Category: ಕಾವ್ಯಯಾನ

ಕಾವ್ಯಯಾನ

ಅಮ್ಮ….

ಅಮ್ಮಂದಿರ ದಿನದ ವಿಶೇಷ ಕವಿತೆ ಅಕ್ಷತಾ ಜಗದೀಶ ನೋವಿನಲ್ಲು ನಗುವ ಚೆಲ್ಲುವವಳು..ತಾನು ಹಸಿದು ಕೈ ತುತ್ತು‌ ನೀಡುವವಳುಎಷ್ಟೇ ಕಷ್ಟಗಳಿದ್ದರು,ಎಷ್ಟೇ ದು:ಖವಿದ್ದರುತನ್ನ ಮಗುವಿಗಾಗಿ ಕೇವಲಸುಖವನ್ನೇ ಬಯಸಿದವಳು… ತನ್ನ ನೋವಿನ ದಿನಗಳನುತನ್ನಲ್ಲಿಯೇ ಕೊನೆಗಾಣಿಸಿತನ್ನ ಕರುಳಿನ ಕುಡಿಗಾಗಿಹೂವಿನ ಹಾಸಿಗೆ ನಿರ್ಮಿಸಿದವಳು..ಮುಳ್ಳುಗಳೇ ಕಾಲಿಗೆ ಚುಚ್ಚಿದರುಕಣ್ಣಿರ ಹನಿ ಮಗುವಿಗೆ ತಾಗದಂತೆಎಚ್ಚರಿಕೆ ವಹಿಸಿದವಳು.. ಮಗುವಿನ ಅಳುವಿನಲ್ಲಿ ತಾ ಅತ್ತಳುಕಂದನ ನಗುವಿನಲ್ಲಿ ತಾ ನಲಿಡಾಡಿದಳುಅಮ್ಮ ಎಂಬ ಒಂದು ನುಡಿಯ ಕೇಳಿತನ್ನೇಲ್ಲ ನೋವನ್ನು ಮರೆತಳು.. ವಿಶಾಲವಾದ ಕಡಲಿನ ಹಾಗೆ ಅಮ್ಮನಿನ್ನ ಮಮತೆ….ಅಮ್ಮ ಎಂಬ ಪದಕ್ಕೆ ಅಮ್ಮನೇ ಸಾಟಿನಮನ ನಿನ್ನ […]

ಕನಸ ಬಿತ್ತಿರಿ..

ಕವಿತೆ ಕನಸ ಬಿತ್ತಿರಿ.. ಚೈತ್ರ ತಿಪ್ಪೇಸ್ವಾಮಿ ಮಕ್ಕಳಲ್ಲಿ ರೈತನಾಗಬೇಕೆಂಬ ಕನಸ ಬಿತ್ತಿರಿ….ರೈತನಿಂದ ದೇಶದ ಪ್ರಗತಿ ಎಂದುಅಚ್ಚೊತ್ತಿರಿಆಧುನಿಕ ತಂತ್ರಜ್ಞಾನದ ಕೃಷಿ ಮಾಡಲು ಮಕ್ಕಳ ಪ್ರೇರೇಪಿಸಿರಿ…. ಇರುವ ಜಾಗದಲ್ಲಿ ಹೂವು ಹಣ್ಣು ಕಾಯಿ ಪಲ್ಯ ಬೆಳೆಯುವುದಾ ಕಲಿಸಿರಿ..ರಾಸಾಯನಿಕ ತ್ಯಜಿಸಿ ಸಾವಯವ ಬಳಸಿಮಾದರಿ ರೈತನಾಗಲು ಅವಕಾಶ ಕೊಡಿ.. ಬರಿ ಡಾಕ್ಟರ್ ಇಂಜಿನಿಯರ್ ಒತ್ತಾಯ ಬಿಡಿಕೃಷಿ ಕೈಗೊಳ್ಳಲು ಒತ್ತಾಸೆ ನೀಡಿಕೆಲಸಕ್ಕಾಗಿ ನಗರದ ವಲಸೆ ತಡೆಯಿರಿಇಲ್ಲೆ ಇದೆ ಕೃಷಿ ಕಾಯಕ ತೋರಿಸಿರಿ ಸೂಟು-ಬೂಟು ಕೊಟ್ಟರಷ್ಟೇ ಬದುಕೇ?ಪಂಚೆಯುಟ್ಟು ನೇಗಿಲು ಹಿಡಿದು ಉತ್ತಿ ಬಿತ್ತಿಬೆಳೆಯುವ ಸಂಸ್ಕೃತಿ ನಮ್ಮದಲ್ಲವೇ? […]

ನಾನು ನಾನೆಂದು ಬೀಗಿ

ಕವಿತೆ ನಾನು ನಾನೆಂದು ಬೀಗಿ ಅಭಿಜ್ಞಾ ಪಿ ಎಮ್ ಗೌಡ ಎಲ್ಲೆಲ್ಲೂ ಚಿತಾಗಾರಸ್ಮಶಾನಗಳ ದರ್ಬಾರುಬಲುಜೋರು ಜೋರು.!ಬೀದಿ ಬೀದಿಗಳಲ್ಲಿಸಾಲುಸಾಲು ಶವಗಳ ದಿಬ್ಬಣಚಿತಾಭಸ್ಮದ ಕಾಯಕಲ್ಪಕೆಮುಖಮಾಡಿ ನಿಂತಿವೆ…. ವಿಧಿಯಿಲ್ಲದೆಮುಷ್ಕರ ಹೂಡಲುಹೆಣಗಳ ರಾಶಿಗಳುಸ್ಮಶಾನದವಿಳಾಸಕಾಗಿ ಅರ್ಜಿ ಹಾಕುತಿವೆ…ಅಹಿಂಸೆಯ ಅಹವಾಲುದೇವರ ಅವಗಾಹನೆಗೆಕೊಡಲು ತಾ ಮುಂದು ನಾ ಮುಂದೆಂದು… ಅವಕ್ಕಾದಭಂಡಗೇಡಿ ರಣಹದ್ದುಗಳುಬಾಯ್ಬಿಡದ ಗಿಡುಗಗಳ ಮಾಂತ್ರಿಕತೆಚಾಟಿ ಏಟಿನ ಮಾತಿಗೆಪುದುರುಗುಟ್ಟಿವಿಲವಿಲಗುಟ್ಟಿರಲು… ಒಡ್ದೋಲಗದಮಾರ್ಯಾದೆ ಹರಾಜಾಗುತಿದೆಸಣ್ಬುದ್ಧಿ ಸ್ವಾರ್ಥದೊಳುರಕ್ತ ಬೀಜಾಸುರರ ಸಾಮ್ರಾಜ್ಯಕಂಪಿಸುತಿದೆಎಂಟದೆಯ ಭಂಟನಂತಿರುವಭೂಪನಿಂದ… ರುಜುವಾತು ಮಾಡುತಿದೆಉಚ್ಛಿಷ್ಠಕಾಗಿ ಕೈಚಾಚಿದಪುಂಡತನದ ವಕೌಸಗಳ!ಆಸೆಬುರುಕಕೀಚಕಗಳನು ಚಂಡಾಡಿಹುರುಳಿಸಲು ಸಜ್ಞಾಗುತಿದೆ…. ನಾನು ನಾನೆಂದು ಮರೆದದುಷ್ಟ ನೀಚನಹಂಕಾರಮಣ್ಣುಮುಕ್ಕುತಿದೆ….ಗಹಗಹಿಸುತಿವೆ ಕಾಷ್ಠಗಳುಶಪಿಸುತಿದೆ ಧರಣಿ.!ವಹ್ನಿಯೊಂದಿಗೆ ಸಲಿಲವುಸಾಥು ಕೊಟ್ಟು ನಗುತಿರಲುಅವನಳಿವಿನಂಚು […]

ಕೊರೊನಾಕಾಲದಕವಿತೆ

ಈಗ ಬೇಕಿರುವುದು
ಬಿಸಿಯುಸಿರು
ನನಗೂ ಮತ್ತೆ ನಿನಗೂ
ಮುಜುಗರ ,ನಾಚಿಕೆಗಳಿದ್ದರೆ
ವಾಪಸ್ಸು ಹೋಗು

ಅವನ ಭಾವಗಳಿಗೆ ಮುಖವಿಲ್ಲ
ಅವನ ಆಸೆಗಳಿಗೆ ಕಣ್ಣಿಲ್ಲ
ಅವನ ಬಯಕೆ ಚಳಿಗಾಲದ ಬಿಸುಪು
ಬೇಸಿಗೆಯ ತಂಪು

ವಿರಹ ವೇದನೆ

ನಿನ್ನ ಅಂತರಂಗದ ನುಡಿ ಕರೆಯುತಿದೆ ನನ್ನನು
ಮನದ ಮಾತಲಿ ಮೌನ ಹುದುಗಿಸಿ
ಏಕೆ? ಸತಾಯಿಸುತಿರುವೆ ಗೆಳತಿ ಬಂದು ಸಂತೈಸು
ನೀ ನಡೆವ ದಾರಿಯಲ್ಲಿ ಹೂಹಾಸಿ ಸ್ವಾಗತಿಸುವೆ//

ಸಾವಿನ ಮೆರವಣಿಗೆ

ಆದರೂ ಕಗ್ಗತ್ತಲ ಕರಾಳ ರಾತ್ರಿಯಲಿ
ಮನೆ ಬೆಳಗುವ ಹಣತೆಯಂತೆ
ಬತ್ತಿಲ್ಲ ಆಶಾವಾದ ಸತ್ತಿಲ್ಲ ಆತ್ಮವಿಶ್ವಾಸ
ಗೆದ್ದೇ ಗೆಲ್ಲುತ್ತೇವೆ ಮತ್ತೆ ಪುಟಿದು

Back To Top