ಕಾವ್ಯ ಸಂಗಾತಿ
ಹಾಯ್ಕುಗಳು
೧
ಸಮಸ್ಯೆಗಳು
ಸದೃಢಗೊಳಿಸುವ
ಸಾಧನಗಳು
೨
ಆತ್ಮವಿಶ್ವಾಸ
ಸೋಲನ್ನು ಗೆಲ್ಲಿಸುವ
ಸಮರವೀರ
೩
ಬೇಸರವೇಕೆ ?
ಬದಕೊಂದು ಪ್ರವಾಸ
ಸುಸ್ತು ಸಹಜ !
೪
ಕಲಾ ಜಗತ್ತು
ಸುತ್ತೋಣ ಬನ್ನಿ,ರಮ್ಯ
ರಂಗಿನ ತಾಣ!
೫
ಮಾಮರದಲ್ಲಿ
ಕೋಗಿಲೆಗಳ ಹಾಡು
ಕಾಗೆಯ ಗೂಡು !
೬
ನಗುವೆಂಬುದು
ನಾವೇ ತಯಾರಿಸುವ
ಜೀವನೌಷಧಿ !
೭
ಕಾಮನಬಿಲ್ಲು
ಮಳೆ ಮೋಡಕ್ಕೆರೆದ
ಪ್ರೀತಿಯ ಬಣ್ಣ
೮
ಒಂದು ಗುಟುಕು
ಚಹಾ, ಸ್ಪೂರ್ತಿದಾಯಕ
ಚಪ್ಪರಿಸೋಣ.
೯
ನದಿಯ ನೀರು
ಹಾಡುವುದು ಸುಮ್ಮನೆ
ಆನಂದ ರಾಗ
೧೦
ತಣ್ಣನೆ ಗಾಳಿ
ತೀಡುವುದು ಘಮ್ಮನೆ
ವ್ಯಾಪಾರವಿಲ್ಲ
ಭೀಮರಾಯ ಹೇಮನೂರ
ತುಂಬಾ ಅರ್ಥಪೂರ್ಣ
ಹೈಕು ರಚನೆ ಸರ್
ಅಭಿನಂದನೆಗಳು
ಧನ್ಯವಾದಗಳು ಮೇಡಂ. ತಮ್ಮೆಲ್ಲರ ಸ್ಪೂರ್ತಿ, ಪ್ರೇರಣೆಯಿಂದ ಎನ್ನ ಸಾಹಿತ್ಯಾಸಕ್ತಿ ವೃದ್ಧಿಯಾಗಲು ಕಾರಣವಾಗಿದೆ.
Super. ಬೀಜಿ
Thanks ri sara