ಕವಿತೆ
ಕೂಸು
ಎಂ. ಆರ್. ಅನಸೂಯ
ತಾಯೊಡಲ ಹಸುಳೆಯೊಂದು
ಅನಾಮಧೇಯನಾಗಿ ಭುವಿಗಿಳಿಯಿತು
ಮುಕ್ತ ಮನದ
ಮುಗ್ಧ ಕೂಸಾಗಿ ಮಡಿಲ ತುಂಬಿತು
ಹುಟ್ಟುಡುಗೆಯ ಕೂಸಿಗೆ
ಜಾತಿಯ ವಸ್ತ್ರ ತೊಡಿಸಿದೆವು
ಮುಗ್ಧ ನಗೆಯ ಮುದ್ದು ಮೊಗದ
ಹಣೆಗೆ ಧರ್ಮದ ತಿಲಕವಿಟ್ಟೆವು
ನಿದ್ರೆಯಲಿ ನಗುವ ಮುದ್ದು ಮಗುವ
ಅಂತಸ್ತಿನ ತೊಟ್ಟಿಲಲ್ಲಿ ತೂಗಿದೆವು
********************************