ನೆನಪ ಹೊತ್ತು

ಕಾವ್ಯ ಸಂಗಾತಿ

ನೆನಪ ಹೊತ್ತು

ಸ್ವೀಕರಿಸು
ಜೀವನವ ನಿನ್ನೆಡೆಗೆ ಬಂದಂತೆ
ಬದಿಗಿಟ್ಟು ಎಲ್ಲ ಚಿಂತೆಗಳ ಅಂತೆಕಂತೆ

ತನ್ನೊಳಗ ಭಾವಗಳ ಗುಡಿಸಿ ರಾಶಿಯ ಮಾಡಿ ಪ್ರೀತಿಯ ಜೇನು ನನ್ನ ಜೀವಕ್ಕಿಟ್ಟು
ನೋಡಿಯೂ ನೋಡದ ನಿರ್ದಯಿ ನೀನಂತೆ
ಹೇಗೆ ಬಾಳುವೆ ನಾನು ನಿನ್ನ ಬಿಟ್ಟು

ಬಿಸಿಲಲ್ಲೇ ನಿಂತರೂ ಕೆಂಪು ಗುಲಾಬಿ ತನ್ನ ಮುಡಿದವರಿಗೆ ಮುದವ ಕೊಟ್ಟು
ಜೊತೆಗೆ ಮುಳ್ಳಿದ್ದರೂ ನಲಿವ ಹೂವ ಬಿರಿವಂತೆ ನಾನಿರುವೆ ಇಲ್ಲಿ ನಿನ್ನ ನೆನಪ ಹೊತ್ತು

ಸೂರ್ಯನು ದಿನವೂ ಮುಳು ಮುಳುಗಿ ಎದ್ದರೂ
ಲೋಕವ ಪೊರೆವ ತೊಟ್ಟಿಲಾಗಿ
ಹೀಗೆ ಸಲಹುವನು ಎಲ್ಲ ಜೀವಿಗಳ
ಹಾಗೆ ಬದುಕಿಸು ನನ್ನ ಪ್ರೀತಿ ಹನಿಸಿ..

ನದಿಯು ತಾ ಹರಿದಲ್ಲಿ
ಹಸಿರ ಚಿಗುರ ಚಿಮ್ಮಿಸಿ ಉಸಿರು ಉಕ್ಕಿಸುತ್ತ
ಗಮ್ಯದೆಡೆಗೆ ನಡೆವಂತೆ ಕರೆದುಕೋ ನನ್ನನು ನಿನ್ನ ಭಾವ ಗಮ್ಯಕೆ….


ಪ್ರೊ ವಿಜಯ ಪುಟ್ಟಿ

Leave a Reply

Back To Top