ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮೌನ ಹನಿಗಳು

ಸುಧಾ ಎನ್.ತೇಲ್ಕರ್

white dandelion closeup photography


ಹೊಂದಿಕೆಯಿರದ ಭಾವಗಳಲಿ
ಮಾತು ಮದ್ದಳೆ ಬಾರಿಸಿತ್ತು
ಉಸಿರು ಬಿಗಿ ಹಿಡಿದ ಮೌನ
ಸದ್ದಿಲ್ಲದೆ ಪಟ್ಟು ಬಿಗಿದಿತ್ತು


ಮೌನದ ಕಪ್ಪೆ ಚಿಪ್ಪಲ್ಲಿ ಅಡಗಿತ್ತು
ಮಾತಿನ ಸ್ವಾತಿ ಮುತ್ತು
ಕಣ್ರೆಪ್ಪೆಯಲಿ ಜಾರದೆ ಕುಳಿತಿತ್ತು
ಮಡುಗಟ್ಟಿದ ಹನಿ ಮುತ್ತು


ಮಾತಿನ ಚೂರಿ ಮೊನಚಿಗೆ
ಹೃದಯ ರಕ್ತ ಒಸರಿತ್ತು
ನಿಟ್ಟುಸಿರಿನ ಮೌನವೇ
ಗಾಯಕ್ಕೆ ಮುಲಾಮು ಸವರಿತ್ತು


ಮಾತು ಕಲಹದ ಹೊನಲಾಗಿ
ಹರಿದಿತ್ತು
ಮೌನವೇ ಅದರ ರಭಸಕೆ
ಆಣೆಕಟ್ಟು ಹಾಕಿತ್ತು


ಬೆಳ್ಳಿ ನುಡಿಗಳು
ತುಂಬಿದ್ದ ಖಜಾನೆಗೆ
ಹಾಕಿತ್ತು ಚಿನ್ನದ
ಮೌನದ ಬೀಗ

********************

About The Author

6 thoughts on “ಮೌನ ಹನಿಗಳು”

Leave a Reply

You cannot copy content of this page