ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಶಬ್ದಗಳ ಸಂತೆಯಲ್ಲಿ.

Meditation. Woman relaxing by meditation/yoga stock photos

ವೀಣಾ ನಿರಂಜನ್

ಇಂದು
ಶಬ್ದಗಳು ಅರ್ಥದ ಒಜ್ಜೆ ತಾಳಲಾರದೆ
ನನ್ನ ಮನೆಯ ಬಾಗಿಲಿಗೆ ಬಂದು ನಿಂತಿವೆ
ನಾನೀಗ
ಅವುಗಳಿಗೆ ಸರಳವಾದ ಉಡುಪು ತೊಡಿಸಿ
ಮತ್ತೆ ಮರಳಿ ಕಳುಹಿಸಬೇಕಾಗಿ ಬಂದಿದೆ.

**

ಸುಳ್ಳು ಸಂಚರಿಸುವಾಗ
ಶಬ್ದಗಳ ಜಾತ್ರೆಯೇ ನೆರೆದಿರುತ್ತದೆ
ಸತ್ಯ ಹೊರಗಡಿಯಿಡುವಾಗ
ಮೌನದ ಮೆರವಣಿಗೆ ನಡೆಯುತ್ತದೆ

**

ಶಬ್ದಗಳು ನಾಚಿದಾಗ
ಮೌನ ಮಾತಾಡುತ್ತದೆ
ಶಬ್ದಗಳು ಬಿಂಕ ತೋರಿದಾಗ
ಮೌನ ನಾಚುತ್ತದೆ

**

ಅಕ್ಷರಗಳ ಹೆತ್ತದಕ್ಕೆ
ಪದಗಳಿಗೆ ಬೆರಗಾಗಿತ್ತು
ಪದಗಳ ಬವಣೆಗೆ
ಅಕ್ಷರಗಳೇ ಸಾಕ್ಷಿಯಾಗಿದ್ದವು.

**********************************

About The Author

Leave a Reply

You cannot copy content of this page

Scroll to Top