Category: ಕಾವ್ಯಯಾನ

ಕಾವ್ಯಯಾನ

ಪ್ರತಿಷ್ಠೆ ಬದಿಗಿಟ್ಟರೆ ಬಾಳು

ಕವಿತೆ ಪ್ರತಿಷ್ಠೆ ಬದಿಗಿಟ್ಟರೆ ಬಾಳು ಲಕ್ಷ್ಮೀದೇವಿ ಕಮ್ಮಾರ ಮನೆ ಮಿಡಿದರೂ ಪ್ರತಿಷ್ಟೆ ಗಡಿಅಡ್ಡಿಯಾಗಿದೆ ನನಗೂ ನಿನಗೂ ಅಕ್ಕಪಕ್ಕದ ಲ್ಲಿದ್ದರೂ ಅಹಂನ ಅಡ್ಡಗೋಡೆ ಅರಿಯಲಾರೆ ನನ್ನ ನೀನು ,ನಿನ್ನ ನಾನು ಬೇಕು ಬೇಕೆನಿಸಿರೂ ಸಾಕು ಮಾಡಿದ್ದೆವೆ ಮಾತುಕುಹಕಿಗಳಿಂದಾಗಿದೆ ಬಿರುಕುಒಡೆದು ಹೋಗುತ್ತಿದೆ ಪ್ರೀತಿ ಸೇತು ಒಲವದಾರೆ ಹರಿಸಲು ಬಂದುದರ ಕುರುಹುಅರಿಯದೆ ನಮ್ಮ ಸ್ವಾರ್ಥದ ಪರದಿಯಲಿ ಬಂದಿಯಾಗುಳಿದವರು ನಾವು ***********************************

ಪ್ರೀತಿಯ ಬಿತ್ತಿ ಬೆಳೆಯಲು

ಕವಿತೆ ಪ್ರೀತಿಯ ಬಿತ್ತಿ ಬೆಳೆಯಲು ನಾಗರಾಜ ಹರಪನಹಳ್ಳಿ ನಾನು ಹೆಣ್ಣಾಗುವೆಗಾಂಧಿಯಂತಹ ಮಗನ ಹೆರಲು ಹೌದು,ಗಾಂಧಿಯಂಥ ಮಗ ಬೇಕುಈ ನೆಲಕ ದಿಕ್ಕು ತೋರಿಸಲು ಸಹನೆ ,ಸತ್ಯ ಅಹಿಂಸೆ ಹಂಚುವಗೋಡ್ಸೆ ಮನದ ಬಂದೂಕುಕಸಿದು, ಭೂಮಿ ಮೇಲಿನ ಗಡಿರೇಖೆ ಅಳಿಸಿಮನುಷ್ಯರೆಲ್ಲಾ ಒಂದೇ ಎಂದು ಮನದಟ್ಟು ಮಾಡಲುಗಾಂಧಿಯಂಥ ಮಗನ ಹೆರಬೇಕು ಗೋಡ್ಸೆ ಮನದ ಗಡಿಗಳ ಅಳಿಸಿಅವನ ಕಣ್ಣಿಗೆ ಕರುಣೆ ತುಂಬಿಅವನ ದೇಹದ ಅಣು ಅಣುವಿನಲಿ ದಯೆಯ ಬಿತ್ತಿಬೆಳೆಯಲು ಗಾಂಧಿಯಂತಹ ಮಗ ಬೇಕು ಹರಿದ ನೋಟು ,ಬೀದಿ ಕಸದ ಸ್ವಚ್ಛತೆಗೆ ಮೀಸಲಿಟ್ಟ ನನ್ನ ದೇಶದ […]

ಅಷ್ಟೇನೂ ಅಂತರವಿರಲಿಲ್ಲ

ಕವಿತೆ ಅಷ್ಟೇನೂ ಅಂತರವಿರಲಿಲ್ಲ ನಾಗರಾಜ ಮಸೂತಿ ಅಷ್ಟೇನೂ ಅಂತರವಿರಲಿಲ್ಲ,ಆದರೂನೆರಳು ತಾಗುತ್ತಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂಹೋಟೆಲ್ಲಿನ ಚೆಂಬು ಲೋಟಗಳಿಗೆನಮ್ಮ ಸ್ಪರ್ಶದ ಅರಿವಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಕರಗಳು ಕರ್ಪುರದ ಕಾವುಕಂಡಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು ಆದರೆ ಮನಸ್ಸುಗಳುಇದೇ ಅಂತರದ ಅಗ್ನಿಯಸ್ಪರ್ಶದಿಂದ ಕರಕಲಾಗಿದ್ದವು… ************************************

ನೀನಾದೆ ನೀನಾದೆ

ಕವಿತೆ ನೀನಾದೆ ನೀನಾದೆ ಶಾಂತಲಾ ಮಧು ನೀನಾದೆ ಜೀವನದದಾತೆ ತಾಯಿಜೀವನದ ದಾತರುಹಲವಾರುಮುಗ್ದ ಮನಸಿಗೆಹಬ್ಬಿ ಆಲಂಗಿಸಿಉತ್ಸಾಹಕೆ ಚಿಲುಮೆ ನೀನಾದೆ ನೀನಾದೆ ನೀನಾದೆಪ್ರೀತಿ -ಪ್ರೇಮ ವಾತ್ಸಲ್ಯದಲಿತಣಿಸಿ ಸಂಕಲ್ಪ ವಿಕಲ್ಪ ನೀನಾದೆ ನೀನಾದೆಭೂಮಿ ಆಕಾಶಜಲ-ಚರ ಪ್ರಕೃತಿನೀಭಾವನೆಗಳ ಕಲಿಸಿಪುಲಕಿಸಿ ಪ್ರಶ್ನಿಸಿಉತ್ತರವೂ ನೀನಾದೆ ನೀನಾದೆ ನೀನಾದೆತಪ್ಪು ಸರಿ ಕೊಂಡಿಗಳಪೋಣಿಸಿ ನಿನ್ನೀ ಪ್ರಿಯಸರವಾಗಿಸಿ ಮೆರಸಿನೀನಾದೆ ಆದೆಅರಿಷ್ಟ್ ವರ್ಗಗಳಿಗೆಶರಣಾಗಿಸಿ ಕಾಡಿಸಿಬಿಟ್ಟು ಬಿಡದೆಕತ್ತಲು ಬೆಳಕಮಾಯೆಯಲಿ ಮೀಯಿಸಿಮನತಟ್ಟಿ .ನೀನಾದೆನೀನಾದೆಸ್ವಾರ್ಥ ವಿಕಲ್ಪಕೆ ಪ್ರಶ್ನೆನೀನಾದೆ ಶೋಧನೆಗೆ ಹುಟ್ಟುಭಾವನೆ ಬದುಕಿಗೆಹುಡುಕಾಟ ,ನೀನಾದೆ ನೀನಾದೆತಪ್ಪಿಗೆ ಹುಸಿ ಹೊಣೆಗಾರ ನೀನಾದೆ ನೀನಾದೆಭಯ-ಭಕ್ತಿಗೆ – ಭ್ರಮೆ,ಅಳಲನಾಲಿಸಿಅಂತರಂಗದ ಮಾತಾಗಿಸತ್ಯ ನಿತ್ಯವೇ […]

ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ

ಕವಿತೆ ಬಾಪೂ ಜೊತೆ ಇಂದು ಇಳಿ ಮದ್ಯಾಹ್ನ ಪ್ರಜ್ಞಾ ಮತ್ತಿಹಳ್ಳಿ ಬಾ ಬಾಪೂ ಇಲ್ಲೇ ಕೂಡುಇಕ್ಕಟ್ಟಾದರೂ ಅಂಗಳಕ್ಕಿಳಿಯಲುವೈರಾಣು ಭಯಗುಂಡು ಕನ್ನಡಕವನುಅರ್ಧ ಮುಚ್ಚಿದರೂಮಾಸ್ಕ್ ತೆಗೆಯಬೇಡಬೆಳಿಗ್ಗೆಯೇ ನಿನ್ನ ಪಟಕ್ಕೆ ಹೂಹಾರ ಮಂಗಳಾರತಿಸಾಮೂಹಿಕ ಭಜನೆ ರಘುಪತಿಮುಗಿಸಿ ಬಂದ ಮೇಲೆಯೇ ನಾಷ್ಟಾ ತಿಂದೆಆದರೀ ಸಲಏನೋ ಕಲಮಲ ಕಳೆದ ವಾರ ನಿನ್ನ ಆತ್ಮಕತೆ ಓದಿಎಲ್ಲರ ನೋವನು ಬಲ್ಲವನೊಬ್ಬನಹುಡುಕುತ್ತ ಹೊರಟಿದ್ದೆನಡುರಾತ್ರಿ ಕಂದೀಲು ಹಚ್ಚಿದದೋಣಿಗಳು ತುಯ್ಯುವ ಅಲೆಯಲ್ಲಿನಿಧಾನಕ್ಕೆ ಹೊರಟಿದ್ದವು.ನಿದ್ದೆ ಜಗ್ಗುವ ರೆಪ್ಪೆಗಳ ಅಗಲಿಸುತ್ತಹುಟ್ಟು ಹಾಕುವ ಬೆಸ್ತರು ಎಂದೂಮಲಗದ ಮೀನುಗಳ ಹಂಬಲಿಸುತಿದ್ದರುಕೈ ಮಗ್ಗ ನಂಬಿ ಬಟ್ಟೆ ಕತ್ತರಿಸುವಹೆಂಗಸರು ಕೂಳಿಲ್ಲದೇ […]

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಗಾಂಧಿ ನಾಡಿನಲಿ ಮಾತುಗಳು ಮೌನ ಅರ್ಥ ಕಳೆದುಕೊಂಡಿವೆ |ಗಾಂಧಿ ನಾಡಿನಲಿ ಕನಸುಗಳು ಹೊಸಕಿ ಬಿಸಾಕಿ ಹಾಕಲಾಗುತ್ತಿವೆ || ಬಾಪೂಜಿ ದೇಶದಲಿ ನಾಲಿಗೆ ಹರಿತವಾದರೆ ಕತ್ತರಿಸಲಾಗುತ್ತದೆ |ಇಲ್ಲಿ ಎಲ್ಲವೂ ಭಕ್ತಿಯ ಪರಾಕಾಷ್ಠೆ ಉಧೋಒಪ್ಪಿತ ನಿರ್ಧಾರಗಳಿವೆ || ಮಲಗಿದವರ ಎಬ್ಬಿಸಬಹುದು ಸತ್ತಂತೆ ನಟಿಸುವ ದುರುಳರು ತುಂಬಿದ್ದಾರೆ |ಕಟ್ಟೆ ಪಂಚಾಯತಿ ನ್ಯಾಯ ತೀರ್ಮಾನ ಕಚ್ಚೆ ಹರುಕರೆ ತುಂಬಿಕೊಂಡಿವೆ || ಉಳ್ಳವರ ಕಾಯ್ದೆಗೆ ಹೆಣ್ಣು ಭೋಗ ವಸ್ತು ಆಕೆಯ ರಕ್ತವೇ ಗುಲಾಲು |ರಾತ್ರಿಯೂ ಕೆಲಸಗಳು ನಡೆಯುತ್ತಿವೆ ಸತ್ತ […]

ಅಬಲೆಯ ಹಂಬಲ

ಕವಿತೆ ಅಬಲೆಯ ಹಂಬಲ ಅಶೋಕ ಬಾಬು ಟೇಕಲ್ ರಾಮನ ನೆಲವಾದರೂ ಅಷ್ಟೇರಹೀಮನ ನೆಲವಾದರೂ ಅಷ್ಟೇಕಾಮುಕನೆಂಬ ಕೆಂಡದಕಣ್ಣುಗಳ ಅಮಲಿಗರಿಗೆಅಬಲೆಯರ ಹಸಿ ಬಿಸಿ ರಕ್ತಹೀರ ಬೇಕಷ್ಟೇ… ಮನಿಶಾ, ಆಸೀಫಾ ಆದರೇನುನಿರ್ಭಯಾ ರಕ್ಷಿತ, ದಿಶಾಆದರೂ ಸರಿಯೇ ಇವರಿಗೆ ನಡು ರಸ್ತೆಯಲಿಹಾಡ ಹಗಲೇ ಹದ್ದು ಮೀರಿದಗೂಳಿಗಳಂತೆ ಬಂದೆರಗಿಹಾಲುಗಲ್ಲ ಹಸುಳೆಯಎದೆಯ ನಾಯಿಯಂತೆನೆಕ್ಕಿ ಬೆತ್ತಲಾಗಿಸಿಕಾಮ ತೃಷೆ ಮುಗಿಸಿಕಣ್ಣಿಲ್ಲದ ಕಾನೂನಿನಸಾಕ್ಷಿಯ ಕಟಕಟೆ ಒಳಗೂಕಥೆ ಹನಿಸಿ ಕಾಂಚಾಣದಬಿಸಿ ಮುಟ್ಟಿಸಿ ಕ್ಷಮಾದಾನದ ಅರ್ಜಿಯಲಿನಿರ್ದೋಷಿ ಪಟ್ಟ..! ಇನ್ನೆಷ್ಟು ದಿನ ಧರ್ಮಮತ ಪಂಥಗಳ ಕಡೆಬೊಟ್ಟು ಮಾಡಿ ಬೀಗುವಿರಿರಾಮ ರಹೀಮ‌ ಜೀಸಸ್ಏನಾದರೂ ಹೇಳಿಯಾರೆಅತ್ಯಾಚಾರ ಎಸಗಿರೆಂದು […]

ಗಝಲ್

ಗಝಲ್ ಪ್ರಭಾವತಿ ಎಸ್ ದೇಸಾಯಿ ಅರಳಿದ ಸುಮ ದೇವರಿಗೆ ಅಪಿ೯ತವಾಗಲಿ ಬಾಡುವ ಮುನ್ನವೀಣೆ ತಂತಿ ಮೀಟಿ ಶ್ರುತಿ ಸರಾಗವಾಗಲಿ ಹಾಡುವ ಮುನ್ನ ಜಗದ ನಿಂದೆ ಅಪಹಾಸ್ಯ ಗಳಿಗೆ ನೊಂದು ಅನುಮಾನಿಸದಿರುಜೀವಿಗಳ ಪ್ರೀತಿ ಬೆಸುಗೆ ಗಟ್ಟಿಯಾಗಲಿ ಕೂಡುವ ಮುನ್ನ ನೆರಳಿರದ ಹಾದಿಯಲಿ ಬದುಕಿನ ಬಂಡಿ ಸಾಗಿದೆ ಅನವರತಬಾಳಿನ ಕಹಿ ನೆನಪ ದಿನಗಳು ಮರೆಯಾಗಲಿ ಕಾಡುವ ಮುನ್ನ ವಿರಹ ದಳ್ಳುರಿಯಲಿ ನಿತ್ಯ ದಹಿಸುತಿವೆ ಪ್ರೇಮಿಗಳ ಉಸಿರುಅನುರಾಗ ಚುಂಬನಕೆ ಹೃದಯ ಹಗುರಾಗಲಿ ಬೇಡುವ ಮುನ್ನ ಕೋಶ ಕೀಟಕೆ ರೆಕ್ಕೆಗಳ ಹಚ್ಚಿ ಕೊಂಡು […]

ನನ್ನಮ್ಮ

ಕವಿತೆ ನನ್ನಮ್ಮ ಶೃತಿ ಎಸ್.ಗೌಡ ನನ್ನಮ್ಮ ಸೀತೆಯಲ್ಲ ಸಾವಿತ್ರಿಯಲ್ಲಕೈ ಹಿಡಿದ ಪತಿಯೊಡನೆವನವಾಸಕ್ಕೂ ಹೋಗಲಿಲ್ಲಅವನಿಗಾಗಿ ಯಮನನ್ನು ಅಡ್ಡಗಟ್ಟಲಿಲ್ಲ ಇದ್ದಲ್ಲಿಯೇ ವನವಾಸ ಮಾಡಿದವಳು ಕುಡಿದ ಮತ್ತಿನಲ್ಲಿ ನಡೆಯಲಾರದೆ ಎಡವಿ ಬಿದ್ದ ಅಪ್ಪನಿಗೆ ತನ್ನ ಹೆಗಲನ್ನು ಆಸರೆಯಾಗಿ ನೀಡಿದವಳು ನನ್ನಮ್ಮ ಆಸರೆ ಬಯಸಲಿಲ್ಲಸಂಸಾರದ ನೊಗ ಹೊತ್ತುನಮಗಾಸರೆಯಾದವಳುತಾನು ನಿಂತು ನಮ್ಮ ನಡೆಸಿತಾನು ಹಸಿದು ನಮಗುಣಿಸಿತನ್ನ ಕಣ್ಣುಗಳಲ್ಲಿಅವಳ ಕನಸುಗಳ ಕಂಡವಳುಸಂಸಾರದ ಹಾದಿಯಲ್ಲಿ ನಿಲ್ಲದೆ ನಡೆದವಳು ನನ್ನಮ್ಮ ಹೆಚ್ಚು ಕಲಿಯಲಿಲ್ಲಗುಡಿಗಳ ಗುಂಡಾರವ ಸುತ್ತಲಿಲ್ಲಸ್ವರ್ಗ ನರಕಗಳ ಕಲ್ಪನೆಯೂ ಅವಳಿಗಿಲ್ಲ ಇರುವಷ್ಟು ದಿನಬಾಳ ಕುಲುಮೆಯಲಿ ಬೆಂದವಳು ಕುಡಿತಕ್ಕೆ ಶರಣಾಗಿ […]

ತಲೆದಿಂಬಿನೊಳಗೆ ಅವಿತ ನಾ

ಕವಿತೆ ತಲೆದಿಂಬಿನೊಳಗೆ ಅವಿತ ನಾ ಡಾ. ರೇಣುಕಾ ಅರುಣ ಕಠಾರಿ ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾಸದ್ದಿಲ್ಲದೆ ತಲೆದಿಂಬಿನೊಳಗಿನಿಂದಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ. ಕಾಡುವ ಕನಸುಗಳು ಘಳಿಗೆಗೆ ಒಮ್ಮೆನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,ನದಿಯನ್ನು ದಾಟಲು ಸೇತುವೆಯಂತೆ,ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ. ಜೊತೆಯಾಗಿ ಬರುತ್ತೇನೆ,ಉಸಿರಿಗೆ […]

Back To Top