Category: ಕಾವ್ಯಯಾನ

ಕಾವ್ಯಯಾನ

ಕಾವ್ಯ ಸಂಗಾತಿ ಚುಕ್ಕಾಣಿ ಬಯಸಲಿಲ್ಲ ಅರಸಲಿಲ್ಲ ಅರಸನಾಗಲುಕಿರೀಟದಂತೆ ಶಿರವೇ ರಲುಬಯಸಲಿಲ್ಲ ಗುಲಾಮನಾಗಲುಯಾರ ಕಾಲಡಿಯ ದೂಳಾಗಲು ಮುಚ್ಚಿಡಲಿಲ್ಲ ಮನದೊಳಗೆಯಾವ ಅಧಿಕಾರದಾಸೆಬಚ್ಚಿಟ್ಟಿದ್ದೊಂದೇ ಮನ ಮೆಚ್ಚಿಸೋಹರ್ಷಿಸೋ ಸಾಕಾರದಾಸೆ ಯಾರ ಮುಡಿ ಏರ ಬಯಸಲಿಲ್ಲಮುಡಿಪಾಗಿಸಿ ಯಾರನ್ನು ಕಾಯಲಿಲ್ಲದೇಹವ ಮಡಿ ಮಾಡಿಕೊಳ್ಳಲಿಲ್ಲವಡಬಾನಲದೊಳ್ ಯಾರನ್ನು ಸುಡಲಿಲ್ಲ ಬಯಸಿದ್ದೊಂದೇ ನನ್ತನದಕಂಪನ್ನು ಚಿಮ್ಮಿಸಲೆಂದೇಸುಕೋಮಲ ಕಾಂತಿಯ ಚಿತ್ತದಿ ಧನಾತ್ಮಕತೆಯ ಅರುಹಲೆಂದೇ ಬಯಸಿದ್ದೊಂದೇ ಜನ್ಮವನ್ನು ಅದುಸ್ವರ್ಗದಲ್ಲೂ ನರಕದಲ್ಲಿ ಅರಿಯೇಜನ್ಮಕ್ಕೆ ಶುಭಾಶಯ ವಾಗಬಲ್ಲೇಮರಣದಿ ಮಸಣದಲ್ಲಿ ಅಲಂಕಾರವಾಗಬಲ್ಲೇ ಅರಿತಿಲ್ಲ ಯಾರ ಬಾಳಿನ ಹೂರಣ ತೋರಣವೋತಂದ್ರೆ, ವೀರಭದ್ರೇಶ್ವರನ ಮುಡಿ ಸೇರುವಾಸೆಚರಣಗಳ ಸೋಕಿದರೆ ಪಾವನವು ಅಂದುಕಾರಣ ಜನಿಸಿದೆ […]

ನೇತು ಬಿದ್ದ ಹಾರ

ಗುಹೆಯ ಕತ್ತಲ ನೀರಬಾವಿ ನಿಶ್ಯಬ್ದ ಶಬ್ದಗಳ ಹೆಕ್ಕಿ
ಒಂದರ ಹಿಂದೊಂದು ಪೋಣಿಸಿ ನೆನಪುಗಳ
ತಯಾರಿಸುತ್ತಾಳೆ ಮುದುಕಿ

ಬಿಗಿದಪ್ಪಿಕೊಳ್ಳುವ ನೆನಪುಗಳು

ಬಿಡಿಸಿಕೊಂಡಷ್ಟೂ
ಬಿಗಿದಪ್ಪಿಕೊಳ್ಳುತ್ತವೆ
ನಿನ್ನ ನೆನಪುಗಳು ನಲ್ಲ

ಗಜಲ್

ಓಡಿ ಹೋದ ಪ್ರೇಮಿಗಳಿಗೆ ಶಕುನಿಯಾಗದಿರು ಪ್ಯಾರಿ
ಗಾಂಧಿ ತಾತನ ಮೂರು ಮಂಗಗಳೂ ಮಂಗಮಾಯ ಮಾಡದಿರು ಪ್ಯಾರಿ

ನೆನಪ ಹೊತ್ತು

ಬಿಸಿಲಲ್ಲೇ ನಿಂತರೂ ಕೆಂಪು ಗುಲಾಬಿ ತನ್ನ ಮುಡಿದವರಿಗೆ ಮುದವ ಕೊಟ್ಟು
ಜೊತೆಗೆ ಮುಳ್ಳಿದ್ದರೂ ನಲಿವ ಹೂವ ಬಿರಿವಂತೆ ನಾನಿರುವೆ ಇಲ್ಲಿ ನಿನ್ನ ನೆನಪ ಹೊತ್ತು

ಪ್ರಿಯನಿಗೆ ಓಲೆ

ನನ್ನ ಅದರಗಳ ಜೇನ ಸವಿಯುವೆಯಾ
ನನ್ನ ಉಸಿರಿಗೆ ಜೀವ ತುಂಬುವೆಯ
ನಿನ್ನ ಬಿಗಿ ಅಪ್ಪುಗೆಯ ಬಿಸಿ ಉಣಿಸುವೆಯ
ಪ್ರಣಯದೋಕುಳಿಯ ಚೆಲ್ಲುವೆಯ
ಕಮರಿದ ಜೀವದಿ ಹೊಸ ಚಿಗುರು ತರುವೆಯ

ಗಜಲ್‍

ನನ್ನ ಓರೆಕೋರೆಗಳ ತಿದ್ದಲು ಕನ್ನಡಿಯಾಗುಳಿದಿದ್ದೆ ನೀನು
ಒಡೆದ ಕನ್ನಡಿಯ ಕೊಂಕುನೋಟಕ್ಕೆ ಬೆದರದಂತೆ ಅಳಿಸಿಬಿಡು ಗುರುತು

Back To Top