Category: ಕಾವ್ಯಯಾನ

ಕಾವ್ಯಯಾನ

ಕಾಡುವ ಕವಿತೆಗೆ

ಕವಿತೆ ಕಾಡುವ ಕವಿತೆಗೆ ಅಬ್ಳಿ,ಹೆಗಡೆ ಹೊತ್ತಿಲ್ಲ ಗೊತ್ತಿಲ್ಲಕಾಡುವಾ ಕವಿತೆ.ಬೇಕೆಂದು ಕರೆದಾಗನೀನೆಲ್ಲಿ ಅವಿತೆ..?ಬಂದಿಲ್ಲಿ ಅಕ್ಕರೆಯಸಕ್ಕರೆಯ ನೀಡು.ನನ್ನೆದೆಯ ಅಕ್ಕರದಿನೀ…ನಾಟ್ಯವಾಡು.ಕಂಕುಳಲಿ ಕೈಯ್ಯಿಟ್ಟುಗಿಲಗಿಚ್ಚಿಯಾಡಿ.ನೋವಲ್ಲು ನಗಿಸುತ್ತಮಾಡುವೆಯೆ ಮೋಡಿ.ತುಂಟಾಟವಾಡುತಲಿಕಳೆದೆನ್ನ ‘ಹಮ್ಮು’.ತಂಟೆಮಾಡದೆ ಒಳಗೆಉಳಿಯೆ ‘ಖಾಯಮ್ಮು’.! ****************************************

ಪ್ರಾರ್ಥನೆ

ಕವಿತೆ ಪ್ರಾರ್ಥನೆ ಬಾಪು ಖಾಡೆ ಹಸಿರು ಬೆಟ್ಟಗಳ ಕಾಡು-ಕಣಿವೆಗಳರುದ್ರ ರಮಣೀಯತೆಯಲಿ ಉಗಮಿಸಿಝರಿಯಾಗಿ ತೊರೆಯಾಗಿ ಜಲಪಾತವಾಗಿಬಳುಕುತ್ತ ಬಾಗುತ್ತ ನಿನಾದಗೈಯುತ್ತವೈಯಾರದಿ ಸಾಗುವ ನದಿಮಾತೆಯೆಹೀಗೆ ಪ್ರಸನ್ನವದನೆಯಾಗಿ ಸಾಗುತ್ತೀರು ಕಾಡು ಕಡಿ-ಕಡಿದು ಬಯಲಾಗಿಸಿನಿನ್ನೊಡಲ ಬಗೆಬಗೆದು ಬರಿದಾಗಿಸಿಮಾಲಿನ್ಯ ಸುರಿಸುರಿದು ಕಪ್ಪಾಗಿಸಿತಿಳಿನೀರ ಹೊಳೆಯನ್ನುಕೊಳೆಯಾಗಿಸಿಜಲಚರ ಜೀವಕ್ಕೆ ವಿಷ ಉಣ್ಣಿಸಿದಕಟುಕ ಹೃದಯದ ನಿನ್ನ ಮಕ್ಕಳನು‌ಒಮ್ಮೆ ಕ್ಷಮಿಸಿ ಬೀಡು ತಾಯೆ ಬಿಟ್ಟ ಬಿಸಿಯುಸಿರು ಕಪ್ಪುಮೋಡಗಳಾಗಿಆಕ್ರೋಶದ ಬೆಂಕಿ ಚಂಡಮಾರುತವಾಗಿಕಡಲೆಲ್ಲ ಉಪ್ಪಾಗಿ ಸುನಾಮಿಯಾಗಿಕುಂಭದ್ರೋಣದ ಬಿರುಮಳೆಯಾಗಿಭೀಕರ ಪ್ರವಾಹವಾಗಿ ಉಕ್ಕೇರದಿರುಪಾತ್ರದಂಚನು ಮೀರಿ ಹರಿಯದಿರುತಪ್ಪೆಸಗಿದ ನಿನ್ನ ಮಕ್ಕಳನು ಮತ್ತೊಮ್ಮೆ ಮನ್ನಿಸಿ ಬೀಡು ಭೂತಾಯಿಯಂತೆ ಕ್ಷಮಯಾದರಿತ್ರಿಯಾಗಿರು ***********************************

ಇರಲಿ ಬಿಡು

ಕವಿತೆ ಇರಲಿ ಬಿಡು ಸ್ಮಿತಾ ರಾಘವೆಂದ್ರ ಸಂಬಂಧಗಳು ಸವಿಯೆಂದು ಬೀಗುತಿದ್ದೆಕಳಚಿ ಬಿದ್ದಾಗಲೇ ಗೊತ್ತಾಗಿದ್ದು ಕಹಿಯೆಂದುಚಿಗುರು ಚಿವುಟಿದಮೇಲೆ ಫಲ ನೀಡುವ ಖಾತರಿ ಇಲ್ಲಸುಮ್ಮನೇ ಬೆಳೆಯಲು ಬುಡವಾದರೂಇರಲಿ ಬಿಡು. ಕಳೆದ ಕಾಲವ ತಿರುಗಿ ನೋಡುತಲಿದ್ದೆ.ಎಷ್ಟೊಂದು ನಲಿವುಗಳು ಉಸಿರ ನಿಲ್ಲಿಸಿವೆನೋವುಗಳೂ ಬಸವಳಿದು ಸುಮ್ಮನಾಗಿವೆ,ಬೇಡ ಬಾಚಿಕೊಳ್ಳುವದು ಏನನ್ನೂಹಾಗೇ ಬದುಕಲು ಭಾವಗಳಾದರೂ ಇರಲಿ ಬಿಡು. ಜೊತೆಯಿದ್ದ ನಂಬಿಕೆಯ ಜೀವಗಳ ಜತನದಲಿ ಸಲಹಿದ್ದೆಜಾಡು ಮರೆತು ಮೇಲೇರಿ ಅಣಕಿಸುತಲಿವೆಈಗ ಹಕ್ಕಿ ಗೂಡಿಗೆ ಮಾತ್ರ ಸೀಮಿತರೆಕ್ಕೆಯನೇ ಮರೆಯುವದು ಅನಿವಾರ್ಯಸೋತ ಕಾಲುಗಳಾದರೂ ಇರಲಿ ಬಿಡು. ದಟ್ಟವಾಗಿದ್ದ ಕಣ್ಣ ಕನಸಿನ ಗರಿಗಳುಒಂದೊಂದೇ […]

ಬೆಳಗು

ಕವಿತೆ ಬೆಳಗು ವೀಣಾ ನಿರಂಜನ ಈಗಷ್ಟೇ ಏಳುತ್ತಿದ್ದೇನೆಒಂದು ಸುದೀರ್ಘ ನಿದ್ರೆಯಿಂದಇನ್ನೇನು ಬೆಳಕು ಹರಿಯಲಿದೆತನ್ನದೇ ತಯಾರಿಯೊಡನೆ ಪ್ರತಿ ದಿನ ಸೂರ್ಯ ಹುಟ್ಟುತ್ತಾನೆಸೂರ್ಯನೊಂದು ಕಿರಣಕತ್ತಲೆಯ ಎದೆಯ ಹಾದುಬಗೆಯುತ್ತದೆ ಬೆಳಕು ಮೂಡುತ್ತದೆ ಬರೀ ಸೂರ್ಯ ಹುಟ್ಟಿದ್ದುಕೋಳಿ ಕೂಗಿದ್ದುಹಕ್ಕಿ ಕಲರವ ಕೇಳಿದ್ದೇ –ಬೆಳಗಾಯಿತೀಗ ಎಂಬರು ಕಾನು ಕತ್ತಲೆಯ ಸರಿಸಿಭೂಮಿ ಬೆಳಗಿದರಷ್ಟೆ ಸಾಕೇಎದೆಯ ಕತ್ತಲು ಬಗೆಯದೆಬೆಳಗಾಗುವುದೆಂತು ಸಹಸ್ರ ಬೆಳಗುಗಳ ಸೂರ್ಯಹೊತ್ತು ತರುವ ಬೆಳಕಿನ ಕಿರಣಗಳಲ್ಲಿಒಂದು ಕಿರಣ ದಕ್ಕಿದರೂ ಸಾಕುನಡು ನೆತ್ತಿಯ ಸುಟ್ಟು ಕೊಂಡುಸಾರ್ಥಕ ಈ ಬದುಕು.     **************************

ಹಕ್ಕಿಯ ದುರಂತ

ಅನುವಾದಿತ ಕವಿತೆ ಹಕ್ಕಿಯ ದುರಂತ ವಿ.ಗಣೇಶ್ ಸಗ್ಗದ ಚೆಲುವಿನ ಹಕ್ಕಿಯು ಒಂದುಭಾನಂಗಳದಿಂದ ಧರೆಗಿಳಿದುಊರಿನ ಮನೆ ಮಂದಿರಗಳ ಮೇಲ್ಗಡೆಹಾರುತಲಿದ್ದಿತು ನಲಿನಲಿದು. ಚಿನ್ನದ ವರ್ಣದ ರನ್ನದ ರೆಕ್ಕೆಯನೀಲಿಯ ಕಂಗಳ ಆ ಹಕ್ಕಿಹಾರುತ ಬರುವುದ ನೋಡಿದ ಮಕ್ಕಳಎದೆಯಲಿ ಆನಂವೆ ಉಕ್ಕಿ ಹಕ್ಕಿಯು ಹಾರುತ ಸಾಗುವ ಜಾಡಲಿತಾವೂ ಓಡುತ ಕೆಳಗಿಂದಕೇಕೆಯ ಹಾಕುತ ನಲಿಯುತಲಿರಲುಜನ ಸೇರಿತು ಅಚ್ಚರಿಯಿಂದ ಎಂಥ ಚೆಂದದ ಚೆಲುವಿನ ಹಕ್ಕಿಏನದು ಚೆಂದ ಆ ಮೈ ಬಣ್ಣ!ಕೈಗದು ಸಿಕ್ಕರೆ ಮಾರಲು ಆಗಕೈತುಂಬ ಹಣ ಝಣ ಝಣ ಮಾರುವುದೇತಕೆ ನಾವೇ ಹಿಡಿದುಕೊಂದೇ ತಿಂದರೆ ಬಹಳ […]

ತಮಂಧದೆಡೆಗೆ

ಕವಿತೆ ತಮಂಧದೆಡೆಗೆ ನೂತನ ದೋಶೆಟ್ಟಿ ತುತ್ತಿಡುತ್ತ ತೋರಿದ ಚಂದಮಾಮಬೆದರಿ ಅಡಗಿದ ಮೊಲಕಣ್ಣ ಕ್ಯಾನ್ವಾಸಿನಲ್ಲಿ ಕಳೆದು ಹೋದ ಕೌತುಕ ಆಕೆಯೊಂದಿಗಿನ ಬೆಳದಿಂಗಳ ರಾತ್ರಿಕ್ಯಾಂಡಲ್ ಡಿನ್ನರ್ಭ್ರಮೆಯಲ್ಲಿ ಕರಗಿದ ಕಲ್ಪನಾ ಲೋಕ ಚಂದ್ರನ ಮೇಲೀಗ ಸೈಟ್ ಬುಕ್ಕಿಂಗ್!ನೀರಿಲ್ಲದ ಚದರಡಿಯ ಬೆಲೆ ಕೊಂಚ ಕಮ್ಮಿಪಸೆಯ ನೆಲ ಚಿನ್ನಕ್ಕೂ ಮಿಗಿಲುಲೋಡ್ ಶೆಡ್ಡಿಂಗ್ ನ ಹೋಗಲು ರಾತ್ರಿಗಳಲೂಮನೆಯ ಸ್ಕೆಚ್ಚು ತಯಾರು ಓಡುವ ಚಂದಿರನ ಹಿಡಿಯಲುಆಕಾಶಕ್ಕೆ ಇಟ್ಟು ಏಣಿಯ ಮೇಲೆವಾಮನನ ಎರಡು ಪಾದಗಳುಇನ್ನೊಂದಕ್ಕೆ ಮಂಗಳನ ಆಹ್ವಾನ ನೀರು ಗುರುತಿದ್ದರೆ ಹೇಳಿಗಾಳಿ,ಮಳೆ, ಬೆಳಕೆಲ್ಲಹುಟ್ಟುವವು ಲ್ಯಾಬಿನಲ್ಲಿನಾಳೆಗಳು ಕರೆದೊಯ್ಯಲುಬೆಳಕಿನಿಂದ ಕತ್ತಲೆಡೆಗೆ. *********************************

ಶ್…. ! ನಿಶ್ಯಬ್ದವಾಗಿರಿ ನೀವು

ಕವಿತೆ ಶ್…. ! ನಿಶ್ಯಬ್ದವಾಗಿರಿ ನೀವು ತೇಜಾವತಿಹೆಚ್.ಡಿ. ಅದೇ ದಾರಿಯಲ್ಲಿನಿತ್ಯ ಪ್ರಯಾಣಿಸುತ್ತಿದ್ದೆನನ್ನದೇ ಲಹರಿಯಲ್ಲಿಐಹಿಕದ ಜಂಜಾಟದಲ್ಲಿಮನಸ್ಸಿನ ಹೊಯ್ದಾಟದಲ್ಲಿ ನಿಗೂಢ ಬದುಕ ಬಯಲಿನಲ್ಲಿಎಲ್ಲವೂ ಬೆತ್ತಲೆನಮ್ಮದೇನಿದೆ ಇಲ್ಲಿ,? ಆಗೋ.. ಅಲ್ಲಿ ಗೋಚರಿಸುತ್ತಿದೆಪ್ರಶಾಂತ ನೀರವ ತಾಣ…ಇಲ್ಲೇ ಹಿತವೆನಿಸುತ್ತದೆ ನನಗೆ ಶ್……! ನಿಶ್ಯಬ್ದವಾಗಿರಿ ನೀವುಎಚ್ಚರಗೊಂಡಾರು ಮತ್ತೆ ಇದ್ದಾಗಹಾಸಿಗೆ ಹೊದಿಕೆಯಿಲ್ಲದೆ ನಲುಗಿದ ಜನರುಬೆಚ್ಚಗೆ ಮಲಗಿಹರಿಲ್ಲಿಮಣ್ಣಿನ ಪದರಗಲಾಗಿ! ಅಹಮ್ಮಿನ ಕೋಟೆಯೊಳಗೆಅಹಂಕಾರದಿಂದ ಮೆರೆದವರೆಲ್ಲಾಮಣ್ಣುಸೇರಿ ಗೆದ್ದಲಿಡಿದಿಹರಿಲ್ಲಿ.. ! ತಾನು ತಾನೆಂದು ತನ್ನವರ ಸ್ವಾರ್ಥಕ್ಕಾಗಿಕಚ್ಚಾಡಿದವರೆಲ್ಲಾಏಕಾಂಗಿಯಾಗಿ ಕೊಳೆಯುತಿಹರಿಲ್ಲಿ.. ! ಕ್ಷಣಿಕ ಬಾಳಲಿ ವಿಶ್ವ ಗೆಲ್ಲುವಶಾಶ್ವತ ಕನಸು ಕಂಡುನನಸಾಗದೇ ಉಳಿದುಕನವರಿಸಿ ನರಳಿವಸ್ತಿ ಮಾಡಿಹರಿಲ್ಲಿ.. ! […]

ಭವದ ಭಾವಸೇತು

ಕವಿತೆ ಭವದ ಭಾವಸೇತು ನಾಗರೇಖಾ ಗಾಂವಕರ್ ಮನದೊಡಲ ಕಡಲಪ್ರಕ್ಷುಬ್ಧ ಸುಳಿಗಳುಮುತ್ತಿಕ್ಕುವ ಅಲೆಗಳಾಗುತ್ತವೆ,ಆ ಪ್ರೀತಿಗೆ ಯಮುನೆ ತಟದಿ ಕೂತಹೂತ ಕಾಲಿನ ಆಕೆಮುರುಳಿಯಲಿ ಬೆರೆತಉಸಿರ ತೇಕುತ್ತಾಕಣ್ಣ ಬೆಳಕನ್ನೆ ಹಾಸಿಭಾವ ಸೇತುವಿನ ನಾಡಿ ಹಿಡಿದುಭವದ ನೆರಳಿಗೆ ಹಂಬಲಿಸುತ್ತಾಳೆ. ಯಾವ ರಾಗವದು, ಬೆಸೆದದ್ದುಒಪ್ಪುತಪ್ಮ್ಪಗಳ ಭಿನ್ನಸಹಮತಗಳ ನಡುವೆಸಂಕಲಿಸಿ ಹೃದಯಗಳ ಬೆಸುಗೆ ಹೊನಲು ಬೆಳಕಿನ ಕೂಡಮಂದ್ರಸ್ಥಾಯಿಯ ನುಡಿಸಿಅಗೋಚರದ ಮಹಲಿನಲಿಮುಕ್ತಿ ಮಂಟಪವಿಟ್ಟುರಾಗದ್ವೇಷದ ಬೆಂಕಿಯನುತಣ್ಣಗಾಗಿಸಿ ಪರವತೋರುತ್ತಾನೆ ಪ್ರೀತಿಯಲಿ ಮುಳುಗುವ ಹರಿಗೋಲುತೂತುಗಳ ಹೊದ್ದ ಬರಿದುಜೀವದ ಗೋಳು.ಅಲ್ಲೂ ಪಯಣದ ಹಂಬಲದಮುಗಿಯದಾ ಬದುಕಪ್ರೀತಿಯ ಪಾಡುಹಾಡುತ್ತಾನೆ ಪ್ರೀತಿಸುವುದೆಂದರೆಆತ್ಮಕ್ಕೆ ಆತ್ಮವೇ ಆಗಿನಿಲುಕದ ನೆಲೆಯಲ್ಲೂಆಲಿಂಗನದ ಕನಸ ಹೊತ್ತುಸಾಗುವುದು,ಎಂದವನ […]

ಗುಪ್ತಗಾಮಿನಿ

ಕವಿತೆ ಗುಪ್ತಗಾಮಿನಿ ಮಮತಾ ಶಂಕರ ಇಲ್ಲಿ ಹುಟ್ಟಿದ ಮೇಲೆನಾವು ಇಲ್ಲಿನ ಕೆಲವುಅಲಿಖಿತ ಆದೇಶಗಳ ಪಾಲಿಸಲೇಬೇಕಾಗುತ್ತದೆ ಯಾರೋ ಅಜ್ನಾತ ಕ್ರೂರಿಗಳ ಕೈಗೆ ಸಿಕ್ಕುನಾವು ನಲುಗಬಹುದೆಂಬ ಒಣ ಗುಮಾನಿಯಿಂದತಮ್ಮ ಕರುಣಾಳು ಕೈಯಿಂದ ನಮ್ಮನ್ನು ರಕ್ಷಿಸುತ್ತೇವೆಂದುಮುಸುಕಲ್ಲಿ ಮುಚ್ಚಿಟ್ಟು ಕಾಪಿಡುತ್ತಾರೆ….ಮತ್ತು ಪತಿ ಪಿತ ಸುತರಾದಿಯಾಗಿಅವರೆಲ್ಲಾ ನಮ್ಮನ್ನು ಪೊರೆಯುವವರೆಂದುಕರೆಯಲ್ಪಡುವವರಾಗಿ ನಮ್ಮನಡೆಯಲಾಗದ ನಿಶ್ಯಕ್ತ ಕಾಲುಗಳಾಗಿರುತ್ತಾರೆಹಾಗೆಯೇಇವರೆಲ್ಲಾ ಶೂರರೇ ಆಗಿರಬೇಕೆಂಬ ಕರಾರೇನಿರುವುದಿಲ್ಲ…. ಕೆಲವೊಮ್ಮೆ ನಾವುನಿರ್ವೀರ್ಯರ ನಿಷ್ಪಂದರ ಸುಪರ್ದಿಯಲ್ಲಿಸುಖಿಗಳೆಂದು ಜಗತ್ತಿಗೆ ತೋರಿಸುವಲ್ಲಿನೆಮ್ಮದಿಯ ಪಡೆದವರಾಗಿರುತ್ತೇವೆ…. ಹೇಗಿದೆ ನೋಡಿ….ಸುಳ್ಳಿನ ಪ್ರತಿಬಿಂಬವನ್ನು ಜಗತ್ತು ನಂಬುತ್ತದೆಅಷ್ಟೇಕೆ…..? ಪೋಷಿಸುತ್ತದೆ ಕೂಡ….. ಓ…… ಮಾಯೆ ಮುಸುಕಿದ ಜಗದ ಕಣ್ಣೇನಿನಗೆಂದೂ […]

Back To Top