ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಿಯನಿಗೆ ಓಲೆ

.

ಹೇಗೆ ಹೇಳಲಿ ನಿನಗೆ
ನನ್ನ ಮನದ ಇಂಗಿತವನ್ನು
ಬಯಸುವೆ ನಿನ್ನ ಸನ್ನಿಹಿತ ವನ್ನು
ಬರುವೆಯಾ ಸಂಗಾತಿಯಾಗಿ
ಕೊನೆತನಕ ನನ್ನಜೊತೆಯಾಗಿ

ಮಧುರ ನಿನ್ನ ಪ್ರೇಮಸಂಗಮ
ಮೃದು ಮಾತುಗಳ ಸಿಹಿಔತಣ
ಕುಡಿನೋಟ ಸುಮ ಬಾಣ
ಕೋಮಲ ಸ್ಪರ್ಶ ಸುರಪಾನ
ನಡೆ ನಯ ನಾಜೂಕಿನ ಪೂರಣ

ನನ್ನ ಮುದ್ದು ಇನಿಯಾ
ಪ್ರೀತಿ ರಾಜ್ಯದ ಒಡೆಯ
ನಿನ್ನ ಹೃದಯ ಸಿಂಹಾಸನಕ್ಕೆ
ನನ್ನ ಕೂಗಿ ಒಲೈಸುವೆಯ
ನೆಮ್ಮದಿಯ ಮುದ ನೀಡುವೆಯ

ಎನ್ನ ಜಿಹ್ವೆಯ ನುಡಿಯಾಗುವೆಯ
ಭಾವ ತರಂಗಕೆ ಲಯವಾಗುವೆಯ
ಹೃದಯಕೆ ಕಂಪನವಾಗುವೆಯಾ
ನಾಡಿಗಳ ಬಡಿತವಾಗುವೆಯಾ
ಮನ ಮಂದಿರದಿ ದೀಪವಾಗುವೆಯಾ

ನನ್ನ ಅದರಗಳ ಜೇನ ಸವಿಯುವೆಯಾ
ನನ್ನ ಉಸಿರಿಗೆ ಜೀವ ತುಂಬುವೆಯ
ನಿನ್ನ ಬಿಗಿ ಅಪ್ಪುಗೆಯ ಬಿಸಿ ಉಣಿಸುವೆಯ
ಪ್ರಣಯದೋಕುಳಿಯ ಚೆಲ್ಲುವೆಯ
ಕಮರಿದ ಜೀವದಿ ಹೊಸ ಚಿಗುರು ತರುವೆಯ

ಬದುಕಿನ ಬೇಸಿಗೆಗೆ ತಂಪಾಗುವೆಯ
ಸ್ತಬ್ಧ ಆಲಯದಿ ಪಿಸುದನಿಯಾಗುವೆಯಾ
ನಾ ಬರೆವ ಸಾಲುಗಳಿಗೆ ಪದವಾಗುವೆಯ
ನನ್ನ ಹೆಜ್ಜೆಗಳ ಜೊತೆಯಾಗಿ ಗುರುತು ಬರೆಯುವೆಯಾ
ಜೀವನ ಜೋಕಾಲಿ ತೂಗುವ ಇನಿಯ ನೀನಾಗುವೆಯಾ


ಶಾಲಿನಿ ಕೆಮ್ಮಣ್ಣು

About The Author

Leave a Reply

You cannot copy content of this page

Scroll to Top