Category: ಕಾವ್ಯಯಾನ

ಕಾವ್ಯಯಾನ

ಗಜಲ್ ಜುಗಲ್ ಬಂದಿ-12

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಇಳಿಸಂಜೆ

ಜಗದ ಜಂಜಡಗಳ
ಮರೆತು ಕೊನೆಗೆ
ಇಹವನ್ನೆಲ್ಲ ತೊರೆದು
ಧರಣಿತಳದಲ್ಲಿ ಸೇರಿಹೋಗುವೆ
ಎಷ್ಟು ವಾಸ್ತವ ಸತ್ಯ…

ಸ್ಮಿತಾ ಭಟ್ ಅವರ ಕವಿತೆಗಳು

ಸ್ಮಿತಾ ಭಟ್ ಅವರ ಕವಿತೆಗಳು ನಾನು ಒಂಟಿಯಾಗುತ್ತೇನೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸುತ್ತುಗಟ್ಟಿದ ನೋವುಗಳ ನಡುವೆದೂರದಲ್ಲೇ ಉಳಿದ ನಗುವಿನೊಂದಿಗೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಮಾತು ಬಿಕ್ಕಿ,ಮೌನ ಉಕ್ಕಿಯಾವ ಕಿವಿಗಳೊಳಗೂ ಹೊಕ್ಕದ ನಿಟ್ಟುಸಿರಿನೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ನನ್ನದೇ ಭಾವಗಳೊಳಗೆ ಯಾರೋ ಪ್ರತಿಭಟಿಸಿಸೆಟೆದು ನಿಲ್ಲುವ ಬಿರುಸಿನ ಮಾತುಗಳೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಹೆಣೆದ ದಾರದ ಮಧ್ಯ-ಸಿಲಕಿದ ಕೀಟದ ಅಮಾಯಕತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ಬರುವ ಕಿರಣಗಳ ತಡೆದುಕದವಿಕ್ಕಿದ ಕೋಣೆಯ ನೀರವತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸಮಾಧಿ ಮೇಲೆ ಇಟ್ಟ ಹೂಗಾಳಿಗೆ ಮೈ ಒಡ್ಡಿ ಇಷ್ಟಿಟ್ಟೇ ಸರಿದುಬೆರ್ಪಟ್ಟುಖಾಲಿ ಖಾಲಿ […]

ನಾನು-ನೀನು

ಕಾವ್ಯಯಾನ ನಾನು-ನೀನು ಅನಿತಾ ಕೃಷ್ಣಮೂರ್ತಿ ಸುಡುವ ಬೆಂಕಿಯ ಮೇಲಿರುವಬಾಣಲಿಯಲಿ ಪಟಪಟನೆಮೇಲೇರುವ ಅರಳಿನಂತೆಮಾತನಾಡುವ ನಾನು…ನಿನ್ನೆದುರಿಗೆ ಮಾತುಬಾರದ ಮೂಕಿ! ಕಾಡುವ ತಂಗಾಳಿಗೆ, ಮುಂಗುರುಳುಪ್ರತಿಭಟಿಸದೆ ಅತ್ತಿಂದಿತ್ತಸರಿದಾಡಿ, ಭಾವ ತನ್ಮಯಗೊಳಿಸುವ ನಾನು..ನಿನ್ನೆದುರಿಗೆ ಬೆದರಿ, ನಾಚಿ..ಕಣ್ಮುಚ್ಚುವ ಕುರುಡಿ! ಹುಣ್ಣಿಮೆಯ ಚಂದಿರನಿಗಾಗಿಹಾರಿ, ಹಾರಿ ಧುಮ್ಮಿಕ್ಕುವ ಅಲೆಯಂತೆ,ಚಂಗನೆ, ಸರಸರನೆ ಜಿಗಿಯುವ ನಾನು..ನಿನ್ನೆದುರಿಗೆ ಕಪ್ಪೆಚಿಪ್ಪಲಿ ಮುದುರಿ ಕುಳಿತ ಮುತ್ತು **********************

Back To Top