ಕಾವ್ಯ ಸಂಗಾತಿ
ನೇತು ಬಿದ್ದ ಹಾರ
ಬಿ.ಶ್ರೀನಿವಾಸ
ಬೆಳೆದ ಸೀಮೆಯಿಂದ ಅಸೀಮ ಊರುಗಳವರೆಗೂ ಸುಗಂಧ ಪರಿಮಳ
ಗುಹೆಯ ಕತ್ತಲ ನೀರಬಾವಿ ನಿಶ್ಯಬ್ದ ಶಬ್ದಗಳ ಹೆಕ್ಕಿ
ಒಂದರ ಹಿಂದೊಂದು ಪೋಣಿಸಿ ನೆನಪುಗಳ
ತಯಾರಿಸುತ್ತಾಳೆ ಮುದುಕಿ
ಕೈಯ್ಯ ಸುಕ್ಕುಗಳೊಂದೂ ಸೋಕದೆ ಅರಳುತ್ತದೆ
ಬಣ್ಣ ಬಣ್ಣದ ಗೊಂಡೇವು ಕಟ್ಟುವನು ಮಗ
ಘಮಘಮಿಸುವ ಅತ್ತರನು ತುಸು ಹೆಚ್ಚೇ ಹೊಡೆಯುತ್ತಾನೆ
ತೊಡುವವನ ಸಂಭ್ರಮದಲಿ
ಮದುವೆ ಮುಗಿದ ಹಂದರದ ಮೌನ
ಹೊಸ ಆರ್ಡರು ಬರುವ ತನಕ
ಮಂತ್ರಿ ಮಹೋದಯರ ಮನೆಗಳಲ್ಲಿ
ನೇತು ಬಿದ್ದಿದೆ ಹಾರ
ಬೆಚ್ಚುವನು
ಆರ್ಡರು ಕೊಳ್ಳಲು ಹೋದ ಮಗ
ಥೇಟ್!
ತನ್ನವ್ವನ ಕೈಗಳೇ ನೇತು ಬಿದ್ದುದು ನೆನೆದು!
ಮನ ತುಂಬುವ ಕವನ.
It touches every heart sir
Best
ತುಂಬಾ ಚೆನ್ನಾಗಿದೆ ಸರ್
ಹಾವೇರಿ ನೆನಪು ಸರ
ಚೆನ್ನಾಗಿದೆ ಸರ್.