ಕವಿತೆ
ನೀನಾದೆ ನೀನಾದೆ
ಶಾಂತಲಾ ಮಧು
ನೀನಾದೆ ಜೀವನದ
ದಾತೆ ತಾಯಿ
ಜೀವನದ ದಾತರು
ಹಲವಾರು
ಮುಗ್ದ ಮನಸಿಗೆ
ಹಬ್ಬಿ ಆಲಂಗಿಸಿ
ಉತ್ಸಾಹಕೆ ಚಿಲುಮೆ ನೀನಾದೆ
ನೀನಾದೆ ನೀನಾದೆ
ಪ್ರೀತಿ -ಪ್ರೇಮ ವಾತ್ಸಲ್ಯದಲಿ
ತಣಿಸಿ ಸಂಕಲ್ಪ ವಿಕಲ್ಪ
ನೀನಾದೆ ನೀನಾದೆ
ಭೂಮಿ ಆಕಾಶ
ಜಲ-ಚರ ಪ್ರಕೃತಿನೀ
ಭಾವನೆಗಳ ಕಲಿಸಿ
ಪುಲಕಿಸಿ ಪ್ರಶ್ನಿಸಿ
ಉತ್ತರವೂ ನೀನಾದೆ
ನೀನಾದೆ ನೀನಾದೆ
ತಪ್ಪು ಸರಿ ಕೊಂಡಿಗಳ
ಪೋಣಿಸಿ ನಿನ್ನೀ ಪ್ರಿಯ
ಸರವಾಗಿಸಿ ಮೆರಸಿ
ನೀನಾದೆ ಆದೆ
ಅರಿಷ್ಟ್ ವರ್ಗಗಳಿಗೆ
ಶರಣಾಗಿಸಿ ಕಾಡಿಸಿ
ಬಿಟ್ಟು ಬಿಡದೆ
ಕತ್ತಲು ಬೆಳಕ
ಮಾಯೆಯಲಿ ಮೀಯಿಸಿ
ಮನತಟ್ಟಿ .ನೀನಾದೆ
ನೀನಾದೆ
ಸ್ವಾರ್ಥ ವಿಕಲ್ಪಕೆ ಪ್ರಶ್ನೆ
ನೀನಾದೆ ಶೋಧನೆಗೆ ಹುಟ್ಟು
ಭಾವನೆ ಬದುಕಿಗೆ
ಹುಡುಕಾಟ ,
ನೀನಾದೆ ನೀನಾದೆ
ತಪ್ಪಿಗೆ ಹುಸಿ ಹೊಣೆಗಾರ
ನೀನಾದೆ ನೀನಾದೆ
ಭಯ-ಭಕ್ತಿಗೆ – ಭ್ರಮೆ,
ಅಳಲನಾಲಿಸಿ
ಅಂತರಂಗದ ಮಾತಾಗಿ
ಸತ್ಯ ನಿತ್ಯವೇ ನೀನಾದೆ
ನೀನಾದೆ ನೀನಾದೆ
ನಿನ್ನೊಳಗೇ ‘ನಾ’ ನಿದ್ದೂ
“ನಾ “ ?
ಪ್ರಶ್ನೆಯೇ ಆದೆ.
*****************************************