ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಚುಕ್ಕಾಣಿ ಬಯಸಲಿಲ್ಲ

Abstract Art & Canvas Prints - Abstract Wall Art | Great Big Canvas

ಅರಸಲಿಲ್ಲ ಅರಸನಾಗಲು
ಕಿರೀಟದಂತೆ ಶಿರವೇ ರಲು
ಬಯಸಲಿಲ್ಲ ಗುಲಾಮನಾಗಲು
ಯಾರ ಕಾಲಡಿಯ ದೂಳಾಗಲು

ಮುಚ್ಚಿಡಲಿಲ್ಲ ಮನದೊಳಗೆ
ಯಾವ ಅಧಿಕಾರದಾಸೆ
ಬಚ್ಚಿಟ್ಟಿದ್ದೊಂದೇ ಮನ ಮೆಚ್ಚಿಸೋ
ಹರ್ಷಿಸೋ ಸಾಕಾರದಾಸೆ

ಯಾರ ಮುಡಿ ಏರ ಬಯಸಲಿಲ್ಲ
ಮುಡಿಪಾಗಿಸಿ ಯಾರನ್ನು ಕಾಯಲಿಲ್ಲ
ದೇಹವ ಮಡಿ ಮಾಡಿಕೊಳ್ಳಲಿಲ್ಲ
ವಡಬಾನಲದೊಳ್ ಯಾರನ್ನು ಸುಡಲಿಲ್ಲ

ಬಯಸಿದ್ದೊಂದೇ ನನ್ತನದ
ಕಂಪನ್ನು ಚಿಮ್ಮಿಸಲೆಂದೇ
ಸುಕೋಮಲ ಕಾಂತಿಯ ಚಿತ್ತದಿ ಧನಾತ್ಮಕತೆಯ ಅರುಹಲೆಂದೇ

ಬಯಸಿದ್ದೊಂದೇ ಜನ್ಮವನ್ನು ಅದು
ಸ್ವರ್ಗದಲ್ಲೂ ನರಕದಲ್ಲಿ ಅರಿಯೇ
ಜನ್ಮಕ್ಕೆ ಶುಭಾಶಯ ವಾಗಬಲ್ಲೇ
ಮರಣದಿ ಮಸಣದಲ್ಲಿ ಅಲಂಕಾರವಾಗಬಲ್ಲೇ

ಅರಿತಿಲ್ಲ ಯಾರ ಬಾಳಿನ ಹೂರಣ ತೋರಣವೋ
ತಂದ್ರೆ, ವೀರಭದ್ರೇಶ್ವರನ ಮುಡಿ ಸೇರುವಾಸೆ
ಚರಣಗಳ ಸೋಕಿದರೆ ಪಾವನವು ಅಂದು
ಕಾರಣ ಜನಿಸಿದೆ ನಾನೊಂದು ಹೂವು


ಚಂದ್ರು ಪಿ ಹಾಸನ್

About The Author

2 thoughts on “”

  1. ಪ್ರಸ್ತುತ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಸಾರುವ ಕವನವಾಗಿದೆ

Leave a Reply

You cannot copy content of this page

Scroll to Top