Category: ಕಾವ್ಯಯಾನ

ಕಾವ್ಯಯಾನ

ಸವಿ ಬೆಳದಿಂಗಳು

ಕವಿತೆ ಸವಿ ಬೆಳದಿಂಗಳು ರಾಘವೇಂದ್ರ ದೇಶಪಾಂಡೆ ಈ ಸಂಜೆ, ಈ ಒಂಟಿತನಸಾಕ್ಷಿಯಾಗುತಿದೆ ಆಕಾಶದಿನದ ವಿದಾಯಕೆಸಂಜೆ ಸಮೀಪಿಸುತ್ತಿದ್ದಂತೆನೆನಪಾದೆ ನೀ ನನ್ನಲಿ…ಗಾಳಿಯಲ್ಲಿ ತೇಲಿ ಬರುತಿದೆಸುವಾಸನೆಯೊಂದು ಅಪರಿಚಿತವಾಗಿಕೆಲವೊಮ್ಮೆ ಪರಿಚಿತವಾಗಿಯೂಹೇಳುವುದು ಕಥೆಯನ್ನು ಒಮ್ಮೊಮ್ಮೆಕೇಳಲು ಪ್ರಯತ್ನಿಸುವೆನೆನಪಾದೆ ನೀನಾಗಆಗಸದಿ ಚಂದ್ರ ಇಳಿದು ಬರುತಿರುವಾಗಹುಡುಕಿಕೊಂಡು ಬಂದನೇ ಚಂದ್ರಆಕಾಶದಲ್ಲಿ ಯಾರನ್ನಾದರೂ …! ತಿಳಿದುಕೊಳ್ಳಲು ಬಯಸುವೆನುಚಂದ್ರನ ಬಗ್ಗೆ ಯಾರಲ್ಲಾದರುನೆನಪಾದೆ ನೀನಾಗಪಸರಿಸುವ ಸುಗಂಧದಲ್ಲಿಆಸ್ವಾದಿಸುವೆ ತಂಗಾಳಿಯಲಿ ನಿನ್ನನು…ಕರೆಯುವರಾರೊ ಮೆದುಧ್ವನಿಯಲಿಬೆಳದಿಂಗಳ ಹೆಸರಿನಲಿನಿರ್ಮಿಸುತಿರುವೆ ಮೆಟ್ಟಿಲುಗಳಏರಿ ಬೆಳದಿಂಗಳ ಸವಿಯಲು.ಪ್ರಯತ್ನಿಸುತ್ತೇನೆ ಏರಲುನೆನಪಿಸಿಕೊಂಡು ನಿನ್ನನುಕೇವಲ‌ ನಿನಗಾಗಿ ಮಾತ್ರವೇ …! *****************************************

ಅವಳನ್ನು ಸಂತೈಸುವವರು

ಕವಿತೆ ಅವಳನ್ನು ಸಂತೈಸುವವರು ಮಾಲಾ ಮ ಅಕ್ಕಿಶೆಟ್ಟಿ ಕಳೆದುಕೊಂಡೆ ನನ್ನವನನ್ನ ಶಾಶ್ವತವಾಗಿಮತ್ತೆ ಸಿಗಲಾರ’ ದುಃಖಿಸಿತು ಹೆಣ್ಣುಜೀವಮನದ ನೋವು ಹಂಚಿಕೊಳ್ಳಲುನನ್ನೊಂದಿಗೆ, ಆ ಗೆಳತಿಯ ಹೃದಯನೋವನ್ನು ತಡೆಯಲಾರದೆ, ಸಿಡಿಲುಮಳೆಯಿಲ್ಲದೇ ಬಡಿದಿತ್ತು ಬೇಸಿಗೆಯಲ್ಲಿ ಯಾವತ್ತೂ ಗಂಭೀರ ಮೂರ್ತಿತೂಕದಲ್ಲಿ ಮಾತುಗಳ ಸಂಕಲನಅಪಘಾತದಲ್ಲಿ ಬಾರಲಾರದಲೋಕಕ್ಕೆ ತೆರಳಿದ ಮರಣಒಟ ಒಟ ಎಂದು ಒಟಗುತ್ತಿದ್ದಳುತಡೆಯಲಾರದ ಸೊಲ್ಲುಗಳಲ್ಲಿ ಮೊನ್ನೆ ಇನ್ನೀತರ ಗೆಳೆತಿಯರೊಂದಿಗೆಭೇಟಿಯಾಗಿದ್ದಳು ಇಕೆ ಅಕಸ್ಮಾತ್ನೋವು ನೋವು ಎಂದು ಜರ್ಜರಿತವಾದದೇಹ, ಮತ್ತೆ ಮತ್ತೆ ಒಟಗುಡುತ್ತಿತ್ತುಸ್ಥಿತಿಯನ್ನು ಅರಿಯಲಾರದ ಇತರರುಒಟಗುಟುವಿಕೆ ನೋವು ಅರಿಯದೇ ಬೆಸರಿಸುತ್ತಿದ್ದರು ದುಃಖದ ಸುಣ್ಣದಲ್ಲಿ ಅದ್ದಿತೆಗೆದ ನನ್ನ ದೇಹಕ್ಕೆ ತುಸುಅರ್ಥವಾಗಿತ್ತು […]

ದ್ವೇಷ

ಅನುವಾದಿತ ಕವಿತೆ ದ್ವೇಷ ಇಂಗ್ಲೀಷ್ ಮೂಲ: ಸ್ಟೀಫನ್ಸ್ ಕನ್ನಡಕ್ಕೆ: ವಿ.ಗಣೇಶ್ ಕಗ್ಗತ್ತಲ ಆ ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ […]

ಮಿಗೆಯಗಲ ನಿಮ್ಮಗಲ

ಕವಿತೆ ಮಿಗೆಯಗಲ ನಿಮ್ಮಗಲ ನೂತನ ದೋಶೆಟ್ಟಿ ದೇಹವನೆ ದೇಗುಲ ಮಾಡಿಜಗ ಮುಗಿಲುಗಳಗಲ ನಿಂತಕಾಣಲಾರದ ಕೂಡಲಸಂಗನಕರಸ್ಥಲದಲ್ಲೆ ಕರೆಸಿಭಕ್ತಿ ದಾಸೋಹವನೆಗೈದಜಗದ ತಂದೆ ಸಕಲ ಜೀವರಾತ್ಮವೂ ಪರಶಿವನ ನೆಲೆಮೇಲು – ಕೀಳೆಂಬುದು ಇಳೆಯ ಕೊಳೆಇದ ತೊಳೆವುದೇ ಶಿವ ಪಾದಪೂಜೆಕೂಡುಂಡ ಅನ್ನವೇ ಕರಣಪ್ರಸಾದಅರಿವ ಜ್ಯೋತಿ ಬೆಳಗಿಸಿದಕ್ರಾಂತಿಕಾರಿ ಅಣ್ಣ ದಯೆಯ ಬೀಜಮಂತ್ರವ ಪಠಿಸಿಸುಳ್ಳು- ಸಟೆ ಬಿಡುನೀತಿ ನಡೆ ನುಡಿಯೇ ಕೂಡಲಸಂಗಮಆವು ತಾವೆಂಬ ಸರಳತೆಯ ಕಲಿಸಿದಮಮತೆಯ ಮಾತೆ ಚಂದ್ರ- ಚಕೋರರ, ಭ್ರಮರ – ಬಂಡುವಅಂಬುಜ- ರವಿ, ಜ್ಯೋತಿ – ತಮಂಧಆಡುವ ನವಿಲು, ಓದುವ ಗಿಳಿಜಗವ ಅವನಲಿ […]

ನೀ ಬರಲಾರೆಯಾ

ಕವಿತೆ ನೀ ಬರಲಾರೆಯಾ ವಿದ್ಯಾಶ್ರೀ ಅಡೂರ್ ಚಂದಿರನ ಬೆಳಕಿನಲಿ ತಂಪಮಳೆ ಸುರಿದಾಗನನ್ನ ಜತೆಗಿರಲು ನೀ ಬರಲಾರೆಯಾ ಇನ್ನು ಸನಿಹಕೆ ಸಾಗಿ ಉಸಿರ ಬಿಸಿಯನು ಸೋಕಿನನ್ನ ಜತೆಗಿರಲು ನೀ ಬರಲಾರೆಯಾ ಒಂದಿರುಳು ಕನಸಿನಲಿ ನಿನ್ನ ಜತೆ ಕೈಹಿಡಿದುಕಡಲಬದಿ ನಿಲುವಾಸೆ ನೀ ಬರಲಾರೆಯಾ ಮರಳಿನಲಿ ನಿನ ಹೆಜ್ಜೆ ಮೇಲೆನ್ನ ಹೆಜ್ಜೆಯನುಇಡುವಾಸೆ ಒಂದೊಮ್ಮೆ ಬರಲಾರೆಯಾ ಭೋರ್ಗರೆವ ಅಲೆಗಳಿಗೆ ಮೈಯೊಡ್ಡಿ ನಿಲುವಾಗಬಿಡದೆನ್ನ ಕೈಹಿಡಿಯೇ ಬರಲಾರೆಯಾ ಮಾಯಕದ ನಗುವೊಂದು ಚಂದದಲಿ ಮೂಡಿರಲುನನ ಮೋರೆ ದಿಟ್ಟಿಸಲು ಬರಲಾರೆಯಾ. ********************************

ಅಂದುಕೊಳ್ಳುತ್ತಾಳೆ

ಕವಿತೆ ಅಂದುಕೊಳ್ಳುತ್ತಾಳೆ ಪ್ರೇಮಾ ಟಿ.ಎಂ.ಆರ್. ಏನೆಲ್ಲ ಮಾಡಬೇಕೆಂದುಕೊಳ್ಳುತ್ತಾಳೆ ಅವಳು ನಗಿಸಬೇಕು ನಗಬೇಕುನೋವುಗಳಿಗೆಲ್ಲ ಸಾಂತ್ವನವಾಗಬೇಕುಕಲ್ಲೆದೆಗಳ ಮೇಲೆ ನಿತ್ಯನೀರೆರೆದು ಮೆತ್ಗಾಗಿಸಿ ನಾದಬೇಕು ತನ್ನೊಳಗಿನ ಕೊರತೆಗಳನ್ನೆಲ್ಲಪಟ್ಟಿಮಾಡಿ ಒಪ್ಪಿಕೊಂಡುಬಿಡಬೇಕೆಂದುಕೊಳ್ಳುತ್ತಾಳೆನೀರವ ಇರುಳಲ್ಲಿ ತಾರೆಗಳಎಣಿಸುತ್ತ ಹೊಳೆದಂಡೆಮರದಡಿಗೆ ಕೂತಲ್ಲೇ ಅಡ್ಡಾಗಿನಿದ್ದೆಹೋಗಬೇಕು ಕಪ್ಪು ಕಲ್ಲರೆಮೇಲೆ ಬೆಳ್ನೊರೆಯಕಡಲಾಗೋ ಮಳೆಹನಿಯಜೊತೆಗೊಮ್ಮೆ ಜಾರಬೇಕುಹಿಂದೆಹಿಂದಕೆ ಹಿಂತಿರುಗುವಂತಿದ್ದರೆಕುಂಟಾಬಿಲ್ಲೆ ಕಣ್ಣಾಕಟ್ಟೆಮತ್ತೊಮ್ಮೆ ಆಡಬೇಕುಬಿಸಿಲುಕೋಲುಗಳೆಲ್ಲ ಸಾರ್ಕೆಹೊರೆಮಾಡಿ ಹೊರಬೇಕುಮರದಡಿಯ ನೆರಳುಗಳಬರಗಿ ಬುತ್ತಿಯ ಕಟ್ಟಿತಲೆಮೇಲೆ ಹೊತ್ತು ಬಿಸಿಲಡಿಯಜೀವಗಳಿಗೆ ಹೊದೆಸಬೇಕುಅದೆಷ್ಟು ಸಾಲಗಳಿವೆ ತೀರುವದಕ್ಕೆಬಿಡಿಸಿಕೊಳ್ಳಬೇಕಿತ್ತುಗೋಜಲುಗಳ ಗಂಟುಗಳಅಂದುಕೊಳ್ಳುತ್ತಾಳೆಸದ್ದಿಲ್ಲದೇ ನಿದ್ದೆಹೋದ ಹಾದಿಯಮೇಲೆ ಒಬ್ಬಂಟಿಯಾಗಿ ನಡೆಯುತ್ತಲೇಇರಬೇಕು ಯಾರೂಅತಿಕ್ರಮಿಸದ ಗ್ರಹವೊಂದಕ್ಕೆಒಮ್ಮೆ ಗುಳೆಹೋಗಬೇಕು ತನ್ನಉಸಿರನ್ನೊಮ್ಮೆ ತಾನೇ ಕೇಳಿಸಿಕೊಳ್ಳಬೇಕುಅಂದುಕೊಳ್ಳುತ್ತಾಳೆ ***************************

ಅಬಾಬಿ ಕಾವ್ಯ

ಕವಿತೆ ಅಬಾಬಿ ಕಾವ್ಯ ಹುಳಿಯಾರ್ ಷಬ್ಬೀರ್ 01 ತಸ್ಬಿ ಮುಟ್ಟಿದ ಕೈಹಳೆಯ ಕೋವಿಯನಳಿಕೆಯಲ್ಲಿನ ಗೂಡು ಬಿಚ್ಚಿತುಷಬ್ಬೀರ್…!ಆತ್ಮ ರಕ್ಷಣೆಗಾಗಿ. 02 ಸಾಮರಸ್ಯದ ಹೆಸರೇಳಿರಾಮ ರಹೀಮರನ್ನುದ್ವೇಷಿಗಳಾಗಿಸಿರುವರುಷಬ್ಬೀರ್…!ಖಾದಿ ಖಾವಿಯ ಮುಖವಾಡ. 03 ಜಾನಿಮಾಜ಼್ ನ ಮೇಲೆಜಾನ್ ಇಟ್ಟು ನಮಾಜ಼್ಆವಾಹಿಸಿಕೊಂಡವರುಷಬ್ಬೀರ್…!ಭಗವಂತನಿಗೆ ಶರಣಾದವರು. 04 ಪುಡಿಗಾಸಿನಲ್ಲೇಇಡೀ ಬದುಕ ಬಿಡಿ ಬಿಡಿಯಾಗಿಅಂದೇ ದರ್ಬಾರ್ ಮಾಡುವರುಷಬ್ಬೀರ್…!ನನ್ನ ಜನ ನನ್ನವರು. 05 ಯಾ..! ಅಲ್ಲಾ…ಎಲ್ಲಾ ಯೋಜನೆಗಳಂತೆನನ್ನ ಕನಸುಗಳಿಗೂಷಬ್ಬೀರ್…!ಸಬ್ಸಿಡಿ ಕೊಡಿಸುವೆಯಾ..? *************************

ಕವಿತೆ ಕಮಲೆ ಮಾಂತೇಶ ಬಂಜೇನಹಳ್ಳಿ ಕೆರೆಯ ಏರಿ ಮೇಲೆನಿನ್ನ ಕನಸುಗಳ ಬೆನ್ನೇರಿಕುಳಿತ ನಾ… ಅಲ್ಲೇ ಸನಿಹತಣ್ಣಗೆ ಸುಳಿದೋಗುವಾಗಕಾಣಲಿಲ್ಲವೇ? ಕೆರೆ ದಿಣ್ಣೇಲಿ ಆಜಾನುಬಾಹುಆಲದ ಬಿಳಲು, ನಾ ಜೀಕುವಜೋಕಾಲಿ, ನೀನೇ ಹರಿದದ್ದು..ತಿಳಿದೂ ಬೇಸರಿಸದೆಮರೆತುಬಿಟ್ಟಿರುವೆ… ರವಿ ಪಡುವಣಕ್ಕಿಳಿದ,ಕಣ್ಣುಗಳೋ ಮಬ್ಬಾಗುತಿವೆ..ನನ್ನವೇ ಕನಸುಗಳಪುಕ್ಕಟೆ ಬಿಕರಿಗಿಟ್ಟಿದ್ದೇನೆ‌‌..ಚೌಕಾಸಿಯಿನ್ನೇಕೆ?!..ನೀಡಿಬಿಡುವೆ ನಿನಗೆ,ಕಾಣಬಾರದೇ?.. ಇಳಿ ಹೊನ್ನ ಸಂಜೇಲಿ,ನಿರ್ಜನ ನೀರವ ಮೌನದಿ,ನಿರೀಕ್ಷೆಯ ಕಂಗಳಲಿ,ಸುತ್ತಲೂ ಹುಡುಕುತಲೇ..ನೆನಪುಗಳ ಅಡಕುತಿರುವೆ,ಬರಬಾರದೇ?.. ಕೆರೆಯೊಳಗೆದ್ದು ತಾಕಿಯೂ..ಅಂಟದ ತೇವ ಬಿಂದುಗಳ್ಹೊತ್ತಪಂಕಜೆಯ ಪತ್ರಗಳಂತೆ,ನನ್ನ ಕನಸುಗಳಕೊಳ್ಳಲೊಪ್ಪದ, ಅಪ್ಪದಓ ಕಮಲೇ..ಒಮ್ಮೆ ಒಪ್ಪು ಬಾರೆ… **********************

ಹೊರಗಿನವ

ಕವಿತೆ ಹೊರಗಿನವ ಡಾ. ಅರಕಲಗೂಡು ನೀಲಕಂಠ ಮೂರ್ತಿ. ನಾನೀಗ ಹೊರಗಿನವಇದ್ದ ಹಾಗೆ.ಒಳಗೂ ಇಲ್ಲದವನುಹೊರಗೂ ಹೋಗದವನು–ಪೂರ್ತಿಆದರೂ…ನಾನೀಗ ಹೊರಗಿನವಇದ್ದಂತೆ. ಎಷ್ಟರಮಟ್ಟಿಗೆ ಹೊರಗಿನವನುಅಥವ ಎಷ್ಟು ಇನ್ನೂ ಒಳಗಿನವನುಈ ಅಂದಾಜು ನನಗೇ ಸಿಗದವನು! ಹೆಜ್ಜೆಯೊಂದ ಹೊಸ್ತಿಲಾಚೆಇಟ್ಟವನಿರಬಹುದುಆದರೆ ವಾಸ್ತವವೆಲ್ಲಒಳಗೇ ಇನ್ನೂ… ಊರಿಗೆ ಹೊರಟಂತೆರೆಡಿಯಾಗಿ ಕೂತವನಂತೆ–ಅಂತೂ…ಯಾವ ಗಳಿಗೆಯಲ್ಲೂ ಗಾಡಿಬಂದು ನಿಲ್ಲಬಹುದು… ಹೌದು–ಸಂಜೆಯ ಮಬ್ಬು ಗಾಢವಾಗುವ ಹಾಗೆಕಣ್ಣ ಹರಿತ ಮೊಂಡಾದಹೊತ್ತು…ನಾನೀಗ ಹೊರಗಿನವಇದ್ದಹಾಗೆ…ಇನ್ನೆಷ್ಟು ಹೊತ್ತು–ಹೊರಗಿನವನೇ ಪೂರ್ತಿಆಗಲು ಅನಾಮತ್ತು…! ***************************************

ಕಾವ್ಯಯಾನ

ಕವಿತೆ ನನ್ನ ನೋವು ಸಾತುಗೌಡ ಬಡಗೇರಿ ಕಣ್ಣೀರ ಹನಿಯೊಂದುಹೇಳುತ್ತಿದೆ ಹೊರಬಂದುನೊಂದ ಹೃದಯದ ತನ್ನ ವ್ಯಥೆಯ.ಸೂತ್ರವು ಹರಿದಂತಹಪಟದಂತೆ ಬಾಳಾಗಿಕಥೆಯಾಗಿ ಹೇಳುತ್ತಿದೆ ಬೆಂದು ಹೃದಯ. ಜೊತೆಯಾಗಿ ಉಸಿರಾಗಿನಿನಗಾಗಿ ನಾನಿರುವೆ..ಮಾತು ಕೊಟ್ಟನು ನಲ್ಲನಂದು.ಮರೆತು ಹೊರಟಿಹನುತಬ್ಬಲಿಯ ನನಮಾಡಿಕಂಬನಿ ಮಿಡಿಯುತ್ತಿದೆ ಕೇಳಿಯಿಂದು. ನಿನಬಾಳು ಬೆಳಕಾಗಿನಗುತಲಿರು ಓ ಗೆಳೆಯಾ…ನಿನ್ನಮೊಗ ತೋರದಿರು ಮುಂದೆ ಎಂದು.ಕಹಿ ನೆನಪ ನಾಹೊತ್ತುಬಾಳುವೆ ನಾನಿಲ್ಲಿಕಣ್ಣೀರಧಾರೆ ಸುರಿಸುತ್ತಾ ಮುಂದು ****************************

Back To Top