Category: ಕಾವ್ಯಯಾನ

ಕಾವ್ಯಯಾನ

ನೇಗಿಲಿನ ಒಂದು ಸಾಲು

ಕವಿತೆ ನೇಗಿಲಿನ ಒಂದು ಸಾಲು ವಿಠ್ಠಲ ದಳವಾಯಿ ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲುಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲುಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು. ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲುಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು. ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು. ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆಒದ್ದೆಮನದಲೆ ಕನಿಕರಿಸಿದೆ […]

ದೂರ ದೂರದತೀರ

ಕವಿತೆ ದೂರ ದೂರದತೀರ ಶಾಂತಲಾ ಮಧು ದೂರ ದೂರದ ತೀರತೀರದೀದೂರಹಾಲ ಬೆಳದಿಂಗಳುನಕ್ಷತ್ರದಾ ಸರತಬ್ಬಿಮುದ್ದಾಡಿದಾ ನೆಲಬರ ಸಿಡಿಲು ಗುಡುಗುಮಳೆ ಅಪ್ಪಳಸಿ ಆಲಂಗಿಸಿ…ನಲಿದು ಹರಿದಾಡಿ ನೆಲ ದೂರ ದೂರದ ತೀರತೀರದೀ ದೂರ ತೆಂಗು ಅಡಕೆ ಮರತಬ್ಬಿದಾ ಬಳ್ಳಿಗಳುಹೂವಾಗಿ ಹಣ್ಣು ಕಾಯಾಗಿಮಣ್ಣಿನವಾಸನೆಗೆಮರುಳಾಗಿ ಸುಕಿಸಿದಾ ನೆಲ ದೂರ ದೂರದ ತೀರತೀರದೀ ದೂರ ಹಸಿರಿನಂಗಳಕೆ ಅದೆಕನಸಿನ ಚಾವಡಿ ಹೊದೆಸಿಲಕ್ಷಣ ವಿತ್ತ ಮೂರ್ತಿಕೆತ್ತಿಟ್ಟು ಜೀವದಾಳದಪ್ರಿತಿ ಸಂಸ್ಕೃುತಿಯಬೆೇರನಾಳದಲಿಹೂತ್ತಿಟ್ಟ ಆ ನೆಲ ದೂರ ದೂರದ ತೀರತೀರದೀ ದೂರ ಗುಡ್ಡ ಬೆಟ್ಟದಸಾಲುಪಶು ಪಕ್ಷಿ ಇಂಚರಒಡನಾಟ, .ಹಳ್ಳ ಕೊಳ್ಳದ ಸ್ಪರ್ಷಜೀವ ಚೇತನವಾಗಿಪಾಠ […]

ಹಾಯ್ಕುಗಳು

ಹಾಯ್ಕುಗಳು ಕೆ.ಸುನಂದಾ ಗೆಳತಿ ನಿನ್ನಸೌಂದರ್ಯ ಯಾವ ಶಿಲ್ಪಿಕೈ ಚಳಕವೊ ?** ವಿದ್ಯೆ ದುಡಿಮೆತಾಳ್ಮೆ ; ಇದ್ರೆ ಎಲ್ಲವೂಜಯಶೀಲವು** ಮನತಟ್ಟದೆಹುಟ್ಟೀತೇನು ; ಸ್ವಂತಿಕೆಮರೆತ ಕಾವ್ಯ** ಕಾವ್ಯ ಲಹರಿಬಸಿರಲ್ಲಿ ಪಳಗಿಜನ್ಮಿಸಬೇಕು** ಪಕ್ಟವಾಗದೇಕಿತ್ತರೆ ರುಚಿಸದುಸಾಹಿತ್ಯ ರಸ ** ತಾಳದು ಮನಬರೆದೆ ಕಾವ್ಯ ; ಉಕ್ಕಿಹೊರಹೊಮ್ಮಿತು** ಭವ್ಯತೆಯಲಿಹುಟ್ಟಿದ್ದು ಶಾಸ್ವತದಮಧುರ ಗೀತೆ** ಪಲ್ಲವಿಸಿತುಆತ್ಮದಿಂದ ; ಕಾವ್ಯದಸತ್ವ ಶಕ್ತಿಯು** ಭಾವ ಗರ್ಭದಿಕಾವ್ಯ ಕಟ್ಟಿ ; ಹುಟ್ಟಿದ್ದುರಸ ಭರಿತ**************************************

ಅನ್ನ ಕೊಟ್ಟವರು ನಾವು.

ಕವಿತೆ ಅನ್ನ ಕೊಟ್ಟವರು ನಾವು. ಅಲ್ಲಾಗಿರಿರಾಜ್ ಕನಕಗಿರಿ ನೆನಪಿರಲಿ ನಿಮಗೆ.ನೀವು ದೆಲ್ಲಿಯ ರಸ್ತೆ ಮುಚ್ಚಿಕೊಂಡರೆ,ನಾಳೆ ನಾವು ಹಳ್ಳಿ ಹಳ್ಳಿಯರಸ್ತೆ ಮುಚ್ಚುತ್ತೇವೆ. ಆಗ ಶುರುವಾಗುತ್ತದೆ ನೋಡಿ ಅಸಲಿ ಯುದ್ಧ. ಸರ್ಕಾರ ಎಂದರೆ ಸೇವಕ ಎನ್ನುವುದು ಮರೆತ್ತಿದ್ದಿರಿ ನೀವು.ಸಾಕುಮಾಡಿ ನೇತಾರರ ಹೆಸರಲ್ಲಿ ಬೂಟಾಟಿಕೆಯ ಕೆಲಸ. ಇಂದಲ್ಲ ನಾಳೆ ಪಾರ್ಲಿಮೆಂಟ್ ನಲ್ಲಿ,ಮನುಷ್ಯ ಪ್ರೀತಿಯ ಬೀಜ ಬಿತ್ತುತ್ತೇವೆ ನಾವು.ಮೊದಲು ಧರ್ಮದ ಅಮಲಿನಿಂದ ಹೊರ ಬನ್ನಿ ನೀವು. ಹೋರಾಟದ ನದಿ ಕೆಂಪಾಗುವ ಕಾಲ ಬಂತು.ನಿಮ್ಮ ಮುಖವಾಡ ಕಳಚಿ ಬಿಡಿನೇಗಿಲ ಯೋಗಿ ಮುಂದೆ…….. ನೆನಪಿರಲಿ ಅನ್ನ […]

ಮಾಗಿ ಕಾಲ

ಕವಿತೆ ಮಾಗಿ ಕಾಲ ಡಾಲಿ ವಿಜಯ ಕುಮಾರ್. ಕೆ.ವಿ ಆವರಿಸಿದ ಚಳಿನನ್ನ ಮೈತಾಕದಂತೆಎದೆಯ ಚಿಪ್ಪಿನೊಳಗೆ ಕಾದನಿನ್ನ ಬಿಸಿ ಅಪ್ಪುಗೆಯ ಹಿತಕ್ಕೆಬರುವ ಮಾಸಗಳೆಲ್ಲಮಾಘಮಾಸವನ್ನೇಹೊತ್ತಿರಬಾರದೆ ಅನ್ನಿಸುತ್ತೆ… ಒಲಿದ‌ ಮನಸುಗಳಮಾಗಿಸಿ.ಬಿಗಿಯಾಗಿ ಬೆಸೆದುಬಲಿತ ಕನಸುಗಳಮಿಲನವಾಗಿಸುವಶಿಶಿರ ಋತುಪರಿಪೂರ್ಣತೆಯ ಭಾವಗಳಪೂರ್ಣವಿರಾಮದಂತೆ.ನನಗೆ… ಮನದ ಮಾತುಗಾರನಮಂತ್ರಿಸಿ ವಶೀಕರಿಸುವಮಾಘಮಾಸಮಡದಿ ಮನದರಸರಮನಸುಗಳ ಹೊಸೆದುಪ್ರತಿ ಹೊತ್ತಿನ ಪಾಲುದಾರಿಕೆಯಪರಮ ಸುಖಕೆಮುತ್ತುಗಳ ಮಳೆಗರೆಸುವಪ್ರತಿ ಮಾಗಿಯೂಇಲ್ಲಿ ಹೊಸ ವಸಂತಗಳೇ…… ಕಿಟಕಿಯಿಂದತೂರಿ ಬರುವಹೊಂಗಿರಣಗಳ ಅಲ್ಲೇತಡೆದು ನಿಲ್ಲಿಸುವೆ.ಇನಿಯನಮುದ ನೀಡುವಮುದ್ದು ಪ್ರೀತಿಯಕದ್ದು ನೋಡದಿರಲೆಂದು…. ಅಂತದ್ದೊಂದುಸವಿ ಸಾಕಾಗುವಷ್ಟುಸವಿದೇಬಿಡುವೆ.ಸುಮ್ಮನಿರಿಚಿಲಿಪಿಲಿ ರಾಗಗಳೇ.ಬೆಳಗಿನ ಕಾತರಿಕೆ ನನಗಿಲ್ಲ. ಇಂದಿನಕನಸುಗಳ ಕೈಚೆಲ್ಲಿದರೆಮನಮುಂದಿನ ಮಾಗಿಕಾಲಕ್ಕಾಗಿಕಾದು ಕೂರಬೇಕು….ಹೆಪ್ಪುಗಟ್ಟಿದ ಹಲವು ನೆನಪುಗಳಜೊತೆಗೆ…… ಮಾಗಿ-ಶಿಶಿರ-ಚಳಿಗಾಲ *******************************

ಶಬ್ದಗಳ ಸಂತೆಯಲ್ಲಿ.

ಕವಿತೆ ಶಬ್ದಗಳ ಸಂತೆಯಲ್ಲಿ. ವೀಣಾ ನಿರಂಜನ್ ಇಂದುಶಬ್ದಗಳು ಅರ್ಥದ ಒಜ್ಜೆ ತಾಳಲಾರದೆನನ್ನ ಮನೆಯ ಬಾಗಿಲಿಗೆ ಬಂದು ನಿಂತಿವೆನಾನೀಗಅವುಗಳಿಗೆ ಸರಳವಾದ ಉಡುಪು ತೊಡಿಸಿಮತ್ತೆ ಮರಳಿ ಕಳುಹಿಸಬೇಕಾಗಿ ಬಂದಿದೆ. ** ಸುಳ್ಳು ಸಂಚರಿಸುವಾಗಶಬ್ದಗಳ ಜಾತ್ರೆಯೇ ನೆರೆದಿರುತ್ತದೆಸತ್ಯ ಹೊರಗಡಿಯಿಡುವಾಗಮೌನದ ಮೆರವಣಿಗೆ ನಡೆಯುತ್ತದೆ ** ಶಬ್ದಗಳು ನಾಚಿದಾಗಮೌನ ಮಾತಾಡುತ್ತದೆಶಬ್ದಗಳು ಬಿಂಕ ತೋರಿದಾಗಮೌನ ನಾಚುತ್ತದೆ ** ಅಕ್ಷರಗಳ ಹೆತ್ತದಕ್ಕೆಪದಗಳಿಗೆ ಬೆರಗಾಗಿತ್ತುಪದಗಳ ಬವಣೆಗೆಅಕ್ಷರಗಳೇ ಸಾಕ್ಷಿಯಾಗಿದ್ದವು. **********************************

ಜೀವನ ಪಯಣ (ಸುನೀತ ಕಾವ್ಯ)

ಸುನೀತ ಕಾವ್ಯ ಜೀವನ ಪಯಣ (ಸುನೀತ ಕಾವ್ಯ) ಸುನೀತ (ಐದು ಮಾತ್ರೆಯ ನಾಲ್ಕು ಗಣಗಳ ಹದಿನಾಲ್ಕು ಸಾಲುಗಳು) ಶುಭಲಕ್ಷ್ಮಿ ಆರ್ ನಾಯಕ ಸಾಗುತಿದೆ ಅನವರತ ಜೀವನ ರಥದ ಪಯಣಹಲವು ಮಧುರ ವಸಂತಗಳ ಹರೆಯವನು ದಾಟಿಕಾಲ ಗುರುವ ವೀಣೆಯ ತಂತಿಯ ಸದಾ ಮೀಟಿಸದ್ದುಗದ್ದಲದಿ ಮಾಡದೇ ಸಮಯದ ಹರಣ ಏಳು ಬೀಳುಗಳನು ಸಮ ದೂಗಿಸುವ ತಾಳ್ಮೆಯುಬದುಕಿನ ಸತ್ಯವನು ಅರಿತು ಅರುಹುವ ಛಲದಲ್ಲಿಸಾಗಿದೆ ಪಯಣವು ಗುರಿ ಸೇರೋ ತವಕದಲ್ಲಿಪಯಣದಲಿ ಬೇಕೆಮಗೆ ಎಂದಿಗೂ ಭರವಸೆಯು ಬಂದ ಸೋಲು ಗೆಲುವುಗಳ ಅನುನಯದಿ ಸವಿಯುತಮಾರ್ಗದ ಎಡರು […]

ನನ್ನ ಕವಿತೆ

ಕವಿತೆ ನನ್ನ ಕವಿತೆ ಲಕ್ಷ್ಮೀದೇವಿ ಪತ್ತಾರ ಹರುಕು ಬಟ್ಟೆಮುರುಕು ಮನೆಯಲಿಅರೆ ಹೊಟ್ಟೆ ಊಟದಲ್ಲೂಹೆತ್ತ ಮಕ್ಕಳು ಕಲಿತುಮನೆಗೆ ಆಸ್ತಿ ಆಗುವರೆಂಬಹೆತ್ತವರ ಹೊಟ್ಟೆ ತುಂಬಾ ಕನಸುನನ್ನ ಕವಿತೆ ಭೂಮಿ ಹರಗಿ ಹದಗೊಳಿಸಿಗಟ್ಟಿ ಬೀಜವ ಬಿತ್ತಿಮಳೆ ಬರುವುದೆಂಬ ಭರವಸೆ ಹೊತ್ತರೈತನ ನಿರೀಕ್ಷೆ ನನ್ನ ಕವಿತೆ ಕೆಲಸವಿಲ್ಲವೆಂದು ಕೊರಗದೆಸಿಕ್ಕ ಕೆಲಸವನ್ನ ಚೊಕ್ಕನಾಗಿ ಮಾಡಿ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಗಟ್ಟಿಗರ ಇಚ್ಛಾಶಕ್ತಿನನ್ನ ಕವಿತೆ ಬಾಳ ಪಥದ ಏರಿಳಿತಗಳನ್ನು ಎದುರಿಸಿ ಸಂಸಾರ ರಥವನ್ನು ಸುಗಮವಾಗಿ ದಡ ಸೇರಿಸುವ ಸ್ತ್ರೀ ರತ್ನ ನನ್ನ ಕವಿತೆ ಗಾಳಿ ಮಳೆ […]

ಅಹಮ್ಮಿನ ಕೋಟೆ

ಕವಿತೆ ಅಹಮ್ಮಿನ ಕೋಟೆ ಚಂದ್ರಪ್ರಭ ಬಿ. ‘ಸೋತರೇ ಗೆಲುವು ಮಗಳೇ’ ಅವ್ವನ ಮೆಲು ನುಡಿ‘ಇಟ್ಟಾಂಗಿರಬೇಕ ಮಗಾ’ ಅಜ್ಜಿಯ ಚೆನ್ನುಡಿನಿನ್ನ ನಲ್ನುಡಿ ಎದುರು ಗಾಳಿಯೊಡನೆತೂರಿ ಹೋದುದು ಅರಿವಿಗೇ ಬರಲಿಲ್ಲಆಹಾ! ಏನದರ ಸೊಗಸು…ಖೋಡಿ ಮನಸ್ಸಿನ ಹತ್ತು ಹದಿನಾರು ಕನಸುಚಿತ್ತಾಕರ್ಷಕ ಸೆಳೆತ.. ಬಲು ಮತ್ತಿನ ಅಮಲು ಬಿಸಿಲೇರಿದಂತೆಲ್ಲ ನಿಚ್ಚಳ ಬೆಳಕುನಡು ಮಧ್ಯಾಹ್ನದ ನಿಗಿನಿಗಿ ಕೆಂಡಮಂಜು ಕರಗಿ ಒಳಹೊರಗೆಲ್ಲ ಕಡು ತಾಪಅಪಥ್ಯವಾಗುವ ಅವ್ವ ಅಜ್ಜಿಯ ಕಿವಿಮಾತುತುದಿ ಮೊದಲಿಲ್ಲದ ತಪ್ಪು ಒಪ್ಪುಗಳಗುಣಾಕಾರ ಭಾಗಾಕಾರ… ಮುಂಬರಿಯಲು ತವಕಿಸುವ ಹೃದಯನಿಂತೇ ಬಿಡುವ ಹಠಮಾರಿ ಹೆಜ್ಜೆಕ್ಷಮಿಸು ಗೆಳೆಯ, ನಿನ್ನಂತೆ […]

Back To Top