ನನ್ನಮ್ಮ
ಕವಿತೆ ನನ್ನಮ್ಮ ಶೃತಿ ಎಸ್.ಗೌಡ ನನ್ನಮ್ಮ ಸೀತೆಯಲ್ಲ ಸಾವಿತ್ರಿಯಲ್ಲಕೈ ಹಿಡಿದ ಪತಿಯೊಡನೆವನವಾಸಕ್ಕೂ ಹೋಗಲಿಲ್ಲಅವನಿಗಾಗಿ ಯಮನನ್ನು ಅಡ್ಡಗಟ್ಟಲಿಲ್ಲ ಇದ್ದಲ್ಲಿಯೇ ವನವಾಸ ಮಾಡಿದವಳು ಕುಡಿದ ಮತ್ತಿನಲ್ಲಿ ನಡೆಯಲಾರದೆ ಎಡವಿ ಬಿದ್ದ ಅಪ್ಪನಿಗೆ ತನ್ನ ಹೆಗಲನ್ನು ಆಸರೆಯಾಗಿ ನೀಡಿದವಳು ನನ್ನಮ್ಮ ಆಸರೆ ಬಯಸಲಿಲ್ಲಸಂಸಾರದ ನೊಗ ಹೊತ್ತುನಮಗಾಸರೆಯಾದವಳುತಾನು ನಿಂತು ನಮ್ಮ ನಡೆಸಿತಾನು ಹಸಿದು ನಮಗುಣಿಸಿತನ್ನ ಕಣ್ಣುಗಳಲ್ಲಿಅವಳ ಕನಸುಗಳ ಕಂಡವಳುಸಂಸಾರದ ಹಾದಿಯಲ್ಲಿ ನಿಲ್ಲದೆ ನಡೆದವಳು ನನ್ನಮ್ಮ ಹೆಚ್ಚು ಕಲಿಯಲಿಲ್ಲಗುಡಿಗಳ ಗುಂಡಾರವ ಸುತ್ತಲಿಲ್ಲಸ್ವರ್ಗ ನರಕಗಳ ಕಲ್ಪನೆಯೂ ಅವಳಿಗಿಲ್ಲ ಇರುವಷ್ಟು ದಿನಬಾಳ ಕುಲುಮೆಯಲಿ ಬೆಂದವಳು ಕುಡಿತಕ್ಕೆ ಶರಣಾಗಿ […]
ತಲೆದಿಂಬಿನೊಳಗೆ ಅವಿತ ನಾ
ಕವಿತೆ ತಲೆದಿಂಬಿನೊಳಗೆ ಅವಿತ ನಾ ಡಾ. ರೇಣುಕಾ ಅರುಣ ಕಠಾರಿ ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾಸದ್ದಿಲ್ಲದೆ ತಲೆದಿಂಬಿನೊಳಗಿನಿಂದಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ. ಕಾಡುವ ಕನಸುಗಳು ಘಳಿಗೆಗೆ ಒಮ್ಮೆನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,ನದಿಯನ್ನು ದಾಟಲು ಸೇತುವೆಯಂತೆ,ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ. ಜೊತೆಯಾಗಿ ಬರುತ್ತೇನೆ,ಉಸಿರಿಗೆ […]
ಮರ್ದಿನಿ ಆಗಲಿಲ್ಲ
ಕವಿತೆ ಮರ್ದಿನಿ ಆಗಲಿಲ್ಲ ಡಾ.ಶಿವಕುಮಾರ್ ಮಾಲಿಪಾಟೀಲ ನಾಲ್ಕಾರು ಜನರು ಅತ್ಯಾಚಾರಕ್ಕೆ ಮುಂದಾದಾಗಮನಿಷಾ,ಮಹಿಷಾಸುರ ಮರ್ದಿನಿ ಆಗಲಿಲ್ಲ ನಿನ್ನ ಗರ್ಭದಲ್ಲಿ ಹುಟ್ಟಿದರೂನಿನ್ನನ್ನು ಗರ್ಭಗುಡಿಗೆ ನಿಷೇಧಿಸಿದಾಗ ಹೆಣ್ಣುಕಾಳಿಯಾಗಲಿಲ್ಲ ವರದಕ್ಷಿಣೆಗಾಗಿ ಅವಮಾನಿಸಿಹಿಂಸೆ ಕೊಟ್ಟುಕೊಲೆ ಮಾಡುವಾಗ ಹೆಣ್ಣುದುರ್ಗೆ ಆಗಲಿಲ್ಲ ಹೆಣ್ಣು ಬೇಡವೆಂದುಭ್ರೂಣವನ್ನು ಗರ್ಭದಲ್ಲೇಕತ್ತರಿಸಲು ಬಂದಾಗ ಹೆಣ್ಣು ಚಾಮುಂಡಿ ಆಗಲಿಲ್ಲ ಮಹಾ ಗ್ರಂಥಗಳಲ್ಲಿ ಮರುಳಾಗಿಕಲೆ ,ಶಿಲೆಗಳಲ್ಲಿ ಗೊಂಬೆಯಾಗಿಗುಡಿ ಗುಂಡಾರದಲ್ಲಿ ಕುಂಕುಮ ಭಂಡಾರವಾಗಿ ಹೆಸರಿಗೆಅರ್ಧ ನಾರೇಶ್ವರಿ…ಆಗಿದ್ದು ಮಾತ್ರ ದೇವದಾಸಿ. ಕಾಡು ಮೇಡುಗಳಲ್ಲಿಚೆಲ್ಲಿದ ಹೆಣ್ಣಿನ ರಕ್ತದ ಕಲೆಗಳನ್ನು ನೋಡಿಭೂ ತಾಯಿ ಬಿರುಕೊಡೆಯಲಿಲ್ಲಗಂಗೆ,ತುಂಗೆ,ಕಾವೇರಿ,ಗೋದಾವರಿ ಎಲ್ಲಾ ಹೆಣ್ಣುಹೆಸರಿನ ನದಿಗಳು ಬರಿದಾಗಲಿಲ್ಲ ಸಾಕ್ಷಿಗಳಿದ್ದರೂಅಪರಾಧಿಗಳಿಗೆ […]
ಮನಿಷಾ
ಕವಿತೆ ಮನಿಷಾ ವೀಣಾ ನಿರಂಜನ್ ಮೊದಲೇ ಕುರುಡಿಯಾಗಿದ್ದನ್ಯಾಯ ದೇವತೆಯಮೂಗಿಯನ್ನಾಗಿಸಿದರು ಮಗಳೇನಿನ್ನ ನಾಲಿಗೆ ಕತ್ತರಿಸಿಅವರ ಗಂಡಸುತನಕ್ಕೆ ಧಿಕ್ಕಾರವಿರಲಿ ಅವರ ಬೆಚ್ಚನೆಯ ಮನೆಗಳಲ್ಲಿಬಚ್ಚಿಟ್ಟ ನಿಧಿಯಂತೆ ನೀನೂ ಕೂಡಅರಿತಿದ್ದರೆ ಸಾಕಿತ್ತು ಅವರುಹತ್ತೂ ಕಡೆ ಚಾಚಿದ ವಿಷ ಸರ್ಪಗಳಹೆಡೆ ಮುರಿದು ಕಟ್ಟುತ್ತಿದ್ದರು ಅರಿಯದಾದರೆ ಅವರುನಿನ್ನೊಳಗಿನ ಕುಡಿಯನ್ನುಹೊರಲಾರದಷ್ಟು ಪಾಪದಮೂಟೆ ಹೊತ್ತು ನಡೆದರುಸಾವೂ ಕೂಡ ಸಹಜವಾಗಿಸುಳಿಯಲಾರದಿನ್ನು ಅವರ ಬಳಿ ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆನ್ಯಾಯ ದೇವತೆನಿನ್ನ ನೆತ್ತರ ಬಿಸಿಯ ಸೋಕಿಉರಿಯುತ್ತಿದ್ದಾಳೆ ನಖಶಿಖಾಂತಸತ್ಯದ ನಾಲಿಗೆಯು ನೇತಾಡುತ್ತಿದೆನಿನ್ನ ನಾಲಿಗೆಯ ಹಾಗೇ ತೀರ್ಪು ಏನಾದರೇನು ಮಗಳೇನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇಬೇಡ […]
ಹೊತ್ತು ಬಂದಿದೆ
ಕವಿತೆ ಹೊತ್ತು ಬಂದಿದೆ ಗಾಂಧಿ ನೀನುದಿಸಿದನಾಡಿನಲೀ… ತೊನೆವ ತರುಗಳಕತ್ತು ಹಿಚುಕಿಜಲದ ಕಣ್ಣಿಗಿರಿವ ಹೊತ್ತು ಬಂದಿದೆ ಹರಿವರಿವ ನದಿಯದಿಕ್ಕು ದಿವಾಳಿಯಾಗಿಸಿಬರಿದಾಗಿಸುವ ಹೊತ್ತು ಬಂದಿದೆ ಖಗ ಮೃಗ ಹುಳ ಹುಪ್ಪಟೆಗಳನ್ನು ಬಿಡದೇ ಹುರಿದುರಿದು ಮುಕ್ಕುವ ಹೊತ್ತು ಬಂದಿದೆ ಸಾವಿರಾರು ವರುಷಗಳ ತಪೋನಿರತ ಶಿಲಾತಪಸಿಗಳಎದೆಗೆ ಮದ್ದಿಕ್ಕುವ ಹೊತ್ತು ಬಂದಿದೆ ಕಿವಿಗಡಚಿಕ್ಕುವಬೈರಿಗೆಗಳನ್ನಿಕ್ಕಿನೆಲದೊಡಲ ರಕ್ತ ಬಸಿವ ಹೊತ್ತು ಬಂದಿದೆ ಹೊತ್ತಿಗೊತ್ತಿಗೆ ಉರಿವ ದಿನಕರನ ಸಖ ಓಜೋನನ ಛಿದ್ರವಾಗಿಸುವ ಹೊತ್ತು ಬಂದಿದೆ ಚಂದಿರನ ಅಂಗಳದಲ್ಲಿಳಿವಮಂಗಳನ ಕೇರಿಯಲ್ಲಿಸುತ್ತುವ ಹೊತ್ತು ಬಂದರೂ… ವಿಜ್ಞಾನ ಜ್ಞಾನವೋ,ಅಜ್ಞಾನವೋ ಮಂಕುಗವಿದ ಬುದ್ದಿಗೆ ಲದ್ದಿ […]
ಫಿವಟ್ ಕವಿತೆ…
ಕವಿತೆ ಫಿವಟ್ ಕವಿತೆ…. ಹುಳಿಯಾರ್ ಷಬ್ಬೀರ್ 01 ಬರೆಯಲೆಂದುಕುಳಿತಾಗಅವಳನ್ನು ಬರೆದೆನನ್ನನ್ನು ನಾನೇಮರೆತೆ….! 02 ಕಣ್ಣಲ್ಲಿ ಕದ್ದುಮನಸ್ಸಲ್ಲಿಇಳಿಯುವ ಮುನ್ನಗಂಟಲಿಗೆಇಳಿಸಿದ್ದೆನೀ ಕೊಟ್ಟದೊಡ್ಡ ವರ…! 03 ಗುಂಡು ಅವಳುಇಬ್ಬರೂ ನಶೆಯೇಗುಂಡು ತಾತ್ಕಾಲಿಕ ನಶೆಅವಳು ನಶೆಯಪರಾಕಾಷ್ಠೆ….! 04 ಮನಸ್ಸಿಗೆನೈವೇದ್ಯ ಎಣ್ಣೆಯಲ್ಲಿಆಗಬೇಕಂತೆನೋವುನಿರಾಳವಾಗಲುಲೋಟ ಚಿಯರ್ಸ್ಎನ್ನಲು…! 05 ಕುಡಿದಷ್ಟುಮಾತು ಜಾಸ್ತಿ ಆಯಿತುಪದೇ ಪದೇಅವಳ ನೆನಪುಆಯಿತು…! **************************
ಪಾತ್ರ
ಚಂದ್ರಿಕಾ ನಾಗರಾಜ್ ಬರೆಯುತ್ತಾರೆ–
ಹುಡುಕಬೇಡಿ
ಹಾಗೊಂದು ವೇಳೆ ಸಿಕ್ಕರೆ
ನಿಮ್ಮೊಳಗೆ ಹಿಡಿದಿಟ್ಟುಕೊಳ್ಳಿ
ಗೀತಗಾಮಿನಿ
ಪವಿತ್ರಾ ಬರೆಯುತ್ತಾರೆ-
ಗಂಧ ತೇಯ್ವಂತೆ.
ಮೈಹರಡಿ ಬಾನಿಗೆ
ತಂಪತೀಡ್ವ ತರುಲತೆಗಳು.
ಗಾಯ
ಕವಿತೆ ಗಾಯ ಕಾತ್ಯಾಯಿನಿ ಕುಂಜಿಬೆಟ್ಟು ನಾನೇ ಒಂದು ಗಾಯ!ಆಳವಾಗುತ್ತಲೇ ಇರುತ್ತೇನೆಹೃದಯದ ತಳದವರೆಗೂ…!ನೋವಿನ ಹಲ್ಲಿಗೇ ನಾಲಗೆಯುಮತ್ತೆ ಮತ್ತೆ ತುಡಿಯುವಂತೆತಾನೇ ತಾನಾಗಿ ನೊಂದು ಕೀವಾಗಿ ನವೆಯಾಗಿಬೆರಳುಗಳನ್ನು ತುಡಿಸುತ್ತದೆನಿದ್ದೆಯಲ್ಲೂ ಅಭ್ಯಾಸವಾಗಿ! ” ಉಬ್ಬಸಕ್ಕಾದರೂ ಮದ್ದುಂಟು… ಅಭ್ಯಾಸಕ್ಕಿಲ್ಲ!” ಎ೦ದುಬಿಟ್ಟರುಹಾಗನ್ನುವುದೇ ಅಭ್ಯಾಸವಾಗಿದ್ದಗೀಳುತಜ್ಞರು! ಬದುಕಿನ ಕಷ್ಟಗಳನ್ನು ಹಾಡುಹಗಲಲ್ಲೇ ಕಂಡುಹನಿಹನಿದು ಬತ್ತಿವೆ ಕಂಗಳ ಕೆರೆಗಳು !ವಿಲಿವಿಲಿ ಒದ್ದಾಡುತ್ತಿವೆ ಕಣ್ಣ ಮೀನುಗಳು!ನಿದ್ದೆಯಲ್ಲಿ ನಕ್ಷತ್ರ ಸುಟ್ಟುಕಣ್ಣಬೊಂಬೆಗಳು ಉರುಳಿಬಾಯಿಯ ವಸಡಿಗೆ ಬೀಳುತ್ತವೆಹಲ್ಲುಗಳು ಕಳಚಿ ಹೃದಯಕ್ಕೇ ಉದುರಿಕಚ್ಚಿ ಕಚ್ಚಿ ಕಿತ್ತು ತಿನ್ನತೊಡಗುತ್ತವೆ!ಕೈಗಳು ತಲೆಯನ್ನೇ ಕಿತ್ತುಪಕ್ಕಕ್ಕೆ ಎಸೆಯುತ್ತವೆಮೆದುಳನ್ನೇ ಗೆದ್ದಲು ತಿನ್ನುವನೋವನ್ನು ಸಹಿಸಲಾಗದೆ ಚೀರಿ!ಮುಂಡವು ಮಂಡೆಯಿಲ್ಲದೆಯೇಆಗ […]
ಅವಳೂ ಹಾಗೇ .
ಕವಿತೆ ಅವಳೂ ಹಾಗೇ . ಡಾ. ರೇಣುಕಾ ಅರುಣ ಕಠಾರಿ ಬೀಜ ಸಸಿಯಾಗುವ ಹಾಗೆ,ಸಸಿ ಮರವಾಗುವ ಹಾಗೆ,ಮರದಲಿ ಕಾಯಾಗಿ ಹಣ್ಣಾದ ಹಾಗೇಅವಳೂ ಹಾಗೆ., ಮಳೆ ಹನಿಗೆ ಸೂರ್ಯ ಚುಂಬನಕಾಮನ ಬಿಲ್ಲಿನಂದದ ಹಾಗೇಅವಳೂ ಹಾಗೇ., ಮುಡಿಬಿಟ್ಟು ಮೊಲೆಮೂಡಿಚಿತ್ತರಾದಿ ರವಕೆ ಬಿಗಿಯಾದ ಹಾಗೇಅವಳೂ ಹಾಗೇ., ನಿತ್ಯವೂ ಕುಡಿ ಕುಡಿದಷ್ಟುಮಧು ತು..$ ತುಂಬಿ ಬಂದುಕಪ್ಪೆ ಚಿಪ್ಪಿನ ಮುತ್ತಿನ ಹೊಳಪಿನ ಹಾಗೇಅವಳೂ ಹಾಗೇ., ಮೈಮುರಿದು ನಾಚಿ ಕೆನ್ನೆ ಕೆಂಪಾದAತೆಮುಸ್ಸೂಂಜೆ ಮೂಡಣ ನಕ್ಕಂತೆಅವಳೂ ಹಾಗೇ., ಬಯಕೆಯ ಕಾತರಕೆ ಬಾಯಾರಿದಳವಳುಬಾಯಾರಿದೆ ನೆಲಕ್ಕೆಮಳೆ ಬೀಳುವ ತವಕವು ಕಾದಂತೆಅವಳೂ […]