ಕಾವ್ಯಯಾನ
ಅಂತೆ-ಕಂತೆ- ಚಿಂತೆ
ಶಿವಲೀಲಾ ಹುಣಸಗಿ
ಕನಸುಗಳ ಮುನಿಸಂತೆ,ಕಂಗಳಲಿ
ಹಂಬಲದಾಚೆ ಕಮರುವುದು
ಮಾತಿಗೆ ನಿಲುಕದೆ ಹಂಗಿಗೆ ಬಾಗದೆ
ಒಣಮರದಂತೆ ನಶಿಸುವುದು
ಬಿಟ್ಟ ಬಾಣ ಕೊಟ್ಟ ಮಾತಗಳಿಂದು
ದಿಕ್ಕುಸೇರದೆ ದಿಕ್ಕೆಟ್ಟಿರುವವು
ಚುಕ್ಕಿ ಚಂದ್ರಮರ ಚಲ್ಲಾಟಕಿಂದು
ಮೈಮರೆತು ನಿಂತ ದೀವಿಗೆಗಳು..
ಮೋಡ ಮುಸುಕಿ ಕತ್ತಲಾದರೂ
ಬೆಳಕ ಮೂಡದ ಲೋಕವಿದೆ
ಪ್ರೇಮಾನುರಾಗವ ಬೆಸೆದರೂ
ಅಂತಃಕರಣ ಕರಗದ ಮನಸಿದೆ
ಯಾವುದು ಯಾರಿಗೆ ದಕ್ಕುವುದೋ
ನಿರ್ಬಂಧದ ಕೋಟೆಯಲ್ಲಿ
ಬೆತ್ತಲೆಯಾದ ಆಗಸದ ಶುಭ್ರತೆಯಲ್ಲೊ
ಮೌನವಾದ ನನಸುಗಳ ಎದೆಯಲ್ಲೊ
ಹುಡುಕಾಟ ಸಾಗಿದೆ ನನ್ನೆದೆಯಲ್ಲಿ
ನಭದಾಚೆ ಯಾರಿಹರೆಂಬ ಚಿಂತೆ
ಮುಟ್ಟುಗೋಲಾಗುತಿಹುದಿಲ್ಲಿ
ಮನದ ಮಾತುಗಳ ಅಂತೆ ಕಂತೆ
*******************************************
ತುಂಬಾ ಚೆನ್ನಾಗಿ ಮೂಡಿಬಂದಿದೆ ರೀ ಕವನ… ವಾಸ್ತವವೂ ಕೂಡಾ …ಅಂತೆ ಕಂತೆಗಳ ಸಂತೆ… ತುಂಬಾ ಇಷ್ಟ ಆಯಿತು
Super medam
Super
ಕವನವು ಉತ್ತಮವಾಗಿ ಮೂಡಿಬಂದಿದೆ
ಸುಂದರ ಕವಿತೆಯ ಸುಂದರ ಸಾಲುಗಳು.
ಸುಂದರ ಕವಿತೆ…
Super
Nice kavite