ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ಗಜಲ್
ಹೊಸವರುಷ ಎಂದು ಬೀಗಬೇಡ ಸಂಭ್ರಮಿಸಿ ಕೇಳಿಲ್ಲಿ ಒಲವೇ
ಸಂಖ್ಯೆ ಹೆಚ್ಚುತಲಿ ವಯಸ್ಸು ಕಡಿತಕೆ ಕಸಿವಿಸಿ ಕೇಳಿಲ್ಲಿ ಒಲವೇ
ಹೊಸತು ವರುಷ ಬರುವುದು ತಪ್ಪಿಲ್ಲ ತಿಂಗಳನ್ಹರಡಕೆ
ದೇಹವು ಮಾಗುತಿದೆ ವರುಷ ವರುಷಕೆ ಕುಗ್ಗಿಸಿ ಕೇಳಿಲ್ಲಿ ಒಲವೇ
ವರ್ಷದುದ್ದಕ್ಕೂ ಇರುವುದು ಇಲ್ಲಿ ನೋವು ನಲಿವುಗಳ ಆಟ
ಅನುಭವಿಸಿ ಸಾಗಬೇಕಿದೆ ಮನವ ಅರಳಿಸಿ ಕೇಳಿಲ್ಲಿ ಒಲವೇ
ಸೌಂದರ್ಯ ವೃದ್ಧಿಸುತ್ತ ಕಳೆಗುಂದುವುದು ದಿನಗಳೆದಂತೆ
ಬುದ್ಧಿ ಪಕ್ವವಾಗುವುದು ಎಲ್ಲವನು ಅರಗಿಸಿ ಕೇಳಿಲ್ಲಿ ಒಲವೇ
ರೋಹಿಯ ಸಂಕಲ್ಪವಿದು ಕೇಳು ಹುಟ್ಟು-ಸಾವಿನ ನಿಶ್ಚಿತದಲಿ
ಕಳೆವ ವರುಷದಲ್ಲಿಯೂ ನಲಿಯೋಣ ಹರ್ಷಿಸಿ ಕೇಳಿಲ್ಲಿ ಒಲವೇ.
ರೋಹಿಣಿ ಯಾದವಾಡ