖವಾಡದ  ತುತ್ತು, ಬಿಂಕದಲಿ ಬೀಗುತಿದೆ ಭ್ರಮೆ’ ನನ್ನ ಸೊತ್ತು, ಹೂಳ ತೆಗೆಯದ ಹೊರತು ಕೇಳ, ತಿಳಿಯದು ಅಂತರಾಳದ ಮೇಳ, ಅರಿಯಲಾರದ ನಿಜತನ ಹುಚ್ಚು ಸಂಕಲ್ಪ ಅರಿತ ಮೇಲು ಮರುಳು ಹೆಚ್ಚು ವಿಕಲ್ಪ, ಒಂಟಿ ಪಯಣಕಿದೆ ನೂರೆಂಟು  ಅಂಟು ದುಃಸ್ಪಪ್ನದಲು ಎಚ್ಚರವಿರದ ಇರುಳ ನಂಟು, ನೋವ ಹೊಳೆಗೆ ಹೆಚ್ಚು ಪದಗಳ ಹರಿವು ಏಕಾಂಗಿ ಮನಕೆ ಕಸುವು ಕೊಟ್ಟ ಅರಿವು , ಯಾರಿಗ್ಯಾರು ಅರಿವಿರದ ತಾರುಮಾರು ಅರಿತವರೆಲ್ಲರು ಕೊನೆಗೆ ಶೂನ್ಯದಲಿ ಸೇರು. ********

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಮನದ ಕತ್ತಲು ಕಳೆದು ಜ್ಯೋತಿ ಬೆಳಗುವದು ಪುಸ್ತಕ ನಿಜ ಸಂಗಾತಿ ಜೀವದ ಭಾವನೆಗಳ ಭಾವನಾಲೋಕದಲಿ ತೇಲಿಸುವದು ಪುಸ್ತಕ ನಿಜ ಸಂಗಾತಿ।। ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣವನು ಚೆಂದದಿ ಮಾಡುವುದು, ಯುಕ್ತಿಯ ಬಳಕೆಮಹತ್ವ ಸಾರುವ ಸಾಧನವಿದು ಪುಸ್ತಕ ನಿಜ ಸಂಗಾತಿ ।। ಮನುಜನನ್ನು ಸುಸಂಸ್ಕೃತನಾಗಿ ಪರಿವರ್ತನೆಗೊಳಿಸುವದು, ನಾಗರಿಕತೆ ಬೆಳೆಸಿ ಅನಾಗರಿಕತೆ ತೊಲಗಿಸುವದು ಪುಸ್ತಕ ನಿಜ ಸಂಗಾತಿ ।। ಜ್ಞಾನಕೋಶವನು ನಿತ್ಯ ತುಂಬಿಸಿ ಜ್ಞಾನಭಂಡಾರ ವೃದ್ಧಿಸುವದು, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಿಸುವದು ಪುಸ್ತಕ ನಿಜ ಸಂಗಾತಿ ।। ಬಿಜಲಿಯ ಜ್ಞಾನದಾಹ ತೀರಿಸುವ ಶರಧಿಯೇ ಆಗಿರುವದು, ತಲ್ಲೀನನಾದ ಓದುಗಾರನಿಗೆ ನೂತನ ಅರಿವು ನೀಡುವದು ಪುಸ್ತಕ ನಿಜ ಸಂಗಾತಿ।। ********

ಕಾವ್ಯಯಾನ

ಕವಿತೆಗೀಗ ಪುರುಸೊತ್ತಿಲ್ಲ! ವೈ.ಎಂ. ಯಾಕೋಳ್ಳಿ ಮತ್ತೆ ಮತ್ತೆ ಹರಿದು ಬರುವ ಕೆನ್ನೆತ್ತರ ಕಾವಲಿಯಲ್ಲಿ ಬಲಿಯಾದ ತನ್ನ ಕರುಳ ಕುಡಿಯ ಅರಸುತ್ತಿದೆ ಕವಿತೆ ಅದಕ್ಕೀಗ ಪದ ವಾಗಲು ಪುರುಸೊತ್ತಿಲ್ಲ ಅಪ್ಪನ ಬೆವರ ಹನಿ ಅವ್ವನ ಕೈತುತ್ತು ತಿಂದು ,ಪಾಠಶಾಲೆಯ ಪುಸ್ತಕದ ನಡುವೆ ಓದಿದ ಆದರ್ಶಗಳ ನೆಟ್ಟ ದಾರಿಯಲಿ ನಡೆದ ಕವಿತೆಗೆ ಎರಡು ಹೊತ್ತಿನ ಕೂಳು ಸಿಗದೆ ಪರದಾ ಡು ತ್ತಿದೆ ಅದಕ್ಕೀಗ ಪದ ವಾಗಲೂ ಪುರುಸೊತ್ತಿಲ್ಲ ತನ್ನದೇ ಓನಿಯ ಎಳೆಯ ಎದೆಗಳು ಎಲ್ಲಿಯೋ ಜೈಕಾರ ಹಾಕಿ,ಎಲ್ಲಿಯೋ ಮಲಗಿ ಯಾರದೋ ತೆವಲಿಗೆ ಹರೆಯವ ಹಾಳು ಮಾಡಿಕೊಳ್ಳುವದು ಕಂಡು ಕವಿ ತೆಯ ಎದೆಯಲ್ಲಿ ಅಳು ಜಿನುಗುತ್ತದೆ ಸಂದನಿಯೊಳಗೆ ತನ್ನದೇ ಕುಡಿ ಸಿಕ್ಕು ಗುರುತು ಸಿಗದೆ ಪರದಾಡುವ ಕವಿತೆಗಿಗ ಎದೆ ಭಾರವಾಗಿದೆ ಅದಕ್ಕೀಗ ಪದವಾಗಲು ಪುರುಸೊತ್ತಿಲ್ಲ ಮನೆಯ ಬಣ್ಣದ ಪರದೆಯ ಮೇಲೆ ಹರಿದು ಬರುತ್ತಿರುವ ಮತ್ತದೇ ಆ ಶ್ವಾಸನೆಗಳು, ಮಾತಿನ ಮಹಲಗಳು ಕವಿತೆಯನ್ನು ದಿಕ್ಕೆಡಿಸುತ್ತಿವೆ ಸುತ್ತಲಿನ ಹರೆಯಗಳು ಕೈಯ ಬಣ್ಣದ ಪಾಟಿಯ ಮೇಲಿನ ಕೀಲಿ ಮನೆಗಳ ಮೇಲೆ ಅಸ್ತವ್ಯಸ್ತವಾಗಿ ಮುಳುಗಿ ಕಾಲ ಮನೆ ಜಗತ್ತೇ ಮರೆತಿರುವುದು ಕಂಡು ಕವಿತೆ ದಿಗ್ಭ್ರಮೆ ಯಾಗಿದೆ ಅದಕ್ಕೀಗ ಪದವಾಗಲು ಪುರುಸೊತ್ತಿಲ್ಲ ಕಣ್ಣು ಕಾಣದ ಹಗಲು, ಕಣ್ಣೆ ಮುಚ್ಚದ ಇರುಳು, ರಾತ್ರಿಯ ಜಾಗದಲ್ಲಿಗ ಹಗಲು, ಹೊತ್ತೆರುವವರೆಗು ಮಲಗಿ ಹೊತ್ತು ಮುಳುಗಿದಂತೆ ಕಣ್ಣ ಕಿಲಿಸುತ್ತ ಕುಣಿವ ಕಂಗಳು ಸರಿಯಾಗಿ ಹದಿನಾರು ತುಂಬದ ಕೈ ಗಳಲ್ಲಿಗ ಎಂತೆಂಥದೋ ಬಣ್ಣದ ಗಾಜುಗಳು ಹೆಣ್ಣೋ ಗಂಡೋ ತಿಳಿಯದ ಕತ್ತಲೆಯಲ್ಲಿ ಮೈಮರೆತ ಮೈಗಳು ಕಾಣೆಯಾಗಿರುವ ತನ್ನದೇ ಕೂಸು ಅರಸುತ್ತಾ ಹೊರಟ ಕವಿತೆ ತನ್ನ ಮನೆದೇವರ ಮುಂದೆ ಬಿಕ್ಕಿ ಅಳುತ್ತಿದೆ ಸೋತು ಹೋದ ಕವಿತೆ ಎದೆಯ ಪದವಾ ದಿತು ಹೇಗೆ? ಎದೆ ತೆರೆದು ಹಾಡಿತು ಹೇಗೆ? ******************************************

ಕಾವ್ಯಯಾನ

ಗಝಲ್  ಶಿವರಾಜ್. ಡಿ ನಮ್ಮ ಅಪಮಾನ ಅವಮಾನಗಳು ಇನ್ನೂ ಸತ್ತಿಲ್ಲ ಅಸ್ಪೃಶ್ಯತೆ ಅನಾಚರ ಅಜ್ಞಾನಗಳು ಇನ್ನೂ ಸತ್ತಿಲ್ಲ ನಿಮ್ಮ ಕಾಲಿನ ಚಪ್ಪಲಿ ಹೊಲೆದವರು ನಾವು ಚಪ್ಪಲಿ ಮೆಟ್ಟು ಬೆನ್ನಿಗೆ ಹೊದ್ದ ದರ್ಪ ಇನ್ನೂ ಸತ್ತಿಲ್ಲ ಮೀಸಲಾತಿ ಸ್ವಾಭಿಮಾನ ವಿರೋಧಿಸಿದವರು ನೀವು ನಮ್ಮನ್ನು ತುಳಿದ ನಿಮ್ಮ ದುರಭಿಮಾನ ಇನ್ನೂ ಸತ್ತಿಲ್ಲ ನಿಮ್ಮ ಮನೆಯ ಹೊಲ ಗದ್ದೆ ಚಾಕರಿಗೆ ಬೇಕು ನಾವು ನಮ್ಮನ್ನು ಹೊರಗಿಟ್ಟವರ ಮಡಿವಂತಿಕೆ ಇನ್ನೂ ಸತ್ತಿಲ್ಲ ನಿಮ್ಮ ಮಲಮೂತ್ರಗಳ ಹೊಲಸು ಹೊತ್ತವರು ನಾವು ಶ್ವಪಚರೆಂದು ಜರಿದ ಕೊಳಕು ಮನಸ್ಸು ಇನ್ನೂ ಸತ್ತಿಲ್ಲ ಸಂವಿಧಾನದ ಆಶಯಗಳು ಉಳಿಯಬೇಕು ಬಾಬಾ ಬೆಂಕಿಹಚ್ಚ ಹೊರಟವರ ಹೀನ ಬುದ್ದಿ ಇನ್ನೂ ಸತ್ತಿಲ್ಲ. ********

ಕಾವ್ಯಯಾನ

ಮಾಯಾ ಪೆಟ್ಟಿಗೆ ಮತ್ತು ಬಾಂಬರುಗಳು    ನೂರುಲ್ಲಾ ತ್ಯಾಮಗೊಂಡ್ಲು ಅದೊ ಮಾಯಾ ಪೆಟ್ಟಿಗೆಯಿಂದವತರಿಸಿ  ಧಗ್ಗನೆದ್ದು ಬಂದಿವೆ  ಗೋದಿ ಗಾವಿಲರು, ಕೋತಿಗಳು ಅಥವ ಕಿಲಬುಕಾರರು  ಅಂದು ಕುಂಪಣಿಯ ಛೇಲಗಳಂತಿವರು  ಇಂದು ಈ ಹೊತ್ತಿಗೆ  ಅಲ್ಲಾವುದ್ದೀನನ ಚಿರಾಗ್ ಬೆಳಕಲಿ  ವಿಸ್ಮಯ ಲೋಕಕಂಡಿದ್ದ ಬಾಲ್ಯದಿನಗಳೇ ಚೆಂದ  ಇಂದು ಈ ೨೪/7 ನ ಪೆಟ್ಟಿಗೆಯಿಂದ ಪೊಳ್ಳು ಅಥವ ಬೆಂಕಿ ಕೆಕ್ಕರಿಸುವ  ದಿನಗಳು ಲೋಕವನ್ನೇ ಸುಡುತಿದೆ  ಅದೊ ಅಲ್ಲಿ ರಂಜನೆ, ರಮ್ಯಕಾಮ, ವಿನೋದ ವೂ ಉಂಟಲ್ಲ ಎಂದವನಿಗೆ ದುರಿತ ಕಾಲದ ವಿವೇಚನೆವಿಲ್ಲವೆಂದು ಮೌನವಾದೆ  ಗಡಿಗಳು ದೇಶಕೋಶಗಳಲಿ  ವಿಷವೇ ವಾಹಿನಿಯಾಗಿ ಹರಿಯುತಿಹ  ಈ ಹೊತ್ತಲಿ  ಜನರ ಅಜ್ಞಾನಕ್ಕೆ ದೀವಿಗೆ ಹಿಡಿಯಲೂ ಬಾರದ  ಬೂಟಾಟಿಕೆಯ ವ್ಯಂಜಕರಿಗೆ ಶಾಪ  ನೆನ್ನೆ ವೇದಿಕೆಯಲಿ ಗೆಳೆಯರು  ವಿಷ ಬಾಂಬುಗಳೆಸೆಯುವ ಮಾಯಾ ಪೆಟ್ಟಿಗೆ  ಯ ಕಿಂಡಿಗಳೇ ಮುಚ್ಚಿ ಶಾಶ್ವತವಾಗಿ ಎಂದಾಗ  ವಿಚಲಿತನಾದೆ  ಎನ್ನ ಮನೆಗೆ ತಾಗದ ಬಾಂಬು  ಪಕ್ಕದ ಮನೆಯವ ಬಚ್ಚಿಟ್ಟುಕೊಂಡರೆ  ಒಂದು ದಿನ ನಾವುಗಳೇ ಸಿಡಿದು ಬೂದಿಯಾಗುವೆ -ವೆಂದು ಋಜುಮಾರ್ಗದ ಕಡೆ ಕಣ್ಹೊರಳಿಸಿ ನೋಡಿದೆ ; ಅಲ್ಲಿ ಬಾಂಬುರುಗಳನ್ನು ನಿಷ್ಕ್ರಿಯಿಸಲು ಒಂದು  ನಿಷ್ಕ್ರಿಯ ಪಡೆಯಿದೆ – ಬಾ ಹೋಗೋಣ ಎಂದೆ ನಿರುಮ್ಮಳವಾಗಿ  *********

Back To Top