ಕವಿತೆ
ಕನಸ ಬಿತ್ತಿರಿ..
ಚೈತ್ರ ತಿಪ್ಪೇಸ್ವಾಮಿ
ಮಕ್ಕಳಲ್ಲಿ ರೈತನಾಗಬೇಕೆಂಬ ಕನಸ ಬಿತ್ತಿರಿ….
ರೈತನಿಂದ ದೇಶದ ಪ್ರಗತಿ ಎಂದುಅಚ್ಚೊತ್ತಿರಿ
ಆಧುನಿಕ ತಂತ್ರಜ್ಞಾನದ ಕೃಷಿ ಮಾಡಲು ಮಕ್ಕಳ ಪ್ರೇರೇಪಿಸಿರಿ….
ಇರುವ ಜಾಗದಲ್ಲಿ ಹೂವು ಹಣ್ಣು ಕಾಯಿ ಪಲ್ಯ ಬೆಳೆಯುವುದಾ ಕಲಿಸಿರಿ..
ರಾಸಾಯನಿಕ ತ್ಯಜಿಸಿ ಸಾವಯವ ಬಳಸಿ
ಮಾದರಿ ರೈತನಾಗಲು ಅವಕಾಶ ಕೊಡಿ..
ಬರಿ ಡಾಕ್ಟರ್ ಇಂಜಿನಿಯರ್ ಒತ್ತಾಯ ಬಿಡಿ
ಕೃಷಿ ಕೈಗೊಳ್ಳಲು ಒತ್ತಾಸೆ ನೀಡಿ
ಕೆಲಸಕ್ಕಾಗಿ ನಗರದ ವಲಸೆ ತಡೆಯಿರಿ
ಇಲ್ಲೆ ಇದೆ ಕೃಷಿ ಕಾಯಕ ತೋರಿಸಿರಿ
ಸೂಟು-ಬೂಟು ಕೊಟ್ಟರಷ್ಟೇ ಬದುಕೇ?
ಪಂಚೆಯುಟ್ಟು ನೇಗಿಲು ಹಿಡಿದು ಉತ್ತಿ ಬಿತ್ತಿ
ಬೆಳೆಯುವ ಸಂಸ್ಕೃತಿ ನಮ್ಮದಲ್ಲವೇ?
ಪಬ್ಬು ಬಾರ್ ಮೋಜು-ಮಸ್ತಿ
ಅನಾರೋಗ್ಯಕ್ಕೆ ದಾರಿಯಾದರೆ
ಸುಗ್ಗಿಯೊಡನೆ ಹಿಗ್ಗಿ ನಲಿವ
ಸಂಗೋಪನೆಯೇ ಆರೋಗ್ಯಕ್ಕೆ ದಾರಿ
ಪೋಷಕರೇ ಮಕ್ಕಳಲ್ಲಿ ರೈತನಾಗಬೇಕೆಂಬ ಕನಸು ಬಿತ್ತಿರಿ..
**********