ಕಾವ್ಯಯಾನ
ನಿನ್ನ ನೆನಪಿನ ಕರ ಪಿಡಿದು
ಜಬೀವುಲ್ಲಾ ಎಮ್. ಅಸದ್
ನಿದಿರೆ ಸುಳಿಯದ ಇರುಳಿನಲ್ಲಿ
ನಿನ್ನ ನೆನಪಿನ ಕರ ಪಿಡಿದು
ಅಲೆಯುವೆ ನಾನಲ್ಲಿ
ಕಡಲ ತೀರದಿ ಒಂಟಿಯಾಗಿ ನಡೆದು
ತಟದಲ್ಲಿ ಲಂಗರು ಹಾಕಿ ನಿಂತ ನಾವೆಗಳು
ಕಡಲ ಕಥೆಗಳನ್ನು ಹೆಣೆಯುವಾಗ
ಮಗುವಾಗಿ ಕೇಳಿ ಅಚ್ಚರಿ ಪಡುವೆನು
ಸಾವಧಾನವಾಗಿ ಈಗ
ಮೌನ ಮುರಿದು ಗಾಳಿ ಊಳಿಡುವಾಗ
ಅಸುನೀಗಿದ ನೋವು ಮರು ಜನ್ಮ ಪಡೆವುದು
ಆ ನೋವಿಗೆ ಚಂದದ ಹೆಸರಿಟ್ಟು ನಗುವಾಗ
ಅಹಂ ಸಹ ಸೋಲುವುದು
ಕಾಲದ ಧೂಳು ಚಂದಿರನ ತಾಕಿ
ಮಧುರ ಭಾವ
ಬೆಳಕ ಹಕ್ಕಿಗಳು ಬಾಂದಳದಿ ಮಾಯ
ಸ್ವರ್ಗದಿಂದ ಮೆಟ್ಟಿಲುಗಳು ಜಾರಿ
*********************