ತೆವಳುವುದನ್ನುಮರೆತ ನಾನು
ಕವಿತೆ ತೆವಳುವುದನ್ನುಮರೆತ ನಾನು ವಿಶ್ವನಾಥಎನ್. ನೇರಳಕಟ್ಟೆ ನಾನು ತೆವಳುತ್ತಾ ಸಾಗುತ್ತಿದ್ದೆ‘ಎದ್ದು ನಿಂತರೆ ಚೆನ್ನಾಗಿತ್ತು’ಎಂದರವರು ಎದ್ದು ನಿಂತೆಅವರ ಬಾಯಿಗಳು ಸದ್ದು ಮಾಡಿದವು‘ನಿಂತರೆಸಾಲದು, ನಡೆಯಬೇಕು’ ನಡೆಯುತ್ತಾ ಹೊರಟೆ ಮತ್ತುಎಡವಿದೆ‘ಎಡವದೆಯೇನಡೆ’ ಎಂಬ ಸಲಹೆ ಎಡವದೆಯೇ ನಡೆಯುವುದನ್ನು ರೂಢಿಸಿಕೊಂಡೆ‘ಈಜುವುದು ಗೊತ್ತಿಲ್ಲವಲ್ಲ ನಿನಗೆ?’ ಎಲುಬಿಲ್ಲದ ನಾಲಗೆಗಳು ನನ್ನ ಕಿವಿಗೆ ಮುತ್ತಿಕ್ಕಿದವು ಮೀನಿನ ಅಪ್ಪನಂತೆ ಈಜಿದೆಮತ್ತು ಅವರ ಮುಖ ನೋಡಿದೆಅವರೊಳಗಣ ಅತೃಪ್ತ ಆತ್ಮ ಪಿಸುಗುಟ್ಟಿತು‘ಹಾರಲಾರೆ ನೀನು’ ಸವಾಲೇ ರೆಕ್ಕೆಗಳಾದವು ನನಗೆಹಾರತೊಡಗಿದೆ ಮತ್ತುಹಾರುತ್ತಲೇ ಇದ್ದೆ ಕೆಳಗನ್ನು ನೋಡಿದರೆಮತ್ತೆ ತುಟಿಗಳ ಪಿಟಿಪಿಟಿ-‘ಈಗ ತೆವಳುನೀನು, ಸಾಧ್ಯವಾದರೆ’ ತೆವಳ ಹೊರಟ ನಾನೀಗ […]
ಜೀವದಾತೆ ಪ್ರಕೃತಿ ಮಾತೆ
ಕವಿತೆ ಜೀವದಾತೆ ಪ್ರಕೃತಿ ಮಾತೆ ಸುವಿಧಾ ಹಡಿನಬಾಳ ಹೇ ಪ್ರಭು , ಋತುರಾಜ ವಸಂತನೀ ಬಂದೆ ನಸುನಗುತಪ್ರಕೃತಿಗೆ ಹೊಸ ಕಳೆಯ ನೀಡುತ್ತಆದರೆ ಕಳೆದಿಲ್ಲ ಮನುಕುಲದದುಗುಡ ದುಮ್ಮಾನ ನಿನ್ನ ಆಗಮನದಿಂದ ! ಗಿಡಮರಗಳು ಹಸಿರೆಲೆ ಚಿಗುರು ಬಿಟ್ಟುಹೂ ಹಣ್ಣು ಕಾಯಿ ತೊಟ್ಟುಕೋಗಿಲೆ ಗಿಳಿ ಗೊರವಂಕಗಳುಲಿವಾಗಮನುಜನಿಗೇಕೆ ಈ ವಿಯೋಗ ? ಜೀವಸಂಕುಲವೆ ತಿಂದುಂಡು ನಲಿದುಹಾಯಾಗಿ ಇರುವಾಗ ನಿನ್ನದೆಒಂದು ಭಾಗ ಹುಲು ಮಾನವನಿಗೇಕೆಜೀವಭಯ ತಳಮಳ ತುಮುಲ? ಹೇ ಕಾಮಧೇನು ಕರುಣಾಮಯೀಪ್ರಕೃತಿ ಮಾತೆ ಜೀವದಾತೆನಿನ್ನ ಮೇಲೆ ಅಟ್ಡಹಾಸಗೈವಸ್ವಾರ್ಥ ನರನ ಮೇಲೆ ಕೋಪವೆಅಥವಾ ನಿನ್ನ […]
“ಅನ್ನದಾತನ ಸ್ವಗತ “
“ಅನ್ನದಾತನ ಸ್ವಗತ “ ಗೀತಾ ಅನಘ ಮುನಿನಸ್ಯಾಕೆ ತಾಯಿ ನನ್ನ ಮ್ಯಾಲ,ಕಾರ್ಖಾನೆ ಕಟ್ಟಿ ನಿನ್ನುಸಿರ ಮಲಿನ ಗೊಳಿಸಲಿಲ್ಲ,ರಾಜಕಾರಣಿಗಳಂತೆ ಸುಳ್ಳು ಭರವಸೆನೀಡಲಿಲ್ಲ,ಬ್ಯಾಂಕಿಗೆ ಸಾಲ ಕೇಳಿದೆ ಅಷ್ಟೇ,!!!!!!ಬೆಳೆ ಬಿತ್ತಲು,,,,,,,,,,,,,ಪಚ್ಚೆ ಪೈರು ಗಳಿಂದ ನಿನ್ನೊಡಲ ತುಂಬಲು,ಅದೇಕೋ ಕಾಣೆ ನಿನಗೂ ನನ್ನ ಮೇಲೆ ಮುನಿಸು,ಕೆಲವೊಮ್ಮೆ ಇಳೆಗೆ ಮಳೆಯ ಸುರಿಸದೆ,ನನಗೆಂದು ಮೀಸಲಿಟ್ಟ ನಿನ್ನ ದೇಹದ ಒಂದಿನಿತು ಭಾಗ ಬರಡಾಯಿತು,ಇನ್ನೊಮ್ಮೆ ಬಹಳಷ್ಟು ಮಳೆ ಬಂದು ಇಳೆ ನೆಂದು ನಿನ್ನೊಡಲ ಹಸಿರಾಗಿಸಿ ಫಸಲು ನೋಡಿ,ಸಂಭ್ರಮಿಸುವ ಸಮಯದಿಯಾಕೆ ನಿನ್ನಯ ರುದ್ರನರ್ತನ?! ಬಯಸಿದ್ದಕ್ಕಿಂತ ಹೆಚ್ಚು ಮಳೆರಾಯನ ಆರ್ಭಟ ಹೆಸರೆಂಬುದು ಪ್ರವಾಹ, […]
ಸ್ವಾರ್ಥ
ಕವಿತೆ ಸ್ವಾರ್ಥ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗದ್ದುಗೆಯೇರಲುಹಣವನು ಎಸೆಯಿತುಗಳಿಕೆಯ ತೃಷೆಯಲಿನಶೆಯ ನೀಡಿತುಸ್ವಾರ್ಥದ ಮತವನು ಮುತ್ತಿ ಸಲಿಗೆಯ ಸುಲಿಗೆ ಮಾಡುತಒಸರುವ ಬೆವರಿನಬುತ್ತಿಯ ಕಟ್ಟಿತುನೆತ್ತರು ಹಿಚುಕಿ,ನೆಕ್ಕಿ ಕಾಡಿತುಕತ್ತಲು ಮುಕ್ಕಿ ಅನುದಿನ ಮತ್ತಿನಲಿಅಮೃತ ತುತ್ತಿನಲಿಕಡಲಾದರೂ ಕುಡಿದು,ಗತ್ತಿನಲಿ-ವಿಗತಿಯೆಡೆಗೆಒಂದನ್ಹತ್ತು ಸೇರಿಸಿತು ಸುಖದ ತಿರುಳ ಸವಿಯುತಸೇವಕನೆಂಬುದ ಮರೆಯಿತುಅಡಿಗೊಮ್ಮೆ ಜೊಳ್ಳ ನುಡಿದು,ಪರರ ಬಾದೆಯನರಿಯದೆನ್ಯಾಯ ನೀತಿ ಮಾತಾಡಿತು ಕೃತಕ ಕೀರ್ತಿಯ ಪಡೆಯಿತುವಿಕೃತ ಸೊಗದಲಿ ಹಾಡಿತುಸುಕೃತ ಭಾವವಿರದೆಅಂಬರವೇರಿಕೈ ಬೀಸಿ ಕರಗಿತು ಯಾರೋ ಬಿತ್ತಿದ ಬೀಜಹೂ-ಕಾಯಿಗಳ ಬಿಡದೆ ತಿಂದು,ಒಳಗು ಹೊರಗೂಗಿಡದ ಬುಡದನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.……************************
ಬಂಜೆ ಸಂಜೆ.
ಕತ್ತಲು ಸುತ್ತ
ಮೌನ
ಮಾತಾಗಲು
ಬಯಸಿದಷ್ಟೂ
ಮಾತು
ಮೌನ-
ವಾಗುತ್ತದೆ
ಕವಿತೆ
ಜೀವನ್ಮರಣ ಯಾತನೆ ಕರುಳತುಂಬ
ಹೊರಗೋ ಭೀಕರ ಮೌನ ರುದ್ರತಾಂಡವ ಒಳಗೆ
ಜಗದ ಹೊರ ಮೈಯ್ಯನು ಗಾಳಿ ಚೂರು ಬಿಡದೆ ನೆಕ್ಕುತ್ತಿತ್ತು ಎಂಜಲಾಗದಂತೆ
ಗಜಲ್
ಗಜಲ್ ಸಿದ್ಧರಾಮ ಹೊನ್ಕಲ್ ದಿನಾರಾತ್ರಿ ನೆನಪುಗಳ ಕಾಡಾಟ ಅತಿಯಾಗಿ ನಾಳೆಯಿಂದವಳ ಮರೆಯಬೇಕು ಅನ್ಕೋತೇನೆಇವಳಿಂದೆನಾಗಬೇಕಿದೆ ಈ ಮನಸಿಗರಾಯಳ ಸಹವಾಸವೇ ಬಿಟ್ಟು ಬಿಡಬೇಕು ಅನ್ಕೋತೇನೆ ಸಿಟ್ಟು ಸೆಡವು ದು:ಖ ಸೊಕ್ಕು ಸ್ವಾಭಿಮಾನ ನೆನಪಾಗಿ ಕ್ಷಣ ಹೀಗಂದುಕೊಂಡಿರುತ್ತೇನೆಅವಳು ಕೊಟ್ಟ ಕಂಫರ್ಟಲಿ ಶುಭರಾತ್ರಿ ಹೇಳಿ ಮನಸಾರೆ ಮರೆಯದಿರಬೇಕು ಅನ್ಕೋತೇನೆ ಬೆಳಿಗ್ಗೆ ಎದ್ದೊಡನೆ ಹಿಂದಿನದೇನು ನೆನಪಿಡದೆ ಹೃದಯದಿ ಶುಭೋದಯ ಹೇಳಿರುತ್ತೇನೆಮಾತು ಕಥೆ ಯಥಾ ರೀತಿ ಪ್ರೀತಿ ಮೂಗಿನ ತುದಿಯ ಕೋಪವಿರಬೇಕು ಅನ್ಕೋತೇನೆ ಅನುನಯದ ಮಾತಿಗಿಂತ ಕೋಪತಾಪದ ಮಾತು ತುಸು ಜಾಸ್ತಿ ಆಗಿದೆಯೇನೋಆದರೇಕೋ ಬಿಟ್ಟೆನೆಂದರೂ ಬಿಡದೀ […]
ಕಲ್ಪನೆಗೂ ಜೀವ ಬರುವಂತಿದ್ದರೆ
ಮುಗಿಯದ ಕನವರಿಕೆಗಳ ನಡುವೆ
ಜೀವ ಬಾರದ ಕಲ್ಪಿನೆಗಳಿಗೆ ಕಡಿವಾಣ ಹಾಕಲಾಗದೆ ಮುನಿಸಿಕೊಂಡ ರಾತ್ರಿಗಳು
ಆಗೆಲ್ಲಾ ಒದ್ದೆಯಾಗುತ್ತಿದ್ದದ್ದು ಅಮ್ಮನ ಮಡಿಲು.
ಕಡ್ಡಿ ಗೀರಿದಾಗ
ಹಸಿ ಕಟ್ಟಿಗೆಯ ರಾಶಿಯಲಿ
ನಾನೇ ಹೋಗಿ ಮಲಗಿದಂತೆ
ಪೊಟ್ಟಣದ ಕಡ್ಡಿ ಗಹಗಹಿಸಿ ಕುಣಿದಂತೆ
ಗಝಲ್
ನಿರ್ಮೋಹಿಯ ಸಂಗ ಬಯಸಿದವನಿಗೆ ನಿಸ್ಸಂಗವೇ ಪ್ರಸಾದವಾಗಬೇಕೆನೆ ಸಖಿ
ಅಪಾರ ಮೋಹವ ಮುಚ್ಚಿಟ್ಟುಕೊಂಡು ಮನದಲ್ಲೆ ಸದಾ ಕೋರಗಬೇಕೆನೆ ಸಖಿ