ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ,
ಹೊಸ ವರ್ಷದ ಆಗಮನ


ಬಲಗಾಲಿಟ್ಟು ಒಳಗೆ ಬಾ
ಮದುಮಗಳಂತೆ ನವ ವರುಷ
ಸೆಡಗರ ಸಂಭ್ರಮದಿ ನಿನಗೆ ಸ್ವಾಗತ
ನಿನ್ನನಾಗಮನದಿಂದ ನಮಗಾಗುವುದು ಬಲು ಹರುಷ
ಶುಭ ಶಕುನದ ರೂಪವಾಗಿ ಬರುತ್ತಿದೆ
ಈ ಹೊಸ ವರುಷ
ಎಲ್ಲೆಲ್ಲೂ ಇರುವ ರಾಮನು
ಅಯೋಧ್ಯೆಪುರದಲಿ ನೆಲೆಸುವನು
ಎಂತಹ ಅಪೂರ್ವ ರಸನಿಮಿಷ !
ನವಯುಗದ ಕಾಲ ಗುಣದಿಂದ
ಎಲ್ಲೆಲ್ಲೂ ಶಾಂತಿ ಸೌಹಾರ್ದತೆ ನೆಲೆಸಲಿ
ಸಮೃದ್ಧಿ ಮನೆ ಮಾಡಲಿ
ಭಾರತಮಾತೆಗೆ ಮತ್ತಷ್ಟು ಬಲ ಬರಲಿ
ಭಾರತೀಯರು ಎಲ್ಲೆಡೆ ಮೆರೆಯಲಿ
ಹುಟ್ಟುವ ಪ್ರತಿ ಹೊಸ ವಿಷಯವಸ್ತು
ನಿರೀಕ್ಷೆ,ಆಕರ್ಷಣೆಯ ತುತ್ತು
ಆಕರ್ಷಣೆ , ನಿರೀಕ್ಷೆಯ ಕನಸು
ಉತ್ಸಾಹ ,ಉಲ್ಲಾಸ ಬದುಕಿನ ಸ್ವತ್ತು
ಮುದ್ದು ಕಂದನಂತೆ ಅಂಬೆಗಾಲಿಟ್ಟು
ಬರುತ್ತಿರುವ ಹೊಸ ವರುಷವೆ
ನಿನ್ನಿಂದ ಎಲ್ಲರ ಮನೆಮನಗಳು
ಆನಂದ ,ಸಂಭ್ರಮ ,ಸಮೃದ್ಧಿಯ ಗೂಡಾಗಲಿ.
ಲಕ್ಷ್ಮೀದೇವಿ ಪತ್ತಾರ

Wish you happy new year mam