ಕವಿತೆ
ಜ್ಯೋತಿ ಬಿ ದೇವಣಗಾವ.
ಹೊರಗೆ ನಾಳೆಗಳು ನರಳುತ್ತಿವೆ
ಒಳಗೆ ವರ್ತಮಾನ
ನೋಡಲಾಗದೆ ಕಣ್ಣು ಕಾಲ್ಕಿತ್ತಿತು ಚಿತ್ತ ಜಾಂಡಾ ಊರಿತು
ಮೊದಲಿನ ನೋಟ ಮರಳಲಾರದೇನೋ ನಂಜಿಲ್ಲದಂತೆ
ಜೀವನ್ಮರಣ ಯಾತನೆ ಕರುಳತುಂಬ
ಹೊರಗೋ ಭೀಕರ ಮೌನ ರುದ್ರತಾಂಡವ ಒಳಗೆ
ಜಗದ ಹೊರ ಮೈಯ್ಯನು ಗಾಳಿ ಚೂರು ಬಿಡದೆ ನೆಕ್ಕುತ್ತಿತ್ತು ಎಂಜಲಾಗದಂತೆ
ತುರ್ತು ಚಿಕಿತ್ಸೆ ವಾಹನಕೂ ಉಬ್ಬಸ
ಏರುತಿದೆ ಸಾವ ಸೂಚ್ಯಂಕ
ತೇನ್ಸಿಂಗ್ ಮೆಟ್ಟಿ ಧ್ವಜನೆಟ್ಟ ಪರ್ವತದೆತ್ತರಕೆ
ಮರಣ ಮೃದಂಗ ಎಲ್ಲೆಲ್ಲೂ ಅಂಜಿನಡುಗುವಂತೆ
ಹರುಕುರಗಟಿ,ದವಾಖಾನೆ ದಿರಿಸೇ ಕೊನೆಯಶೃಂಗಾರ
ಗಂಗಾಜಲ ತುಟಿಮುಟ್ಟಲಿಲ್ಲ ಮಂಗಳಾರತಿಗೂ ಹಿಂಜರಿಕೆ ಸೋಕಲು
ಸಾವಿನಕೇಕೆ ಸುತ್ತುವರೆದಿದೆ ಎದೆಯೊಡೆಯುವಂತೆ
ಎಣಿಸದೇ ಹೊಟ್ಟೆ ಹರಿಸಿಕೊಂಡು ಹೂಳಿಸಿಕೊಳ್ಳುತ್ತಿದೆ ನೆಲ
ಉಕ್ಕಿಸಿದ ಅಂತರ್ಜಲದಷ್ಟೇ ಬಸಿಯುತ್ತಿದೆ ನಿರ್ಜೀವನ ಸ್ವೇದ ಕುಡಿಕುಡಿದು ಮತ್ತೇರಿ ಮಲಗಿದೆ ಎಚ್ಚರವಾಗದಂತೆ
************************************
ನಿಜಕ್ಕೂ ವರ್ತಮಾನ ತಲ್ಣಣಗೊಂಡಿದೆ.ಸಾವು ನೋವು ಎಂಬುದು ಭೀಬತ್ಸದ ವಾತಾವರಣವಾಗಿದೆ.ಕಣ್ಣಿಗೆ ಕಾಣದ ವೈರಸ್, ಜನರ ಜೀವನವ ಕಸಿದುಕೊಂಡಿದೆ.ಜ್ಯೋತಿ.ಬಿ.ದೇವಣಗಾವ ಮೆಡಮ್ ರವರ ಕವಿತೆಯು ಜೀವ ಮಿಡಿತವಾಗಿದೆ.
ಧನ್ಯವಾದ
ಭಯಾನಕ, ಬಿಬಿತ್ಸ, ರುದ್ರತಾಂಡವ,
ನರಕ ಸದೃಶ್ಯ ಸಂದರ್ಭ, ಕಾಣದ ಕೈಗಳ ಕೈವಾಡದ ಪ್ರಕೋಪಕ್ಕೆ
ಜೀವನ್ಮರಣದ ಛಾಯೆ,
ಬೃಹದಾಕಾರವಾಗಿ ತೋರುತಿದೆ
ಸದ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಭಯಂಕರ ಜೀವನ ಕ್ಷಣವೊಂದನು ಸಮರ್ಥ್ ಪದಗಳಿಂದ ಕಟ್ಟಿಕೊಟ್ಟಿರುವಿರಿ…. ಅಭಿನಂದನೆಗಳು ಮೇಡಂ
ಅಭಿಪ್ರಾಯ ತಿಳಿಸಿದ ಎಲ್ಲ ಸಹ ಹೃದಯಿ ಮನಗಳಿಗೆ ಧನ್ಯವಾದ