ಭಾನುಮತಿಯ ಸ್ವಗತ
ಅರಮನೆಯ ದಾಸಿಯರು
ಪಿಸುಗುಡುತ್ತಿದ್ದಾರೆ ಭಾನುಮತಿ ಸತಿಹೋಗುವಳೋ ಏನೋ
ತಾಯ ಮಾತ ಕೇಳದೇ…
ನಾವು ಮತ್ತು ಸಾವು
ಕವಿತೆ ನಾವು ಮತ್ತು ಸಾವು ಸರಿತಾ ಮಧು ಜನ್ಮದಾರಂಭದಿಂದ ಸಾಗಿ ಸಾವಿನೆಡೆಗಿನ ಪಥಕೆಭಿನ್ನ ನಾಮಗಳನ್ನಿಟ್ಟುಕಟ್ಟಿಕೊಂಡ ವ್ಯೂಹವಿದು ಹುಟ್ಟುವವನು ತನ್ನ ಸಾವನ್ನುಬೆನ್ನಿಗಿಟ್ಟುಕೊಂಡೇ ಮೈತಳೆದಿರುವಾಗ ನೆಪಗಳುಬೇಕಷ್ಟೆ, ಸಾವಿನೆಡೆಗೆ ಸಾವಿಗೆ ಯಾರೂ ಹೊರತಲ್ಲನಾನಾದರೂ ,ನೀನಾದರೂನಿಗದಿಯಾದ ಸಮಯಕೆ ಜಗವ ತೊರೆಯುವುದಷ್ಟೇ ಸ್ವರ್ಗವೋ , ನರಕವೋಬಲ್ಲವರಾರು ? ಹೋದವರುತಿರುಗಿ ಬಂದವರಿಲ್ಲ ಅಂತೆಯೇಸಾವ ಗೆದ್ದವರೂ ಇಲ್ಲಿ ಇಲ್ಲ ಅರಿಯದವರಾರು ಸಾವಿನಾಟವಬಾಳೆಂಬ ಪಗಡೆಯಾಟದಲ್ಲಿದಾಳಗಳು ನಾವು ಉರುಳಿದೆಡೆಗೆ ಸಾಗುವುದಷ್ಟೇ ಅಗೋಚರ ಸೂತ್ರಕೆ ಪಾತ್ರಧಾರಿಗಳು ನಾವುಸಾವೆಂದಿಗೂಅನೂಹ್ಯ ನಮ್ಮ ಪಾಲಿಗೆ!!! *******
ಮೂಗು ಮತ್ತು ಮಾಸ್ಕು
ಎಲ್ಲೇನನ್ನು ಮಾಡಿದರೂ
ಇವನ ಮೂಗು ಹಾಕಿಬಿಡುತ್ತದೆ ಹಾಜರಿ
ಎಲ್ಲವನೂ ಸೆಳೆದು ಬಿಡುತ್ತದೆ
ಮನೆಯ ಗುಟ್ಟೆಲ್ಲ ಇವನ ಮೂಗಿನಡಿಯಲ್ಲಿ
ಕಾಯುವ ಕಷ್ಟ.
ಕವಿತೆ ಕಾಯುವ ಕಷ್ಟ. ಅಬ್ಳಿ,ಹೆಗಡೆ ಈ ‘ಹಡಿಲು ಬಿದ್ದ’ನೆಲ,ಈ ದಟ್ಟ ಕತ್ತಲು,ಈ ಮೌನ,ಈ,,ಖಾಲಿ ಹಾಳೆ,ಕಾಯುತ್ತಿವೆ….ಉತ್ತು ಬಿತ್ತುವವರ.ಉಳುವದೆಂದರೆ….ಬೇಕಾಬಿಟ್ಟಿ ಅಗೆಯುವದಲ್ಲ.ಮೊದಲು ಒದ್ದೆ-ಯಾಗಿಸಬೇಕುಗಟ್ಟಿ ಮೇಲ್ಪದರ.ಗುದ್ದಲಿ,ಪಿಕಾಸಿಗಿಂತನೇಗಿಲಾದರೆ ಸಲೀಸು-ಭೇದಿಸಿ ಒಳಗಿಳಿಯಲು.ತೀರ ಆಳಕ್ಕೂ ಇಳಿಯದೆಹಿತವಾಗಿ,ಹದವಾಗಿ,ಸಾವಕಾಶ,ನಾಜೂಕಾಗಿ-ಸಾಗುವಾಗಿನಖುಷಿಯೇ ಬೇರೆ.ಆಮೇಲೆ…ಬಿತ್ತಿದಂತೇ ಬೆಳೆ.ನೆಲದೊಳಗೊಂದು ಬೀಜ,ಕತ್ತಲೊಳಗೊಂದುಬೆಳಕ ಸಣ್ಣ ಕಿಡಿ,ಮೌನದೊಳಗೊಂದುಪಿಸು ಮಾತು,ಹಾಳೆಯ ಖಾಲಿ-ಯಲ್ಲೊಂದು ಅಕ್ಷರಮೊಳೆಯುವ ಕನಸ ಖುಷಿ.ಮೊದ,ಮೊದಲುನೋವಾದರೂ,ಕೊನೆ,ಕೊನೆಗೆ….‘ಆಹಾ’ ಸುಖದ ನರಳಿಕೆ.ಆ ಒಂದು ಕ಼ಣಕ್ಕಾಗಿಕಾಯುತ್ತಿವೆ..–ಈ,,ನೆಲ,ಈ..ಕತ್ತಲು,ಈ..ಮೌನ,ಈ..ಖಾಲಿ’ಹಾಳೆ’?,ಮೊದಲ ಮಳೆಯಾಗುವಮೊದಲು ಉಳುವವರಿಗಾಗಿಕಾಯುತ್ತಿವೆ ಎದೆತೆರೆದುಅಂಗಾತ ಮಲಗಿ…!!! ******************************
ದೇವರು ಮಾರಾಟಕ್ಕಿದ್ದಾರೆ…
ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ
ಯಾವ ಲೆಕ್ಕ?
ಹೂವಾಗಿ ಇದ್ದದ್ದು
ಇರುವೆಯಾಗಿ ಅವತರಿಸಿದ್ದು
ಹಕ್ಕಿಯಾಗಿ ಮೈದಳದಿದ್ದು
ದೇವರುಮಾರಾಟಕ್ಕಿದ್ದಾರೆ…
ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ
ಜೋಕಾಲಿ ನಿಲ್ಲುವುದೆಲ್ಲಿ?
ಕವಿತೆ ಜೋಕಾಲಿ ನಿಲ್ಲುವುದೆಲ್ಲಿ? ಕವಿತಾ ಹೆಗಡೆ ಹರಿದು ಹಂಚಿ ಹೋಗಿದೆ ಬದುಕುತೇವವಿಲ್ಲದೆ ರೂಪ ತಾಳದುಮೌನ ಸಾಮ್ರಾಜ್ಯದ ಮಹಾರಾಜ ಅವನುಮಾತಿನರಮನೆಯಲ್ಲಿ ಅರಗಿಣಿ ನಾನುಮೂಕಳಾಗಲೋ ಮಲ್ಲಿಯಾಗಲೋ ನಿರ್ಲಿಪ್ತಲೋಕದಲಿ ಲುಪ್ತ ಅವನುಚಿಮ್ಮಿ ಚೆಲ್ಲುವ ಕಾರಂಜಿ ನಾನುಗುಪ್ತಗಾಮಿನಿಯಾಗಲೋ ಧುಮ್ಮಿಕ್ಕಲೋ ಗಳಿಸುವುದಕಾಗಿ ಬದುಕುವ ಜೀವ ಅವನುಬದುಕ ಉಳಿಸಲು ಹೆಣಗುವ ಆತ್ಮ ನಾನುಯಂತ್ರವಾಗಲೋ ಜೀವಸುಧೆಯಾಗಲೋ ಅತಿ ವೈರುಧ್ಯವೂ ಅನಾಕರ್ಷಕವೆ?ಅತಿ ಸಮರ್ಪಣೆಯೂ ನಿರಾಕರಣೆಯೆ? **********************************
ಮಳೆ
ಕವಿತೆ ಮಳೆ ಮಾಲತಿ ಶಶಿಧರ್ ಆಗಿಂದಲೂ ಮಳೆಯೆಂದರೆಎಲ್ಲಿಲ್ಲದ ಹುಚ್ಚುಬರುತ್ತಿದ್ದ ಹಾಗೆಮೈಮೇಲಿನ ಪ್ರಜ್ಞೆಕಳೆದುಕೊಂಡುತೋಳುಗಳ ಚಾಚಿನನ್ನುದ್ದ ಅಗಲಆಳಕ್ಕೆ ಇಳಿಸಿಕೊಳ್ಳುವಷ್ಟು ಈ ಮಳೆಯದ್ದೊಂತರತಕರಾರುಬಂದರೆ ಪ್ರವಾಹಬರದಿರೆ ಬರ ಉಕ್ಕಿದ ಪ್ರವಾಹಕ್ಕೆಸಿಕ್ಕಿದ ಕಾರಿನ ಟೈರ್ ನಂತೆ ತೇಲುವುದುಬರದಲ್ಲಿ ಬರಡು ನೆಲದಂತೆಬಿರುಕು ಬಿಡುವುದು ಹೃದಯ ಎಂದೋ ಒಂದು ದಿನಸಮಾಧಾನದಲಿ ಬಂದ ಮಳೆತುಟಿ ಕಟಿ, ಎದೆ ಬೆನ್ನುಹೊಟ್ಟೆ ಹೊಕ್ಕಳುಮೀನಖಂಡ ತೊಡೆಗಳನ್ನೆಲ್ಲಾಹಾಗೆ ಮೃದುವಾಗಿ ಸೋಕಿಹೊರಟುಬಿಡುತ್ತದೆ ಆಮೇಲೆ ಅದು ಬಾನು ನಾ ಭೂಮಿಆದರೂ ಸೆಳೆತಅಯಸ್ಕಾಂತ ದಗೆ ಚಳಿ ಯಾವುದರಲ್ಲೂಸಮಯ ಸರಿಯುವುದೇ ಇಲ್ಲಾಸದಾ ಅದಕ್ಕಾಗೇ ಕಾಯೋನನ್ನೆದೆಯ ಕೇರಿ ಕೇರಿಯಲ್ಲೂಅದರದ್ದೇ ಜಾತ್ರೆ.. ******************************
ಗಜಲ್
ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆಈ ಸೆರಗಿನ ಚೆಲ್ಲಾಟ ನೋಡಿ ಮೋಡವು ತೇಲಾಡುತಿದೆ ಅವಳ ದೇಹ ಮಾಟ ಅರಿತು ಶಿಲ್ಪಿ ಶಿಲೆಯಲಿ ಕಲೆ ಅರಳಿಸಿದಮೈ ತುಂಬಿದ ಮದದ ರಂಗಿಗೆ ಮದರಂಗಿ ಕೆಂಪು ನಾಚಿತಿದೆ ಒಂದಾಗಿ ಬೆಸೆದ ಮಧುರ ಗಳಿಗೆಯು ಜೊತೆಯಾಗಿದೆ ಸದಾವಿಧಿಯ ಆಟ ಬಲ್ಲವರಾರು ಅಳಿಯದ ನೆನಪು ಕಾಡುತಿದೆ ಹರೆಯದ ವಯಸ್ಸು ಅವಳ ಪಡೆಯುವ ಕನಸು ಕಾಣುತ ಕಳೆದೆಆ ಯೌವನದ ದಿನಗಳನ್ನು ಮುಸ್ಸಂಜೆ ಮೆಲುಕು ಹಾಕುತಿದೆ “ಪ್ರಭೆ”ಯನು ಮರೆಯದ […]