Category: ಕಾವ್ಯಯಾನ

ಕಾವ್ಯಯಾನ

ವಿಮಲಾರುಣ ಪಡ್ಡoಬೈಲ್ ಕವಿತೆ-ಮುಕ್ಕಾಗದಿರಲಿ

ಮುತ್ತುಗದೆಲೆಯ ಒಂದೊಂದೇ ಜೋಡಿಸುತಿಹಳು
ನವ ವರುಷದ
ನೂರಾರು ಕನಸು ಗುರಿಗಳ
ರಾಶಿ ಹಾಕಲು

ತೂತು ಬಿದ್ದ ಎಲೆಗೆ
ನಾಜೂಕಿನಿಂದ ತೇಪೆ ಹಾಕುತಿಹಳು
ಒಲುಮೆಯ ಮಾತು
ಸೋರಿ ಹೋಗಬಾರದೆಂದು

ಉರುಳಿದ ವರುಷದ ಹೃದಯ ಗವಿಯಲ್ಲಿದ್ದ
ಮುಕ್ಕಾದ ಎಲೆಗಳ ಕಿರಣಕ್ಕೊಡ್ಡಿಹಳು
ಸವರಿ ಸವರಿ ಒದರಿ ಒದರಿ
ವ್ಯರ್ಥವಾಗದ್ದನ್ನು ಆರಿಸುತಿಹಳು
ನವ ವರುಷಕೆ ಕಾಪಿಡಲು

ಮುಕ್ಕಾದೆಲೆಗಳ
ದುಃಖ ದುಮ್ಮಾನದೊಂದಿಗೆ
ಬೆಂಕಿಗಾಹುತಿ ಮಾಡಿ
ಶಾಂತವಾದ ಮನದಿ ನಿಟ್ಟುಸಿರಿಟ್ಟಳು

ಪಣತೊಟ್ಟಳು ಸುತ್ತಲು ಮಾರ್ದನಿಸಿತು
ತನ್ನ ಕನಸಿನ ಮುತ್ತುಗದೆಲೆ ಮುಕ್ಕಾಗದಂತೆ
ತಿಳಿವಿನ ಬೆಳಕಲ್ಲಿ ಸಂಚರಿಸುತ್ತಿಹಳು
ನವನವೀನ ಗುರಿಯೊಂದಿಗೆ
ವರುಷದ ಹರುಷದೊಂದಿಗೆ…

ವಿಮಲಾರುಣ ಪಡ್ಡoಬೈಲ್

ಆದಪ್ಪ ಹೆಂಬಾ ಕವಿತೆ-ಹೊಸತು ವರುಷ ಮತ್ತೆ ಬರಲಿ

ಕಾವ್ಯ ಸಂಗಾತಿ

ಆದಪ್ಪ ಹೆಂಬಾ

ಹೊಸತು ವರುಷ ಮತ್ತೆ ಬರಲಿ

ನಾಗರಾಜ ಬಿ.ನಾಯ್ಕಕವಿತೆ-ಅನಾಗತ

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅನಾಗತ ಅನಾಗತ ದಿನಗಳ ಕುಣಿತತಲೆಯಲ್ಲಿ ನೂರು ಭಾವ ಭವಿತಮಾತು ಕೃತಿ ನಗು ಅಳುಎಲ್ಲವೂ ಸುತ್ತಿದ ಮಿಳಿತಒಂದಿಷ್ಟು ಅನುಭವ ಅನುಭಾವಸೇರಿದರೆ ನಾಲ್ಕು ದಿನಕೆ ಉಳಿಕೆಕಳೆದದ್ದು ಹೆಚ್ಚು ಪಡೆದದ್ದು ಕಡಿಮೆಎಲ್ಲಾ ಮುಗಿದರೆ ನಾಳೆ ಚಿಂತೆಅರ್ಥ ಅನರ್ಥಗಳ ಪ್ರಶ್ನೆ ಉತ್ತರಕೊನೆಗೊಮ್ಮೆ ನಮ್ಮದೇ ಸಾಂತ್ವನಬರಲಿರುವ ದಿನಗಳ ಕುತೂಹಲಏಕೆ ಹೇಗೆ ಎಂದರೂ ನಿರ್ದಿಷ್ಟವಿಲ್ಲಬದುಕೆಂದರೆ ಎಲ್ಲವೂ ಸುಪ್ತಅಂತರಂಗದಿ ಕುಳಿತು ನಗುವ ಭಾವಸರಿಸುಮಾರು ಮಾತು ಜೀವಂತಇರಲು ಇರದಿರಲು ಜೀವದ ಧಾವಂತಸ್ಪಷ್ಟ ಹೆಜ್ಜೆಗೆ ಅದರದೇ ಉತ್ತರಕಾಯುವುದು ಬದುಕಿನ ಕಾತರದಿನ ಕ್ಷಣಗಳ ಉಲ್ಲಸಿತ ಮನಬರಲಿ […]

ಲಕ್ಷ್ಮೀದೇವಿ ಪತ್ತಾರ,ಹೊಸ ವರ್ಷದ ಆಗಮನ

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ, ಹೊಸ ವರ್ಷದ ಆಗಮನ ಬಲಗಾಲಿಟ್ಟು ಒಳಗೆ ಬಾಮದುಮಗಳಂತೆ ನವ ವರುಷಸೆಡಗರ ಸಂಭ್ರಮದಿ ನಿನಗೆ ಸ್ವಾಗತನಿನ್ನನಾಗಮನದಿಂದ ನಮಗಾಗುವುದು ಬಲು ಹರುಷ ಶುಭ ಶಕುನದ ರೂಪವಾಗಿ ಬರುತ್ತಿದೆಈ ಹೊಸ ವರುಷಎಲ್ಲೆಲ್ಲೂ ಇರುವ ರಾಮನುಅಯೋಧ್ಯೆಪುರದಲಿ ನೆಲೆಸುವನುಎಂತಹ ಅಪೂರ್ವ ರಸನಿಮಿಷ ! ನವಯುಗದ ಕಾಲ ಗುಣದಿಂದಎಲ್ಲೆಲ್ಲೂ ಶಾಂತಿ ಸೌಹಾರ್ದತೆ ನೆಲೆಸಲಿಸಮೃದ್ಧಿ ಮನೆ ಮಾಡಲಿಭಾರತಮಾತೆಗೆ ಮತ್ತಷ್ಟು ಬಲ ಬರಲಿಭಾರತೀಯರು ಎಲ್ಲೆಡೆ ಮೆರೆಯಲಿ ಹುಟ್ಟುವ ಪ್ರತಿ ಹೊಸ ವಿಷಯವಸ್ತುನಿರೀಕ್ಷೆ,ಆಕರ್ಷಣೆಯ ತುತ್ತುಆಕರ್ಷಣೆ , ನಿರೀಕ್ಷೆಯ ಕನಸುಉತ್ಸಾಹ ,ಉಲ್ಲಾಸ ಬದುಕಿನ ಸ್ವತ್ತು ಮುದ್ದು […]

ಶೃತಿ ರುದ್ರಾಗ್ನಿ ಕವಿತೆ-‘ಬದುಕು ಬಂದಂತೆ ಸ್ವೀಕರಿಸು’

ಕಾವ್ಯ ಸಂಗಾತಿ

ಶೃತಿ ರುದ್ರಾಗ್ನಿ

ಮುರುಕು

ರಸ ಋಷಿ ಕುವೆಂಪು ನೆನಪಿನಲ್ಲಿ,ಶ್ರೀವಲ್ಲಿ ಶೇಷಾದ್ರಿ ಕವಿತೆ-ಚೇತನ ಧಾರೆ ಕುವೆಂಪು

ಕುವೆಂಪು ನೆನಪಲ್ಲಿ

ಶ್ರೀವಲ್ಲಿ ಶೇಷಾದ್ರಿ

ಚೇತನ ಧಾರೆ ಕುವೆಂಪು

Back To Top