ಕವಿತೆ
ಅನ್ನ ಕೊಟ್ಟವರು ನಾವು.
ಅಲ್ಲಾಗಿರಿರಾಜ್ ಕನಕಗಿರಿ
ನೆನಪಿರಲಿ ನಿಮಗೆ.
ನೀವು ದೆಲ್ಲಿಯ ರಸ್ತೆ ಮುಚ್ಚಿಕೊಂಡರೆ,
ನಾಳೆ ನಾವು ಹಳ್ಳಿ ಹಳ್ಳಿಯ
ರಸ್ತೆ ಮುಚ್ಚುತ್ತೇವೆ.
ಆಗ ಶುರುವಾಗುತ್ತದೆ ನೋಡಿ ಅಸಲಿ ಯುದ್ಧ.
ಸರ್ಕಾರ ಎಂದರೆ ಸೇವಕ ಎನ್ನುವುದು ಮರೆತ್ತಿದ್ದಿರಿ ನೀವು.
ಸಾಕುಮಾಡಿ ನೇತಾರರ ಹೆಸರಲ್ಲಿ ಬೂಟಾಟಿಕೆಯ ಕೆಲಸ.
ಇಂದಲ್ಲ ನಾಳೆ ಪಾರ್ಲಿಮೆಂಟ್ ನಲ್ಲಿ,
ಮನುಷ್ಯ ಪ್ರೀತಿಯ ಬೀಜ ಬಿತ್ತುತ್ತೇವೆ ನಾವು.
ಮೊದಲು ಧರ್ಮದ ಅಮಲಿನಿಂದ ಹೊರ ಬನ್ನಿ ನೀವು.
ಹೋರಾಟದ ನದಿ ಕೆಂಪಾಗುವ ಕಾಲ ಬಂತು.
ನಿಮ್ಮ ಮುಖವಾಡ ಕಳಚಿ ಬಿಡಿ
ನೇಗಿಲ ಯೋಗಿ ಮುಂದೆ……..
ನೆನಪಿರಲಿ ಅನ್ನ ಕೊಟ್ಟವರು ನಾವು.
ವಿಷ ಬೀಜ ಬಿತ್ತಬೇಡಿ ನೀವು.
******************************************