ದೀಪಗಳ ಸಾಲು
ಕವಿತೆ ದೀಪಗಳ ಸಾಲು ಸುವಿಧಾ ಹಡಿನಬಾಳ ಹಚ್ಚೋಣ ಸುತ್ತೆಲ್ಲಾ ದೀಪಗಳ ಸಾಲುಹೊದೆಸೋಣ ಎಲ್ಲರಿಗೂ ಪ್ರೀತಿಯ ಶಾಲು ಬೆಳಕಿಂದೆ ಜಗವು ಬೆಳಗುತಿಹುದುಅನ್ಯಾಯ ಹಿಂಸೆಯಲಿ ದಹಿಸುತಿಹುದುಜ್ಞಾನದ ಬೆಳಕಿನಲಿ ತೆರೆಯಲಿಕಣ್ಣುವಾಸಿಯಾಗಲಿ ಮನದ ಕಲ್ಮಶದ ಹುಣ್ಣು ಜಗವ ಹಿಂಡುತಿಹ ಅನಾರೋಗ್ಯ ದೂರಾಗಲಿಎಲ್ಲರೂ ತಿಂದುಂಡು ನೆಮ್ಮದಿಯಾಗಿರಲಿ ನೆಲಕಚ್ಚಿದ ಆರ್ಥಿಕತೆ ಮತ್ತೆ ಚೈತನ್ಯಗೊಳ್ಳಲಿದುಡಿಯುವ ಕೈಗಳಿಗೆ ಕೆಲಸವು ಲಭಿಸಲಿ ದಿನವೂ ಮೊರೆವ ಬಾಂಬು ಗುಂಡುಗಳ ಸದ್ದಡಗಲಿಆತಂಕವಾದಿಗಳ ಹೃದಯದ ಕತ್ತಲೆ ಕಳೆಯಲಿ ಬದುಕೆಂಬ ಅನಿಶ್ಚಿತ ಪಯಣದಲಿಸಕಲರ ಸಹಕಾರ ಋಣಭಾರವಿದೆಏಕೆ ವ್ಯಾಜ್ಯ, ಕಲಹ ಜೀವನದಲಿಪಯಣ ಸಾಗಲಿ ಹೊಂದಾಣಿಕೆ ಸಮರಸದಲಿ ಒಂದು […]
ದಿವ್ಯ ಅನಿಕೇತನ
ಕವಿತೆ ದಿವ್ಯ ಅನಿಕೇತನ ನೂತನ ದೇಹ ಆತ್ಮಗಳು ಮಾತಾಡಿಕೊಂಡವುನನ್ನೊಳಗೆ ನೀನೊನಿನ್ನೊಳಗೆ ನಾನೊ? ಯಾರೊಳಗೆ ಯಾರಿದ್ದರೇನುಇದ್ದೂ ಇರದಂತೆ ಇರುವವರೆಷ್ಟಿಲ್ಲ !ರೇಷಿಮೆಯ ಸಣ್ಣ ಅಂಚಿನ ಪತ್ತಲನಿಟ್ಟುಸಿರ ಬಿಡುವುದ ಕಾಣದಂತೆ ನಾವೀರ್ವರು ಒಂದಾದ ಕ್ಷಣಕ್ಕೆಹುಣ್ಣಿಮೆಯೇ ಸಾಕ್ಷಿಛಾಯೆ ಕನವರಿಸುತ್ತಾಳೆನೂರ್ಕಾಲದ ಬಾಳಿಗೆ ಹೊರನೋಟಕ್ಕೆ ಒಂದಾದರೆಒಳ ಹರಿವಿಗೆ ಒಂದು ನಾನು ನೀನೆಂಬಗಡಿಯಿರದ ಗೂಡಿನಲಿಜೇನು ಸವಿ ಹೀರಲುದೇಹದೊಲುಮೆಯಲಿಆತ್ಮಜ್ಯೋತಿ ಬೆಳಗಬೇಕು ಸದಾ ಆತ್ಮ ಬಿರಿದು ಕಣಕಣದಲಿ ಬೆಳೆದುಮಿಲನವ ಮೀರಿ ನಿಂತುಈಗ ಸರ್ವವ್ಯಾಪಿಬೇಧವಿರದ, ಬಂಧವೂ ಇರದದಿವ್ಯ ಅನಿಕೇತನ **************************
ಕವಿತೆ ಜಗ… ಸೋಜಿಗ ವಿದ್ಯಾಶ್ರೀ ಅಡೂರ್ ಯಾರು ಇಲ್ಲ ಎಂಬ ಭಾವಬಿಟ್ಟುಬಿಡಿರಿ ಎಲ್ಲ ಬೇಗದೇವನೊಬ್ಬ ಸಲಹುತಿಹನುಹೆಜ್ಜೆ ಹೆಜ್ಜೆಗೇ ಗೋಡೆ ಸಂಧಿಲಿರುವ ಜೇಡಮರಳಿ ಕಟ್ಟಿ ತನ್ನ ಗೂಡಗೊಡವೆಯಿರದೆ ಬದುಕುತಿಹುದುಹೊಟ್ಟೆಪಾಡಿಗೇ ಮೊಟ್ಟೆಯಿಟ್ಟು ಮಾಯವಾಗೋಅಟ್ಟಿಉಣುವ ಜೀವಗಳಿಗೆಹುಟ್ಟುಸಾವು ಮೂಲವರುಹೋಶಕ್ತಿಯಾವುದು ಬಾಯಿಬರದೆ ಇರುವ ಮೂಕಹಸುವು ಕೂಡ ತನ್ನ ಪ್ರಸವಹಲ್ಲುಕಚ್ಚಿ ಸಹಿಸಿ ಕರುಳಬಳ್ಳಿ ಹರಿವುದೂ ಎಷ್ಟು ಕಡಿದರೂನು ಚಿಗುರಿಮತ್ತೆ ಮತ್ತೆ ಟಿಸಿಲು ಒಡೆದುಬದುಕೋ ಭರವಸೆಯ ಗಿಡಕೆಯಾರು ಕೊಟ್ಟರೂ ಇಟ್ಟಜಾಗದಲ್ಲಿ ತನ್ನಬೇರನಿಳಿಸಿ ಗಟ್ಟಿಗೊಳುವಪುಟ್ಟಬೀಜಕಿಹರೆ ಸಾಟಿಯಾರು ದಿಟ್ಟರೂ ಅಕ್ಕಿಬೆಂದು ಅನ್ನವಾಗಿನಿನ್ನೆದಿಂದು ಹಳಸಿಹೋಗಿಭವದಬದುಕು ಇಷ್ಟೇ ಎಂದುಸಾರುತಿರುವುದು ಅರಿವ ಸೊಡರು ಹಚ್ಚಿ […]
ಕವಿತೆ ನತಭಾವ ಶಾಲಿನಿ ಆರ್ ಒಡಲಾಳದಲಿ ಒಡಮೂಡಿದತಪ್ತತೆಯ ಪ್ರಶ್ನೆಗಳ ಸುರಿಮಳೆ/ಉತ್ತರ ಹುಡುಕುವಿಕೆ ಬೈಗು ಜಾವದ ಸರಹದ್ದಿನ ಅಂಚಿನಲಿ ಈ ಇಳೆ// ಕಳಚುವ ಹುನ್ನಾರು ಒದೊಂದೆ ಭಾವಗಳು ಬೆತ್ತಲಾಗಿ ಬಯಲಿಗೆ/ಸೊಬಗಿನ ಪಾತರಗಿತ್ತಿ ನೋವಿನ ಹುಳುವಾಗಿ ಮತ್ತೆ ಗೂಡಿಗೆ// ಉಕ್ಕಿದ ಕಡಲಾಳದಿ ನೂರು ಭಾವಗಳಸಮಾಧಿ ಪಳೆಯುಳಿಕೆಯಂತೆ/ಬಿಚ್ಚಿಡುವ ತವಕದಲಿ ಕಾಲ ಸರಿದಿದೆ ದಡಕಪ್ಪಳಿಸದ ಅಲೆಯಂತೆ// ಮಂಜಿನ ಮುಸುಕಿನ ಚಳಿಯ ಕುರ್ಳಿಗಾಳಿ ಸುಳಿದು ಬಳಿಗೆ/ತುಂಬಿದ ಎನ್ನೆದೆಗೆ ಮೋಹದ ಮುತ್ತನೊತ್ತಿದೆ ಒಲವ ಸುಳಿಗೆ// ಜನುಮವಿದು ಬರಿದಾಗಬೇಕುಮತ್ತೆ ಮತ್ತೆ ಚಿಗುರ ಹಡೆಯಲು/ಒಳಬೇಗುದಿಗಳ ಬಿಕ್ಕು ನಿಲ್ಲಬೇಕುಮತ್ತೆ ಮತ್ತೆ […]
ಕವಿತೆ ಧ್ಯಾನಿಸುವ ಹೃದಯ ಡಾ.ಸುಜಾತಾ.ಸಿ ದೂರ ಸರಿದು ಸತಾಯಿಸಬೇಡಾದಾರಿ ಉದ್ದಕ್ಕೂ ನಾಲ್ಕಹೆಜ್ಜೆ ಇಟ್ಟು ನೋಡು ಬೆಳದಿಂಗಳ ನಡಿಗೆಗೆ ಕಾರ್ಮೊಡ ಕಟ್ಟಬೇಡಾಹಾಲ್ದೆನೆ ಇರುಳ ಸರಿಸಿ ಸವಿದು ನೋಡು ಸುರಿದ ಮಳೆಯಲಿ ಕಣ್ಣ ಹನಿ ಹುಡುಕ ಬೇಡಾಕಣ್ಣಾವಲಿಯಲಿ ಅರಳಿದ ನಿಂತ ಮುಖ ನೋಡು ಗಾಯದ ಮೆಲೆ ಉಸಿರು ಹರಡಿಬಿಡು ಒಮ್ಮೆಎದೆಭಾರ ತಂಗಾಳಿಯಾಗಿ ಬಿಡದು ನೋಡು ಕಣ್ಣು ರೆಪ್ಪೆ ಹಾಗೇ ಕಾಪಿಟ್ಟುಕೊ ಅಲುಗಿಸಬೇಡಾಕಂಡ ಕನಸಿಗೆ ಘಾಸಿಯಾದಿತು ನೋಡು ಮನಸುಗಳ ಸೇತುವೆಯ ಏಣಿ ಏರಿ ಬಿಡು ಒಮ್ಮೆನಿನ್ಮನ್ನೇ ಧ್ಯಾನಿಸುತ ಕುಳಿತ ಹೃದಯ ಮತ್ತೆ […]
ಹಾಯ್ಕುಗಳು ಭಾರತಿ ರವೀಂದ್ರ ಸ್ವರ್ಗ ತಾಯಿ ಸ್ವರೂಪ :ಅಕ್ಕನ ಮಡಿಲದು,ಇದುವೇ ಸ್ವರ್ಗ. ಮನ ಹಸಿದ ಹೊಟ್ಟೆ :ನಿದ್ರೆಗೆ ಜಾಗವೆಲ್ಲಿ,ಜಾಗ್ರತ ಮನ. ನೆಮ್ಮದಿ ಇರೆ ನೆಮ್ಮದಿ :ಒಬ್ಬರಿಗೊಬ್ಬರದು,ಚಿಂತೆ ಮಾತೆಲ್ಲಿ. ಹೃದಯ ಶಿಲೆ ಹೃದಯ :ಈ ಜಗ, ಮಮತೆಯಸೆಲೆ ಸಿಗದು. ಸ್ನೇಹ ತುಂಟು ಮನಸ್ಸು :ಬಳಲಿದ ತೃಷೆಗೆ,ಸ್ನೇಹ ಸಿಂಚನ. *************************
ಕವಿತೆ ಗೆಜ್ಜೆನಾದ ಅಕ್ಷತಾ ಜಗದೀಶ್ ಸಾವಿರ ಸಾಲಿನ ಪದಗಳಲಿಅಡಗಿ ಕುಳಿತವಳು….ಯಾರಿಗೂ ಕಾಣದಂತೆನಾ ಬರೆವ ಕವನಗಳಲಿ ಮೂಡುತಿರುವಳು…….. ಕವನದ ಸಾಲುಗಳುಅವಳ ಗೆಜ್ಜೆಯನಾದದಹೆಜ್ಜೆಯ ಗುರುತುಗಳು..ಹಾಡಿನ ಪಲ್ಲವಿಯೂಅವಳು ಬಿರುವ ಕಿರುನಗೆಯೂ….ಆಕೆಯ ಸಿಹಿ ಮುತ್ತುಗಳೇ..ಮಳೆಯ ಆ ತುಂತುರು ಹನಿಗಳು.. ಬಾನಲ್ಲಿ ಬಂದು ಹೋಗುವಕಾಮನಬಿಲ್ಲಿನಂತೆ ನೀನು..ಬಣ್ಞಬಣ್ಣದ ನೆನಪು ಬಿತ್ತಿ ಹೋದೆಯೇನು….? ನನ್ನ ಹಾಡಿನ ಅಂತರಾಳ ಅವಳುನನ್ನ ಬಾಳಿನ ಒಡತಿ ಇವಳು..ಹಾಡಿಗೆ ಸ್ಪೂರ್ತಿಯಾಗಿ….ಪದಗಳಿಗೆ ಭಾವವಾಗಿ…ನನ್ನೊಡನೆ ಸೇರು ಮೆಲ್ಲಗೆ.. *********************************
ಹಾಯ್ಕುಗಳು
ಹಾಯ್ಕುಗಳು ಜಯಶ್ರೀ ಭ.ಭಂಡಾರಿ ಬಂದರೆ ನೀನುಬಾಳಿಗೆ ಬೆಳಕಾಗಿಬಾಳುವೆನು ನಾ. ದೂರಾಗಿ ಹೋದೆ.ನಡುನೀರಲಿ ಬಿಟ್ಟು.ಪ್ರಿಯತಮೆಯ. ಅಲೆಗಳಲ್ಲಿಸಾಗರದಿ ನಲಿವುತೀರದ ಮೋಹ. ಕಾಡಬೇಡ ನೀಈ ಹೃದಯ ನಿನ್ನದುತೋರು ಕರುಣೆ. ಮುಂಗಾರು ಮಳೆನಿಲ್ಲದೇ ಸುರಿತಿಹೆಕಾಡುತಿಹೆ ನೀ. ರಾಧೆಯ ನೋವುಕೊಳಲ ನಾದದಿಂದದೂರವಾಯಿತು. ಕೃಷ್ಣ ಸನಿಹಇದ್ದರೆ ಮರೆವಳುರಾಧೆ ತನ್ನ ತಾ ಗೋಪಾಲನಿಗೆಗೋಪಿಕೆಯರ ಆಟಯಮುನೆಯಲಿ ******************
ಗಜಲ್
ಗಜಲ್ ವತ್ಸಲಾ ಶ್ರೀಶ ಕೊಡಗು ಕಲೆಯ ನೆಲೆಗೆ ಒಲವ ಬಳಸಿ ಸೆಳೆದೆಯಲ್ಲ ಗೆಳೆಯಹಲವು ಮಾತು ಗುನುಗಿ ದೂರ ನಿಂತೆಯಲ್ಲ ಗೆಳೆಯ ಕಿವಿಯ ಜುಮುಕಿ ಮುತ್ತಿನಲ್ಲಿ ಹೆಸರ ಬರೆದೆ ಗುಟ್ಟಲಿತುಂಟತನದಿ ಕೆನ್ನೆ ಮುಟ್ಟಿ ಮತ್ತೇರಿದೆಯಲ್ಲ ಗೆಳೆಯ ದೂರದಲ್ಲಿ ಹಾಡನೊಂದು ಕೇಳೆ ಮನವು ಪುಳಕವಿಲ್ಲಿಹಣೆಯ ಮುತ್ತ ನೆನಪು ನೀಡಿ ಕಾಡಿದೆಯಲ್ಲ ಗೆಳೆಯ ಬೆರಳಿಗೊಂದು ಬೆರಳು ಸೇರಿಸಿ ನಾಲ್ಕು ಹೆಜ್ಜೆ ಇರಿಸಿದೆನೂರು ಜನ್ಮ ಜೊತೆಯ ಬೇಡಿ ನಿಂತೆಯಲ್ಲ ಗೆಳೆಯ ಬಿಸಿಯುಸಿರು ಕೊರಳ ತಾಗಿ ಪ್ರೀತಿ ಕವನ ಗೀಚಿದೆಕಣ್ಣಿನಲ್ಲಿ ಪ್ರೇಮ ಬಿಂಬ ಪ್ರತಿಷ್ಠೆಯಾಗಿದೆಯಲ್ಲ […]
ಗಜಲ್
ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ಮನಸ್ಸೇಕೋ ಮತ್ತೆ ನೊಂದು ಮೌನದಿ ಕಮರಿಹೋಗಿದೆಯಾಕೋ ಸುಮ್ಮನೇ ಮನಸಲ್ಲೆ ಬೆಂದು ಲೀನವಾಗಿದೆ ಯಾಕೆ ಏನು ಯಾರಿಗಾಗಿ ಇದೆಲ್ಲ ಒಂದು ತಿಳಿಯದಾಗಿದೆಕಾರಣವಿಲ್ಲದೇ ಸಂಕಟ ಆಗುವದೇಕೋ ಅರಿಯದಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರುಚಿ ಸಿಗದಾಗಿದೆಭರಪುರ ಬೆಳೆದ ರೈತನ ಫಸಲು ಹೊಲವೇ ಕದ್ದಂತಾಗಿದೆ ಬಿತ್ತುವದು ಅವನ ಧರ್ಮ ಬೆಳೆ ಪಡೆವುದು ಕರ್ಮವಾಗಿದೆಉಂಡು ಕೊಂಡು ಹೋದ ಲಂಡರದೇ ಬಲು ಹಿತವಾಗಿದೆ ಕೊಚ್ಚೆಯಲ್ಲಿ ಬಿದ್ದ ಮಾಣಿಕ್ಯಕ್ಕೆ ತನ್ನ ಬೆಲೆ ತಿಳಿಯದಾಗಿದೆಹೊನ್ನಸಿರಿ’ ಇರಲಿ ನೋಯಬೇಡ […]