ಹನಿಗಳು
ಹನಿಗಳು ಸುವಿಧಾ ಹಡಿನಬಾಳ ೧) ಮೌನ ಮಾತಾಗುವ ವೇಳೆನೀ ಹೋದೆ ದೂರಎದೆಯಂತರಾಳದಲಿನೆನಪು ಬಲು ಭಾರ ೨) ಮಗು ನಿನಗೆ ಕೋಪಮಹಾ ಶತ್ರುವಂತೆಅದಕೆ ನಿನ್ನ ಮನಉರಿವ ಕುಲುಮೆಯಂತೆ ೩) ಬೆಕ್ಕೊಂದು ಕಣ್ಣು ಮುಚ್ಚಿಹಾಲು ಕುಡಿವಂತೆಸುತ್ತೆಲ್ಲ ಅವ್ಯವಹಾರಅನಾಚಾರನಡೆಯುತಿಹುದಂತೆ ೪) ನನ್ನ ಒಲವಿನ ಕವಿತೆನೀನೆಲ್ಲಿ ಅವಿತು ನಿಂತೆನಕ್ಷತ್ರವನೆಣಿಸುತ ಕುಳಿತೆಬಂದೆ ಮತ್ತೆ ಬೆಳಕಿನಂತೆ ೫) ಎದೆಯ ಗೂಡೆಂಬಗುಬ್ಬಚ್ಚಿ ಗೂಡಲ್ಲಿಬಚ್ಚಿಟ್ಟ ನನ್ನ ಪ್ರೀತಿ ಹಕ್ಕಿಗೆನೀ ಒತ್ತಿದ ಮುತ್ತಿನ ಮೊಹರುಹಾರಲು ಕಲಿಸಿದ ಹಾಗೆ ೬) ಬಡತನ ನಿವಾರಣೆಗೆಂದುಹತ್ತಾರು ಯೋಜನೆವೋಟ್ ಬ್ಯಾಂಕ್ ರಾಜಕಾರಣದಿಂದಖಾಲಿ ಸರ್ಕಾರದ ಖಜಾನೆ ೭) […]
ಆಗ_ಈಗ
ಪದಗಳಲ್ಲಿ ಬಿಚ್ಚಿಡುತ್ತಾಳೆ
ಮೌನದಲೆ ಹೇಳಿಬಿಡುತ್ತಾಳೆ
ಶಬ್ದಗಳಲ್ಲಿ ಮಾತಾಗುತ್ತಾಳೆ
ಹಗುರಾಗುತ್ತಾಳೆ ಭಾವ ಪ್ರಸವದಲಿ
ಹಾವೇ.
ಏನೋ ಭೀತಿ! ಕಡಿದರೆ
ಪಜೀತಿ; ಮನ ಭಿತ್ತಿಯಲಿ
ಅದೇ ವಿಚಾರ ವಿಷ
ಕೂಸು
ಕವಿತೆ ಕೂಸು ಎಂ. ಆರ್. ಅನಸೂಯ ತಾಯೊಡಲ ಹಸುಳೆಯೊಂದುಅನಾಮಧೇಯನಾಗಿ ಭುವಿಗಿಳಿಯಿತುಮುಕ್ತ ಮನದಮುಗ್ಧ ಕೂಸಾಗಿ ಮಡಿಲ ತುಂಬಿತು ಹುಟ್ಟುಡುಗೆಯ ಕೂಸಿಗೆಜಾತಿಯ ವಸ್ತ್ರ ತೊಡಿಸಿದೆವುಮುಗ್ಧ ನಗೆಯ ಮುದ್ದು ಮೊಗದಹಣೆಗೆ ಧರ್ಮದ ತಿಲಕವಿಟ್ಟೆವುನಿದ್ರೆಯಲಿ ನಗುವ ಮುದ್ದು ಮಗುವಅಂತಸ್ತಿನ ತೊಟ್ಟಿಲಲ್ಲಿ ತೂಗಿದೆವು ********************************
ಹೇಗಾಯಿತು ಹೊಸ ವರುಷ
ಕವಿತೆ ಹೇಗಾಯಿತು ಹೊಸ ವರುಷ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಚುಕ್ಕಿಗಳು ಕರ್ರಗಾದವೆ?ಹಕ್ಕಿಗಳು ಬೆರಗಾದವೆ?ಕತ್ತಲೆ ಥಳಥಳ ಹೊಳೆಯಿತೆ?ಬೆಳಕು ಉಮ್ಮಳದಿ ಅದುರಿತೆ?ಮೂಡಿತೇಗೆ ಹೊಸ ವರುಷ? ನೆತ್ತರು ಬಿಳಿಯಾಯಿತೆ?ಸತ್ತವರೆದ್ದು ಕುಳಿತರೆ?ಎಲೆ ಉದುರಿ ತಲೆ ಸವರಿತೆ?ಕೋಗಿಲೆ ನೇಗಿಲು ಹೂಡಿತೆ? ಬದುಕುಗಳು ಭವಣೆಗೆ ಮಿಕ್ಕವೆ?ಕೆದಕುಗಳು ಎಣಿಕೆಗೆ ಸಿಕ್ಕವೆ?ಕಳೆದ ಘಳಿಗೆ ಎದೆ ಹೊಕ್ಕಿತ್ತೆ?ಜಗದ ನಗು ಮುಗಿಲ ನೆಕ್ಕಿತೆ?ಮೂಡಿತೇಗೆ ಹೊಸ ವರುಷ? ಬೈಬಲ್ ಕಥೆ ಹೊನ್ನಾಯಿತೆ?ಕುರಾನ ನುಡಿ ಭಿನ್ನವಾಯಿತೆ?ಭಗವದ್ಗೀತೆ ಕಣ್ಣಾಯಿತೆ?ಮೂಡಿತೇಗೆ ಹೊಸ ವರುಷ? ಬಡವರ ಕೊರಗು,ಹೂವಾಯಿತೆ?ಹಸಿದ ಕೂಸು ನಕ್ಕಾಡಿತೆ?ನದಿಯ ಹರಿವು,ಕುದಿತವಾಯಿತೆ?ಗಾಳಿಯ ತುದಿ ಕಣ್ಣಿಗೆ ಕಂಡಿತಾ?ಮೂಡಿತೇಗೆ ಹೊಸ ವರುಷ? […]
ಮುಖವಾಡದ ಬದುಕು
ಕವಿತೆ ಮುಖವಾಡದ ಬದುಕು ರೇಷ್ಮಾ ಕಂದಕೂರು ಎಲ್ಲೆಲ್ಲೂ ಮುಖವಾಡದ ರಾರಾಜಿಸುವಿಕೆಎತ್ತ ನೋಡಿದರತ್ತ ಆಸೆ ಆಮಿಷ ದ ಸುಳಿಹೊರಬರಲು ಹೆಣಗುವ ಜೇಡನಂತೆಕರುಬುವರೂ ತಟಸ್ಥವಾಗಿಹರು ನಾನು ಮೊದಲಿನಂತಿಲ್ಲಗೊಂದಲದ ಗೂಡಿನಡಿ ನನ್ನ ಸೂರುಅನಿವಾರ್ಯತೆ ಬದುಕಿಗೆಸುಖ ಮಾತ್ರ ಬೇಕೆಂಬ ಅಹವಾಲು ಹಿಯಾಳಿಸುವ ಕೊಂಕು ನುಡಿಬೆನ್ನಿಗೆ ಇರಿಯಲು ಸರತಿ ಸಿಲುತೃಪ್ತಿಯಂತೂ ಹೊಸ್ತಿಲು ಆಚೆಕೃತಕತೆಯ ನಗುಮಾತ್ರ ಎದ್ದು ನಿಂತಿದೆ ತುಳಿಯುದಕೂ ದುಂಬಾಲು ಬಿದ್ದಿಹರುನೇಸರು ಉಗುಳುವ ಒಮ್ಮೊಮ್ಮೆ ಬೆಂಕಿಯುಂಡೆತಣ್ಣನೆಯ ಗಾಳಿಗೂ ಸಂಚಕಾರ ಹೂಡಿಕಟು ಮನದ ಇರಿತದಿ ಬಳಲಿ ಬೆಂಡಾಗಿಹೆ ನಾನಷ್ಟೇ ಎಂಬ ಗಿರಿಗಿಟ್ಟಲೆ ತಿರುಗಿಬಂದ ಕೆಲಸ ಮರೆತ […]
ನಾವು ಹೀಗೆಯೆ
ಕವಿತೆ ನಾವು ಹೀಗೆಯೆ ನಿರ್ಮಲಾ ಶೆಟ್ಟರ್ ಇಂದಿಲ್ಲವಾದರೆ ನಾಳೆಈಗ ಆಗ ಆಮೇಲೆ ಎಂದುಅಸಂಖ್ಯ ಹಗಲು ನಾನೇ ಬೇಯುತರಾತ್ರಿಗಳಲಿ ದೀಪದಂತೆ ಉರಿಯುತ ಕಾದಿದ್ದೇನೆನಿನ್ನ ಮಾತುಗಳ ಕೇಳಲುಆ ವಿಷಯದಲಿ ಜುಗ್ಗ ನೀನು ಮತ್ತುನಿನ್ನಂಥಹ ಎಲ್ಲರೂ ಇದೇ ಕಾರಣಅವ್ವ ಅಪ್ಪನೊಡನೆ ಸೆಟಗೊಂಡುನನ್ನ ಪಕ್ಕದಲಿ ಬಂದು ಮಲಗಿದಅದೆಷ್ಟೊ ರಾತ್ರಿಗಳ ಪ್ರಶ್ನಿಸುತ್ತಾ ಬೆಳದವಳು ನಾ ಮೊನ್ನೆ ವನಿತೆಊರ ಹೊರಗಿನ ನಡುರಸ್ತೆಯಲಿಬಿಟ್ಟು ತನ್ನವನನುಒಂಟಿಯಾಗಿನಡೆದು ಮನೆಸೇರಿ ಕ್ರಮಿಸಿದ್ದು ಸಮೀಪದ ಹಾದಿಯನ್ನಲ್ಲ ನಾವು ಹೀಗೆಯೆಇಂಥವರನ್ನು ಇಷ್ಟಪಡುವುದಿಲ್ಲ ಒಂದೇ ಗುಟುಕಿಗೆ ಚರಿಗೆ ನೀರು ಕುಡಿದಂತೆನಿಮ್ಮೆದೆಯ ಭಾವವನೆಲ್ಲ ನಮ್ಮೆದೆಗಿಳಿಸಿಕಣ್ಣರೆಪ್ಪೆಯಲಿ ತೂಗಾಡಿಸಿಕೊಂಡುತೊಟ್ಟಿಲು ಕಟ್ಟಿ […]
ಸ್ಥಿತಿ
ಕವಿತೆ ಸ್ಥಿತಿ ಸುರೇಖಾ. ಜಿ . ರಾಠೋಡ. ರಾಮ ಹುಟ್ಟಿದ್ದುಸೀತೆಯನ್ನು ಪರೀಕ್ಷಿಸಲುಅನಿಸುತ್ತದೆಸೀತೆ ಹುಟ್ಟಿದ್ದುರಾಮನ ಪರೀಕ್ಷೆಗೆಒಳಪಡಲು ಅನಿಸುತ್ತದೆ ಆದರೆ….ಇಂದಿನ ಸೀತೆಯರುಇಂದಿನ ರಾಮರಿಗೆಪ್ರಶ್ನಿಸಬೇಕಾಗಿದೆಪ್ರತಿಯೊಂದು ದೌರ್ಜನ್ಯದ ಕುರಿತು ವಿನಾಕಾರಣಸಹಿಸುವುದಿಲ್ಲಅಸಮಾನತೆ, ದೌರ್ಜನ್ಯವನೆಂದು ಕೇಳಬೇಕಿದೆ ಇಂದಿನಸೀತೆಯರುಸಮಾನತೆ, ಸ್ವಾತಂತ್ರ್ಯ ಇತ್ಯಾದಿನಮಗೂ ಬದುಕುವ,ಅನಿಸಿದ್ದು ಹೇಳುವಸ್ವಾತಂತ್ರ್ಯ ವಿದೆ ಎಂದು ಹೇಳಬೇಕಿದೆ ಇಂದಿನರಾಮರಿಗೆ‘ನೀವು ರೂಪಿಸಿ ಕೊಟ್ಟ ಸಿದ್ದ ಮಾದರಿ ಸೀತೆಯರಲ್ಲವೆಂದು’ ಹೇಳಬೇಕಿದೆ ಬಾಬಾ ಸಾಹೇಬ್ ಅಂಬೇಡ್ಕರ್ರೂಪಿಸಿದ ಸಂವಿಧಾನದಂತೆನಡೆಯುತ್ತೆವೆಂದುಹೇಳಬೇಕಿದೆ, ತಿಳಿಸಬೇಕಿದೆ,ಅರಿವು ಮೂಡಿಸಬೇಕಿದೆಇಂದಿನ ಸೀತೆಯರು. **********************
ಗಜಲ್
ಗಜಲ್ ಶ್ರೀಲಕ್ಷ್ಮೀ ಅದ್ಯಪಾಡಿ. ಪುಟಿಯುತ್ತಿದ್ದಪುಳಕಗಳೆಲ್ಲಾಎತ್ತಹೋದವೋಅರಳುತ್ತಿದ್ದಕನಸುಗಳೆಲ್ಲಾಎತ್ತಹೋದವೋ ಕಣ್ಣಂಚಿನಲ್ಲಿನೋವಿನಹನಿತುಳುಕುತ್ತಲೇಇದೆನಲಿಯುತ್ತಿದ್ದಭಾವನೆಗಳೆಲ್ಲಾಎತ್ತಹೋದವೋ ಸುಡುಸುಡುತ್ತಿದೆಅವ್ಯಕ್ತಬೇಗೆಒಡಲಾಳದಲ್ಲಿಅರಳುತ್ತಿದ್ದನವಿರುಹೂಗಳೆಲ್ಲಾಎತ್ತಹೋದವೋ ಹೃದಯವೀಣೆಯತಂತಿಯಾಕೋಮುರಿದಂತಿದೆಹಾಡುತ್ತಿದ್ದಮಧುರರಾಗಗಳೆಲ್ಲಾಎತ್ತಹೋದವೋ ಮೌನದಲಿರುವಬೆಳದಿಂಗಳೂಉರಿಬಿಸಿಲಾದಂತಿದೆಹರಡುತ್ತಿದ್ದತಂಪುಕಿರಣಗಳೆಲ್ಲಾಎತ್ತಹೋದವೋ ಹೆಪ್ಪುಗಟ್ಟಿದನೋವಿನಲ್ಲಿಅಳುತ್ತಿದೆಶ್ರೀಯಮನಸುರಿಯುತ್ತಿದ್ದಪ್ರೇಮದಹನಿಗಳೆಲ್ಲಾಎತ್ತಹೋದವೋ *********************************
ಮೌನ ಹನಿಗಳು
ಕವಿತೆ ಮೌನ ಹನಿಗಳು ಸುಧಾ ಎನ್.ತೇಲ್ಕರ್ ೧ಹೊಂದಿಕೆಯಿರದ ಭಾವಗಳಲಿಮಾತು ಮದ್ದಳೆ ಬಾರಿಸಿತ್ತುಉಸಿರು ಬಿಗಿ ಹಿಡಿದ ಮೌನಸದ್ದಿಲ್ಲದೆ ಪಟ್ಟು ಬಿಗಿದಿತ್ತು ೨ಮೌನದ ಕಪ್ಪೆ ಚಿಪ್ಪಲ್ಲಿ ಅಡಗಿತ್ತುಮಾತಿನ ಸ್ವಾತಿ ಮುತ್ತುಕಣ್ರೆಪ್ಪೆಯಲಿ ಜಾರದೆ ಕುಳಿತಿತ್ತುಮಡುಗಟ್ಟಿದ ಹನಿ ಮುತ್ತು ೩ಮಾತಿನ ಚೂರಿ ಮೊನಚಿಗೆಹೃದಯ ರಕ್ತ ಒಸರಿತ್ತುನಿಟ್ಟುಸಿರಿನ ಮೌನವೇಗಾಯಕ್ಕೆ ಮುಲಾಮು ಸವರಿತ್ತು ೪ಮಾತು ಕಲಹದ ಹೊನಲಾಗಿಹರಿದಿತ್ತುಮೌನವೇ ಅದರ ರಭಸಕೆಆಣೆಕಟ್ಟು ಹಾಕಿತ್ತು ೫ಬೆಳ್ಳಿ ನುಡಿಗಳುತುಂಬಿದ್ದ ಖಜಾನೆಗೆಹಾಕಿತ್ತು ಚಿನ್ನದಮೌನದ ಬೀಗ ********************