ಬಿಗಿದಪ್ಪಿಕೊಳ್ಳುವ ನೆನಪುಗಳು

ಕಾವ್ಯ ಸಂಗಾತಿ

ಬಿಗಿದಪ್ಪಿಕೊಳ್ಳುವ ನೆನಪುಗಳು

The Pain Of Memories, Painting by Kos Cos | Artmajeur

ಬಿಡಿಸಿಕೊಂಡಷ್ಟೂ
ಬಿಗಿದಪ್ಪಿಕೊಳ್ಳುವ
ನಿನ್ನ ನೆನಪುಗಳು

ಆಕಾಶಕ್ಕೇರಿಸಿ
ಪಾತಾಳಕ್ಕಿಳಿಸಿ
ಸರ್ಕಸ್ ಮಾಡಿಸುತ್ತವೆ

ಅಳುವ ಇಂಜೆಕ್ಷನ್ ಕೊಟ್ಟು
ನಗುವ ಕಚಗುಳಿಯಿಟ್ಟು
ಚಮತ್ಕಾರ ಮಾಡುತ್ತವೆ

ನೀನಿಲ್ಲದೆ ಸಾಗುವ ಹಾದಿಯಲ್ಲಿ
ನಿನ್ನ ನೆರಳಿನ ಹೆಜ್ಜೆಗುರುತು
ಸದಾಜೊತೆ ನಡೆಯುತ್ತದೆ

ನೀನಿಲ್ಲವೆಂಬ ನೋವ ಮರೆಸಿ
ನನ್ನ ನಗುವನ್ನಷ್ಟೇ ಜಗಕ್ಕೆ ಪರಿಚಯಿಸಿ
ಮೌನವಾಗಿ ನನ್ನೊಳಗೆ ಮಿನುಗುತ್ತವೆ

ಚುಕ್ಕಿ- ಚಂದ್ರಮನಂತೆ
ಗುಡುಗು- ಸಿಡಿಲಿನಂತೆ
ನನ್ನೆದೆಯ ಹಾಡಾಗುತ್ತದೆ

ಬಿಡಿಸಿಕೊಂಡಷ್ಟೂ
ಬಿಗಿದಪ್ಪಿಕೊಳ್ಳುತ್ತವೆ
ನಿನ್ನ ನೆನಪುಗಳು ನಲ್ಲ….

——————-

ಒಲವು

2 thoughts on “ಬಿಗಿದಪ್ಪಿಕೊಳ್ಳುವ ನೆನಪುಗಳು

  1. ಕವಿತೆ ಚೆನ್ನಾಗಿದೆ. ನೆನಪಿನ ಭಾವನೆ ಮಧುರವಾಗಿ ಮೂಡಿವೆ.

Leave a Reply

Back To Top