ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾಯ್ಕುಗಳು

ಕೆ.ಸುನಂದಾ

Rainbow butterflies. Seven butterflies creating a rainbow. Vector illustration, everything can be very easily separated or recolored vector illustration

ಗೆಳತಿ ನಿನ್ನ
ಸೌಂದರ್ಯ ಯಾವ ಶಿಲ್ಪಿ
ಕೈ ಚಳಕವೊ ?
**

ವಿದ್ಯೆ ದುಡಿಮೆ
ತಾಳ್ಮೆ ; ಇದ್ರೆ ಎಲ್ಲವೂ
ಜಯಶೀಲವು
**

ಮನತಟ್ಟದೆ
ಹುಟ್ಟೀತೇನು ; ಸ್ವಂತಿಕೆ
ಮರೆತ ಕಾವ್ಯ
**

ಕಾವ್ಯ ಲಹರಿ
ಬಸಿರಲ್ಲಿ ಪಳಗಿ
ಜನ್ಮಿಸಬೇಕು
**

ಪಕ್ಟವಾಗದೇ
ಕಿತ್ತರೆ ರುಚಿಸದು
ಸಾಹಿತ್ಯ ರಸ

**

ತಾಳದು ಮನ
ಬರೆದೆ ಕಾವ್ಯ ; ಉಕ್ಕಿ
ಹೊರಹೊಮ್ಮಿತು
**

ಭವ್ಯತೆಯಲಿ
ಹುಟ್ಟಿದ್ದು ಶಾಸ್ವತದ
ಮಧುರ ಗೀತೆ
**

ಪಲ್ಲವಿಸಿತು
ಆತ್ಮದಿಂದ ; ಕಾವ್ಯದ
ಸತ್ವ ಶಕ್ತಿಯು
**

ಭಾವ ಗರ್ಭದಿ
ಕಾವ್ಯ ಕಟ್ಟಿ ; ಹುಟ್ಟಿದ್ದು
ರಸ ಭರಿತ
**************************************

About The Author

Leave a Reply

You cannot copy content of this page

Scroll to Top