ಗಾಂಧಾರಿ ಸಂತಾನ
ಕವಿತೆ ಗಾಂಧಾರಿ ಸಂತಾನ ಕಾತ್ಯಾಯಿನಿ ಕುಂಜಿಬೆಟ್ಟು ಆ ಸೂಯ೯ ಹೆರುತ್ತಾನೆನೀಲಿ ನೀಲಿ ಮೋಡ ಪರದೆಗಳಹೆರಿಗೆ ಮನೆಯಲ್ಲಿನೀಳ ನೀಳ ಬೆಳಕು ಶಿಶುಗಳಕಣ್ಣುಗಳಿಗೆ ಕತ್ತಲ ಪಟ್ಟಿ ಕಟ್ಟಿಕೊಂಡುಈ ಗಾಂಧಾರಿಯ ಹಾಗೆ!ಹೊತ್ತದ್ದು ಹೆತ್ತು ವೀರಶತಜನನಿಹೆತ್ತದ್ದು ಸತ್ತು ದುಃಖಶತಜನನಿ!ಬಸಿರ ಹೊಸೆಹೊಸೆದು ಅತ್ತರೂಈಗ ವೇದವ್ಯಾಸನಿಲ್ಲ ಮಡಕೆಯಿಲ್ಲಮಹಾಭಾರತ ಮುಗಿದು ಹೋಗಿದೆಕುರುಕ್ಷೇತ್ರದಲ್ಲಿ ಸಾಲು ಗಭಾ೯ಪಾತ! ಆ ಸೂಯ೯ನದ್ದೋ ಅಕ್ಷಯ ಗಭ೯ !ಪ್ರಸವಬೇನೆಯೇ ಇಲ್ಲದೆ ಹೆರುತ್ತಾನೆತನ್ನ ಬೇನೆಯನ್ನೆಲ್ಲ ಭೂಮಿಯಹೆಂಗಸರ ಗಭ೯ಗಳಿಗೆ ಹಂಚಿಬಿಟ್ಟಿದ್ದಾನೆಹೆರುಹೆರುತ್ತಲೇ ಕಳೆದುಕೊಳ್ಳುತ್ತ ಬಿಕ್ಕಿಬಿಕ್ಕಿ ಕಿರಣಗಳನ್ನು ಹೆತ್ತು ಒಂದು ನಿರಾಳ ಸೊನ್ನೆಯಾಗಿಮುಳುಗುತ್ತಾನೆಇರುಳಿಡೀ ಕಡಲಿಗೆ ಪ್ರಸವ ಬೇನೆಅದರ ಕೊನೆಯ ಬಿಕ್ಕೊಂದು […]
ಕ್ರಿಸ್ತನಿಗೆ ಒಂದು ಪ್ರಶ್ನೆ
ಕ್ರಿಸ್ತನಿಗೆ ಒಂದು ಪ್ರಶ್ನೆ ಅಕ್ಷತಾ ರಾಜ್ ನೀನಂದು ನೋಡಿದೆಯೆಂದರು….ಯಾವ ಹೊಸರೂಪವಿತ್ತು ಬಾನಿನಲ್ಲಿ?ಹೊಳೆವ ನಕ್ಷತ್ರವೇ! ಅಥವಾ ಕಾರ್ಮುಗಿಲೇ!ಇದ್ಯಾವುದೂ ಅಲ್ಲವೆಂದರೆ ಉಲ್ಕೆ ಪ್ರವಾಹವೇ?ಯಾವುದೂ ಅರ್ಥವಾಗದಿದ್ದಾಗ ನಿನ್ನ ಹುಟ್ಟೆಂದರುಹೌದೇ ! ನಿನ್ನ ಹುಟ್ಟಷ್ಟು ಅಪರೂಪವೇ ಬಿಸಿಲು ಬೆಳ್ದಿಂಗಳಂತೆ? ನೀನಂದು ಅತ್ತೆಯೆಂದರು….ಯಾವ ತಾಪದ ಹನಿ ತೋಯ್ದಿತ್ತು ನೆಲ ?ಚುಚ್ಚಿದ ಮೊಳೆಯದ್ದೇ ! ಅಥವಾ ಹೊತ್ತ ಶಿಲುಬೆಯದ್ದೇ!ಇದಾವುದೂ ಅಲ್ಲವೆಂದರೆ ಮುಳ್ಳುಕೀರೀಟದ ಭಾರವೇ?ಯಾವುದೂ ಅರ್ಥವಾಗದಿದ್ದಾಗ ತನುವಿನ ನೋವೆಂದರುಹೌದೇ ! ನಿನ್ನ ಕಂಬನಿಯಷ್ಟು ದುರ್ಬಲವೇ ಮಂಜಿನಂತೆ ? ನೀನಂದು ನಕ್ಕೆಯೆಂದರುಮತ್ತೆ ಮೂರು ದಿನದೊಳಗೆ ಎದ್ದು ಬಂದಾಗಯಾವ ಸಂತಸಕ್ಕಾಗಿ […]
ಮುಗುಳು
ಮುಗುಳು ವೀಣಾ ರಮೇಶ್ ಇರುಳ ಸೆರಗೊಳಗೆತಿಳಿಮೌನ ಸುರಿದುಬಿಗುಮಾನ ಕಳೆದುಬೆರೆತು ಗಂಧದೊಳಗೆಈ ಮನವದು ಬಿರಿದುನಿನ್ನ ಸನಿಹದಲಿಮೌನವದು ಘಾಸಿ ಬಯಲು ಅಲಯದಲಿಹಕ್ಕಿ ಹಾರುತಿದೆನಿನ್ನನೆನಪುಗಳ ರೆಕ್ಕೆಕಟ್ಟಿ, ಪ್ರತಿದಿನವೂ ಸೋತಿದೆಹಾರಿ ಬರಲೇನು ಈಹೃದಯ ತಟ್ಟಿ ಮುಸುಕು ಬೀರಿದ ಮುಗುಳುಲಜ್ಜೆಯೊಳಗೆ ಅದೇ ನೀನುಸಜೆಯಾಗಿದೆ ಪ್ರೀತಿಯಸರಳೊಳಗೆ ನಾನು ಎಳೆದು ಬಿಡು ಮುಸುಕುಬೀರಿ ಮಲಗಿದ,ಮೌನದ ಪರದೆನಿನಗಲ್ಲವದು ಶೋಭೆನಿನ್ನ ಮುಗುಳುನಗುವದು ಹೊತ್ತು ತರದೆಮೌನ ಕೋಟೆಗೆ ಪ್ರಭೆ **************************
ಹಾಯ್ಕು
ಹಾಯ್ಚಳಿ! ಶಾಲಿನಿ ಆರ್. ೧)ಚಳಿ ಸುಳಿಗೆ ಶಿಲೆಯಾದಳವಳು ಕರಗದಂತೆ ೨)ಬೆಚ್ಚಿಸದಿರು ಬೆಚ್ಚಗಿಡು ನೆನಪಾ ಕೊನೆ ಚಳಿಗೆ ೩)ಮಂಜಿನ ಹನಿ ಕರಗಲರಿಯದು ಬೆಚ್ಚಗಾದರೂ, ೪)ಬಿರಿದ ತುಟಿ ನೆನಪಿಸುತಿದೆಯೋ, ವಸಂತ ಋತು, ೫)ಬಿಸಿ ಬಿಸಿ ಚಾ ಮುಂಜಾನೆಯ ಚಳಿಗೆ ನೀ ನೆನಪಾದೆ, ೬)ಹಗಲು ಮಾಯ ಇರುಳ ಹಾಸಿನ ಮೇಲೆ ಚಳಿ ಗಾಳಿಗೆ ೭)ನಮ್ಮೀ ಪ್ರೀತಿಗೆ ಮರೆಯಾಯಿತೇನು ಹಗಲು ನಾಚಿ, ೮)ತೇವಗೊಂಡಿದೆ ಮತ್ತೆ ಆರುವ ಮುನ್ನ ಹೇಮಂತ ಋತು, ೯)ಮುಗಿಯದಿದು ಮಾಗಿ ಮುಗಿವ ಮುನ್ನ ಮಬ್ಬಿನ್ಹಗಲು ೧೦)ಹಗಲು ನುಂಗಿ ಬಿಗಿಯಾದವು ಇರುಳು […]
ಯುಗ ಯುಗದ ಸೀತೆಯರು
ಯುಗ ಯುಗದ ಸೀತೆಯರು ರೇಶ್ಮಾಗುಳೇದಗುಡ್ಡಾಕರ್ ಇದು ಚರಿತ್ರೆಯ ಅವತಾರವಲ್ಲನಿತ್ಯವು ಉದ್ಭವಿಸುವಉದ್ವೇಗಗಳಿಗೆ ಇತಿಹಾಸಮರುಕಳಿಸುತ್ತಲೇತನ್ನ ಇರವ ಸಾಧಿಸುತ್ತದೆಯಲ್ಲ … ರಾಮನಿಲ್ಲದ ಸೀತೆಯರಿಗೆಕಮ್ಮಿ ಇಲ್ಲ ಈ ಜಗದಲ್ಲಿಒಡಲ ಕುಡಿಗಾಗಿ ಬದುಕಸವೆಸುವಳು ಕಂಡವರಸೆರಗಲ್ಲಿ ಗಂಡ ಬಿದ್ದರು ತನ್ನಬೆವರ ಹನಿಯ ದೀಪವಾಗಿಸಿಮನೆಯ ಬೆಳಗುವಳು …. ನೊರೆಂಟು ಮಾತುಗಳುಹಾದಿ – ಬೀದಿಯ ರಂಪಗಳುಎಷ್ಟಿದ್ದರು ಮನವದು ಗಟ್ಟಿಯಾಗುತ್ತಲೆಸಾಗುವದು ಕಲ್ಲು ಬಂಡೆಯನ್ನು ಮೀರಿಸಿಬದುಕಿನ ದಾರಿಯ ಹಿಡಿಯುವುದು ಸಮಯದೊಂದಿಗೆ ಓಡಿತಿಂಗಳ ಪಗಾರವನು ಕಾಪಿಟ್ಟುಪುಟ್ಟ ಪುಟ್ಟ ಕನಸ ನೇರವೇರಿಸಿತನ್ನ ಒಡಲ ಸಿರಿಗಾಗಿ ನಗುವ ಕಾಣುವಳುಎಲ್ಲ ನೋವ ಮರೆತು ….. ತ್ರೇತಾಯುಗದ ಸೀತೆಗೆ […]
ಗಜಲ್
ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿಸೊಸಿದ ಹಾಲಿಗೆ ವಿಷವು ಬೆರೆತಿದೆ ಸಖಿ ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕುಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆಬಡವರ ಮನೆ ದೀಪಕೆ ಎಣ್ಣೆಇಲ್ಲದೆ ಆರುತಿದೆ ಸಖಿ ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದುಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ ******************************************
ಗಝಲ್
ಗಝಲ್ ನೂರುಲ್ಲಾ ತ್ಯಾಮಗೊಂಡ್ಲು ನಿನ್ನ ಶಹರಿನಲಿ ಬೆಳಕಿಗೆ ಕಾಲು ಮೂಡಿದಾಗ ನೀನಿದ್ದೆಆ ಬೃಂದಾವನದಲಿ ದುಂಬಿ ಮಕರಂದ ಹುಡುಕುವಾಗ ನೀನಿದ್ದೆ ಕಣ್ಣ ಕೊಂಬೆಯ ಮೇಲೆ ನಕ್ಷತ್ರ ಮಿನುಗುವ ಹೊತ್ತುಭರವಸೆಯ ಕಿರಣವೊಂದು ರೆಪ್ಪೆ ಮೇಲೆ ಹರಿದಾಗ ನೀನಿದ್ದೆ ಯಾವುದೊ ವಿಳಾಸವಿಲ್ಲದ ದಾರಿಯಲಿ ಕಾಲುಗಳು ಎಡವಿದವು ನಿಜಆದರೆ ನೀ ಹೊರಳಿ ಹೋಗಿದ್ದ ದಾರಿಯಲಿ ಅತ್ತರು ಘಮಿಸಿದಾಗ ನೀನಿದ್ದೆ ಯಾವುದದು ಮರೆಮಾಚುವ ವಚನ ಕಾಡಿತ್ತೊ ಅರಿಯೆಆದರೂ ನಿನ್ನ ಆ ಮರೆಮಾಚಿಕೆ ವಿಫಲವಾದಾಗ ನೀನಿದ್ದೆ ಗೊತ್ತು ನಿರೀಕ್ಷೆಗಳೆಲ್ಲ ಹುಸಿಯಾಗದು ಎಂದೂ ‘ಸಾಘರ್’ಕಾಡುವಿಕೆಗೂ ಒಂದು ಮಿತಿಯಿದೆ […]
ಇಬ್ಬನಿಯ ಹನಿಗಳು
ಇಬ್ಬನಿಯ ಹನಿಗಳು ನಾಗರಾಜ ಹರಪನಹಳ್ಳಿ. -1-ರಂಗೇರಿತು ಕೆನ್ನೆನೀ ಬಂದಸುಳಿವು ಸಿಕ್ಕಿರಬೇಕುಒಲವಿಗೆ -2-ಎಲೆ ಅಲುಗುತ್ತಿಲ್ಲಕತ್ತಲ ಆವರಣಭೂಮಿಒಬ್ಬಂಟಿಯಾಗಿದೆ -3-ಹೆಜ್ಜೆಗಳಿಗೆಎದೆಗೊಟ್ಟಿದೆದಾರಿಒಲವಿಲ್ಲದ ಬದುಕುಮೌನ ಇರುಳು -4-ಹಕ್ಕಿಗಳ ಕೊರಳಒಲವುಂಡಮರ ಧನ್ಯತೆಅನುಭವಿಸಿತುಒಲವ ಗಾಳಿತಲೆದೂಗಿತು -5- ಉಸಿರು ಕದ್ದವಳೇಎಲ್ಲಿಹೋದೆಉಸಿರುಬೆಸೆಯಬೇಕಿದೆಇಲ್ಲಿಇಲ್ಲೇ ಪಕ್ಕದಲ್ಲಿಪಾರಿವಾಳಗಳುಚಳಿಗೆ ಗುಟುರುಹಾಕಿಬೆಸೆದುಕೊಂಡಿವೆ -6-ಚಳಿಗೆದಾರಿ ಸಹಮುದುಡಿಕೊಂಡಿದೆಉರಿವ ಒಲೆಯಮುಂದೆಹೊಸೆವ ಕೈಗಳುವಿರಹಗೊಂಡಿವೆ -7-ಕೆನ್ನೆಯಮೇಲಿನ ಕೈ ಬೆರಳುಬಿಸಿ ಉಸಿರನೆನೆದುಪಿಸು ಮಾತಬಯಸಿತು… -8-ಬೆಳಗ್ಗೆ ಕೆನ್ನೆಗೆತಾಗಿದ ತಣ್ಣೀರುಎಳೆ ಬಿಸಿಲಸ್ಪರ್ಶಆಕೆಯನೆನಪಿಸಿದವು -9- ಕಪ್ಪು ಆಗಸದಿಬೆಳುದಿಂಗಳಹಾಸಿಗೆಆಕೆಯ ಸೆರಗು -10- ಬಿಸಿ ಬಿಸಿಚಹಾ ದೊಂದಿಗೆಎದೆಗೆ ಬಿತ್ತುಸಾಂಸ್ಕೃತಿಕ ಕಣ್ಣು ***********************
ನಿರಾಕಾರ ಶಕ್ತಿ
ನಿರಾಕಾರ ಶಕ್ತಿ ಮಾಲಾ.ಮ.ಅಕ್ಕಿಶೆಟ್ಟಿ. ವಿಘ್ನಗಳ ನಾಶ,ಸುಖ ದುಃಖ ಕೊಡುವಪರೀಕ್ಷೆ ನಡೆಸುವ, ಸಕಲ ಪೊರೆವಶ್ರೇಷ್ಠ ದೇವ ದೇವತೆಗಳು ಅನಂತದಲಿ ಹುಲುಮಾನವನ ಬುದ್ಧಿ ನಿನ್ನ ಸೃಷ್ಟಿಕೈಚಳಕ ನಿಮಗೊಂದು ಆಕಾರದ ಕೊಡುಗೆಬಿಂಕದಲಿ ಬೀಗುವ ನಿಮ್ಮನ್ನು ನೋಡಿ ಅಭಯ ಹಸ್ತ ಸದಾ ನಮಗೆಹಣೆ ಪಟ್ಟಿ ಮೂರ್ಖರುಬಟ್ಟೆ ಬರೆಗಳಿಂದ,ಬಂಗಾರ ಬೆಳ್ಳಿಯಿಂದವಿಶಾಲ ಎಕರೆಯಲ್ಲಿ ದೊಡ್ಡ ಗುಡಿ ಕಟ್ಟಿಸಿಭಾರೀ ವಜ್ಜನಿನ ಕೀಲಿ ಹಾಕಿ, ಕಾವಲುಗಾರ ನೇಮಿಸಿನಾವೇ ನಿನ್ನನ್ನು ರಕ್ಷಿಸಿದ್ದೇವೆಂದರೆ ದೇವರು ದಿನ್ನರುಗಳು ಕಪೋಲಕಲ್ಪಿತವಾದಗಳು ಹೆಚ್ಚುಇರಲಿ, ಕಾಣದ ಶಕ್ತಿ ಜಗತ್ತಿನಲ್ಲಿನಿನ್ನ ರೂಪದಲ್ಲಿ ಇರಬಾರದೇಕೆ? ರಕ್ಷಿಸುಸದಾ ನಮ್ಮನ್ನು ಹೀಗೆಯೇನಿರಾಕಾರ ಶಕ್ತಿಗೆ […]
ಗಜಲ್
ಗಜಲ್ ಅರುಣಾ ನರೇಂದ್ರ ನೀ ಹಚ್ಚಿಕೊಳ್ಳುವ ಅತ್ತರಿನದೆ ವಾಸನೆ ಬರುತಿದೆ ಎಲ್ಲಿರುವಿಮೋಹಬ್ಬತ್ತಿನ ಈ ಹಾಡಲ್ಲಿ ನಿನ್ನದೇ ಧ್ವನಿ ಕೇಳುತಿದೆ ಎಲ್ಲಿರುವಿ ಮುಂಜಾನೆಯ ಮಂಜಿನ ಹನಿಗೂ ಕಣ್ಣ ಕನಸುಗಳಿವೆಆಗಸದ ಹಾಳೆಯಲಿ ನೀ ಬರೆದ ಚಿತ್ರ ಕಾಣುತಿದೆ ಎಲ್ಲಿರುವಿ ಮುಂಗುರುಳ ತೀಡುವ ತಂಗಾಳಿ ಇಂದೇಕೋ ಹಠ ಮಾಡುತಿದೆಇಲ್ಲಿ ನೀ ನಡೆದಾಡಿದ ಹೆಜ್ಜೆಗಳ ಗುರುತಿದೆ ಎಲ್ಲಿರುವಿ ಧುಮ್ಮಿಕ್ಕುವ ಪ್ರವಾಹಕ್ಕೆ ಗೋಡೆ ಕಟ್ಟಲಾಗುತ್ತಿಲ್ಲನಿನ್ನ ನಗೆಯ ಅಲೆ ಎದೆಗೆ ಅಪ್ಪುತಿದೆ ಎಲ್ಲಿರುವಿ ಎದುರಿನಲಿ ಸಿಕ್ಕು ಬಿಡು ಒಮ್ಮೆ ಹೀಗೇಕೆ ಹಿಂಬಾಲಿಸುತ್ತಿಅರುಣಾಳ ಅಂತರಾತ್ಮ ನಿನ್ನನ್ನೇ ಧ್ಯಾನಿಸುತಿದೆ […]