ಕಾವ್ಯಯಾನ
ಹಸಿರು ಕುದುರೆ ನೀ.ಶ್ರೀಶೈಲ ಹುಲ್ಲೂರು ಹಸಿರು ಕುದುರೆ ರಾಜನೊಂದು ಸಂಜೆ ತನ್ನ ರಾಜ ತೋಟದಲ್ಲಿ ಬರಲು ಮೋಜುಗರೆವ ಹಕ್ಕಿಯುಲಿಗೆ ಸೋತುಹೋದನು ಹಚ್ಚಹಸಿರು ಕಂಡ ತಾನು ಮೆಚ್ಚಿ ಹರುಷ ಸೂಸುತಿರಲು ಹುಚ್ಚು ಮನದಿ ಆಸೆಯೊಂದು ಹುಟ್ಟಿಕೊಂಡಿತು ಹಸಿರು ಸಿರಿಯ ನಡುವೆ ನಲಿದು ಹೊಸತನೊಂದ ಯೋಚಿಸುತಲಿ ಹಸಿರು ಕುದುರೆ ಏರೊ ಕನಸು ತುಂಬಿಕೊಂಡನು ಬೀರಬಲ್ಲನನ್ನು ಕರೆದು ಕೊರೆವ ಆಸೆ ಹೇಳಿಕೊಂಡು ವಾರದಲ್ಲಿ ಹಸಿರು ಕುದುರೆ ತರಲು ಹೇಳಿದ ಉಕ್ಕಿಬರುವ ನಗೆಯ ತಡೆದು ಅಕ್ಕರೆಯಲಿ ಒಪ್ಪಿಕೊಂಡು ಸಿಕ್ಕ ಸಿಕ್ಕ ಊರಿನಲ್ಲಿ ಸುಮ್ಮನಲೆಯತೊಡಗಿದ […]
ಕಾವ್ಯಯಾನ
ನನ್ನೂರಲಿ ಏನಿದೆ….? ರೇಖಾವಿ.ಕಂಪ್ಲಿ ನನ್ನೂರಲಿ ಏನಿದೆ….? (ನನ್ನದು ಪ್ರಾಸವಿಲ್ಲದ ಹಾಡು) ನಾಲ್ಕಾರು ಪುಡಿಗಾಸು ಮಾಡಿಕೊಳ್ಳುವ ನನ್ನೂರಲಿ ಏನಿದೆ ಎಂದೆನುತ ಊರಕೇರಿ ಬಿಟ್ಟು ದೂರದೂರಿಗೆ ಪಯಣ ಬೆಳಸಿದರು ನನ್ನನ್ವ ನನ್ನಪ್ಪ ತಮ್ಮನೊಂದಿಗೆ……… ಮಹಾನಗರದಲಿ ಅಲ್ಲೊಂದು ಮೇಲ್ಚಾವಣಿ ಇಲ್ಲದ ಗುಡಾರದಲ್ಲಿ ಬೀದಿ ಬದಿಯ ಒಲೆಯಲಿ ರೊಟ್ಟಿ ತಟ್ಟಿ ನನ್ನನ್ವ ಪುಡಿಗಾಸು ದುಡಿದು ಬರುವ ನನ್ನಪ್ಪನಿಗಾಗಿ ಕಾದು ಕುಳಿತಳು ತಮ್ಮನೊಂದಿಗೆ… ಅದಾವ ಮಸಣದ ಕರೆಯೊ ತಿಳಿಯೆ ನನ್ನಪ್ಪನ ಕೂಗಿ ಕರೆಯಿತು ಬಾರದೂರಿಗೆ ಕರೋನಾ ಎನ್ನುವ ರೋಗದ ರೂಪದಲಿ ತಪ್ಪಿತಸ್ಥನಂತು ಖಂಡಿತ ಅಲ್ಲ […]
ಗಝಲ್
ಗಝಲ್ ರತ್ನರಾಯಮಲ್ಲ ಧ್ಯಾನ ಮಾಡಲು ಜಾಗ ಹುಡುಕುತಿರುವೆ ಶರಣ ನನ್ನ ಹೃದಯವನ್ನೇ ಸ್ವಚ್ಛ ಮಾಡುತಿರುವೆ ಶರಣ ಪಡೆದುಕೊಳ್ಳಲು ಹತ್ತು ಹಲವಾರು ದಾರಿಗಳಿವೆ ಇಲ್ಲಿ ಕಳೆದುಕೊಳ್ಳಲು ದಾರಿಯನ್ನು ಅರಸುತಿರುವೆ ಶರಣ ಬದುಕುತಿದ್ದೇವೆ ಬಣ್ಣ ಬಣ್ಣದ ಮನಸ್ಸುಗಳೊಂದಿಗೆ ಕನಸುಗಳೊಂದಿಗೆ ಸಾಗಲು ಹೆಣಗುತಿರುವೆ ಶರಣ ಭೋಗದ ಗರ್ಭಗುಡಿ ಚಂಚಲಗೊಳಿಸುವುದೇ ಹೆಚ್ಚು ಕಾನನದ ಗುಹೆಗಳಿಂದ ಹಿಂತಿರುಗುತಿರುವೆ ಶರಣ ಸಂಸಾರದಿ ಓಡಿ ಹೋಗವುದು ಸಾಧನೆಯಲ್ಲ ‘ಮಲ್ಲಿ’ ಜೀವನದ ರಂಗಭೂಮಿಯಲ್ಲಿ ನಟಿಸುತಿರುವೆ ಶರಣ
ಕಾವ್ಯಯಾನ
ತೋರಣ ಕಟ್ಟುವೆವು ಸುಜಾತ ಗುಪ್ತ ಜಗನ್ನಾಥನು ಜೊತೆ ನಿವಸಿಸಿ ನಮ್ಮನ್ನು ಕಾಯಲು ಅನವರತ ಹೃದಯದ ಭಾವಕೆ ಮಾನವತಾ ತೋರಣ ಕಟ್ಟುವೆವು.. ಜಗದಂಬೆಯ ಮನ ಒಲಿಸಿ ಹಸನ್ಮುಖಿಯಾಗಿರಿಸಲು ಮನದ ದ್ವಾರಕೆ ನೀತಿಯ ತೋರಣ ಕಟ್ಟುವೆವು… ಬಾಳಲಿ ಹಿನ್ನಡೆಸುವ ಸೋಲಿನ ಸಾಲಿಗೆ ನಾವ್ ಚೇತನಾಪ್ರದ ಗೆವುವಿನ ತೋರಣ ಕಟ್ಟುವೆವು. ಕಂದನ ಖುಷಿಯ ಸಿರಿಗೆ ಹರಸುತ ಹರುಷದೆ ಮುತ್ತಂತ ತ್ಯಾಗದ ತೋರಣ ಕಟ್ಟುವಳಮ್ಮ ********
ಕಾವ್ಯಯಾನ
ಕೆಂಡ ಸಂಪಿಗೆ ರೇಮಾಸಂ ನೀರಾಡಿದೆ ಕಣ್ಣಲಿ ಮಂದಹಾಸೆ ಗಂಟಲುಬ್ಬಿದರು ನಸುನಗು ಮಾಸೆ ಸೆರಗಲಿ ಕೆಂಡವು ನಿಗಿನಿಗಿಸುತಿದೆ ಎದೆಯ ಕ್ಷೀರಧಾರೆ ಅಮೃತವಾಗಿದೆ/ ಭೇದಭಾವದ ನೊಗದಲಿ ಕಳೆದೆ ಬಾಲ್ಯ ಅಯ್ಯೋ ನೀನು ಮಹಿಳೆಯಂದು ಕೂಗಿದರು ರೆಕ್ಕೆಗಳನು ಕತ್ತರಿಸಿದ್ದು ಲಕ್ಷ್ಮಣರೇಖೆ ಹೊಸ್ತಿಲವು ಹೆಬ್ಬಾವಾಗಿದೆ/ ಧಾರೆಗೆ ಬಾಲ್ಯಕೆ ಮನೆಯರಡು ಬೆಳಗಿದರೂ ಅವಳು ಕೊರಡು ಜ್ಯೋತಿಯಾದರೂ ಚುಕ್ಕೆಯೆಂದರು ಅಡುಗೆ ಗಡುಗೆಗವಳನು ಮೀಸಲಿಟ್ಟರು/ ಹೊತ್ತು ಗರ್ಭದಿ ನವಮಾಸಗಳು ನೋವನುಂಗಿ ನಗುವ ಹರಡಿದಳು ಕುಲವಧುವಾಗಿ ಕುಲಜ್ಯೋತಿಯಾದಳು ಮರಣಶಯ್ಯೇನೇರುತ ಜೀವದಾನಿಯಾದಳು/ ಮೊಗ್ಗುಗಳು ಕಾಮಿಗಳ ಅಟ್ಟಹಾಸಕೆ ಬಲಿಯಾಗಿ ಹೊಸಕಿದ ಅನಾಗರಿಕ […]
ಕಾವ್ಯಯಾನ
ಹಸನಾಗಲಿ ಬಾಳು ಜ್ಯೋತಿ ಹೊಸಕೋಟೆ ನನ್ನ ಜೀವದ ಜೀವ ನೀ ನನ್ನೊಲವ ಉಸಿರು ನೀ// ಮೊಲೆಹಾಲ ಕುಡಿಸುವಾಗ ಪುಟ್ಟ ಪುಟ್ಟ ಹೆಜ್ಜೆಗಳಿಂದ ಎದೆಗೆ ಒದ್ದ ಕ್ಷಣ ಪುಳಕಗೊಂಡಿತ್ತು ತನು ಮನ ಎದೆ ಎತ್ತರಕ್ಕೆ ಬೆಳೆಸಿಹೆ ನಾನಿಂದು ಒದೆಯದಿರು ಚುಚ್ಚು ಮಾತುಗಳಿಂದ ನಿನ್ನ ಪ್ರೀತಿಗಾಗಿ ಹಾತೊರೆಯುವ ತಾಯಿಯ ಮನ ತಡೆಯಲಾರದು ಎಡವಿದಾಗ ಕೈ ಹಿಡಿದು ನಡೆಸಿ ದಾರಿ ತೋರಿದ್ದೆ ಅಂದು ಎಡವದಿರು ಮುಗ್ಗರಿಸದಿರು ನೋಡಿ ಸಹಿಸಲಾಗದು ಇಂದು ತಾಯಿಯ ಸೆರಗು ಹಿಡಿದವ ಸಂಗಾತಿಯ ಕೈ ಹಿಡಿದಿರುವೆ ಅವಳಲ್ಲೂ ಮಾತೃತ್ವ […]
ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಹರವಾದ ಎದೆಯ ಹೊಲ ಹರಗಿ ಮಿದುಗೊಳಿಸಿ ಮಳೆಗಾಗಿ ಕಾಯುತಿರುವೆ| ಕಸ ಕಡ್ಡಿಗಳನು ಎರೆಹುಳುವಿನ ಜರಡಿಯಿಂದ ಸಾಣಿಸಿ ಮಳೆಗಾಗಿ ಕಾಯುತಿರುವೆ|| ಎಲ್ಲೇ ಮೀರಿ ಓಡುವ ಮೋಡಗಳಿಗೆ ಬಲೆ ಬಿಸಿ ನಾಲ್ಕು ಹನಿ ಉದುರಿಸಿ ಬಿಸಿಲು ತಣಿಸುವೆ| ಇಳಿಜಾರಿನ ಎದೆಗೆ ನೀರುಣಿಸಲು ಒಡ್ಡು ಬಿಗಿಗೊಳಿಸಿ ಮಳೆಗಾಗಿ ಕಾಯುತಿರುವೆ|| ಇರಿದು ಹರಿದೋಡುವ ಭಾವದಲೆಗಳಿಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿರುವೆ| ಬಾಯ್ದೆರೆದ ರೆಂಟೆ ಸಾಲುಗಳ ಗಂಟಲು ಒಣಗಿಸಿ ಮಳೆಗಾಗಿ ಕಾಯುತಿರುವೆ|| ಮಳೆ ಮೈದುಂಬಿ ಸುರಿದು ಇಳೆಗೆ ಆಲಂಗಿಸಿ ಹಸಿರು ಅಚ್ಛಾದಿಸುವ […]
ಕಾವ್ಯಯಾನ
ನಾನಲ್ಲದ ನಾನು ವಿದ್ಯಾಶ್ರೀಎಸ್ಅಡೂರ್ ಬಂಧಿ ನಾನು ಕೋಟೆ ಕೊತ್ತಲಗಳಲ್ಲಲ್ಲ ನನ್ನದಲ್ಲದ ಬದುಕಿನಲ್ಲಿ, ಬಂಧಿ ನಾನು, ನಾಲ್ಕು ಗೋಡೆಗಳ ನಡುವಲ್ಲಲ್ಲ ಗೊಡ್ಡು ಸಂಪ್ರದಾಯಗಳ ಮುಖವಾಡದಲ್ಲಿ, ಒಂಟಿ ನಾನು, ಈ ಜನಜಾತ್ರೆಯ ನಡುವಲ್ಲಲ್ಲ ನನ್ನ ಮನದ ವಿಶ್ವದಲ್ಲಿ ಒಂಟಿ ನಾನು, ನನಗೆ ನನ್ನವರು ಇಲ್ಲದೆ ಅಲ್ಲ ನನ್ನತನವೆಂಬ ಲೋಕದಲ್ಲಿ. ಮೂಕಿ ನಾನು, ಮಾತ ಮಲ್ಲಯುಧ್ಧದಲ್ಲಲ್ಲ ನನ್ನ ಮೌನವಾದ ಕನಸುಗಳಲ್ಲಿ ಮೂಕಿ ನಾನು, ಈ ಮಾತಿನರಮನೆಯಲ್ಲಲ್ಲ ನನ್ನ ಸ್ವಂತಿಕೆಯ ದಿಗಂತದಲ್ಲಿ. ಬೊಂಬೆ ನಾನು, ನನಗೆ ಭಾವಗಳು ಇಲ್ಲದೆ ಅಲ್ಲ ನನ್ನ ಆವರಿಸಿದ […]
ಕಾವ್ಯಯಾನ
ಮೌನ ಮಲ್ನಾಡ್ ಮಣಿ ನೀರವ ಮೌನ, ಸುಯಿಗುಡುತಿದೆ ತಂಗಾಳಿ, ಒಂದೇ ಸಮ ಜಿಂಗುಟ್ಟುತಿದೆ ಜಿರುಂಡೆ, ಜೆಡ್ಡು ಗಟ್ಟಿದ ಮನಸ್ಸು. ಮಳೆ ತೊಟ್ಟಿಕ್ಕಿದರು,ಮರ ಚಿಗುರೊಡೆದರು ತರಗೆಲೆ ರಾಶಿ ರಾಶಿಯಾಗಿ ಬಿದ್ದಿದೆ. ಮನಸ್ಸು ಮರಗಟ್ಟಿದೆ ಪೈರು ತೆನೆಯೊಡೆದರು, ಒಣಹುಲ್ಲುಗಳ ರಾಶಿಯಲ್ಲಿ. ಕಾಯ ಕಳೆದು ಕೊಂಡಿದೆ ಅಂತಃ ಶಕ್ತಿ, ಕಳೆಬರ ಮಾತ್ರವೇ ಉಳಿದಿದೆ ಮಣ್ಣಿನೊಡಲಿನಲಿ. ಹರಿದ ಅರಿವೆಗೆ ತೇಪೆ ಹಚ್ಚುತ್ತಿದೆ ಅದೇ ಹರಕು ಭಾವ ಮೊಂಡು ಸೂಜಿ ದಾರ ಹಿಡಿದು. ವಸಂತ ಇದ್ದರು ಸಂತಸವಿಲ್ಲ, ಸಂಕ್ರಮಣ ಕಾಲ ಅರಿವಿಲ್ಲ, ಹರಿದಾಡುವ ಭಾವವಿಗ […]
ಕಾವ್ಯಯಾನ
ಎರಡರ ನಡುವೆ ವಿಭಾ ಪುರೋಹಿತ ಎಲ್ಲಿ ಹೋದರಲ್ಲಿ ಬೆಂಬತ್ತಿ ತೆರೆದ ಕೋರೆಹಲ್ಲು ಎದೆಗುಂಡಿಗೆ ಇರಿಯುತ್ತದೆ ಎನ್ನೆದೆಗುದಿಗಳನು ದಿಕ್ಕೆಡಿಸಿ ಅಡವಿಗೆ ಕೆಡವುತ್ತದೆ ಏನಿದು, ನನಗೇ ಹೀಗಾ ? ಎಲ್ಲರಿಗೂ ಬೆನ್ನಿಗೊಂದು ಭೂತ ವಕ್ಕರಿಸಿಕೊಂಡಿರುತ್ತಾ ? ಎಡಬಲಗಳ ನಡುವೆ ನಡೆಯುವುದು ದುರ್ಬರ !! ವರ್ತಮಾನದ ಕಾಲಗತಿಯಲಿ ದ್ವಂದ್ವ ಗಳ ಆಂತರ್ಯ ಹೆಜ್ಜೆ ಇಡಿಸುತ್ತದೆ ಭ್ರಮೆ ಬಿಡಿಸುತ್ತದೆ ಸಿಕ್ಕದ ದಕ್ಕದ ದೂರದ ಹಾದಿಗೆ !!! ಓಡುತ್ತಾ ಮುಗ್ಗರಿಸುತ್ತ…… ಸಿಗದ ಆಕಾಶಕ್ಕೆ ಛಂಗನೆ ! ಜಿಗಿಸಿ ಲಗ್ಗೆ ಹಾಕುತ್ತದೆ ಕನಸಿನೊಳಗಿನ ಮನಸು ಅಗೋಚರ […]