ಕವಿತೆ
ದೂರ ದೂರದತೀರ
ಶಾಂತಲಾ ಮಧು
ದೂರ ದೂರದ ತೀರ
ತೀರದೀದೂರ
ಹಾಲ ಬೆಳದಿಂಗಳು
ನಕ್ಷತ್ರದಾ ಸರ
ತಬ್ಬಿಮುದ್ದಾಡಿದಾ ನೆಲ
ಬರ ಸಿಡಿಲು ಗುಡುಗು
ಮಳೆ ಅಪ್ಪಳಸಿ ಆಲಂಗಿಸಿ…
ನಲಿದು ಹರಿದಾಡಿ ನೆಲ
ದೂರ ದೂರದ ತೀರ
ತೀರದೀ ದೂರ
ತೆಂಗು ಅಡಕೆ ಮರ
ತಬ್ಬಿದಾ ಬಳ್ಳಿಗಳು
ಹೂವಾಗಿ ಹಣ್ಣು ಕಾಯಾಗಿ
ಮಣ್ಣಿನವಾಸನೆಗೆ
ಮರುಳಾಗಿ ಸುಕಿಸಿದಾ ನೆಲ
ದೂರ ದೂರದ ತೀರ
ತೀರದೀ ದೂರ
ಹಸಿರಿನಂಗಳಕೆ ಅದೆ
ಕನಸಿನ ಚಾವಡಿ ಹೊದೆಸಿ
ಲಕ್ಷಣ ವಿತ್ತ ಮೂರ್ತಿ
ಕೆತ್ತಿಟ್ಟು ಜೀವದಾಳದ
ಪ್ರಿತಿ ಸಂಸ್ಕೃುತಿಯ
ಬೆೇರನಾಳದಲಿ
ಹೂತ್ತಿಟ್ಟ ಆ ನೆಲ
ದೂರ ದೂರದ ತೀರ
ತೀರದೀ ದೂರ
ಗುಡ್ಡ ಬೆಟ್ಟದಸಾಲು
ಪಶು ಪಕ್ಷಿ ಇಂಚರ
ಒಡನಾಟ, .ಹಳ್ಳ ಕೊಳ್ಳದ ಸ್ಪರ್ಷ
ಜೀವ ಚೇತನವಾಗಿ
ಪಾಠ ಕಲಿಸಿದ ನೆಲ
ದೂರ ದೂರದ ತೀರ
ತೀರದೀ ದೂರ
ಹಸುಳೆಯಾಗಿಸಿ
ಮತ್ತೆ ಸಿಹಿ ಕಹಿಯ
ನೆನಪಿಸುತ ಜೀವ ನಾಡಿಯ
ಮೀಟಿ ಮಯ್ ಮರೆಸುತ
ಕತ್ತಲ ಕವಡೆ ಯಾಟದಲಿ
ಸೋಲು ಗೆಲುವಲಿ
ಮಿಂದೆಂದಾ ನೆಲ
ದೂರ ದೂರದ ತೀರ
ತೀರದೀ ದೂರ
ಕಾನನದ ಕಪ್ಪೆಯಾಟದ
ಕೊಳದಲ್ಲಿ
ನೀರ ನೆರಿಗೆಯಲಿ
ಪ್ರತಿಬಿಂಬ ಹೆಣೆದು
ದಿನಒಂದು ಕ್ಷಣವಾಗಿ
ಕ್ಷಣಿಕತೆಯನೆ ಮರೆತ ನೆಲ
ದೂರ ದೂರದ ತೀರ
ತೀರದೀ ದೂರ
ಸಂಭ್ರಮದ ಕಡಲಲ್ಲಿ
ನೆನಪ ದೋಣಿಯ ನಡೆಸಿ
ಅಲೆಯ ಏರಿಳಿತಕೆ
ಚೀರಿ ಚೀತ್ಕರಿಸಿ
ನೀರ ದಾರಿಯಲಲ್ಲಲ್ಲಿ
ಪ್ರತಿಬಿಂಬ ಹುಡುಕಿ
ತಡಕಾಡಿ ದಾ ನೆಲ
ದೂರ ದೂರದ ತೀರ
ತೀರದೀ ದೂರ
ಅವಳ ಮಾಸಿದಸೆರಗು
ಬಿದ್ದಿಹುದು ನೆಲದಲ್ಲಿ
ಕೆಂಪು ಮಣ್ಣನು ತಬ್ಬಿ
ಅಲ್ಲಿ ಮಾಗಿದ ಪ್ರೀತಿ
ಹಸಿರಿನ ಹುಲ್ಲು
ಅವಳುಸಿರ ಬಸಿರ
ನಲೆಯನೆಲ
ದೂರ ದೂರದ ತೀರ
ತೀರದೀ ದೂರ
***********************