Category: ಕಾವ್ಯಯಾನ

ಕಾವ್ಯಯಾನ

ಕ್ಷಮಿಸು ಪ್ಲೀಸ್..

ಕವಿತೆ ಕ್ಷಮಿಸು ಪ್ಲೀಸ್.. ಮಧುಸೂದನ ಮದ್ದೂರು. ನೋವಿನಾಳದ ಕಿಸರು ಗಾಯಕೆ ನಿನ್ನನೆನಪುಗಳನೊಣಗಳ ದಾಳಿಝೇಂಕಾರಒಳಗೊಳಗೇಯಾತನೆ ವೇದನೆ ಒಬ್ಬನೇ ಇದ್ದೇನೆಹಾಯಿಯಲಿಸುತ್ತಲೂ ಅಳುವಿನಉಪ್ಪುಪ್ಪು ಕಡಲುನನ್ನುಳುವಿನ ಉಪ್ಪು ಜಾರಿಕಡಲು ಹೆಪ್ಪುಗಟ್ಟುತ್ತಿದೆ..ಮುಳುಗಬೇಕೆನ್ನುವ ಹಡಗು ಮುಳುಗುತ್ತಿಲ್ಲದೂರದೆಲ್ಲೆಲ್ಲೋಮಿಣುಕುಹುಳುದಂತಹ ಬೆಳಕುಕಣ್ಣಿಗಾನಿಸುತ್ತಿದ್ದಂತೆನೀನೆನಾದರೂಅದೇ ಹಸಿರು ನೆರಿಗೆ ಲಂಗ ತೊಟ್ಟು ಬಂದೆಯಾಎಂಬ ಹುಂಬತನದ ನಿರೀಕ್ಷೆಸಾಯಲು ಬಿಡುತ್ತಿಲ್ಲಬದುಕಲು ಬಿಡುತ್ತಿಲ್ಲಪ್ರೀತಿ ಅಂದರೆ ಹೀಗೇನಾ..ಗೊತ್ತಾಗುತ್ತಿಲ್ಲಕ್ಷಮಿಸು ಪ್ಲೀಸ್.. ****************************

ಗುಂಗು

ಕವಿತೆ ಗುಂಗು ಮಾಲತಿ ಶಶಿಧರ್ ನಿನ್ನ ತೋಳಿನ ಚೌಕಟ್ಟುಬಿಟ್ಟು ಬಂದ ಮೇಲೂ ನನ್ನಕೊರಳು ಕೆನ್ನೆಗಳ ಮೂಲೆಯಲ್ಲಿನಿನ್ನ ಪರಿಮಳದ ಭಾಸ. ಬೆಚ್ಚಗಿನ ಉಣ್ಣೆ ಬಟ್ಟೆ ತೊಟ್ಟಿದ್ದರುಒಳಗೆ ಮಾಗಿ ಚಳಿಯ ಕೊರೆತನೀ ಗಿಲ್ಲಿ ಗುರುತು ಮಾಡಿದತೊಡೆಯ ಎದೆಗವುಚಿಕೊಂಡುಕಣ್ಮುಚ್ಚಿ ನಗುತ್ತೇನೆ. ಮುತ್ತನಿಟ್ಟು ಹೊತ್ತೇ ಕಳೆದುಹೋದರು ಮತ್ತು ಮಾತ್ರಹಳಸದೆ ತುಟಿಯಂಚಿನತೊಟ್ಟು ರಕ್ತದಲ್ಲಿ ಹೆಪ್ಪುಗಟ್ಟಿಕುಳಿತಿದೆ. ಅಮಾಸೆ ಹೆರಳ ಇಪ್ಪತ್ತುಬಾರಿ ಒಪ್ಪ ಮಾಡಿದರುಗಾಳಿಗೋಲಾಡೊ ಮುಂಗುರುಳಲಿನಿನ್ನದ್ದೇ ತುಂಟತನ ಕಂಡುಕನ್ನಡಿಯತ್ತ ಕೈಚಾಚುವೆಹುಚ್ಚಿಯಂತೆ.. ***************************************

ಮುನ್ನುಡಿ ಬರೆಯುವೆ

ಕವಿತೆ ಮುನ್ನುಡಿ ಬರೆಯುವೆ ನಾಗರಾಜ್ ಹರಪನಹಳ್ಳಿ ಸೂರ್ಯ ದಿಕ್ಕು ಬದಲಿಸುತ್ತಾನೆಂತೆನಾನು ? ಪ್ರಕೃತಿ ಮೈಮುರಿದು ಮಗ್ಗಲು ಬದಲಿಸುತ್ತಿದೆನಾನು?ನಾನೇನು ಮಾಡಲಿ ?? ಆಧುನಿಕ ಕೌಶಿಕ, ಮುಖವಾಡದ ರಾಮ,ಹೊಸ ನಮೂನಿ ಪಂಜರದೊಳಗೆ ನನ್ನ ಬಂಧಿಸಿರುವಾಗನಾನೇಗೆ ಪಥ ಬದಲಿಸಲಿ ? ಸೂರ್ಯನೇ ನಿನ್ನ ಬೆಳಕುನನಗೆ ಬೆಳಕಾಗಲಿಲ್ಲನದಿಯೇ ನಿನ್ನ ಸ್ವಾತಂತ್ರ್ಯ ನನ್ನದಾಗಲಿಲ್ಲ ಸುಳಿದು ಬೀಸುವ ಗಾಳಿಯೇನಿನ್ನ ಮೈ ನನ್ನ ದಾಗಲಿಲ್ಲನದಿಯೇ ನಿನ್ನ ಕಾಲುಗಳುನನ್ನವಾಗಲಿಲ್ಲ ಆಗ್ನಿಯೇ ನಿನ್ನ ನಾಲಿಗೆಯುನನ್ನದಾಗಲಿಲ್ಲಪ್ರಕೃತಿಯೇ ನಿನ್ನಂತೆ ನಾನುಬದುಕಿ ಬಾಳಲಾಗಲಿಲ್ಲ ಕೊನೆಯ ಪಕ್ಷ ಮರದಂತೆಮೌನಿಯಾಗಲು ಬಿಡಲಿಲ್ಲಚಲಿಸುವ ಚಲನೆಗೂಬಂದ ಬಂಧನ ಬದುಕೇ ಬಂಧನವಾಗಿರಲುನದಿ, […]

ಕಾಫಿಯಾನ ಗಜಲ್

ಕಾಫಿಯಾನ ಗಜಲ್ ಅಮೃತ ಎಂ ಡಿ ಅಪ್ಯಾಯಮಾನ ಒಲವ ಹಂಚುವ ಸರದಿ ನನ್ನದುಅಭೂತಪೂರ್ವ ಸಾನಿಧ್ಯ ನೀಡುವ ಗುಣ ನಿನ್ನದು ತುಸು ತುಂಟಾಟವ ಮರೆಮಾಚು ಲಜ್ಜೆ ಆವರಿಸುತ್ತದೆನಡುವಿನ ಒನಪಿನಲ್ಲಿ ಕಾಡಿಸುವುದ ಯಾರು ಕಲಿಸಿದ್ದು.? ಅಧರದಲ್ಲಿ ಏನು ಮಧು ಬಟ್ಟಲು ಅಡಗಿ ಕುಳಿತಿದ್ಯ..?ಚುಂಬಿಸುವ ಪರಿಗೆ ಮೊಗವೆಲ್ಲ ಕೆಂಪೇರಿ ನಲಿಯುವುದು ಶರಾಬಿನ ರಸವ ಹೀರಿದಂತೆ ಒಷ್ಠದಲ್ಲಿಯೂ ಇರುವುದ..?ಪಾಪ ಮೊಗ್ಗಿನಂತೆ ಮೃದು ಆಕೆ, ಸೊರಗಿ ಬಿಟ್ಟಾದು. ಅಮ್ಮು ಈ ಹೈದನ್ಯಾಕೋ ಬಿಡುಗಡೆ ನೀಡುವಂತಿಲ್ಲಮನವು ಅವನ ಆಲಿಂಗನದಲ್ಲಿ ನಕ್ಕು ಕುಣಿಯುವುದು.. ****************************************************

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು ಆಗಸದಷ್ಟು […]

ಯಾವುದೀ ನಕ್ಷತ್ರ?

ಕವಿತೆ ಯಾವುದೀ ನಕ್ಷತ್ರ? ಮಾಲತಿ ಶಶಿಧರ್ ಕವಿಗೆ ಏಕಾಂತ ಸಿಕ್ಕರೆ ಸಾಕುಚಂದ್ರ ನೇರವಾಗಿ ಎದೆಗೆನೆಗೆದುಬಿಡುವನುನನ್ನ ಏಕಾಂತದ ಅಂಗಳಕೆನಕ್ಷತ್ರವೊಂದು ಜಾರಿಬಿದ್ದಿದೆಇಂದ್ರಲೋಕದ ಸ್ವತ್ತೋಇಲ್ಲ ಚಂದ್ರನ ಅಣುಕಿಸಲು ಬಂತೋ?? ದಾಹದಾಳವ ಅರಿತುಎದೆಯ ಬಗೆದು ನೀರು ತೆಗೆದುತಣಿಸುತ್ತದೆಮುತ್ತು ರತ್ನಗಳ ಕಣ್ಣಂಚಲ್ಲೆಸುರಿಸುತ್ತದೆಈ ನಕ್ಷತ್ರದ್ದು ಇಲ್ಲೇ ಬಿಡಾರಬಿಡುವ ಹುನ್ನಾರೋ ಇಲ್ಲನನ್ನೇ ಎಳೆದೊಯ್ಯುವತಕರಾರೋ ಕಾಣೆ ಈ ನಕ್ಷತ್ರ ಅವರಿಬ್ಬರಂತಲ್ಲಒಬ್ಬ ತಿಂಗಳಿಗೊಮ್ಮೆ ಬಂದರೆಇನ್ನೊಬ್ಬ ತಾಸುಗಟ್ಟಲೆ ಹರಟಿಅಲ್ಲೆಲ್ಲೋ ಪಶ್ಚಿಮ ದಿಕ್ಕಿನಗುಡ್ಡದಡಿ ತಲೆ ಮರೆಸಿಕೊಳ್ಳುವ ನೆಟ್ಟಗೆ ಎದೆಗೆಹೂಡಿದ ಬಾಣಈ ನಕ್ಷತ್ರಜಲದವಶೇಷಗಳಚಿಲುಮೆ ಜಿನುಗುತ್ತದೆ ಜನ್ಮಾಂತರದ ವಿರಹ, ಕಾತರಕಾದ ವೇದನೆ ಯಾತನೆಕತ್ತಲರೆಕ್ಷಣದಲ್ಲಿ ಓಡಿಸಲುಬಂತೇನೋ ಈ […]

ಆತ್ಮಸಾಕ್ಷಿ

ಕವಿತೆ ಆತ್ಮಸಾಕ್ಷಿ ಪಂ. ರವಿಕಿರಣ ಮಣಿಪಾಲ. ಆತ್ಮಸಾಕ್ಷಿಯಲೇಖನಿಯನ್ನುಭೋಗದ ಮಸಿಯಲ್ಲದ್ದಿಇತಿಹಾಸ ಪುಸ್ತಕಬರೆಯುವುದುದುಸ್ತರ ಹಾಗಾಗಿಯೆಇತಿಹಾಸ ಪುಸ್ತಕತುಂಬಕಣ್ಣೀರ ನದಿಗಳುರಕ್ತದ ಕಾಲುವೆಗಳುನಿಟ್ಟುಸಿರ ಚಂಡಮಾರುತಗಳುಬೆಂದೊಡಲ ಹಸಿವಿನ ಜ್ವಾಲಾಮುಖಿಗಳುಉರುಳುರುಳಿ ಹೊರಳಿದಕೆಂಪುಸಿಂಹಾಸನಗಳುಭೂಕಂಪಗಳು ***

ಶಾವಾತ್ಮ ಪದಗಳು

ಕವಿತೆ ಮಡಿಕೆಯಡಿಯ ಬೆಳಕು ಶಾಂತಿವಾಸು ಮಡಚಿಡು ಮಡಿಕೆಯಾಗಿ…ಅಣುವು ಕೂಡಾ ಅನುವಾಗೆರಗಿದ ಅನುಭವವ ನಾಳೆಗಾಗಿ…. ಮಡಚಿಡು ಸಂತಸದಿಂದ…ಕದಡಿದ ನಿನ್ನ ಮನದ ಕತ್ತಲೆಯೊಳು, ರವಿ ಸಂಚಯಿಸಿದ್ದನ್ನು ಜತನದಿಂದ…. ಮಡಚಿಡು ಇಂದಿನ ನಿರಾಶೆಯ…ಇರಲದರಲಿ, ದುಃಖ ಅಲ್ಪಾಯುವೆಂದು ಸಾರುವ ಸಂದೇಶದ ಸದಾಶಯ… ಮಡಚಿಡು ಸೋಲುಗಳ ಸರಮಾಲೆ…ತೆರೆದು ನೋಡಲದುವೇ ಏಣಿ ಗೆಲುವಿಗೆ, ಗಟ್ಟಿಹೆಜ್ಜೆ ಇಟ್ಟು ಏರಲು ಮೇಲೆ ಮೇಲೆ… ಮಡಚಿಡು ಈಜಿ ಗೆದ್ದ ಜಯವನ್ನು …ವಿಧಿಯಾಟದ ದಾಳವಾಗುರುಳುವಾಗ ನೀನೇ ಅರಿಯಲು ನಿನ್ನಿರಿಮೆಯನ್ನು.. ಮಡಚಿಡು ಅಡಿಯಲ್ಲಿ ಸೋಲುಗಳ, ಸದಾ ಸುಳಿದಾಡಿ ಸೊಲ್ಲೆತ್ತದಂತೆ…ಎಲ್ಲಕ್ಕಿಂತ ಮೇಲೆ ಮಡಚಿಡು, ಸೋಲನ್ನು […]

ಕತ್ತಲೆ,ಬೆಳಕಿನೊಂದಿಗೆ

ಆಸ್ವಾದಿಸುವಾಸೆ ಇತ್ತೀಚೆಗೆ ಯಾಕೋ…
ಒಳ ಗೋಡೌನಿನಲಿ ಹೆಚ್ಚೆಚ್ಚು ಕತ್ತಲ
ದಾಸ್ತಾನು ಮಾಡುವಾಸೆ….

ಗಜಲ್

ಅವನೊಲವೇ ಉಚ್ಛ್ವಾಸ ನಿಶ್ವಾಸಕೆ ಪ್ರಾಣವಾಯುವಾಗಿತ್ತು
ಪ್ರಶ್ನೆಗಳ ಬಲೆಯಲ್ಲಿ ಉಸಿರುಗಟ್ಟಿಸಿದ ಕಾರಣ ತಿಳಿಯಲಿಲ್ಲ

Back To Top