ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬಂಜೆ ಸಂಜೆ.

ಅಬ್ಳಿ,ಹೆಗಡೆ

Campfire, Beach, People, Party, Sunset

ಮೌನದ
ಮೊಗ್ಗರಳಿ
ಮಾತ ಹೂ
ಮುಖದಲ್ಲಿ
ಮಂದಹಾಸ
ಗಮ,ಗಮ
ಪರಿಮಳ
ಆಘ್ರಾಣಿಸಿ
ಸಂಭ್ರಮಿಸುವ
ಸಮಯ
ಸಂಜೆ.
ಎದುರು-ಬದುರು
ಕೂತು
ಮಾತಾಡುವ,
ಸುಖ-ದುಃಖ
ಹಂಚಿಕೊಳ್ಳುವ
ಉಮೇದಿ
ಬಂದರೆ…..
ಏನೇನೂ ಕಾಣದ
ಬತ್ತಲಾದದ್ದೂ
ಗೊತ್ತಾಗದಷ್ಟು
ಕತ್ತಲು ಸುತ್ತ
ಮೌನ
ಮಾತಾಗಲು
ಬಯಸಿದಷ್ಟೂ
ಮಾತು
ಮೌನ-
ವಾಗುತ್ತದೆ
ಸಂಜೆ
ಬಂಜೆಯಂತೆ
ಅಳುತ್ತಿರುತ್ತದೆ.

***************************

About The Author

1 thought on “ಬಂಜೆ ಸಂಜೆ.”

  1. ಶರಣಪ್ಪ ತಳ್ಳಿ

    ಹಬ್ಳಿ ಹೆಗಡೆಯವರ ಅನುಭವದ ಕವಿತೆಗಳು ಓದುಗರಿಗೆ ಅಧ್ಯಯನವಾಗುತ್ತವೆ.

Leave a Reply

You cannot copy content of this page

Scroll to Top