ಕಾವ್ಯ ಸಂಗಾತಿ
ಲೋಕದ ನಗು
ಬಿ.ಶ್ರೀನಿವಾಸ್
ಬಾಪೂವಿನ ನಗು
ಬಾಬಾನ ಗಂಭೀರ ವದನ
ನೀವು ಕೇಳುವಿರಿ ಯಾಕೆ ಹೀಗೆ? ಎಂದು
ಬಾಲರಾಮ,
ಬಾಲಕೃಷ್ಣರೂ ಹಸನ್ಮುಖಿ
ಬಾಪೂ ಒಳಗೆ
ಒಡೆದ ಪಾದಗಳ ಬಿರುಕಿನಲಿ
ಇಣುಕಿ ನೋಡುತ್ತಿದೆ ದಿಲ್ಲಿ
ಹೊರಗೆ ನಿಂತ ಜನರ ನೋವು ಬಾಬಾನ ಎದೆಯೊಳಗೆ
ಗೀತ-ಸಂಗೀತ
ಮಧ್ಯೆ
ಮೂಡಿದಾಗ ಅಪರೂಪದ ಸತ್ಯ ಸ್ವರ,
ಜಾರಿ ಬಿದ್ದಿರಬಹುದು
ಬಾಬಾನ ಮುಗುಳ್ನಗೆ
ಕಳೆದು ಹೋದ ಬುದ್ಧನ ನಗು
ಹುಡುಕುತ್ತ ಪಯಣಿಸಿದವನಿಗೆ
ನಗಲು ಸಮಯವಾದರೂ ಎಲ್ಲಿ?
ಎರಡು ಹೆಜ್ಜೆ ಬಾಪೂವಿನೊಂದಿಗೆ
ನಾಲ್ಕು ಹೆಜ್ಜೆ
ಬಾಬಾನೊಂದಿಗೆ
ನಡೆದರೆ
ಸಿಕ್ಕೇ ಸಿಗುವುದು
ಬುದ್ಧನ ನಗು
ಲೋಕವು ಮರಳೀತು ಮಣ್ಣಿಗೆ.
ವಾಹ್ ನಿಜಕ್ಕೂ ತುಂಬ ಅರ್ಥಪೂರ್ಣ
ಕವಿತೆ ಸರ್. ಅಭಿನಂದನೆಗಳು .
ಸುಜಾತ
“ಎರಡು ಹೆಜ್ಜೆ ಬಾಪುವಿನೊಂದಿಗೆ
ನಾಲ್ಕು ಹೆಜ್ಜೆ ಬಾಬಾನೊಂದಿಗೆ” – ಭಾರತದ ಭವಿಷ್ಯದೆಡೆಗಿನ ಚಲನೆಯ ಅರ್ಥಪೂರ್ಣ ನಿರೂಪಣೆ. ‘ಪಥಕ್ರಮ’ದ ತಾತ್ವಿಕ ಸೂತ್ರವಾಕ್ಯ.
ಈ ಒಂದು ಮಾತಿನ ಮೂಲಕ ಬಹುದೊಡ್ಡ ಸೈದ್ಧಾಂತಿಕತೆಯನ್ನು ಮಂಡಿಸಿರುವಿರಿ. ನಿಜಕ್ಕೂ Visionary lines.
ಬಿ.ಪೀರ್ ಬಾಷಾ